ಅಡಕೆ ಧಾರಣೆ | 10 ಜೂನ್ 2022 | ಇವತ್ತು ಎಲ್ಲೆಲ್ಲಿ ಎಷ್ಟಿದೆ ರೇಟ್?

Areca Price in Shimoga APMC

SHIVAMOGGA LIVE NEWS | ADIKE RATE | 10 ಜೂನ್ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ adike market ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 37158 ಬೆಟ್ಟೆ 50029 52299 ರಾಶಿ 43899 49109 ಸರಕು 58619 78996 ಹೊಸನಗರ ಮಾರುಕಟ್ಟೆ ಕೆಂಪುಗೋಟು 26819 37800 ಚಾಲಿ 34009 36399 ಬಿಳೆ ಗೋಟು 22619 26319 ರಾಶಿ 42009 49499 ಸೊರಬ ಮಾರುಕಟ್ಟೆ ಚಾಲಿ 33000 36000 ಇತರೆ … Read more

ಗಾಂಧಿ ಬಜಾರ್ ಬಟ್ಟೆ ಮಾರುಕಟ್ಟೆಯಲ್ಲಿ ಚಾಕು ಇರಿದವನು ಒಬ್ಬನಲ್ಲ, ಘಟನೆಗೇನು ಕಾರಣ?

Cloath-Shops-closed-in-Gandhi-Bazaar

SHIVAMOGGA LIVE NEWS | SHIMOGA | 9 ಜೂನ್ 2022 ಗಾಂಧಿ ಬಜಾರ್ ಬಟ್ಟೆ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರಿಗೆ ಚಾಕು ಇರಿತ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಳೆ ವೈಷಮ್ಯವೆ ಘಟನೆಗೆ ಕಾರಣ ಎಂದು ಮೆಲ್ನೋಟಕ್ಕೆ ತಿಳಿದು ಬಂದಿದೆ. (ASSAULT) ಚೋರ್ ಬಜಾರ್’ನಲ್ಲಿ ಬಟ್ಟೆ ವ್ಯಾಪಾರಿ ಸೆಂದಿಲ್ ಕುಮಾರ್ (43) ಎಂಬುವವರಿಗೆ ಚಾಕುವಿನಿಂದ ಇರಿಯಲಾಗಿತ್ತು. ಎದೆ ಭಾಗ, ಕಿಬ್ಬೊಟ್ಟೆ, ಎಡ ತೊಡೆಗೆ ಮಾರಕಾಸ್ತ್ರಗಳಿಂದ ಇರಿಯಲಾಗಿತ್ತು. ಕೂಡಲೆ ಸೆಂದಿಲ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. … Read more

ಅಡಕೆ ಧಾರಣೆ | 3 ಜೂನ್ 2022 | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಧಾರಣೆ?

Areca Price in Shimoga APMC

SHIVAMOGGA LIVE NEWS | APMC | 3 ಜೂನ್ 2022 ಶಿವಮೊಗ್ಗ ಸೇರಿದಂತೆ ಇತರೆ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆಯ ಮಾಹಿತಿ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 18069 37699 ಬೆಟ್ಟೆ 49389 52600 ರಾಶಿ 46099 50369 ಸರಕು 59119 77410 ಹೊಸನಗರ ಮಾರುಕಟ್ಟೆ ಕೆಂಪುಗೋಟು 28899 38299 ಚಾಲಿ 35699 38889 ಬಿಳೆ ಗೋಟು 23699 28009 ರಾಶಿ 43299 50499 ಸಿಪ್ಪೆಗೋಟು 16899 16899 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 27380 32199 … Read more

