ಸಾಗರ ತಾಲೂಕಿನಲ್ಲಿ ಲಾರಿ, ಬೈಕು ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

121020 Bike Accident In Sagara Bheemanakone 1

ಶಿವಮೊಗ್ಗ ಲೈವ್.ಕಾಂ | SAGARA NEWS | 12 ಅಕ್ಟೋಬರ್ 2020 ಲಾರಿ ಬೈಕು ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕಿನ ಭೀಮನಕೋಣೆಯ ಹಾರುಡಿಕೆ ಬಳಿ ಭಾನುವಾರ ಘಟನೆ ಸಂಭವಿಸಿದೆ. ಸಾಗರದ ರತೀಶ್ ಶೆಟ್ಟಿ (27) ಮೃತ ಬೈಕ್ ಸವಾರ. ಬಟ್ಟೆಮಲ್ಲಪ್ಪ ಗ್ರಾಮದಲ್ಲಿರುವ ತನ್ನ ಸಂಬಂಧಿಯೊಬ್ಬರ ಮನೆಯಿಂದ ಸಾಗರಕ್ಕೆ ಹಿಂತಿರುಗುತ್ತಿದ್ದ ವೇಳೆ ಅಪಘಾತವಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ … Read more

ಶಿವಮೊಗ್ಗ ಸಿಟಿ ಮತ್ತು ಸಾಗರ ತಾಲೂಕಿನ ವಿವಿಧೆಡೆ, ಹೊಳಲೂರು ಸುತ್ತಮುತ್ತ ಅಕ್ಟೋಬರ್ 8ರಂದು ಕರೆಂಟ್ ಇರಲ್ಲ

power cut graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಅಕ್ಟೋಬರ್ 2020 ಮೆಸ್ಕಾಂ, ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿರುವುದರಿಂದ ಶಿವಮೊಗ್ಗ ನಗರ ಮತ್ತು ಜಿಲ್ಲೆಯ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ ಶಿವಮೊಗ್ಗ ನಗರ ನಗರದ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಅ.8ರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕೋಟೆ ರಸ್ತೆ, ಅಪ್ಪಾಜಿ ರಾವ್ ಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೊಳಲೂರು ಸುತ್ತಮುತ್ತ ಹೊಳಲೂರು ವಿದ್ಯುತ್ … Read more

ಸಾಗರದಲ್ಲಿ ಹೆಗ್ಗೋಡಿನ ಚರಕಕ್ಕೆ ಸಿಕ್ತು ಮರು ಚಾಲನೆ, ಸರ್ಕಾರದಿಂದ ಸೌಲಭ್ಯ ಒದಗಿಸುವ ಭರವಸೆ

031020 Charaka Restarts in Heggodu Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 3 ಅಕ್ಟೋಬರ್ 2020 ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿ ಸ್ಥಗಿತಗೊಂಡಿದ್ದ ಹೆಗ್ಗೋಡಿನ ಚರಕ ಮಹಿಳಾ ವಿವಿದ್ದೋದ್ದೇಶ  ಸಹಕಾರ ಸಂಘಕ್ಕೆ ಗಾಂಧಿ ಜಯಂತಿಯಂದು ಮರಚಾಲನೆ ನೀಡಲಾಗಿದೆ. ನೂತನ ಕಟ್ಟಡವನ್ನೂ ಉದ್ಘಾಟಿಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಚರಕಕ್ಕೆ ಮರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕರೋನ ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ಚರಕ ಮರುಚಾಲನೆ ಪಡೆಯುತ್ತಿದೆ. ಸಂಸ್ಥೆಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು. … Read more

ಸಾಗರ ತಾಲೂಕು ಬ್ಯಾಕೋಡು ಜೋಡಿ ಕೊಲೆ, ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಭೇಟಿ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 3 ಅಕ್ಟೋಬರ್ 2020 ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಭರವಸೆ ನೀಡಿದ್ದಾರೆ. ಸಾಗರ ತಾಲೂಕು ಬ್ಯಾಕೋಡು ಗ್ರಾಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಭೇಟಿ ನೀಡಿದ್ದರು. ಇಲ್ಲಿನ ಉಪಠಾಣೆಗೆ ಭೇಟಿ ನೀಡಿ, ಕೊಲೆ ತನಿಖೆ ಕುರಿತು ಮಾಹಿತಿ ಪಡೆದರು. ಅಲ್ಲದೆ ದಂಪತಿ ಹತ್ಯೆಯಾದ ಮನೆಗೂ ತೆರಳಿದ್ದ ಜಿಲ್ಲಾ ರಕ್ಷಣಾಧಿಕಾರಿ, ದಂಪತಿಯ ಮಕ್ಕಳಿಂದ ಮಾಹಿತಿ ಪಡೆದರು. ಉಪಠಾಣೆ ಮೇಲ್ದರ್ಜೆಗೇರಿಸಿ ಇದೇ ವೇಳೆ ಜಿಲ್ಲಾ ರಕ್ಷಣಾಧಿಕಾರಿ … Read more

