ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುವಂತೆ ಪಟ್ಟು, ಭಾರಿ ಪ್ರತಿಭಟನೆಯ ದಿನಾಂಕ ಪ್ರಕಟ

Sagara-district-protest-in-shimoga.

ಸಾಗರ: ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ (District) ಘೋಷಿಸುವಂತೆ ಒತ್ತಾಯಿಸಿ ಸೆ.18 ರಂದು ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಪಕ್ಷಾತೀತ ಪ್ರತಿಭಟನೆ ನಡೆಯಲಿದೆ ಎಂದು ಸಾಗರ ಜಿಲ್ಲಾ ಹೋರಾಟ ಸಂಚಾಲನಾ ಸಮಿತಿಯ ಪ್ರಮುಖ ತೀ.ನ. ಶ್ರೀನಿವಾಸ್ ತಿಳಿಸಿದ್ದಾರೆ. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನ.ಶ್ರೀನಿವಾಸ್‌, ಪ್ರತಿಭಟನೆಯ ಸ್ವರೂಪ ತಿಳಿಸಿದರು. ಹೇಗಿರಲಿದೆ ಪ್ರತಿಭಟನೆ? ಸಾಗರ ತಾಲೂಕಿಗೆ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಇದೆ. 1956ರಿಂದಲೇ ಸಾಗರ ಉಪವಿಭಾಗೀಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಳದಿ ಅರಸರು … Read more

ಅಮ್ಮನಘಟ್ಟದ ಜೇನುಕಲ್ಲಮ್ಮ ಜಾತ್ರೆಗೆ ಚಾಲನೆ, ಮೂಲ ಸ್ಥಾನದಲ್ಲಿ ಪೂಜೆ, ಎಷ್ಟು ದಿನ ನಡೆಯುತ್ತೆ ಜಾತ್ರೆ?

Ammanaghatta-Jenukallama-jathre

ಹೊಸನಗರ: ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ (ammanaghatta) ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಕಂಕಣ ಕಟ್ಟುವ ಮೂಲಕ ಚಾಲನೆ ನೀಡಲಾಯಿತು. ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸೆ.9 ರಿಂದ 19ರವರೆಗೆ ಜಾತ್ರೆ ನಡೆಯಲಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಜಾತ್ರೆ ನಡೆಯಲಿದೆ. ದೇವಿ ಸನ್ನಿಧಿಯಲ್ಲಿ ಸೆ. 22ರಿಂದ ಅ.2ರವರೆಗೆ ನವರಾತ್ರಿ ಉತ್ಸವ ಹಾಗೂ ವಿಜಯ ದಶಮಿಯಂದು ಚಂಡಿಕಾ ಹೋಮ ಮತ್ತು ಪ್ರತಿನಿತ್ಯ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಮೂಲಸ್ಥಾನಕ್ಕೆ ಪೂಜೆ ಜಾತ್ರೆ ಅಂಗವಾಗಿ ಮೂಲಸ್ಥಾನ ಅಮ್ಮನಘಟ್ಟದ … Read more

ಶಿವಮೊಗ್ಗದಲ್ಲಿ ಇ-ಆಸ್ತಿ, ಪ್ರಮುಖ ನಿರ್ಧಾರ ಪ್ರಕಟಿಸಿದ ಮಹಾನಗರ ಪಾಲಿಕೆ ಕಮಿಷನರ್‌, ಏನದು?

Mayanna-Gowda-Shimoga-Palike-Commissioner

ಶಿವಮೊಗ್ಗ: ಇ-ಆಸ್ತಿ (E Aasthi) ಪಡೆಯಲು ಇರುವ ಸಮಸ್ಯೆ ಹಾಗೂ ಪರಿಹಾರಗಳ ಕುರಿತ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಏರ್ಪಡಿಸಲಾಗಿತ್ತು. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಕೇವಲ 20,251 ಇ-ಆಸ್ತಿ ಮಾತ್ರ ನೀಡಲಾಗಿದೆ. ಭದ್ರಾವತಿಯಲ್ಲಿ 29,900 ಕೊಟ್ಟಿದ್ದಾರೆ. ತುಮಕೂರು, ಹುಬ್ಬಳ್ಳಿಯ ಅಂಕಿ ಅಂಶ ನೋಡಿದರೆ ಶಿವಮೊಗ್ಗ ಬಹಳ ಹಿಂದಿದೆ. ಕೆ.ವಿ.ವಸಂತ ಕುಮಾರ್‌, ನಾಗರಿಕ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಈ ಸಂದರ್ಭ ಅಹವಾಲು ಆಲಿಸಿದ ಪಾಲಿಕೆ ಕಮಿಷನರ್‌ ಮಯಾಣ್ಣಗೌಡ ಪ್ರಮುಖ … Read more