ಇವತ್ತಿನ ಅಡಕೆ ಧಾರಣೆ | 8 ಮಾರ್ಚ್ 2022

Areca Price in Shimoga APMC

SHIVAMOGGA LIVE NEWS | 8 ಮಾರ್ಚ್ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 18169 33900 ಬೆಟ್ಟೆ 46690 50909 ರಾಶಿ 42869 45909 ಸರಕು 51009 76640 ಸಾಗರ ಮಾರುಕಟ್ಟೆ ಕೆಂಪುಗೋಟು 18219 35389 ಕೋಕ 13272 31209 ಚಾಲಿ 21872 37113 ಬಿಳೆ ಗೋಟು 14342 27229 ರಾಶಿ 39699 46109 ಸಿಪ್ಪೆಗೋಟು 5690 19299 ಶಿರಸಿ ಮಾರುಕಟ್ಟೆ ಚಾಲಿ 34629 41291 ಬೆಟ್ಟೆ … Read more

ಇವತ್ತಿನ ಅಡಕೆ ಧಾರಣೆ | ಶಿವಮೊಗ್ಗ, ಸಾಗರ, ಶಿರಸಿಯಲ್ಲಿ ಎಷ್ಟಿದೆ ಧಾರಣೆ? | 10 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗದ ಲೈವ್.ಕಾಂ | APMC NEWS | 10 ಫೆಬ್ರವರಿ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಹೀಗಿದೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 17009 34440 ಬೆಟ್ಟೆ 45609 52009 ರಾಶಿ 42209 46009 ಸರಕು 54009 75696 ಸಾಗರ ಮಾರುಕಟ್ಟೆ ಕೆಂಪುಗೋಟು 23919 38699 ಕೋಕ 18899 30699 ಚಾಲಿ 31209 39313 ಬಿಳೆ ಗೋಟು 13099 26729 ರಾಶಿ 34009 46969 ಸಿಪ್ಪೆಗೋಟು 6869 18759  ಶಿರಸಿ ಮಾರುಕಟ್ಟೆ ಚಾಲಿ … Read more

ಇವತ್ತಿನ ಅಡಕೆ ಧಾರಣೆ | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಧಾರಣೆ? | 7 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಫೆಬ್ರವರಿ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಅಡಕೆ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಹೀಗಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 16890 34509 ಬೆಟ್ಟೆ 46099 51100 ರಾಶಿ 43801 45789 ಸರಕು 53000 76710 ಸಾಗರ ಮಾರುಕಟ್ಟೆ ಕೆಂಪುಗೋಟು 25119 39299 ಕೋಕ 19219 29699 ಚಾಲಿ 23099 37329 ಬಿಳೆ ಗೋಟು 10699 28219 ರಾಶಿ 35499 47399 ಸಿಪ್ಪೆಗೋಟು 8569 18369 ಸಿದ್ಧಾಪುರ … Read more

ಸಿಟಿ ಸೆಂಟರ್ ಮಾಲ್ ಎದುರಿನ ರಸ್ತೆಯಲ್ಲಿ ನಡುರಾತ್ರಿ ದಿಢೀರ್ ಬೆಂಕಿ, ತಪ್ಪಿತು ಭಾರಿ ಅನಾಹುತ

fire at roadside in sultan market

ಶಿವಮೊಗ್ಗದ ಲೈವ್.ಕಾಂ | SHIMOGA NEWS | 3 ಫೆಬ್ರವರಿ 2022 ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಎದುರಿನ ರಸ್ತೆಯಲ್ಲಿರುವ ಸುಲ್ತಾನ್ ಮಾರ್ಕೆಟ್’ನಲ್ಲಿ ನಡುರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸುಲ್ತಾನ್ ಮಾರ್ಕೆಟ್’ನ ಗುಜರಿ ಅಂಗಡಿಗಳ ಮುಂದೆ ಇಡಲಾಗಿದ್ದ ಟಯರ್ ಮತ್ತು ಇತರೆ ಗುಜರಿಗೆ ವಸ್ತುಗಳು ಧಗಧಗ ಹೊತ್ತಿ ಉರಿದಿವೆ. ಸ್ಥಳೀಯರು ಇದನ್ನು ಗಮನಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೆ … Read more

