ಗಾರೆ ಕೆಲಸ ಮಾಡುವಾಗ ಕಾರ್ಮಿಕನ ಕಾಲಿನ ಮೂಳೆ ಕಟ್‌

Vinobanagara-Police-Station.

ಶಿವಮೊಗ್ಗ: ಕಟ್ಟಡದ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದು ಕೆಳಗೆ ಬಿದ್ದು ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ (Laborer) ಕಾಲಿನ ಮೂಳೆ ಮುರಿದಿದೆ. ಸಂತೆ ಕಡೂರಿನ ಭಂಡಾರಿ ಕ್ಯಾಂಪ್‌ನ ನಿರ್ಮಾಣ ಹಂತದ ಮನೆಯಲ್ಲಿ ಘಟನೆ ಸಂಭವಿಸಿದೆ. ಶಿವಕುಮಾರ್‌ ಎಂಬ ಕಾರ್ಮಿಕ ಮನೆಯ ಗಾರೆ ಕೆಲಸದಲ್ಲಿ ತೊಡಗಿದ್ದಾಗ ಘಟನೆ ಸಂಭವಿಸಿದೆ. ಬೆಡ್‌ ರೂಂನಲ್ಲಿ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದಿದೆ. ಕೆಳಗೆ ಬಿದ್ದ ಶಿವಕುಮಾರ್‌ ಬಲಗಾಲಿನ ಪಾದದ ಬಳಿ ಮೂಳೆ ಮುರಿದಿದೆ. ಸುರಕ್ಷಿತ ಕ್ರಮಗಳನ್ನ ಕೈಗೊಳ್ಳದ್ದರಿಂದ ಘಟನೆ ಸಂಭವಿಸಿದೆ … Read more

ಕಾರಿನಲ್ಲಿ ಬಂದು ಹೊಟೇಲ್‌ನಲ್ಲಿ ಊಟ ಕೇಳಿ ಮಾಲೀಕನತ್ತ ಮಚ್ಚು ಬೀಸಿದ ವ್ಯಕ್ತಿ

Bhadravathi-Old-Town-Police-Station

ಭದ್ರಾವತಿ: ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಹೊಟೇಲ್‌ (Hotel) ಮಾಲೀಕನತ್ತ ಮಚ್ಚು ಬೀಸಿದ್ದಾನೆ. ಆದೃಷ್ಟವಶಾತ್‌ ಹೊಟೇಲ್‌ ಮಾಲೀಕ ಪಾರಾಗಿದ್ದಾರೆ. ಭದ್ರಾವತಿಯ ವೀರಶೈವ ಸಭಾಭವನದ ಸಮೀಪ ರಾಮಾವರಂ ಹೊಟೇಲ್‌ನಲ್ಲಿ ಘಟನೆ ನಡೆದಿದೆ. ರಾತ್ರಿ 10 ಗಂಟೆ ಹೊತ್ತಿಗೆ ಹೊಟೇಲ್‌ ಬಂದ್‌ ಮಾಡುವಾಗ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಬಂದಿದ್ದ. ಊಟ ಕೊಡುವಂತೆ ಕೇಳಿದ್ದ. ಹೊಟೇಲ್‌ ಬಂದ್‌ ಮಾಡುತ್ತಿರುವುದರಿಂದ ಊಟವಿಲ್ಲ ಎಂದು ಮಾಲೀಕ ರವೀಂದ್ರ ತಿಳಿಸಿದ್ದರು. ಹೊಟೇಲ್‌ ಬಾಗಿಲು ಹಾಕಿ ಮಾಲೀಕ ರವೀಂದ್ರ ಹೊರಗೆ ತೆರಳುತ್ತಿದ್ದಂತೆ ಅಲ್ಲಿಯೇ ಇದ್ದ ವ್ಯಕ್ತಿ ಏಕಾಏಕಿ ಮಚ್ಚು … Read more

