ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆದವರ ಮೇಲಷ್ಟೆ ಅಲ್ಲ, ಹಾಕಿದವರ ಮೇಲೂ ಬಿತ್ತು ಕೇಸ್
ಶಿವಮೊಗ್ಗ| ಸಾವರ್ಕರ್ ಫ್ಲೆಕ್ಸ್ ವಿವಾದದಿಂದಾಗಿ (CONTROVERSY) ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಮೀರ್ ಅಮಹದ್ ಸರ್ಕಲ್’ನಲ್ಲಿ ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆದವರ ಮೇಲಷ್ಟೆ ಅಲ್ಲ, ಫ್ಲೆಕ್ಸ್ ಅಳವಡಿಸಿದವರ ವಿರುದ್ಧವು ಪ್ರಕರಣ ದಾಖಲಾಗಿದೆ. ಎಲ್ಲರೂ ಅಪರಿಚಿತರೆ..! ಅಮೀರ್ ಅಮಹದ್ ಸರ್ಕಲ್ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡಲಿದೆ. ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಮತ್ತು ಅದನ್ನು ತೆರವು ಮಾಡಿದವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಎರಡು ಪ್ರತ್ಯೇಕ ಎಫ್ಐಆರ್’ಗಳಲ್ಲಿ ಎಲ್ಲರೂ ಅಪರಿಚಿತರು ಎಂಬಂತೆ ತೋರಿಸಲಾಗಿದೆ. … Read more