ಹೆಂಡತಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಂದ ಗಂಡ
SHIVAMOGGA LIVE NEWS | 20 JANUARY 2024 BYKODU : ಕೌಟುಂಬಿಕ ಕಲಹಕ್ಕೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಪತಿಯೇ ಪತ್ನಿಯ ಹತ್ಯೆಗೈದಿದ್ದಾನೆ. ಸಾಗರ ತಾಲೂಕು ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನೀಲಾವತಿ (29) ಮೃತ ದುರ್ದೈವಿ. ಇಂದು ಬೆಳಗ್ಗೆ ಪತಿ ಲೋಕೇಶ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ನೀಲಾವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನೀಲಾವತಿ ಕೊನೆಯುಸಿರೆಳೆದಿದ್ದಾರೆ. ತವರು ಮನೆಗೆ ಹೋಗಿದ್ದ ಮಹಿಳೆ ಕೌಟುಂಬಿಕ ಕಲಹದಿಂದ … Read more