36 ಮಂಗಗಳಿಗೆ ವಿಷವಿಟ್ಟು ಹತ್ಯೆ, ಐವರು ಅರೆಸ್ಟ್, ಹತ್ಯೆಗೇನು ಕಾರಣ? ಸಿಕ್ಕಿಬಿದ್ದಿದ್ದು ಹೇಗೆ?

011020 Monkeys killed Near Anandapuram 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020 ಬೆಳೆ ನಾಶ ಮಾಡುತ್ತಿದ್ದ 36 ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ ಕಾಡಿನಲ್ಲಿ ಘಟನೆ ನಡೆದಿದೆ. ಐವರು ಅರೆಸ್ಟ್ ಆಗಿದ್ದು ಹೇಗೆ? ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿ, ಅವುಗಳ ಮೃತದೇಹವನ್ನು ಎಸೆಯಲು ಆಗಮಿಸಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಂಧಿತರಿಂದ ಒಂದು ಕಾರು, … Read more

GOOD NEWS | ರಾಜ್ಯದಲ್ಲೇ ಮೊದಲ ಬಾರಿಗೆ ಕರೋನ ವಾರ್ಡ್‌ನಲ್ಲಿ ಡಿಫರೆಂಟ್ ಪ್ರಯೋಗ

011020 Sagara Hospital Corona Ward Library 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020 ರಾಜ್ಯದಲ್ಲೇ ಮೊದಲ ಬಾರಿಗೆ ಕರೋನ ವಾರ್ಡ್‍ನಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಆರೋಗ್ಯ ಇಲಾಖೆ ನೌಕರರು ಗ್ರಂಥಾಲಯ ಆರಂಭಿಸಿ, ಕರೋನ ಸೋಂಕಿತರಿಗೆ ಚಿಕಿತ್ಸೆ ವೇಳೆ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಮನೋಲ್ಲಾಸ ನೀಡುವ ಪುಸ್ತಕಗಳು ಗ್ರಂಥಾಲಯದಲ್ಲಿ ಮನೋಲ್ಲಾಸ ನೀಡುವ ಪುಸ್ತಕಗಳನ್ನು ಇರಿಸಲಾಗುತ್ತಿದೆ. ಚಿಕಿತ್ಸೆಗೆ ದಾಖಲಾದವರು ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದಬಹುದಾಗಿದೆ. ಇದರಿಂದ ಚಿಕಿತ್ಸೆ ಅವಧಿಯಲ್ಲಿ ಬೇಸರ ಕಳೆಯಲಿದೆ. ಅಲ್ಲದೆ ಅನ್ಯ ಯೋಚನೆಗಳಿಂದ ಮಾನಸಿಕವಾಗಿ ಕುಗ್ಗುವುದು ತಪ್ಪಲಿದೆ. ಎಂಎಲ್‍ಎ, … Read more

ಅಡಿಕೆ ಧಾರಣೆ | 24 ಸೆಪ್ಟೆಂಬರ್ 2020 | ಶಿವಮೊಗ್ಗ ಮತ್ತು ಸಿದ್ದಾಪುರ ಮಾರುಕಟ್ಟೆ

Areca Price Shimoga 1

ಶಿವಮೊಗ್ಗ ಲೈವ್.ಕಾಂ | APMC ARECA PRICE | 24 ಸೆಪ್ಟಂಬರ್ 2020 ಶಿವಮೊಗ್ಗ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಬೆಟ್ಟೆ 36890 39999 ಗೊರಬಲು 18019 25571 ರಾಶಿ 32009 37591 ಸರಕು 37591 68296 ಸಿದ್ಧಾಪುರ ಮಾರುಕಟ್ಟೆ ಅಡಿಕೆ ಕನಿಷ್ಠ ಗರಿಷ್ಠ ಬಿಳೆ ಗೋಟು 25009 28180 ಚಾಲಿ 30509 32899 ಕೋಕ 15109 24099 ಕೆಂಪುಗೋಟು 17699 21409 ರಾಶಿ 33169 37109 ತಟ್ಟಿಬೆಟ್ಟೆ 24718 33699 ಸಾಗರ ಮಾರುಕಟ್ಟೆ ಅಡಿಕೆ ಕನಿಷ್ಠ … Read more

ಸೊರಬ ತಾಲೂಕಿನ ಹಿಂದಿನ ತಹಶೀಲ್ದಾರ್ ಸಸ್ಪೆಂಡ್, ಕಾರಣವೇನು?

