ಭಾರಿ ಮಳೆಗೆ ನಾಗೋಡಿ ಘಾಟಿಯಲ್ಲಿ ರಸ್ತೆ ಕುಸಿತ, ವಾಹನ ಸಂಚಾರ ಸ್ಥಗಿತ, ಪರ್ಯಾಯ ಮಾರ್ಗ ಯಾವುದು ಗೊತ್ತಾ?

190621 Nagodu Highway Road Blocked due to rain 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 19 JUNE 2021 ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಮುಂಗಾರು ಮಳೆ ಅಬ್ಬರಕ್ಕೆ ನಾಗೋಡಿ ಘಾಟಿಯಲ್ಲಿ ರಸ್ತೆ ಕುಸಿತ ಉಂಟಾಗಿದೆ. ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನಾಗೋಡಿ ಘಾಟಿಯಲ್ಲಿ ರಸ್ತೆ ಕುಸಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿವಕುಮಾರ್ ಆದೇಶಿಸಿದ್ದಾರೆ. ಆಗಸ್ಟ್ 30 ಅಥವಾ ರಿಪೇರಿ ಕಾರ್ಯ ಮುಗಿಯುವವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯವಾಗಿ … Read more

ಹೊಸನಗರದಲ್ಲಿ ಮುಂದುವರೆದ ಮಳೆ ಅಬ್ಬರ, ಮಾಣಿ ಡ್ಯಾಂ ಒಳ ಹರಿವು ಭಾರಿ ಹೆಚ್ಚಳ

Maani-Dam-Hosanagara

ಶಿವಮೊಗ್ಗ ಲೈವ್.ಕಾಂ | HOSANAGARA NEWS | 18 JUNE 2021 ಹೊಸನಗರ ತಾಲೂಕಿನಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಕಳೆದ 24 ಗಂಟೆ ಅವಧಿಯಲ್ಲಿ ತಾಲೂಕಿನಲ್ಲಿ 292.4 ಮಿ.ಮೀ ಮಳೆಯಾಗಿದೆ. ತಾಲೂಕಿನ ಮಾಣಿ ವ್ಯಾಪ್ತಿಯಲ್ಲಿ 166 ಮಿ.ಮೀ, ಯಡೂರಿನಲ್ಲಿ 203 ಮಿ.ಮೀ, ಹುಲಿಕಲ್‍ನಲ್ಲಿ 176 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 178 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 104 ಮಿ.ಮೀ, ಸಾವೇಹಕ್ಲು ವ್ಯಾಪ್ತಿಯಲ್ಲಿ 82 ಮಿ.ಮೀ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಮಾಣಿ ಡ್ಯಾಂಗೆ 9495 ಕ್ಯೂಸೆಕ್ ಒಳ ಹರಿವು ಇದೆ. ಪಿಕ್‍ … Read more

ನಿರಂತರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ, ಇನ್ನೆರಡು ದಿನ ಮಳೆ ಸುರಿದರೆ ಬಿತ್ತಿದ ಬೀಜ ಕೊಳೆಯುವ ಭಯ

Talaguppa Graphics

ಶಿವಮೊಗ್ಗ ಲೈವ್.ಕಾಂ | TALAGUPPA NEWS | 18 JUNE 2021 ತಾಳಗುಪ್ಪ ಹೋಬಳಿಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ. ರಾಷ್ಟ್ರೀಯ ಹೆದ್ದಾರಿ 206 ಇಕ್ಕೆಲೆಗಳಲ್ಲಿ ಎಲ್ಲ ಭತ್ತದ ಗದ್ದೆಗಳಲ್ಲಿ ನೀರು ನಿಂತಿದೆ. ಗುಂಡಿಬೈಲು ಗದ್ದೆ ಬಯಲು ನೀರಲ್ಲಿ ಮುಳುಗಿದ್ದು ಇನ್ನೆರಡು ದಿನ ಮಳೆ ಮುಂದುವರಿದರೆ ಬಿತ್ತಿದ ಬೀಜ ಕೊಳೆಯುವ ಸಾಧ್ಯತೆ ಇದೆ. ಮಳೆಗಾಲ ಪೂರ್ವದಲ್ಲಿ ಚರಂಡಿ ಹೂಳೆತ್ತಿಸುವ ಕಾಮಗಾರಿ ನಡೆಯದೆ, ಬೆಳ್ಳ, ರಸ್ತೆ, ಅಚಾರ್ಯ ಹೋಟೆಲ್ ಪಕ್ಕದ … Read more

ಶಿವಮೊಗ್ಗ ನಗರದಲ್ಲಿ ಬಿಡುವು ಕೊಟ್ಟು ಅಬ್ಬರಿಸಿದ ವರುಣ, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಲ್ಲಿ ಎಷ್ಟು ಮಳೆಯಾಗಿದೆ?

