ತುಂಗಾ ಚಾನಲ್‌ಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನಾಪತ್ತೆ, ಶೋಧ ಕಾರ್ಯಾಚರಣೆ
ಶಿವಮೊಗ್ಗ : ಚಾನಲ್‌ಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯೊಬ್ಬರು (Woman) ನಾಪತ್ತೆಯಾಗಿದ್ದಾಳೆ. ಅಗ್ನಿಶಾಮಕ ಸಿಬ್ಬಂದಿ ಆಕೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಿವಮೊಗ್ಗದ ರಾಗಿಗುಡ್ಡದ ಬಳಿ ತುಂಗಾ ಚಾನಲ್‌ಗೆ ಬಟ್ಟೆ ತೊಳೆಯಲು ಹೋಗಿದ್ದ ರೇಷ್ಮಾಬಾನು (33) ನಾಪತ್ತೆಯಾಗಿದ್ದಾರೆ. ಕಾಲು ಜಾರಿ ಚಾನಲ್‌ಗೆ ಬಿದ್ದಿರುವ ಶಂಕೆ ಇರುವುದರಿಂದ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಕೋಳಿ ಮಾಂಸ ಸೇವಿಸಿದ್ರೆ ಹಕ್ಕಿ ಜ್ವರ ಬರುತ್ತಾ? ಡಿಸಿ ಹೇಳಿದ್ದೇನು? ಜಿಲ್ಲಾ ಆರೋಗ್ಯಾಧಿಕಾರಿ … Read more