ರಿಪ್ಪನ್‌ಪೇಟೆಯಲ್ಲಿ ಸಾಧಾರಣ ಮಳೆ, ಶಿವಮೊಗ್ಗದಲ್ಲಿ ಕವಿದ ಮೋಡ

Shimoga-City-MRS-Drone-Shot

SHIVAMOGGA LIVE NEWS | 22 MARCH 2024 SHIMOGA : ರಣ ಬಿಸಿಲಿನಿಂದ ಜನ ಹೈರಾಣಾಗಿದ್ದಾರೆ. ಈ ಮಧ್ಯೆ ರಿಪ್ಪನ್‌ಪೇಟೆಯಲ್ಲಿ ಮಳೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದೆ. ರಿಪ್ಪನ್‌ಪೇಟೆಯಲ್ಲಿ ಮಳೆ, ಮಣ್ಣಿನ ಘಮ ಗುರುವಾರ ಸಂಜೆ ರಿಪ್ಪನ್‌ಪೇಟೆ ಸುತ್ತಮುತ್ತ ಮಳೆಯಾಗಿದೆ. ರಿಪ್ಪನ್‌ಪೇಟೆ, ಹೆದ್ದಾರಿಪುರ, ಅಮೃತ, ಹುಂಚ, ಬೆಳ್ಳೂರು, ಅರಸಾಳು, ಜೇನಿ ಹಾಗೂ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಮಣ್ಣಿನ ಘಮ ಹರಡಿ ಜನರು ನಿಟ್ಟುಸಿರು … Read more

ಮಳೆ ಮಾಪನ ಕೇಂದ್ರದ ಮೇಲೆ ಕಿಡಿಗೇಡಿಗಳ ದಾಳಿ, ಗೇಟ್‌, ಕಂಬಗಳು ಕಳವು

200123 Police Jeep With Light jpg

SHIVAMOGGA LIVE NEWS | 17 FEBRUARY 2024 SHIMOGA : ಮಳೆ ಮಾಪನ ಕೇಂದ್ರದ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು ಗೇಟ್‌, ಕಂಬಗಳನ್ನು ಕದ್ದೊಯ್ದಿದ್ದಾರೆ. ಉಪಕರಣಗಳನ್ನು ಹಾನಿಗೊಳಿಸಿದ್ದಾರೆ. ಹೊಳಲೂರು ಗ್ರಾಮದ ಸಾಮಾನ್ಯ ಮಳೆ ಮಾಪನ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಮಾಪನ ಕೇಂದ್ರದ 25 ಕಂಬಗಳು, ನಾಮಫಲಕ, ತಂತಿ ಬೇಲಿ, ಗೇಟ್‌ ಕಳವು ಮಾಡಲಾಗಿದೆ. ಮಾಪನ ಕೇಂದ್ರವನ್ನು ಹಾಳುಗೆಡವಲಾಗಿದೆ. ಈ ಸಂಬಂಧ ಜಲಮಾಪನ ಉಪ ವಿಭಾಗದ ಎಇಇ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದ ವಿವಿಧೆಡೆ ಮಳೆ ಅಬ್ಬರ, ಎಲ್ಲೆಲ್ಲಿ ಮಳೆಯಾಗುತ್ತಿದೆ?

Rain-at-Shimoga-Kote-Road

SHIVAMOGGA LIVE NEWS | 28 NOVEMBER 2023 SHIMOGA : ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಶಿವಮೊಗ್ಗ ಮತ್ತು ಭದ್ರವಾತಿ ಜನರಿಗೆ ವರುಣ ತುಸು ನೆಮ್ಮದಿ ನೀಡಿದ್ದಾನೆ. ಎರಡು ತಾಲೂಕಿನ ವಿವಿಧೆಡೆ ಮಳೆ ಅಬ್ಬರಿಸುತ್ತಿದೆ. ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಿದೆ. ಮಾಚೇನಹಳ್ಳಿ, ಮಲವಗೊಪ್ಪ, ಹರಿಗೆ, ವಿದ್ಯಾನಗರ ಸುತ್ತಮುತ್ತ ಮಳೆಯಾಗುತ್ತಿದೆ. ಇನ್ನು, ಭದ್ರಾವತಿ ತಾಲೂಕಿನ ವಿವಿಧೆಡೆಯು ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿ ಪಟ್ಟಣ, ಅರೆಬಿಳಚಿ, ದಾಸರಕಲ್ಲಹಳ್ಳಿ, ಮಂಗೋಟೆಯಲ್ಲಿ ಜೋರು ಮಳೆಯಾಗುತ್ತಿದೆ. PHOTO : ಶಿವಮೊಗ್ಗ – … Read more