170621 Rain At Shimoga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 JUNE 2021 ಶಿವಮೊಗ್ಗ ನಗರದಲ್ಲಿ ಮುಂಗಾರು ಚುರುಕು ಪಡೆದುಕೊಂಡಿದೆ. ಬೆಳಗ್ಗೆ ಸ್ವಲ್ಪ ಬಿಡುವು ನೀಡಿದ್ದ ವರುಣ ಮತ್ತೆ ಅಬ್ಬರ ಶುರು ಮಾಡಿದ್ದಾನೆ. ಬೆಳಗ್ಗೆ ಕೆಲ ಹೊತ್ತು ಮಳೆಯಾಗಿತ್ತು. ಬಳಿಕ ಸ್ವಲ್ಪ ಹೊತ್ತು ಬಿಡುವು ನೀಡಿತ್ತು. ಅಲ್ಲದೆ ಬಿಸಿಲು ಕಾಣಿಸಿಕೊಂಡಿತ್ತು. ಆ ಬಳಿಕ ಮತ್ತೆ ಮಳೆ ಅಬ್ಬರ ಶುರುವಾಗಿದೆ. ಇನ್ನು ಜಿಲ್ಲೆಯ ವಿವಿಧೆಡೆಯು ಇವತ್ತು ಮಳೆ ಬಿರುಸು ಪಡೆದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 16.40 … Read more

ಮಧ್ಯಾಹ್ನ 1 ಗಂಟೆಯಿಂದ ತುಂಗಾ ಡ್ಯಾಂನ ಹೊರಹರಿವು ಮತ್ತಷ್ಟು ಏರಿಕೆ

140621 Tunga Dam Water Outflow 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 JUNE 2021 ಒಳ ಹರಿವು ಹೆಚ್ಚಳವಾದಂತೆ ತುಂಗಾ ಜಲಾಶಯದಿಂದ ಹೊಳೆಗೆ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಧ್ಯಾಹ್ನ 1 ಗಂಟೆಯಿಂದ 33,700 ಕ್ಯೂಸೆಕ್ ನೀರನ್ನು ತುಂಗಾ ಜಲಾಶಯದಿಂದ ಹೊರಗೆ ಬಡಲಾಗುತ್ತಿದೆ. ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಇನ್ನಷ್ಟು ನೀರನ್ನು ಹೊರಗೆ ಬಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದ 21,500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿತ್ತು. ಆದರೆ ಒಳ ಹರಿವು ಪ್ರಮಾಣದಲ್ಲಿ ಹೆಚ್ಚಳವಾಗಿದ್ದರಿಂದ ಹೊರ ಹರಿವು ಪ್ರಮಾಣ … Read more

ಹೊಸನಗರದಲ್ಲಿ ವಾಡಿಕೆಗಿಂತಲೂ ಭಾರಿ ಮಳೆ, ಕಳೆದ 24 ಗಂಟೆಯಲ್ಲಿ ಎಷ್ಟು ಮಳೆ ಸುರಿದಿದೆ?

rain in shimoga

ಶಿವಮೊಗ್ಗ ಲೈವ್.ಕಾಂ | HOSANAGARA NEWS | 16 JUNE 2021 ಹೊಸನಗರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಕ್ಷಣಹೊತ್ತು ಬಿಡುವು ಕೊಡದೆ ಮುಂಗಾರು ಆರ್ಭಟಿಸುತ್ತಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸನಗರ ತಾಲೂಕಿನಾದ್ಯಂತ 320.8 ಮಿ.ಮೀ ಮಳೆಯಾಗಿದೆ. ಜೂನ್ ತಿಂಗಳ ವಾಡಿಕೆ ಮಳೆ 680.10 ಮಿ.ಮೀ. ಆದರೆ ತಿಂಗಳ ಮೊದಲರ್ಧದಲ್ಲೇ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಈವರೆಗೂ 1036.7 ಮಿ.ಮೀ ಮಳೆಯಾಗಿದೆ. ಮಾಣಿ ವ್ಯಾಪ್ತಿಯಲ್ಲಿ 106 ಮಿ.ಮೀ, ಯಡೂರಿನಲ್ಲಿ 125 … Read more

ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊಳೆಗೆ, ಭದ್ರಾ ಡ್ಯಾಂಗೆ ಒಳಹರಿವು ಏರಿಕೆ