ಬೇಲಿ ಹಾರಿ ಕಾರ್ಖಾನೆಗೆ ನುಗ್ಗಿ ಮಾಲೀಕನಿಗೆ ಮಚ್ಚು ತೋರಿಸಿ ಕಳವು

Crime-News-General-Image

BHADRAVATHI NEWS, 4 OCTOBER 2024 : ರಾತ್ರಿ ವೇಳೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿದ್ದ ಮಾಲೀಕನಿಗೆ (owner) ಮಚ್ಚು ತೋರಿಸಿ, ಮೊಬೈಲ್‌ ಕಸಿದುಕೊಂಡು ಬೆದರಿಕೆ ಒಡ್ಡಲಾಗಿದೆ. ಅಲ್ಲದೆ ಕಾರ್ಖಾನೆಯಿಂದ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮಾಚೇನಹಳ್ಳಿಯ ಇಂಡಸ್ಟ್ರಿಯಲ್‌ ಏರಿಯಾದ ಸ್ವಯಂ ಅಲಾಯ್‌ ಕಾಸ್ಟಿಂಗ್‌ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. ಕಾರ್ಖಾನೆ ಮಾಲೀಕ ರವಿಶಂಕರ್‌ ಅವರು ಊಟ ಮುಗಿಸಿ ರಾತ್ರಿ ಕಾರ್ಖಾನೆ ಸ್ಥಳಕ್ಕೆ ಬಂದಿದ್ದರು. ಟಾರ್ಚ್‌ ಹಾಕಿ ಪರಿಶೀಲಿಸುತ್ತಿದ್ದಾಗ ಎಂಟು ಮಂದಿ ಬೇಲಿ ಹಾರಿ ಬಂದಿದ್ದರು. … Read more

ನೀರಿನ ಬಾಟಲಿ ಕೇಳಿ ಬಂದವನು ಅಂಗಡಿ ಮಾಲಕಿಯ ಮಾಂಗಲ್ಯ ಸರ ಕದ್ದೊಯ್ದ

crime name image

SHIVAMOGGA LIVE NEWS | 28 ಮಾರ್ಚ್ 2022 ನೀರಿನ ಬಾಟಲಿ ಖರೀದಿಗೆ ಬಂದವರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. KTM ಬೈಕಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕೃತ್ಯ ಎಸಗಿದ್ದಾರೆ. ಅಂಗಡಿ ಮಾಲಕಿ ಜಯಮ್ಮ ಎಂಬುವವರ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಘಟನೆ ಸಂಭವಿಸಿದೆ. ರಿಪ್ಪನ್ ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ಜಯಮ್ಮ ಅವರ ಕಿರಾಣಿ ಅಂಗಡಿ ಇದೆ. ಭಾನುವಾರ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ನೀರಿನ ಬಾಟಲಿ ಕೇಳಿದ್ದಾನೆ. ಬಾಟಲಿ ಕೊಟ್ಟು ಜಯಮ್ಮ … Read more

ಖಾಸಗಿ ಬಸ್ ಮಾಲೀಕ ನಿಧನದ ಬಳಿಕ 11.65 ಲಕ್ಷ ರೂ. ವಂಚನೆ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ನಗರದ ಖಾಸಗಿ ಬಸ್ ಮಾಲೀಕ ನಿಧನದ ಬಳಿಕ ಅವರ ಸಹೋದರ, ಆತನ ಪುತ್ರ ಮತ್ತು ಕಂಡಕ್ಟರ್‌ಗಳು 11.65 ಲಕ್ಷ ರೂ. ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಲದೆ ಮೃತ ಮಾಲೀಕನ ಪತ್ನಿ ಮತ್ತು ಮಗಳಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್‌ಗಳ ಮಾಲೀಕ ಮೃತಪಟ್ಟ ಬಳಿಕ ನಾಲ್ಕು ಬಸ್‌ಗಳಿಂದ 11,65,013 ರೂ. ದೈನಂದಿನ ಕಲೆಕ್ಷನ್ ಆಗಿತ್ತು. ಆದರೆ ಬಸ್‌ಗಳ … Read more

