ಶಿವಮೊಗ್ಗದಲ್ಲಿ CCTV ಕಣ್ತಪ್ಪಿಸಲು ನಂಬರ್ ಪ್ಲೇಟ್ ತೆಗೆಸಿದ್ದ, ಕೊನೆಗೆ ಕಟ್ಟಬೇಕಾಯ್ತು ಭಾರಿ ದಂಡ
SHIVAMOGGA LIVE NEWS | 3 JULY 2024 SHIMOGA : ಸಿಸಿಟಿವಿ ಕ್ಯಾಮರಾಗಳ ಕಣ್ತಪ್ಪಿಸುವ ಉದ್ದೇಶಕ್ಕೆ ನಂಬರ್ ಪ್ಲೇಟ್ (Number Plate) ಇಲ್ಲದೆ ಬೈಕ್ ಚಲಾಯಿಸುತ್ತಿದ್ದವನಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೈಕ್ ಮಾಲೀಕನಿಗೆ 12 ಸಾವಿರ ರೂ. ದಂಡ ವಿಧಿಸಲಾಗಿದೆ. ಶಿವಮೊಗ್ಗದಲ್ಲಿ ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್ ನೇತೃತ್ವದಲ್ಲಿ ಸಿಬ್ಬಂದಿ ಪ್ರವೀಣ್ ಪಾಟೀಲ್, ಸುರೇಶ್, ಪ್ರಶಾಂತ್, ಪ್ರಕಾಶ್ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ ನಂಬರ್ ಪ್ಲೇಟ್ ಇಲ್ಲದ ಬೈಕ್ ತಡೆದು ತಪಾಸಣೆ ಮಾಡಿದ್ದರು. … Read more