ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ ಕರೋನ, ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲು ನಿರ್ಧಾರ

ಶಿವಮೊಗ್ಗ ಲೈವ್.ಕಾಂ | SAGARA NEWS | 2 ಸೆಪ್ಟಂಬರ್ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಅವರು, ಅಲ್ಲಿಯೇ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪ್ರಕಟಿಸಿರುವ ಮಲ್ಲಿಕಾರ್ಜುನ ಹಕ್ರೆ, ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್‌ ಎಂದು ದೃಢಪಟ್ಟಿದೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಕೂಡಲೆ ಪರೀಕ್ಷೆಗೆ ಒಳಗಾಗಿ ಎಂದು ವಿನಂತಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋವಿಡ್‌ ಪರೀಕ್ಷೆಗೆ … Read more

ಜೋಗ ರಾಣಿ ಫಾಲ್ಸ್‌ನಿಂದ ಜಿಗಿಯಲು ಯತ್ನಿಸಿದ್ದ ಯುವಕ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ

260820 Youth Attempts Suicide in Jog Falls 1

ಶಿವಮೊಗ್ಗ ಲೈವ್.ಕಾಂ | SAGARA NEWS | 28 ಆಗಸ್ಟ್ 2020 ಜೋಗ ಜಲಪಾತದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಯುವಕನನ್ನು ಆತನ ಪೋಷಕರಿಗೆ ಒಪ್ಪಿಸಲಾಗಿದೆ. ಆತನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಬುಧವಾರ ಜೋಗದ ರಾಣಿ ಫಾಲ್ಸ್‍ ಮೇಲಿಂದ ಜಿಗಿಯಲು ಬೆಂಗಳೂರಿನ ಚೇತನ್ ಯತ್ನಿಸಿದ್ದ. ಪೊಲೀಸರು ಆತನ ಮನವೊಲಿಸಿದ್ದರು. ಚೇತನ್ ಬಳಿ ಮಾಹಿತಿ ಪಡೆದು ಬೆಂಗಳೂರಿನಲ್ಲಿರುವ ಪೋಷಕರಿಗೆ ತಿಳಿಸಲಾಗಿತ್ತು. ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಚೇತನ್‍ ತಾಯಿ ಮತ್ತು ಸಹೋದರ ಜೋಗ ಪೊಲೀಸ್ ಠಾಣೆಗೆ ಬಂದು ಕರೆದೊಯ್ದಿದ್ದಾರೆ. ಈ ವೇಳೆ ಠಾಣೆಯಲ್ಲಿ … Read more

ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದವರ ಮೇಲೆ ಐಜಿಪಿ ಸ್ಕ್ವಾಡ್‌ನಿಂದ ದಾಳಿ, ಎಷ್ಟು ಉಗುರು ಸಿಕ್ಕಿವೆ? ಬಂಧಿತರು ಯಾರು?

ಶಿವಮೊಗ್ಗ ಲೈವ್.ಕಾಂ | ANANDAPURA NEWS | 28 ಆಗಸ್ಟ್ 2020 ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದವರ ಮೇಲೆ ದಾವಣಗೆರೆ ಐಜಿಪಿ ಸ್ಕ್ವಾಡ್ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ ನಾಲ್ಕು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ. ಆನಂದಪುರದ ಮಾರಿಕಾಂಬ ದೇಗುಲ ಎದುರಿನ ರಸ್ತೆಯಲ್ಲಿ ದಾಳಿ ನಡೆಸಲಾಗಿದೆ. ಇಲ್ಲಿನ ಅಶೋಕ ರಸ್ತೆಯ ಓಂಕೇಶ್ (56), ವಿಶ್ವನಾಥ್ (60) ಮತ್ತು ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚ್ಕಾಳಸರದ ಮೋಹನ್ (35) ಬಂಧಿತರು. ಐದು ಹುಲಿ ಉಗುರುಗಳನ್ನು ಮಾರಾಟಕ್ಕೆ ತಂದಿದ್ದು … Read more