BREAKING NEWS | ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶವವಾಗಿ ಪತ್ತೆ

230122 Prakash Travels Owner Missing from Pataguppe Bridge

ಶಿವಮೊಗ್ಗದ ಲೈವ್.ಕಾಂ | HOSANAGARA NEWS | 24 ಜನವರಿ 2022 ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಪಟಗುಪ್ಪ ಸೇತುವೆಯಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಪಟಗುಪ್ಪ ಸೇತುವೆ ಬಳಿ ಇವತ್ತು ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಕೂಡಲೆ ಮೃತದೇಹವನ್ನು ದಡಕ್ಕೆ ತರಲಾಗಿದೆ. ಪ್ರಕಾಶ್ ಅವರು ಶುಕ್ರವಾರ ರಾತ್ರಿ ನಾಪತ್ತೆಯಾಗಿದ್ದರು. ಅವರಿಗಾಗಿ ಕುಟುಂಬದವರು ಎಲ್ಲೆಡೆ ಹುಡುಕಿದ್ದರು. ಶನಿವಾರ ಬೆಳೆಗ್ಗೆ ಹೊಸನಗರದ ಪಟಗುಪ್ಪ ಸೇತುವೆ … Read more

ಪ್ರಕಾಶ್ ಟ್ರಾವೆಲ್ಸ್ ಮಾಲೀಕ ನಾಪತ್ತೆ, ಪಟಗುಪ್ಪೆ ಸೇತುವೆ ಮೇಲೆ ಕಾರು, ಮೊಬೈಲ್ ಪತ್ತೆ, ಶರಾವತಿ ಹಿನ್ನೀರಲ್ಲಿ ಶೋಧ

230122 Prakash Travels Owner Missing from Pataguppe Bridge

ಶಿವಮೊಗ್ಗದ ಲೈವ್.ಕಾಂ | SAGARA / HOSANAGARA NEWS | 23 ಜನವರಿ 2022 ಖಾಸಗಿ ಬಸ್ ಸಂಸ್ಥೆ ಮಾಲೀಕರೊಬ್ಬರು ದಿಢೀರ್ ನಾಪತ್ತೆಯಾಗಿದ್ದಾರೆ. ಅವರ ಕಾರು, ಮೊಬೈಲ್ ಫೋನ್ ಪಟಗುಪ್ಪೆ ಸೇತುವೆ ಮೇಲೆ ಸಿಕ್ಕಿದೆ. ಸಾಗರದ ಪ್ರಕಾಶ್ ಟ್ರಾವೆಲ್ಸ್ ಸಂಸ್ಥೆ ಮಾಲೀಕ ಪ್ರಕಾಶ್ ಅವರು ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದಾರೆ. ಮನೆಯಿಂದ ಕಾರಿನಲ್ಲಿ ಹೊರಟ ಪ್ರಕಾಶ್ ಅವರು ಹಿಂತಿರುಗಿಲ್ಲ. ಹಾಗಾಗಿ ಕುಟುಂಬದವರು ಕರೆ ಮಾಡಿದ್ದಾರೆ. ಯಾವುದೆ ಕರೆಗಳನ್ನು ಸ್ವೀಕರಿಸದ ಹಿನ್ನೆಲೆ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ♦ ಸೇತುವೆ ಮೇಲಿತ್ತು ಕಾರು, … Read more

ಶಿವಮೊಗ್ಗದಲ್ಲಿ ಖಾಸಗಿ ಬಸ್ ಪುನಾರಂಭ ವಿಳಂಬಕ್ಕೆ ಐದು ಕಾರಣ, ಏನದು?

