ದಿಢೀರ್ ಕಟ್ ಆಯ್ತು ಜಿಯೋ ಸಿಗ್ನಲ್, ಟವರ್ ಬಳಿ ಹೋದ ಸಿಬ್ಬಂದಿಗೆ ಕಾದಿತ್ತು ಶಾಕ್
ಶಿವಮೊಗ್ಗ: ಶ್ರೀರಾಂಪುರ ಗ್ರಾಮದ ರಿಲಯನ್ಸ್ ಜಿಯೋ ಟವರ್‌ಗೆ (Jio tower) ಅಳವಡಿಸಿದ್ದ ಲೀಥಿಯಂ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. 4 ಬ್ಯಾಟರಿಗಳು ಕಳುವಾಗಿದ್ದು ಅವುಗಳ ಮೌಲ್ಯ ₹3,36,088 ಎಂದು ಅಂದಾಜಿಸಲಾಗಿದೆ. ಶ್ರೀರಾಂಪುರದಲ್ಲಿ ಜಮೀನಿನಲ್ಲಿ ಟವರ್ ಅಳವಡಿಸಲಾಗಿದೆ. ಅದರ ಕಾರ್ಯನಿರ್ವಹಣೆಗಾಗಿ ಒಟ್ಟು 6 ಬ್ಯಾಟರಿಗಳನ್ನು ಇರಿಸಲಾಗಿತ್ತು. ಟವರ್‌ನ ಸಿಗ್ನಲ್ ಸ್ಥಗಿತಗೊಂಡ ಬಗ್ಗೆ ಅಲಾರಂ ಬಂದಿತ್ತು. ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಒಟ್ಟು 6 ಬ್ಯಾಟರಿಗಳ ಪೈಕಿ 4 ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ … Read more