ಶಿವಮೊಗ್ಗದಲ್ಲಿ ದನ ಮೇಯಿಸುತ್ತಿದ್ದವನ ಮೇಲೆ ಆರು ದುಷ್ಕರ್ಮಿಗಳಿಂದ ದಾಳಿ
SHIVAMOGGA LIVE NEWS | 25 DECEMBER 2023 SHIMOGA : ದನ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಆರು ಮಂದಿ ದಾಳಿ ನಡೆಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಆತನ ಮೇಲೆ ಹಲ್ಲೆ ನಡೆಸಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಡಿ.22ರಂದು ಸಂಜೆ ನದೀಮ್ ಅಹಮದ್ ಎಂಬುವವರು ಸೋಮಿನಕೊಪ್ಪದ ಜಮೀನು ಒಂದರಲ್ಲಿ ದನ ಮೇಯಿಸುತ್ತಿದ್ದರು. ಈ ಸಂದರ್ಭ ಸ್ಪ್ಲೆಂಡರ್ ಬೈಕ್ ಮತ್ತು ಟಿವಿಎಸ್ ಎಕ್ಸ್‌ಎಲ್‌ನಲ್ಲಿ ಆರು ಮಂದಿ ಆಗಮಿಸಿದ್ದು, ನದೀಮ್ ಅಹಮದ್ ಬಳಿ ಬಂದಿದ್ದಾರೆ. … Read more