140621 Tunga Dam water outflow from 21 gates 1

ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 16 JUNE 2021 ಮಲೆನಾಡು ಭಾಗದಲ್ಲಿ ಮುಂಗಾರು ಬಿರುಸು ಪಡೆದುಕೊಳ್ಳುತ್ತಿದೆ. ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಳವಾಗತ್ತಿದೆ. ಇವತ್ತು ಬೆಳಗ್ಗೆ ಮಾಪನದಂತೆ ಭದ್ರಾ ಜಲಾಶಯಕ್ಕೆ 10,958 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ತುಂಗಾದಿಂದ ಹೊರ ಹರಿವು ಹೆಚ್ಚಳ ಮತ್ತೊಂದೆಡೆ ತುಂಗಾ ಜಲಾಶಯಕ್ಕೆ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ಅಲ್ಲದೆ ಹಿನ್ನೀರು ಭಾಗದಲ್ಲಿ ಭಾರಿ ಮಳೆಯ ನಿರೀಕ್ಷೆ ಇರುವುದರಿಂದ ಗಾಜನೂರಿನ … Read more

ಜಿಲ್ಲೆಯಲ್ಲಿ ಮುಂಗಾರು ಜೋರು, ಶಿವಮೊಗ್ಗ ಸಿಟಿಯಲ್ಲಿ ಮಳೆ, ಬಿಸಿಲಿನಾಟ, ಹೊನ್ನೆತಾಳುವಿನಲ್ಲಿ ಅಬ್ಬರ, ಎಲ್ಲೆಲ್ಲಿ ಹೇಗಿದೆ ಮಳೆ?

160621 Hosanagara Rain General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 JUNE 2021 ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಚುರುಕು ಪಡೆದುಕೊಂಡಿದೆ. ಕೆಲವಡೆ ಬಿಡುವು ಕೊಡದೆ ಮಳೆ ಸುರಿಯುತ್ತಿದೆ. ಹಾಗಾಗಿ ಕೆರೆಗಳು, ಜಲಾಶಯಗಳಲ್ಲಿ ನೀರನ ಪ್ರಮಾಣ ಹೆಚ್ಚಳವಾಗುತ್ತಿದೆ. ಹೊಸನಗರ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮನೆಯಿಂದ ಹೊರ ಬರಲಾಗದಷ್ಟು ಮಳೆ ಅಬ್ಬರಿಸುತ್ತಿದೆ. ಇದರ ನಡುವೆಯೆ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಹೊನ್ನೆತಾಳುವಿನಲ್ಲಿ ಭಾರಿ ಮಳೆ ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ 24 ಗಂಟೆ … Read more

ಗಂಟೆ ಗಂಟೆಗೂ ತುಂಗಾ ಜಲಾಶಯದ ಹೊರ ಹರಿವು ಹೆಚ್ಚಳ, ಈಗೆಷ್ಟು ನೀರನ್ನು ಹೊಳೆಗೆ ಬಿಡಲಾಗುತ್ತಿದೆ?

140621 Tunga Dam Water Outflow 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 JUNE 2021 ತುಂಗಾ ಜಲಾಶಯದ ಒಳ ಮತ್ತ  ಹೊರಹರಿವು ಪ್ರಮಾಣದಲ್ಲಿ ಏರಿಕೆಯಾಗುತ್ತಲೆ ಇದೆ. ಈಗ 9500 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಬೆಳಗ್ಗೆ 11.30ಕ್ಕೆ ತುಂಗಾ ಜಲಾಶಯಕ್ಕೆ 8375 ಕ್ಯೂಸೆಕ್ ಒಳ ಹರಿವು ಇತ್ತು. ಹಾಗಾಗಿ ಅಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿತ್ತು. ಜಲಾಶಯದ 21 ಕ್ರಸ್ಟ್‍ ಗೇಟುಗಳನ್ನು ಮೇಲೆತ್ತಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಆದ್ದರಿಂದ ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗುತ್ತಿದೆ. … Read more

ಹೊಸನಗರದಲ್ಲಿ ಮಳೆ ಜೋರು, ಯಡೂರು, ಹುಲಿಕಲ್ನಲ್ಲಿ ಅಬ್ಬರಿಸಿದ ವರುಣ

HOSANAGARA-TALUK-NEWS-1.jpg

ಶಿವಮೊಗ್ಗ ಲೈವ್.ಕಾಂ | HOSANGARA NEWS | 13 JUNE 2021 ಹೊಸನಗರ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಎಡೆಬಿಡದೆ ಸುರಿದ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಕಳೆದ 24 ಗಂಟೆ ಅವಧಿಯಲ್ಲಿ ತಾಲೂಕಿನ ಯಡೂರಿನಲ್ಲಿ 135 ಮಿ.ಮೀ ಮಳೆಯಾಗಿದೆ. ಮಾಣಿ, ಹುಲಿಕಲ್‍ನಲ್ಲಿ 123 ಮಿ.ಮೀ, ಹೊಸನಗರದಲ್ಲಿ  119 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 106 ಮಿ.ಮೀ, ಚಕ್ರಾದಲ್ಲಿ 100 ಮಿ.ಮೀ, ಸಾವೇಹಕ್ಲುವಿನಲ್ಲಿ 96 ಮಿ.ಮೀ ಮಳೆಯಾಗಿದೆ. ಗರಿಗೆದರಿದ … Read more