ಇವತ್ತಿನ ಅಡಕೆ ಧಾರಣೆ | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟೆದೆ ಧಾರಣೆ? | 2 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗದ ಲೈವ್.ಕಾಂ | APMC REPORT | 2 ಫೆಬ್ರವರಿ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಹೀಗಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 34699 ಬೆಟ್ಟೆ 46000 52099 ರಾಶಿ 43009 45919 ಸರಕು 50009 75696 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 27089 35489 ಕೋಕ 20299 28389 ಚಾಲಿ 47099 47299 ತಟ್ಟಿಬೆಟ್ಟೆ 37999 45909 ಬಿಳೆ ಗೋಟು 22899 32699 ರಾಶಿ 44699 47599 ಹೊಸ ಚಾಲಿ … Read more

ಇವತ್ತಿನ ಅಡಕೆ ಧಾರಣೆ | 01 ಡಿಸೆಂಬರ್ 2021

Areca Price in Shimoga APMC

ಶಿವಮೊಗ್ಗ ಲೈವ್.ಕಾಂ | APMC NEWS | 01 ಡಿಸೆಂಬರ್ 2021 ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಪ್ರಮುಖ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 17009 38340 ಬೆಟ್ಟೆ 47689 53689 ರಾಶಿ 42509 46809 ಸರಕು 49199 73050 ಶಿರಸಿ ಮಾರುಕಟ್ಟೆ ಚಾಲಿ 36099 50698 ಬೆಟ್ಟೆ 34199 49389 ಬಿಳೆ ಗೋಟು 24699 44199 ರಾಶಿ 28831 50909 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 33089 33089 ಕೋಕ 22699 38099 … Read more

ಅಡಕೆಗೆ ಬಂಪರ್ ಬೆಲೆ, ಇನ್ನಷ್ಟು ಏರಿಕೆಯ ನಿರೀಕ್ಷೆ, ಧಾರಣೆ ಹೆಚ್ಚಳಕ್ಕೆ ಕಾರಣವೇನು? ಮುಂದೇನಾಗುತ್ತೆ?

areca nut

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2021

ಒಂದು ವರ್ಷದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಕೆಗೆ ಈಗ ಬಂಪರ್ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಅಡಕೆ ಬೆಲೆ 50 ಸಾವಿರದ ಕಡೆಗೆ ಮುನ್ನುಗುತ್ತಿದೆ. ಇದರಿಂದ ಬೆಳೆಗಾರರು ಖುಷ್ ಆಗಿದ್ದಾರೆ.

38 ರಿಂದ 43 ಸಾವಿರ ರೂ.ವರೆಗೆ ಇದ್ದ ಅಡಕೆ ಬೆಲೆ ಈಗ 50 ಸಾವಿರ ರೂ. ಕಡೆ ಮುನ್ನಗುತ್ತಿದೆ.  ಮಂಗಳವಾರ 1 ಕ್ವಿಂಟಾಲ್ ರಾಶಿ ಅಡಿಕೆ ಬೆಲೆ 47,700 ರೂ.ಗೆ ತಲುಪಿದೆ. ಬಿಲ್ ಇಲ್ಲದೆ ವ್ಯವಹಾರ ಮಾಡುತ್ತಿರುವವರು 49 ಸಾವಿರ ರೂ.ವರೆಗೆ ಖರೀದಿ ಮಾಡಿದ್ದಾರೆ.

ಮಲೆನಾಡಿನ ಪ್ರಮುಖ ಬೆಳೆ

ಮಲೆನಾಡಿನ ಪ್ರಮುಖ ಬೆಳೆಯಾಗಿರುವ ಅಡಕೆ ಈಗ ಬಯಲುಸೀಮೆಯಲ್ಲೂ ಪ್ರಸಿದ್ಧಿ ಪಡೆದಿದೆ. ಕಡಿಮೆ ಖರ್ಚು ಹೆಚ್ಚು ಲಾಭದ ದೃಷ್ಟಿಯ ಕಾರಣದಿಂದ ಈಗ ಎಲ್ಲಿ ನೋಡಿದರೂ ಅಡಕೆ ತೋಟಗಳೇ ಕಾಣಸಿಗುತ್ತಿವೆ. ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ಅಡಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಅಡಕೆ ಬೆಳೆ ಹೆಚ್ಚಾದರೂ ಬೆಲೆ ಮಾತ್ರ ಕುಗ್ಗಿಲ್ಲ. ಇದಕ್ಕೆ ಅನೇಕ ಅಂಶಗಳು ಅನುಕೂಲಕರವಾಗಿವೆ.

