ಇದ್ದ ಮನೆಗಳು ನೆಲಸಮ, ಟೆಂಟ್‍ನಲ್ಲಿ ಜನರ ವಾಸ, ಮನೆ ನಿರ್ಮಾಣ ವಿಳಂಬ, ಆಕ್ರೋಶ

170321 SDPI Protest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 MARCH 2021 ಮನೆಗಳ ನಿರ್ಮಾಣ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶಿವಮೊಗ್ಗ ನಗರದಲ್ಲಿ ಪಿ.ಎಂ.ಎ.ವೈ. ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದು ತುಂಬಾ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಗುತ್ತಿಗೆದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲಿನ ಬಡ ಹಾಗೂ ಕಾರ್ಮಿಕರು ಮನೆ ಸಿಗುವುದೆಂಬ ಆಶಯದಿಂದ ಹಣ ಕೂಡ ಕಟ್ಟಿದ್ದಾರೆ. ಈಗ ಇರುವ … Read more

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಶಿವಮೊಗ್ಗದಲ್ಲಿ ವಿನೂತನ ಪ್ರತಿಭಟನೆ

230221 SDPI Pushing Car Auto against Petrol Price Hike 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 FEBRUARY 2021 ಪೆಟ್ರೋಲ್, ಡೀಸೆಲ್ , ಅಡುಗೆ ಅನಿಲದ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಎಸ್‍ಡಿಪಿಐ ಜಿಲ್ಲಾ ಶಾಖೆ ವತಿಯಿಂದ ಮಹಾವೀರ ಸರ್ಕಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾರು, ಆಟೋ, ಬೈಕ್, ಸೈಕಲ್ ತಳ್ಳಿಕೊಂಡು ಹೋಗಿ ಪ್ರತಿಭಟನೆ ನಡೆಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆದಾರರಿಗೆ ಇದರ ಲಾಭ ವರ್ಗಾಯಿಸುವ ಬದಲು, ಕೇಂದ್ರ ಸರ್ಕಾರ ಶ್ರೀಮಂತರ ಬೊಕ್ಕಸ … Read more

ಶಿವಮೊಗ್ಗ ಮಹಾವೀರ ಸರ್ಕಲ್‌ಗೆ ಷಾ ಅಮೀನ್ ದಿವಾನ್ ದರ್ಗಾ ವೃತ್ತ ಅಂತಾ ಕರಪತ್ರ ಹಂಚಿದವರ ಬಂಧನಕ್ಕೆ ಆಗ್ರಹ

031120 VHP Protest in Shimoga Against SDPI 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 NOVEMBER 2020 ಶಿವಮೊಗ್ಗದ ಮಹಾವೀರ ಸರ್ಕಲನ್ನು ಷಾ ಅಮೀನ್ ದಿವಾನ್ ದರ್ಗಾ ಎಂದು ಕರಪತ್ರದಲ್ಲಿ ಮುದ್ರಿಸಿದ್ದ ಎಸ್‍ಡಿಪಿಐ ಸಂಘಟನೆ ವಿರುದ್ಧ ಇವತ್ತು ವಿಶ್ವ ಹಿಂದೂ ಪರಿಷತ್, ಮಾತೃಶಕ್ತಿ ದುರ್ಗಾ ವಾಹಿನಿ, ಜೈನ್ ಸಮಾಜ ಆಕ್ರೋಶ ವ್ಯಕ್ತಪಡಿಸಿವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆಗಳು, ಎಸ್‍ಡಿಪಿಐ ಸಂಘಟನೆ ಇತ್ತೀಚೆಗೆ ನಡೆಸಿದ ಪ್ರತಿಭಟನೆ ವೇಳೆ, ಮಹಾವೀರ ವೃತ್ತವನ್ನು ಷಾ ಅಮೀನ್ ದಿವಾನ್ ದರ್ಗಾ ವೃತ್ತ ಎಂದು ಕಾನೂನಿನ ವಿರುದ್ಧವಾಗಿ … Read more

ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು, ಪ್ರಾಸಿಕ್ಯೂಷನ್ ವೈಫಲ್ಯಕ್ಕೆ ಶಿವಮೊಗ್ಗದಲ್ಲಿ ಆಕ್ರೋಶ

300920 SDPI Protest In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟಂಬರ್ 2020 ಸಾವಿರಾರು ಪುಟಗಳ ಸಾಕ್ಷ್ಯವಿದೆ, ವಿಡಿಯೋ, ಆಡಿಯೋ ಸಾಕ್ಷಿಗಳು ಇದ್ದಾವೆ. ಆದರೂ ಬಾಬರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳನ್ನು ನಿರ್ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಪ್ರಾಸಿಕ್ಯೂಷನ್ ವೈಫಲ್ಯ ಖಂಡಿಸಿ ಶಿವಮೊಗ್ಗದಲ್ಲಿ ಎಸ್‍ಡಿಪಿಐ ಪ್ರತಿಭಟನೆ ನಡೆಸಿತು. ಸಿಬಿಐ ಕೋರ್ಟ್ ತೀರ್ಪು ಪ್ರಕಟವಾದ ಬೆನ್ನಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಸ್‍ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ … Read more