ಸಿಗಂದೂರು ಲಾಂಚ್‌ನಲ್ಲಿ ಪ್ರವಾಸಿಗರು, ಸ್ಥಳೀಯರ ನಡುವೆ ಜಟಾಪಟಿ

Sigandur Launch with people 1

ಶಿವಮೊಗ್ಗ ಲೈವ್.ಕಾಂ | SAGARA NEWS | 27 ಆಗಸ್ಟ್ 2020 ಲಾಂಚ್‍ನಲ್ಲಿ ವಾಹನ ನಿಲ್ಲಿಸುವ ವಿಚಾರದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕಳಸವಳ್ಳಿ ದಡದಲ್ಲಿ ಬುಧವಾರ ಘಟನೆ ಸಂಭವಿಸಿದೆ. ಗದಗದಿಂದ ಸಿಗಂದೂರಿಗೆ ಬಂದಿದ್ದ ಪ್ರವಾಸಿಗರು, ತಮ್ಮ ವಾಹನವನ್ನು ಮೊದಲು ಲಾಂಚ್‍ಗೆ ಹತ್ತಿಸಬೇಕು ಎಂದು ಜಗಳ ತೆಗೆದಿದ್ದಾರೆ. ಈ ವೇಳೆ ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಕೈ ಕೈ ಮಿಲಾಯಿಸುವ … Read more

ಜೋಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಳೂರು ಯುವಕ, ರಕ್ಷಣೆ ಬಳಿಕ ‘ರಾಣಿ ಫಾಲ್ಸ್ ಮೇಲೆ ಜ್ಞಾನೋದಯವಾಯ್ತು’ ಅಂದ

260820 Youth Attempts Suicide in Jog Falls 1

ಶಿವಮೊಗ್ಗ ಲೈವ್.ಕಾಂ | SAGARA NEWS | 26 ಆಗಸ್ಟ್ 2020 ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರ ಸಮಯ ಪ್ರಜ್ಞೆಯಿಂದ ಯುವಕ ಬಚಾವಾಗಿದ್ದಾನೆ. ಯಾರಿದು ಯುವಕ? ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಆಗಮಿಸಿದ್ದ ಚೇತನ್ ಎಂಬ ಯುವಕ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬ್ರಿಟಿಷ್ ಬಂಗಲೆ ಬಳಿ ರಾಣಿ ಫಾಲ್ಸ್ ಕಡೆಯಿಂದ ಕೆಳಗೆ ಧುಮುಕಲು ಪ್ರಯತ್ನಿಸಿದ್ದಾನೆ. ಈತ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, … Read more

ಸಾಗರ ತಾಲೂಕು ಪಂಚಾಯಿತಿ ಸಭೆಯಲ್ಲಿ ಮತ್ತೆ ಕೋರಂ ಕೊರತೆ, ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ಐವರಷ್ಟೇ ಹಾಜರು, ಕಾರಣವೇನು?

260820 Sagara Taluk Panchayat Meeting 1

ಶಿವಮೊಗ್ಗ ಲೈವ್.ಕಾಂ | SAGARA NEWS | 25 ಆಗಸ್ಟ್ 2020 ಕೋರಂ ಕೊರತೆಯಿಂದಾಗಿ ಸಾಗರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಮತ್ತೆ ಮುಂದಕ್ಕೆ ಹೋಗಿದೆ. ಸೆಪ್ಟಂಬರ್ 3ರಂದು ಸಾಮಾನ್ಯ ಸಭೆಗೆ ದಿನಾಂಕ ನಿಗದಿಯಾಗಿದೆ. ಇವತ್ತು ಸಭೆಯಲ್ಲಿ ಯಾರೆಲ್ಲ ಇದ್ದರು? ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸದಸ್ಯರಾದ ಆನಂದಿ ಲಿಂಗರಾಜ್, ಹೇಮಾ ರಾಜಪ್ಪ, ಸವಿತಾ ದೇವರಾಜ್ ಅವರು ಭಾಗವಹಿಸಿದ್ದರು. 15 ಸದಸ್ಯ ಬಲದ ತಾಲೂಕು ಪಂಚಾಯಿತಿಯಲ್ಲಿ … Read more

ಸಾಗರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ, ಹೇಗಿದೆ ಸೆಂಟರ್? ಎಷ್ಟು ಹಾಸಿಗೆ ಇದೆ?