ಶಿವಮೊಗ್ಗದಲ್ಲಿ ರಾತ್ರಿ ಸುರಿದ ಮಳೆಗೆ ವಾಲಿಕೊಂಡ ವಿದ್ಯುತ್ ಕಂಬ, ಸ್ಥಳೀಯರಲ್ಲಿ ಆತಂಕ

061123 Electric Pole bend during heavy rain in ravindra nagara

SHIVAMOGGA LIVE NEWS | 6 NOVEMBER 2023 SHIMOGA : ವಿದ್ಯುತ್‌ ಕಂಬವೊಂದು (Electric Pole) ಸಂಪೂರ್ಣ ವಾಲಿಕೊಂಡಿದ್ದು ರವೀಂದ್ರ ನಗರದಲ್ಲಿ ಆತಂಕ ಸೃಷ್ಟಿಸಿದೆ. ರವೀಂದ್ರ ನಗರ ಮೊದಲ ಕ್ರಾಸ್‌ನಲ್ಲಿ ವಿದ್ಯುತ್ ಕಂಬವೊಂದು ವಾಲಿಕೊಂಡಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಂಬ ವಾಲಿರುವ ಸಾಧ್ಯತೆ ಇದೆ. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗದ ತಂತಿಗಳನ್ನು ಕತ್ತರಿಸಲಾಗಿದೆ. ಕಂಬ ಯಾವ ಸಮಯದಲ್ಲಾದರೂ ಬೀಳುವ ಸಾಧ್ಯತೆ ಇದ್ದು, ರವೀಂದ್ರನಗರ ನಿವಾಸಿಗಳನ್ನು ಭಯಕ್ಕೆ ದೂಡಿದೆ. ಇದನ್ನೂ ಓದಿ- ಅನುಮಾನಾಸ್ಪದ ಬಾಕ್ಸ್‌ ಕೇಸ್‌, … Read more

ಶಿವಮೊಗ್ಗ ನಗರದಾದ್ಯಂತ ರಾತ್ರಿ ಪೂರ್ತಿ ಅಬ್ಬರಿಸಿದ ಮಳೆ

night-rain-in-shimoga

SHIVAMOGGA LIVE NEWS | 6 NOVEMBER 2023 SHIMOGA : ನಗರದಾದ್ಯಂತ ಕಳೆದ ರಾತ್ರಿ ಮಳೆ ಜೋರಾಗಿ ಅಬ್ಬರಿಸಿದೆ. ಬೆಳಗಿನ ಜಾವದವರೆಗೆ ಮಳೆ ಸುರಿದಿದೆ. ಎಡೆಬಿಡದೆ ಮಳೆ ಸುರಿದಿದ್ದರಿಂದ ಕೆಲವು ಬಡಾವಣೆಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಬಾಕ್ಸ್‌ಗಳ ಪರಿಶೀಲನೆ, ಕಾರ್ಯಾಚರಣೆಗೆ ಅಡ್ಡಿಯಾದ ಮಳೆ ರಾತ್ರಿ 9 ಗಂಟೆ ಹೊತ್ತಿಗೆ ಶುರುವಾದ ಮಳೆ ಬಳಗಿನ ಜಾವದವರೆಗೆ ಅಬ್ಬರಿಸಿತು. ಮಿಂಚು, ಗುಡುಗು ಸಹಿತ ಮಳೆಯಾಗಿದೆ. ಕ್ಷಣ ಹೊತ್ತು ಬಿಡುವು ನೀಡದೆ ಮಳೆ … Read more