ದಿನ ಪಂಚಾಂಗ | 10 ಸೆಪ್ಟೆಂಬರ್ 2025 | ಇವತ್ತು ರೇವತಿ ನಕ್ಷತ್ರದ ದಿನ, ಒಳ್ಳೆ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಬುಧವಾರ, 10 ಸೆಪ್ಟೆಂಬರ್ 2025‌ – ತೃತೀಯ ಸೂರ್ಯೋದಯ : 6.16 am ಸೂರ್ಯಾಸ್ತ : 6.33 pm ನಕ್ಷತ್ರ : ರೇವತಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.27 ರಿಂದ 3.16ರವರಗೆ ಗೋಧೂಳಿ ಮುಹೂರ್ತ ಸಂಜೆ 6.33 ರಿಂದ 6.56ರವರೆಗೆ ರಾಹು, ಯಮಗಂಡ, ಗುಳಿಕ … Read more

ಶಿವಮೊಗ್ಗ ಸಿಟಿಯ ಕೆಲವೆಡೆ ಸೆ.10ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಸೆ.10 ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power cut) ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಸೂರ್ಯಲೇಔಟ್, ದೂರವಾಣಿ ಬಡಾವಣೆ, ದೇವರಾಜ್ ಅರಸ್ ಬಡಾವಣೆ, ಶಾರದಮ್ಮ ಲೇಔಟ್, ಜಿ.ಎಸ್. ಶಿವರುದ್ರಪ್ಪ ಬಡಾವಣೆ, ಗಂಧರ್ವ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ … Read more

ಆಗುಂಬೆ ಸುತ್ತಮುತ್ತ ಸಂಜೆ 6 ಗಂಟೆ ನಂತರ ಓಡಾಡುವಾಗ ಎಚ್ಚರ, ಕಾರಣವೇನು?

Agumbe Ghat Home Stay Forest

ತೀರ್ಥಹಳ್ಳಿ: ಕಳೆದ ಕೆಲ ದಿನದಿಂದ ಆಗುಂಬೆ ಮತ್ತು ಬಿದರಗೋಡು ವ್ಯಾಪ್ತಿಯಲ್ಲಿ ಕಾಡಾನೆ (Elephant) ಸಂಚರಿಸುತ್ತಿದೆ. ಹಾಗಾಗಿ ಈ ಗ್ರಾಪಂಗಳ ವ್ಯಾಪ್ತಿಯಲ್ಲಿ ಸಂಜೆ ನಂತರ ಕಾಲ್ನಡಿಗೆಯಲ್ಲಿ ಸಂಚರಿಸಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ. ಬಿದರಗೋಡು ಗ್ರಾಮ ಪಂಚಾಯಿತಿಯ ಅಗಸರಕೋಣೆ, ಕಾರೇಕುಂಬಿ, ಜಡ್ಡು, ಮಳಲಿ, ತಲ್ಲೂರು, ಆಗುಂಬೆ ಗ್ರಾಪಂ ವ್ಯಾಪ್ತಿಯ ಉಳುಮಡಿ ಮತ್ತು ಸುತ್ತಲಿನ ಜಾಗದಲ್ಲಿ ಸಂಚರಿಸುತ್ತಿದೆ. ಸಂಜೆ 6 ಗಂಟೆ ನಂತರ ಮನೆಯಿಂದ ಹೊರಗೆ ಹೋಗದಿರುವುದು ಸೂಕ್ತ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಎಚ್ಚರವಹಿಸಬೇಕು ಎಂದು ಆಗುಂಬೆ ವಲಯ ಅರಣ್ಯಾಧಿಕಾರಿಗಳು … Read more