240621 Private Busses Stopped due to corona 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 JUNE 2021 ಲಾಕ್ ಡೌನ್‍ಗೆ ರಿಲೀಫ್‍ ನೀಡಿದ ಸರ್ಕಾರ ಕೆಎಸ್‍ಆರ್‌ಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳೆ ಜೀವನಾಡಿಯಾಗಿವೆ. ಹಾಗಾಗಿ ಜನರು ಖಾಸಗಿ ಬಸ್ಸುಗಳು ಯಾವಾಗ ರಸ್ತೆಗಿಳಿಯಲಿವೆ ಎಂಬ ಕಾತುರದಲ್ಲಿದ್ದಾರೆ. ಹಳ್ಳಿ ಹಳ್ಳಿಗೂ ತಲುಪುವ ಬಸ್ಸುಗಳು, ಕೃಷಿ ಚಟುವಟಿಕೆ, ರೈತರ ಆದಾಯದ ಆಧಾರವಾಗಿವೆ. ಈ ನಡುವೆ ಖಾಸಗಿ ಬಸ್ ಮಾಲೀಕರಿಗೆ ಬಸ್ಸುಗಳನ್ನು ರಸ್ತೆಗಿಳಿಸುವ ತವಕವಿದೆ. ಆದರೆ ಪ್ರಮುಖ ಸವಾಲುಗಳು ಅವರನ್ನು ಕಾಡುತ್ತಿವೆ. ಇದೆ ಕಾರಣಕ್ಕೆ ಬಸ್‍ ಶುರು ಮಾಡಲು ಹತ್ತಾರು ಭಾರಿ ಯೋಚಿಸುವಂತಾಗಿವೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ … Read more

ಔಷಧ ಇಲ್ಲ ಅಂದಿದ್ದಕ್ಕೆ ಕಾರ್ಗಲ್‌ನಲ್ಲಿ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ಔಷಧ ಇಲ್ಲ ಎಂದು ಹೇಳಿದ್ದಕ್ಕೆ ಮೆಡಿಕಲ್‌ ಶಾಪ್‌ ಮಾಲೀಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಸ್ಥಳೀಯರೆ ಅತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕು ಕಾರ್ಗಲ್‌ ಮುಖ್ಯ ಪಟ್ಟಣ ಬೀದಿಯಲ್ಲಿನ ಲಕ್ಷ್ಮೀ ಮೆಡಿಕಲ್‌ ಶಾಪ್‌ ಮಾಲೀಕ ರಾಹುಲ್‌ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿದ ತೇಜಸ್‌ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೆಡಿಕಲ್‌ ಶಾಪ್‌ಗೆ ಬಂದ ತೇಜಸ್‌ ಕೆಲವು ಔಷಧಗಳನ್ನು ಖರೀದಿಸಲು ಕೇಳಿದ್ದಾನೆ. ಈ … Read more

ಗಾಂಧಿ ಬಜಾರ್ ಚಿನ್ನದ ವ್ಯಾಪಾರಿಗೆ ರಿವಲ್ವಾರ್ ತೋರಿಸಿ ಹಣ ದೋಚಿದ ಖದೀಮರು

shivamogga graphics map

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ಶಿವಮೊಗ್ಗದ ಚಿನ್ನ, ಬೆಳ್ಳಿ ವ್ಯಾಪಾರಿ ಮೇಲೆ ಹಲ್ಲೆ ನಡಸಿ, ರಿವಲ್ವಾರ್ ತೋರಿಸಿ ಹಣ ದೋಚಲಾಗಿದೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಧರ್ವ ನಗರ ನಿವಾಸಿ ಎಂ.ಕೆ.ಅನೀಸುರ್ ಇಸ್ಲಾಂ ಅವರ ಮೇಲೆ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ, ಹಣ ದೋಚಲಾಗಿದೆ. ಸಾದಿಕ್ ಅಲಿಯಾಸ್ ಸಾತು ಎಂಬಾತ ಕೃತ್ಯ ಎಸಗಿದವನು. ಗಾಂಧಿ ಬಜಾರ್’ನಲ್ಲಿರುವ ಅನೀಸುರ್ ಇಸ್ಲಾಂ ಅವರ … Read more