ಶಿವಮೊಗ್ಗ ನಗರದಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆ, ತಂಪಾದ ಇಳೆ

night-rain-in-shimoga

SHIVAMOGGA LIVE NEWS | 11 OCTOBER 2023 SHIMOGA : ನಗರದಾದ್ಯಂತ ಗುಡುಗು ಸಹಿತ ಜೋರು ಮಳೆ (Rain) ಆರಂಭವಾಗಿದೆ. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ನಗರದಲ್ಲಿ ತಂಪು ವಾತಾವರಣ ಮೂಡಿದೆ. ನಗರದಾದ್ಯಂತ ಸಂಜೆಯಿಂದಲೇ ಮೋಡ ಕವಿದಿತ್ತು. ಈಗ ಮಳೆ ಅಬ್ಬರಿಸುತ್ತಿದೆ. ಜೋರು ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಮಳೆ ಜೊತೆಗೆ ಗಾಳಿ ಬೀಸುತ್ತಿದೆ. ಇದನ್ನೂ ಓದಿ – ಸಿಗಂದೂರು ಚೌಡೇಶ್ವರಿ ಸೇರಿ ನವದೇವಿ ದರ್ಶನ, ಭದ್ರಾವತಿ FMನಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮ, ಟೈಮಿಂಗ್‌ ಏನು?

ಶಿವಮೊಗ್ಗ ನಗರದ ವಿವಿಧೆಡೆ ಕೆಲ ನಿಮಿಷ ಅಬ್ಬರದ ಮಳೆ, ತಂಪಾಯ್ತು ಇಳೆ

Rain-in-Shimoga-city-Kuvempu-Road

SHIVAMOGGA LIVE NEWS | 11 SEPTEMBER 2023 SHIMOGA : ನಗರದ ವಿವಿಧೆಡೆ ಜೋರು ಮಳೆಯಾಗಿದೆ. ಸಂಜೆ ವೇಳೆಗೆ ಕೆಲವು ನಿಮಿಷ ಅಬ್ಬರದ ಮಳೆ ಸುರಿದಿದೆ. ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ಜನಕ್ಕೆ ಮಳೆ ತುಸು ನೆಮ್ಮದಿ ನೀಡಿದೆ. ವಾತಾವರಣ ತಂಪಾಗಿದೆ. ಸಂಜೆ 5.30ರ ಹೊತ್ತಿಗೆ ನಗರದ ವಿವಿಧಡೆ ಮಳೆ ಸುರಿದಿದೆ. ದಿಢೀರ್‌ ಮಳೆಯಿಂದಾಗಿ ನಗರದ ವಿವಿಧೆಡೆ ಸಂಚರಿಸುತ್ತಿದ್ದರು ರಕ್ಷಣೆಗಾಗಿ ವಿವಿಧ ಕಟ್ಟಡಗಳ ಅಡಿ ನಿಲ್ಲುವಂತಾಯಿತು. ಇದನ್ನೂ ಓದಿ – ಕೆಲಸ ಹುಡುಕ್ತಿರೋರಿಗೆ ಗುಡ್ ನ್ಯೂಸ್, ಶಿವಮೊಗ್ಗ ಸೈನ್ಸ್ … Read more

ಭತ್ತ, ಹೆಚ್ಚು ನೀರು ಬೇಡುವ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ, ಕಾರಣವೇನು?