ಅಡಕೆ ಬೆಲೆ ಹೆಚ್ಚಳಕ್ಕೆ ಕಾರಣಗಳೇನು?

ಕಾರಣ 1 – ಈಶಾನ್ಯ ಗಡಿಗಳು ಬಂದ್

ಈಶಾನ್ಯ ಗಡಿರಾಜ್ಯಗಳಲ್ಲಿ ಸಂಘರ್ಷ ಏರ್ಪಟ್ಟಿರುವುದರಿಂದ ಕೇಂದ್ರ ಸರ್ಕಾರ ಗಡಿಗಳನ್ನು ಬ್ಲಾಕ್ ಮಾಡಿದೆ. ಹಾಗಾಗಿ ಇಂಡೋನೇಷಿಯಾ, ಮಲೇಷಿಯಾ ದೇಶಗಳಿಂದ ಬರುತ್ತಿದ್ದ ಕಳಪೆ ಅಡಕೆ ನಿಂತಿದೆ. ಇಂತಹ ಅಡಕೆ ಮೇಲೆ ಕೆಲ ಗುಟ್ಕಾ ಕಂಪನಿಗಳು ಅವಲಂಬಿತವಾಗಿವೆ. ಈಗ ಗಡಿಗಳು ಬ್ಲಾಕ್ ಆಗಿರುವುದರಿಂದ ರೈತರಿಂದಲೇ ನೇರ ಖರೀದಿ ಮಾಡುತ್ತಿವೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.

ಕಾರಣ 2 – ಹೊಸ ಅಡಕೆ ಬಂದಿಲ್ಲ

ಇಷ್ಟೊತ್ತಿಗಾಗಲೇ ಹೊಸ ಅಡಕೆ ಮಾರುಕಟ್ಟೆ ಪ್ರವೇಶ ಮಾಡಬೇಕಿತ್ತು. ಮಳೆ ಕಾರಣದಿಂದ ಕೊಯ್ಲು, ಸಂಸ್ಕರಣೆ ಸೇರಿದಂತೆ ಎಲ್ಲಾ ಕೆಲಸಗಳು ನಿಧಾನವಾಗಿದ್ದು ಹೆಚ್ಚು ಆವಕ ಇಲ್ಲ. ಮೂರು ವರ್ಷದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕೊಳೆರೋಗ ಬಾಧಿಸುತ್ತಿದೆ. ಇದು ಸಹ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಕಾರಣ 3 – ಅಕ್ರಮ, ಸಕ್ರಮದ ಮಧ್ಯೆ ಸ್ಪರ್ಧೆ

ಇತ್ತೀಚೆಗೆ ರೈತರು ಅಡಕೆ ದಾಸ್ತಾನು ಮಾಡುವ ಸೌಲಭ್ಯ ಹೊಂದಿದ್ದು ತಮಗೆ ಅನುಕೂಲಕರ ಸಮಯಕ್ಕೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ದಿಢೀರ್ ಬೆಲೆ ಏರಿಕೆ ಲಾಭ ಪಡೆಯುವ ಉದ್ದೇಶದಿಂದ ಅಕ್ರಮ-ಸಕ್ರಮ ವ್ಯವಹಾರಸ್ಥರಲ್ಲಿ ಪೈಪೋಟಿ ಏರ್ಪಟ್ಟಿರುವುದರಿಂದ ಬೆಲೆ ಏರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂಬುದು ಪಕ್ಕಾ ವ್ಯವಹಾರಸ್ಥರ ಅಭಿಪ್ರಾಯ.