ಏಳೆಂಟು ತಿಂಗಳಿಂದ ಬರ್ತಿಲ್ಲ ಪಿಂಚಣಿ, ಬಾಕಿ ಹಣ ಬಿಡುಗಡೆ ಆಗ್ರಹ, ಶಿವಮೊಗ್ಗದಲ್ಲಿ ಪ್ರತಿಭಟನೆ

070920 SDPI Protest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ರಾಜ್ಯದಲ್ಲಿ ಹಲವು ಪಿಂಚಣಿದಾರರಿಗೆ ಬಾಕಿ ಇರುವ ಪಿಂಚಣಿ ಹಣವನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎಸ್‍ಡಿಪಿಐ ಕಾರ್ಯಕರ್ತರು, ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಸಂಧ್ಯಾ ಸುರಕ್ಷ ಸೇರಿದಂತೆ ಹಲವು ಯೋಜನೆಗಳಲ್ಲಿ ಪಿಂಚಣಿದಾರರಿಗೆ ಏಳೆಂಟು ತಿಂಗಳಿಂದ ಪಿಂಚಣಿ ನಿಲ್ಲಿಸಿಲಾಗಿದೆ. ಇದರಿಂದ ಜನರು … Read more

ಎಂಎಲ್ಎ ಮನೆ ಮೇಲೆ ದಾಳಿ, ಭೋವಿ ಸಮಾಜದ ಆಕ್ರೋಶ, ತಪ್ಪಿತಸ್ಥರಿಂದಲೇ ನಷ್ಟ ಭರಿಸುವಂತೆ ಆಗ್ರಹ

130820 Bhovi Samaja Protest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020 ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ನಡೆದ ಹಲ್ಲೆಯನ್ನು ತಾಲ್ಲೂಕು ಭೋವಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಕೆಲವು ದೇಶದ್ರೋಹಿ ಸಂಘಟನೆಗಳ ಪದಾಧಿಕಾರಿಗಳು ಕ್ಷುಲ್ಲಕ ವಿಷಯಕ್ಕೆ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇದನ್ನು ಭೋವಿ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಗಲಭೆ ನಡೆಸಿದವರು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು … Read more

ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ವಿಧಿಸಿ, ತನಿಖೆಯನ್ನು ಉನ್ನತ ಮಟ್ಟದ ಸಂಸ್ಥೆಗೆ ವಹಿಸಿ, ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ

130820 BJP Protest Against DJ Halli Protest 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020 ಬೆಂಗಳೂರು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿ, ಆಸ್ತಿಪಾಸ್ತಿ ಹಾನಿಗೊಳಿಸಿದವರಿಗೆ ಗುಲ್ಲು ಶಿಕ್ಷಯಂತಹ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ನಗರ ಘಟಕದ ಕಾರ್ಯಕರ್ತರು, ದುಷ್ಕರ್ಮಿಗಳು ಸಂಚು ರೂಪಿಸಿ ಸತತ ಆರು ಗಂಟೆ ದಾಂಧಲೆ ನಡೆಸಿದ್ದಾರೆ. ಈ ರಾಕ್ಷಸಿ ಕೃತ್ಯವನ್ನು ಎಲ್ಲರೂ ಖಂಡಿಸಬೇಕು. ದಾಂಧಲೆ … Read more

ಬೆಂಗಳೂರಲ್ಲಿ ಗಲಭೆ ಮಾಡಿದವರ ಗಡಿಪಾರು ಮಾಡಿ, ಸಂಘಟನೆಗಳನ್ನು ನಿಷೇಧಿಸಿ, ಶಿವಮೊಗ್ಗದಲ್ಲಿ ಪ್ರತಿಭಟನೆ

130820 Bajarangadal Protest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020 ಬೆಂಗಳೂರು ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಗೆ ಕಾರಣವಾಗಿರುವ SDPI ಮತ್ತು PFI ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ಶಿವಮೊಗ್ಗದಲ್ಲಿ ವಿಶ‍್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಗಲಭೆಕೋರರನ್ನು ಗಡಿಪಾರು ಮಾಡಬೇಕು. SDPI ಮತ್ತು PFI ಸಂಘಟನೆಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ನಂಟು ಇದೆ. ಹಾಗಾಗಿ ಇವೆರಡು … Read more

SDPI ಒಂದು ಜುಜುಬಿ ಸಂಘಟನೆ, ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮಟ್ಟುಗೋಲಿಗೆ ಸಂಪುಟದಲ್ಲಿ ಚರ್ಚೆ

Eshwarappa MLA 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಆಗಸ್ಟ್ 2020 ಮತಾಂಧರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ‍್ವರಪ್ಪ ತಿಳಿಸಿದ್ದಾರೆ. ಬೆಂಗಳೂರು ಗಲಭೆ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮತಾಂಧ ಮುಸ್ಲಿಮರ ಗೂಂಡಾಗಿರಿ, ದೊಂಬಿಯನ್ನು ಇತರ ಮುಸ್ಲಿಮ್ ಮುಖಂಡರು ಖಂಡಿಸಬೇಕು. ಹಾಗಾಂತ ಎಲ್ಲಾ ಮುಸ್ಲಿಮರು ಗೂಂಡಾಗಳಲ್ಲ. ಈ ಸಮುದಾಯದಲ್ಲೂ ಸೌಮ್ಯ … Read more

ಸಚಿವ ಈಶ್ವರಪ್ಪ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

060820 SDPI Protest in Shimoga Against Eshwarappa 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020 ಕೋಮು ಪ್ರಚೋದಕ ಹೇಳಿಕೆ ನೀಡಿದ ಸಚಿವ ಕೆ.ಎಸ್.ಈಶ‍್ವರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‍ಡಿಪಿಐ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳನ್ನು ಧ್ವಂಸಗೊಳಿಸುವ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದೆ. ಇದು ಕೋಮ ಪ್ರಚೋದನೆಯ ಭಾಷಣವಾಗಿದೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‍ಡಿಪಿಐ ಕಾರ್ಯಕರ್ತರು ಒತ್ತಾಯಿಸಿದರು. ಎಸ್‍ಡಿಪಿಐ ಪ್ರತಿಭಟನೆಯ … Read more