Bhadra-Dam-General-Image

SHIVAMOGGA LIVE NEWS | 9 SEPTEMBER 2023 SHIMOGA : ಭದ್ರಾ ಅಚ್ಚುಕಟ್ಟು (Bhadra Dam) ವ್ಯಾಪ್ತಿಯಲ್ಲಿ ಭತ್ತ ಮತ್ತು ಅಧಿಕ ನೀರು ಬೇಡುವ ಯಾವ ಬೆಳೆಯನ್ನೂ ಬೆಳೆಯಬಾರದು ಎಂದು ನೀರಾವರಿ ಇಲಾಖೆ ಆದೇಶಿಸಿದೆ. ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಬೇಸಿಗೆಯಲ್ಲಿ ಕುಡಿಯುವುದಕ್ಕೆ, ತೋಟಗಾರಿಕೆ ಹಾಗೂ ಇತರೆ ಬೆಳೆಗಳಿಗೆ ನೀರು ಸಂಗ್ರಹಿಸಿಡಬೇಕಿದೆ. ಆದ್ದರಿಂದ ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆಯದಂತೆ ಸೂಚಿಸಲಾಗಿದೆ‌. ಇದನ್ನೂ ಓದಿ – BREAKING NEWS – ಭದ್ರಾ … Read more

ಭದ್ರಾ ಜಲಾಶಯದಿಂದ 100 ದಿನ ನೀರು, ಪುನರ್‌ ಪರಿಶೀಲನೆಗೆ ಶಿವಮೊಗ್ಗದಲ್ಲಿ ಹೋರಾಟ

052923-Bhadravathi-Shashikumar-Gowda-protest-in-Shimoga.webp

SHIVAMOGGA LIVE NEWS | 5 SEPTEMBER 2023 SHIMOGA : ಭದ್ರಾ ಜಲಾಶಯದಿಂದ (Bhadra Dam) ನೂರು ದಿನ ನೀರು ಹರಿಸುವ ನಿರ್ಧಾರ ಪುನರ್‌ ಪರಿಶೀಲಿಸಬೇಕು. ಮಳೆ ಇಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದು ಬರಗಾಲ ಘೋಷಣೆ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್‌ ಗೌಡ ಪ್ರತಿಭಟನೆ (Protest) ನಡೆಸಿದರು. ಇದನ್ನೂ ಓದಿ – ಶಿವಮೊಗ್ಗದ ಉದ್ಯಮಿಗೆ ಕರ್ನಾಟಕ ಸಾಧಕ ಪ್ರಶಸ್ತಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಶಶಿಕುಮಾರ್‌ ಗೌಡ, ಭದ್ರಾ ಜಲಾಶಯದಿಂದ 100 … Read more

ಶಿವಮೊಗ್ಗ ನಗರದಲ್ಲಿ ಗುಡುಗು ಸಹಿತ ಮಳೆ

Rain-at-Shimoga-Woman-walks-in-the-road.webp

SHIVAMOGGA LIVE NEWS | 5 SEPTEMBER 2023 SHIMOGA : ನಗರದಲ್ಲಿ ಗುಡುಗು (Thunderstorm) ಸಹಿತ ಮಳೆಯಾಗಿದೆ. ದಿಢೀರ್‌ ಮೋಡ ಆವರಿಸಿಕೊಂಡು ಮಳೆ ಸುರಿದಿದೆ. ಜೋರು ಮಳೆಯಿಂದ ಇಂದು ಕೂಡ ತಪಾಮಾನದಲ್ಲಿ ಇಳಿಕೆಯಾಗಿದೆ. ಮಧ್ಯಾಹ್ನದ ವೇಳೆ ಶಿವಮೊಗ್ಗ ನಗರದಲ್ಲಿ ಮೋಡ ಆವರಿಸಿಕೊಂಡಿತು. ಗುಡುಗು ಸಹಿತ ಮಳೆ ಅಬ್ಬರಿಸಲು ಆರಂಭವಾಯಿತು. ಸೋಮವಾರ ಮಧ್ಯಾಹ್ನವು ಮಳೆ ಸುರಿದಿತ್ತು. ಇದರಿಂದ ನಗರದಲ್ಲ ವಾತಾವರಣ ತಂಪಾಗಿತ್ತು. ಇವತ್ತು ಕೂಡ ಮಳೆಯಾಗಿದ್ದು, ಇನ್ನು ಕೆಲವು ದಿನ ಇದೇ ಮಾದರಿ ಮುಂದುವರೆಯುವ ಸಾಧ್ಯತೆ ಇದೆ. … Read more