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SORABA NEWS | 24 ಸೆಪ್ಟಂಬರ್ 2020 ಸೊರಬ ತಾಲೂಕಿನ ಹಿಂದಿನ ತಹಶೀಲ್ದಾರ್ ಚಂದ್ರಶೇಖರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರನ್ನು ಸಸ್ಪೆಂಡ್ ಮಾಡಿ ಸಾಗರ ಉಪವಿಭಾಗಾಧಿಕಾರಿ ಡಾ.ನಾಗರಾಜ್ ಆದೇಶ ಹೊರಡಿಸಿದ್ದಾರೆ. ಚಂದ್ರಶೇಖರ್ ಅವರು ಪ್ರಸ್ತುತ ಸಾಗರದ ಗ್ರೇಡ್-2 ತಹಶೀಲ್ದಾರ್ ಅಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಸ್ಪೆಂಡ್ ಆಗಲು ಕಾರಣವೇನು? ಸೊರಬ ತಾಲೂಕು ಹಿರೇಶಕುನ ಗ್ರಾಮದ ಸರ್ವೇ ನಂ.113ರ ಸರ್ಕಾರಿ ಜಮೀನಿನಲ್ಲಿ ಹಕ್ಕುಪತ್ರವನ್ನು ಅಕ್ರಮವಾಗಿ ನೀಡಲಾಗಿದ್ದು, ತನಿಖೆ ನಡೆಸುವಂತೆ ಶಾಸಕ … Read more

ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಪ್ರತಿಗೆ ಕಾಗೋಡಿನಲ್ಲಿ ಬೆಂಕಿ, ಬೆಂಗಳೂರಿಗೆ ಹೋಗ್ತಿದೆ ಹೋರಾಟದ ನೆಲದ ಮಣ್ಣು

200920 Protest Against Bhu Swadina Kaidhe 1

ಶಿವಮೊಗ್ಗ ಲೈವ್.ಕಾಂ | SAGARA NEWS | 20 ಸೆಪ್ಟಂಬರ್ 2020 ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಪ್ರತಿಗೆ ಬೆಂಕಿ. ಬೆಂಗಳೂರಿಗೆ ಹೋಗುತ್ತೆ ಹೋರಾಟದ ನೆಲದ ಮಣ್ಣು. ಜಿಲ್ಲಾಡಳಿತದ ನಿರ್ಬಂಧವಿದ್ದರೂ ‘ಉಳುವವನೇ ಹೊಲದೊಡೆಯ’ ಘೋಷಣೆ ಅಡಿ ನಡೆಯಿತು ಪ್ರತಿಭಟನೆ. ಕಾಗೋಡು ಚಳವಳಿಯ ನೆಲದಲ್ಲಿ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಸಾಗರ ತಾಲೂಕು ಕಾಗೋಡು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಸಭೆ … Read more

ಸಾಗರ ಎಂಎಲ್ಎ ಆಸ್ಪತ್ರೆಯಿಂದ ಬಿಡುಗಡೆ, ಮೂರು ವಾರ ವಿಶ್ರಾಂತಿ

Haratalu-Halappa

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಸೆಪ್ಟಂಬರ್ 2020 ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಾಗರ ಶಾಸಕ ಹರತಾಳು ಹಾಲಪ್ಪ ಗುಣವಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕರೋನದಿಂದ ಗುಣವಾಗಿ ಹಿಂತಿರುಗಿದ ಬಳಿಕ ಹರತಾಳು ಹಾಲಪ್ಪ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಅವರು ಪುನಃ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಹಾಲಪ್ಪ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಹರತಾಳು ಹಾಲಪ್ಪ ಅವರು ಮೂರು ವಾರ ವಿಶ್ರಾಂತಿ ಪಡೆಯುವುದಾಗಿ ಹರತಾಳು ಹಾಲಪ್ಪ ಅವರು ತಿಳಿಸಿದ್ದಾರೆ. … Read more