ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

270621 Car Accident near Anandapuram 1

ಶಿವಮೊಗ್ಗ ಲೈವ್.ಕಾಂ | ANANDAPURA NEWS | 27 JUNE 2021 ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ ಬಿದ್ದಿದ್ದು, ಚಾಲಕನ ಕುತ್ತಿಗೆಗೆ ಪೆಟ್ಟಾಗಿದೆ. ಆನಂದಪುರ ಸಮೀಪದ ಪತ್ರೆಹೊಂಡೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206ರ ಬಸ್ ತಂಗುದಾಣದ ಪಕ್ಕದ ಚರಂಡಿಗೆ ಕಾರು ಬಿದ್ದಿತ್ತು.  ಚಾಲಕ ಶೇಖರ್  (34) ಗಾಯಗೊಂಡಿದ್ದಾರೆ. ಕುತ್ತಿಗೆ ಭಾಗಗಕ್ಕೆ ಪೆಟ್ಟಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಸೊರಬದ ಉಳಿವಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ … Read more