ನವೆಂಬರ್‌ 11 ರಿಂದ 15ರವರೆಗೆ ಕಾರ್ಯಾಗಾರ

Shimoga-News-update

ಶಿವಮೊಗ್ಗ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ, ಅಕಾಡೆಮಿಯ ಕಚೇರಿಯಲ್ಲಿ ನ.11 ರಿಂದ 15 ರವರೆಗೆ ‘ಸಂಶೋಧನೆ, ಪ್ರಕಟಣೆ ನೀತಿಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆ’ ಕುರಿತು ಐದು ದಿನಗಳ ಕಾರ್ಯಾಗಾರ (Workshop) ಆಯೋಜಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ಮತ್ತು ತಜ್ಞರು ಉಪನ್ಯಾಸ ನೀಡಲಿದ್ದು, ಆಸಕ್ತ ವಿಜ್ಞಾನ ಪದವಿ, ಸ್ನಾತಕೋತ್ತರ ವಿಜ್ಞಾನ ಪದವೀಧರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ಪ್ರಾಧ್ಯಾಪಕರು ಹಾಗೂ ವಿಜ್ಞಾನಾಸಕ್ತರು ಭಾಗವಹಿಸಬಹುದಾಗಿದೆ. ಆಸಕ್ತರು ನ.5ರೊಳಗೆ https://forms.gle/ UNrBg9wiBzgQBMVD6 ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ … Read more

ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಸುಸೂತ್ರ, ಮೊದಲ ದಿನ ಇನ್ನೂರಕ್ಕು ಹೆಚ್ಚು ಅಭ್ಯರ್ಥಿಗಳು ಗೈರು

Education News Shimoga Live Update

ಶಿವಮೊಗ್ಗ : ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಸುಸೂತ್ರವಾಗಿ ನಡೆಯಿತು. ಶಿವಮೊಗ್ಗದಲ್ಲಿ 21, ಭದ್ರಾವತಿಯಲ್ಲಿ 5 ಹಾಗೂ ಸಾಗರದಲ್ಲಿ 3 ಸೇರಿ ಜಿಲ್ಲೆಯಲ್ಲಿ ಒಟ್ಟು 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಮೊದಲ ದಿನ ಭೌತ ವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಷಯಗಳ ಪರೀಕ್ಷೆ ನಡೆದಿದ್ದು, ಭೌತ ವಿಜ್ಞಾನ  ವಿಷಯಕ್ಕೆ 9,511 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 9,215 ಜನ ಪರೀಕ್ಷೆ ಬರೆದರು. 296 ವಿದ್ಯಾರ್ಥಿಗಳು ಗೈರಾಗಿದ್ದರು. ರಸಾಯನ ವಿಜ್ಞಾನ ವಿಷಯಕ್ಕೆ … Read more

ತೀರ್ಥಹಳ್ಳಿಯ ದೀಕ್ಷಾ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌, ಇಲ್ಲಿದೆ ಫಟಾಫಟ್‌ ಸಂದರ್ಶನ

Thirthahalli-Deeksha-First-rank-in-PUC-Science

ತೀರ್ಥಹಳ್ಳಿ : ಮೇಲಿನಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ದೀಕ್ಷಾ.ಆರ್‌ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 599 ಅಂಕ ಗಳಿಸಿ ಪ್ರಥಮ ರ‍್ಯಾಂಕ್‌ (RANK) ಪಡೆದಿದ್ದಾರೆ. ಇನ್ನು, ಪ್ರಥಮ ಸ್ಥಾನ (RANK) ಪಡೆದಿರುವ ಕುರಿತು ದೀಕ್ಷಾ.ಆರ್‌ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದರು. ದೀಕ್ಷಾ ಜೊತೆಗೆ ಕಿರು ಸಂದರ್ಶನ » ಪೋಷಕರು ಹೇಗೆ ನೆರವಾದರು? ಪೋಷಕರು ಇಬ್ಬರು ಶಿಕ್ಷಕರು. ಅಪ್ಪ ರಾಘವೇಂದ್ರ ಕಲ್ಕೂರು. ಮೇಗರವಳ್ಳಿ ಶಾಲೆಯಲ್ಲಿ ಶಿಕ್ಷಕ. ತಾಯಿ ಉಷಾ.ವಿ. ತೀರ್ಥಹಳ್ಳಿಯ ಬಾಲಕಿಯ ಪ್ರೌಢಶಾಲೆಯಲ್ಲಿ … Read more

ಶಿವಮೊಗ್ಗದಲ್ಲಿ ಬೃಹತ್‌ ಉದ್ಯೋಗ ಮೇಳ, ಪ್ರತಿಷ್ಠಿತ ಕಂಪನಿಗಳು ಭಾಗಿ

jobs news shivamogga live

SHIVAMOGGA LIVE NEWS | 7 NOVEMBER 2023 SHIMOGA : ನಗರದ ಸೈನ್ಸ್‌ ಮೈದಾನದಲ್ಲಿ ನ.8ರಂದು ಬೃಹತ್‌ ಉದ್ಯೋಗ ಮೇಳ (Job Mela) ಆಯೋಜಿಸಲಾಗಿದೆ. ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಸಂದರ್ಶನದಲ್ಲಿ ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, … Read more

ಹಾಸ್ಟೆಲ್ ಕೊಠಡಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

Suicide-Hanging-General

SHIVAMOGGA LIVE NEWS | SUICIDE | 16 ಮೇ 2022 ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್’ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕಲಬುರಗಿ ಮೂಲದ ಸಂದೀಪ್ ಮೃತ ವಿದ್ಯಾರ್ಥಿ. ಶಿವಮೊಗ್ಗದ ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್’ನಲ್ಲಿ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ. ಸಂದೀಪ್, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮೂರನೆ ಸೆಮಿಸ್ಟರ್ ಓದುತ್ತಿದ್ದ. ಮೂರ್ನಾಲ್ಕು ದಿನದ ಹಿಂದಷ್ಟೆ ಪರೀಕ್ಷೆ ಮುಗಿದಿತ್ತು. ಈ ಹಿನ್ನೆಲೆ ಸಂದೀಪನ ಸ್ನೇಹಿತರು ಊರಿಗೆ … Read more