200820 Covid Care Centre in Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 20 ಆಗಸ್ಟ್ 2020 ಸಾಗರ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಸಾಗರ ಮತ್ತು ಸೊರಬ ತಾಲೂಕಿನ ಕರೋನ ಸೋಂಕಿತರಿಗೆ ಈ ಸೆಂಟರ್‍ನಲ್ಲಿ ಚಿಕಿತ್ಸೆ ಸಿಗಲಿದೆ ಎಂದು ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ. ಹೇಗಿದೆ ಸೆಂಟರ್? ವಿಶೇಷತೆಗಳೇನು? ಎಷ್ಟು ಹಾಸಿಗೆ? | ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. 150 ಹಾಸಿಗೆ ಸಾಮರ್ಥ್ಯವಿದೆ. ಈಗ 100 ಹಾಸಿಗೆ ಸಿದ್ಧವಾಗಿದೆ. 50 ಹಾಸಿಗೆಗೆ ಆಕ್ಸಿಜನ್ ಸಂಪರ್ಕ … Read more

ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆಯಲಿ, ಸಾಗರದಲ್ಲಿ ಪ್ರತಿಭಟನೆ, ಸರ್ಕಾರಕ್ಕೆ ಆಗ್ರಹ

140820 Dalit Sangarsha Samiti Memorandum about Siganduru Temple 1

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಆಗಸ್ಟ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸಾಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ದೇವಸ್ಥಾನಕ್ಕೆ ಅಪಾರ ಪ್ರಮಾಣದಲ್ಲಿ ಕಾಣಿಕೆ ಹಣ ಬರುತ್ತಿದೆ. ಈ ಹಣ ದುರುಪಯೋಗ ಆಗಿದೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕ್ಷೀಣ, ಭದ್ರಾವತಿಯಲ್ಲಿ 0 ಮಿ.ಮೀ, ಎರಡು ತಾಲೂಕಲ್ಲಿ ಒಂದು ಮಿ.ಮೀಗಿಂತಲೂ ಕಡಿಮೆ

Shivamogga-Rain-General-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020 ಶಿವಮೊಗ್ಗ ಜಿಲ್ಲೆಯಾದ್ಯಂತ ಭಾನುವಾರದಿಂದ ಮಳೆ ಪ್ರಮಾಣ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 58.54 ಮಿ.ಮೀ ಮಳೆಯಾಗಿದೆ. ಯಾವ್ಯಾವ ತಾಲೂಕಲ್ಲಿ ಎಷ್ಟು ಮಳೆಯಾಗಿದೆ? ಶಿವಮೊಗ್ಗ 0.40 ಮಿ.ಮೀ, ಭದ್ರಾವತಿ 0.00 ಮಿ.ಮೀ, ತೀರ್ಥಹಳ್ಳಿ 13.20 ಮಿ.ಮೀ, ಸಾಗರ 2.04 ಮಿ.ಮೀ, ಶಿಕಾರಿಪುರ 0.80 ಮಿ.ಮೀ, ಸೊರಬ 5 ಮಿ.ಮೀ, ಹೊಸನಗರ 29.40 ಮಿ.ಮೀ ಮಳೆಯಾಗಿದೆ. ಮಳೆ ಪ್ರಮಾಣ ಸಂಪೂರ್ಣ ಕುಸಿತ ಜಿಲ್ಲೆಯಾದ್ಯಂತ ಮಳೆ ಸಂಪೂರ್ಣ … Read more

ಸಾಗರ ಶಾಸಕ ಹರತಾಳು ಹಾಲಪ್ಪ ಕರೋನದಿಂದ ಗುಣ, ಇವತ್ತು ಆಸ್ಪತ್ರೆಯಿಂದ ಬಿಡುಗಡೆ

110820 Halappa Discharged From Hospital 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಆಗಸ್ಟ್ 2020 ಕರೋನ ಪಾಸಿಟಿವ್ ಬಂದ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಎಸ್‍ಐಎಲ್ ಅಧ್ಯಕ್ಷ, ಸಾಗರ ಶಾಸಕ ಹರತಾಳು ಹಾಲಪ್ಪ ಗುಣವಾಗಿದ್ದಾರೆ. ಇವತ್ತು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಎಂಎಸ್‍ಐಎಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸದ ಬಳಿಕ ಹಾಲಪ್ಪ ಅವರು ಬೆಂಗಳೂರಿನಲ್ಲಿಯೇ ಇದ್ದರು. ಸೋಂಕು ತಗುಲಿರುವುದು ತಿಳಿಯುತ್ತಿದ್ದಂತೆ ಶಿವಾನಂದ ಸರ್ಕಲ್ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಆಗಸ್ಟ್‍ 4ರಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿದ್ದ ಹಾಲಪ್ಪ … Read more