ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ಇಲ್ಲ
SHIVAMOGGA LIVE NEWS | 25 ಮಾರ್ಚ್ 2022 ದೇವಸ್ಥಾನದ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳ್ಳತನವಾಗಿದೆ. ಕೆಲಸ ಮುಗಿಸಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು ಎಂದು ಮಾಲೀಕ ದೂರು ನೀಡಿದ್ದಾರೆ. ಚಂದ್ರಶೇಖರ್ ಎಂಬುವವರಿಗೆ ಸೇರಿದ ಬೈಕ್ ಕಳುವಾಗಿದೆ. ಶಂಕರಮಠ ರಸ್ತೆಯ ನಿಮಿಷಾಂಬ ದೇವಿ ದೇವಸ್ಥಾನದ ಕಾಂಪೌಂಡ್ ಒಳಗೆ ಬೈಕ್ ನಿಲ್ಲಿಸಿದ್ದರು. ಕೆಲಸ ಮುಗಿಸಿ ಹಿಂತಿರುಗಿದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಚಂದ್ರಶೇಖರ್ ಅವರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ. … Read more