ಶಿವಮೊಗ್ಗದಲ್ಲಿ ಶ್ರದ್ಧೆಯಿಂದ ಶಂಕರಾಚಾರ್ಯ ಜಯಂತಿ ಆಚರಣೆ

Shakarachaya-Jayanthi-In-Shimoga-City

SHIVAMOGGA LIVE NEWS | SHIMOGA CITY | 06 ಮೇ 2022 ಭಾರತದಲ್ಲಿ ಹಲವು ಪಂಥಗಳು, ಟೀಕೆ ಟಿಪ್ಪಣಿ, ಗೊಂದಲಗಳಿಂದ ಹಿಂದೂ ಸಮಾಜ ನಲುಗಿ ಹೋಗಿದ್ದ ಸಂದರ್ಭ ವೈದಿಕ ಸಂಪ್ರದಾಯಗಳನ್ನು ಗಟ್ಟಿಗೊಳಿಸಿದವರು ಶಂಕರಾಚಾರ್ಯರು ಎಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ … Read more

ಭದ್ರಾವತಿ ಗೊಂದಿ ಅಣೆಕಟ್ಟೆ ಮುಂದೆ ಈಜುತ್ತಿದ್ದ ಶಿವಮೊಗ್ಗದ ಇಬ್ಬರು ಯುವಕರು ಸಾವು

040921 Gondi Check Dam Youths Drowned in Water

ಶಿವಮೊಗ್ಗ ಲೈವ್.ಕಾಂ |BHADRAVATHI NEWS | 4 ಸೆಪ್ಟೆಂಬರ್ 2021 ಭದ್ರಾವತಿಯ ಗೋಂದಿ ಅಣೆಕಟ್ಟೆಯಲ್ಲಿ ಈಜಲು ಹೋಗಿದ್ದ ಶಿವಮೊಗ್ಗದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಮಂಜುನಾಥ ಬಡಾವಣೆಯ ಕಿರಣ್ ಮತ್ತು ಕೊಮ್ಮನಾಳ್’ನ ಶಶಾಂಕ್ ಮೃತ ದುರ್ದೈವಿಗಳು. ಬೆಳಗ್ಗೆ ಗೋಂದಿ ಅಣೆಕಟ್ಟೆಯಲ್ಲಿ ಈಜುತ್ತಿದ್ದಾಗ ಘಟನೆ ಸಂಭವಿಸಿದೆ. ಸ್ನೇಹಿತರ ಜೊತೆಗೆ ಬಂದಿದ್ದರು ಎಜುಕೇರ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ಕಿರಣ್, ಶಶಾಂಕ್ ಸೇರಿ ಐವರು ಯುವಕರು ಗೊಂದಿ ಚೆಕ್ ಡ್ಯಾಂ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಕಿರಣ್ ಮತ್ತು … Read more

ಪೊಲೀಸ್ ಬಲೆಗೆ ಬಿತ್ತು ಅತ್ತೆ, ಅಳಿಯ ಜೋಡಿ, ವಿಚಾರಣೆ ವೇಳೆ ಬಯಲಾಯ್ತು ಹಳೆ ಕೇಸ್, ಹೊಸ ಪ್ಲಾನ್

140721 Soraba Theft Case Two Arrested 1

ಶಿವಮೊಗ್ಗ ಲೈವ್.ಕಾಂ | SORABA NEWS | 14 ಜುಲೈ 2021 ಮನೆಯಲ್ಲಿ ಯಾರು ಇಲ್ಲದ ವೇಳೆ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ಮರಿಯಪ್ಪ ಗೋಪಿನಾಯ್ಕ್ ಹಾಗೂ ಕಮಲಮ್ಮ ನಿಂಗಬಸಪ್ಪ ಬಂಧಿತ ಆರೋಪಿಗಳು. ಇವರಿಂದ 37 ಗ್ರಾಂ ಬಂಗಾರ ಮತ್ತು 200 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ … Read more

ನಟ, ನಟಿಯರಷ್ಟೇ ಅಲ್ಲ ಡ್ರಗ್ಸ್ ದಂಧೆಯಲ್ಲಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಅಗತ್ಯ, ಎಬಿವಿಪಿಯಿಂದ ಸಹಿ ಸಂಗ್ರಹ

110920 ABVP Signature Campaign in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020 ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ಶಿವಪ್ಪನಾಯಕ ವೃತ್ತದಲ್ಲಿ ಮಾದಕ ವಸ್ತುಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆಯೋಜಿಸಲಾಗಿತ್ತು. ಮಾದಕ ವಸ್ತುಗಳ ವಿರುದ್ಧವಾಗಿ ಮತ್ತು ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳ ಹಾಗೂ ನಟ, ನಟಿಯರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ … Read more