AVvXsEjqI8PPMNmhmzTK72s6aHdyGOwaxgBbnPaxEgdNmEiwLVxu2qPFWOl6pNSi5TkLjb7eVIwUDa7oTDLioeFYHsTaIvxkbizculAS6mYiPjBUAXSI3yUj FPfEWxml8DJztTgufNzviEAb8 E9X6L8I0JOYK4raqr

ಬೆಲೆ ಏರಿಕೆ ಹಾದಿ

ಫೆಬ್ರವರಿ 2020ರಲ್ಲಿ 39 ಸಾವಿರ ಆಸುಪಾಸಿನಲ್ಲಿದ್ದ ಅಡಕೆ ಕೆಲವೇ ತಿಂಗಳಲ್ಲಿ 42, 43 ಸಾವಿರಕ್ಕೆ ಸ್ಥಿರಗೊಂಡಿತು. 2021ರ ಆಗಸ್ಟ್ ವರೆಗೂ 38 ರಿಂದ 43 ಸಾವಿರವರೆಗೆ ಬೆಲೆ ಕಾಯ್ದುಕೊಂಡಿದೆ. ಆ.10ರ ರಾಶಿಯ ಗರಿಷ್ಟ ಬೆಲೆ 44,099, 16ರಂದು 44,299 ರೂ., 19ರಂದು 44,099 ರೂ., 23ರಂದು 46,599 ರೂ., 24ರಂದು 47,500 ರೂ.ಗೆ ವಹಿವಾಟು ನಡೆದಿದೆ. ರೈತರಿಂದ ನೇರ ಖರೀದಿಸುವ ವ್ಯವಹಾರಸ್ಥರು 49 ಸಾವಿರಕ್ಕೆ ಖರೀದಿ ಮಾಡಿ ದಾಖಲೆ ಬರೆದಿದ್ದಾರೆ.

ವ್ಯಾಪಾರಿಗಳಲ್ಲಿ ಹೆಚ್ಚುತ್ತಿದೆ ಆತಂಕ

ಬೆಲೆ ಏರಿಕೆಯು ಒಂದೆಡೆ ಖುಷಿಯ ವಿಚಾರವಾಗಿದ್ದರೆ ವ್ಯಾಪಾರಸ್ಥರಲ್ಲಿ ಆತಂಕ ಹುಟ್ಟಿಸುತ್ತಿದೆ. 43 ಸಾವಿರಕ್ಕೆ ಖರೀದಿ ಮಾಡಿದ ಅಡಕೆ 48 ಸಾವಿರಕ್ಕೆ ಬಿಕರಿಯಾದರೆ ಲಾಭವಾಗುತ್ತದೆ. ಅದೇ 49 ಸಾವಿರಕ್ಕೆ ಖರೀದಿ ಮಾಡಿದ ಅಡಕೆ 43 ಸಾವಿರಕ್ಕೆ ಬಿಕರಿಯಾದರೆ ದೊಡ್ಡ ನಷ್ಟವಾಗಲಿದೆ. ಮಾರುಕಟ್ಟೆ ಬೆಲೆ ಸ್ಥಿರತೆ ಕಾಪಾಡಿಕೊಳ್ಳದಿದ್ದರೆ ಎಲ್ಲರಿಗೂ ದೊಡ್ಡ ನಷ್ಟವಾಗಲಿದೆ. 2014ರಲ್ಲಿ 18 ಸಾವಿರ ಇದ್ದ ಅಡಕೆ ಬೆಲೆ 90 ಸಾವಿರವರೆಗೂ ಏರಿಕೆಯಾಗಿತ್ತು. ಒಂದೇ ಸಾರಿ ಮಾರುಕಟ್ಟೆ ಬಿದ್ದು ಅನೇಕ ವ್ಯಾಪಾರಿಗಳು ಬೀದಿಪಾಲಾದರು.

ಹಾಗಾಗಿ ಅಡಕೆ ಧಾರಣೆ ಏರಿಕೆ ಒಂದೆಡೆ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಮುಂದಿನ ವಹಿವಾಟು ಕುರಿತು ಆತಂಕವನ್ನು ಮೂಡಿಸಿದೆ.

240389864 1181422792337629 3783538181483720992 n.jpg? nc cat=104&ccb=1 5& nc sid=730e14& nc ohc=Cj3EIM570B0AX CPZbk& nc ht=scontent.fblr1 4

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200