ದಿನ ಪಂಚಾಂಗ | 9 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಮಂಗಳವಾರ, 9 ಸೆಪ್ಟೆಂಬರ್ 2025‌ – ದ್ವಿತೀಯ ಸೂರ್ಯೋದಯ : 6.16 am ಸೂರ್ಯಾಸ್ತ : 6.33 pm ನಕ್ಷತ್ರ : ಉತ್ತರ ಭಾದ್ರಪದ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ ಮಧ್ಯಾಹ್ನ 12.00 ರಿಂದ 12.49ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.28 ರಿಂದ 3.17ರವರಗೆ ಗೋಧೂಳಿ ಮುಹೂರ್ತ ಸಂಜೆ 6.33 ರಿಂದ … Read more

ಅಡಿಕೆ ಧಾರಣೆ | 8 ಸೆಪ್ಟೆಂಬರ್‌ 2025 | ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ, ಸೊರಬ ಮತ್ತು ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ (Areca Price). ಶಿವಮೊಗ್ಗ ಮಾರುಕಟ್ಟೆ ಗೊರಬಲು 19039 36799 ಬೆಟ್ಟೆ 64409 65899 ರಾಶಿ 48009 60209 ಸರಕು 73199 97196 ಸಾಗರ ಮಾರುಕಟ್ಟೆ ಕೆಂಪುಗೋಟು 28989 34299 ಕೋಕ 11989 26809 ಚಾಲಿ 18214 39499 ಬಿಳೆ ಗೋಟು 15099 28399 ರಾಶಿ 40170 60189 ಸಿಪ್ಪೆಗೋಟು 9200 20385 ಸೊರಬ ಮಾರುಕಟ್ಟೆ ರಾಶಿ 56000 56000 ಹೊಸ ಚಾಲಿ 29000 … Read more

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಐತಿಹಾಸಿಕ ಲಾಭ, ಸದ್ಯದಲ್ಲೆ ಶುರುವಾಗಲಿವೆ ಹೊಸ ಶಾಖೆಗಳು, ಎಲ್ಲೆಲ್ಲಿ?

RM-Manjunatha-Gowda-Press-meet-in-DCC-Bank

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (DCC BANK) ಇದೇ ಮೊದಲ ಬಾರಿ ₹36.75 ಕೋಟಿ ಲಾಭ (Profit) ಗಳಿಸಿದೆ. ಮುಂದಿನ ಸಾಲಿನಲ್ಲಿ ₹40 ಕೋಟಿ ಲಾಭ ಮಾಡುವ ಗುರಿ ಇದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ತಿಳಿಸಿದರು. ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್‌ ಆರಂಭವಾಗಿ 73 ವರ್ಷವಾಗಿದೆ. ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಿದೆ ಎಂದು ತಿಳಿಸಿದರು. ಅಧ್ಯಕ್ಷರು ಏನೆಲ್ಲ … Read more

ಶಿವಮೊಗ್ಗದ ಹಾಲು ಉತ್ಪಾದಕರಿಗೆ DCC ಬ್ಯಾಂಕ್‌ನಿಂದ ಸಾಲ, ಹಸು, ಎಮ್ಮೆ ಸಾಕಾಣಿಕೆಗೆ ಶೂನ್ಯ ಬಡ್ಡಿ ದರದಲ್ಲಿ ನೆರವು

RM-Manjunatha-Gowda-Press-meet-in-DCC-Bank

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (DCC BANK) ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಶೇ.3ರ ಬಡ್ಡಿ ದರದಲ್ಲಿ ಗರಿಷ್ಠ ₹80,000ದವರೆಗೆ ಮಧ್ಯಮಾವಧಿ ಪಶುಸಂಗೋಪನೆ ಸಾಲ (Dairy farmers loan) ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ತಿಳಿಸಿದ್ದಾರೆ. ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡ, ಶಿಮುಲ್‌ ಮತ್ತು ಡಿಸಿಸಿ ಬ್ಯಾಂಕ್‌ ಒಪ್ಪಂದ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 542 ಹಾಲು ಉತ್ಪಾದಕ ಸಹಕಾರ ಸಂಘಗಳ ಖಾತೆಯನ್ನು ಬ್ಯಾಂಕಿನಲ್ಲಿ ತೆರೆಯಲಾಗಿದೆ. … Read more