‘ದಿಕ್ಕು ತಪ್ಪಿಸುತ್ತಿದೆ ಕಾಂಗ್ರೆಸ್, ಮಂಗಳೂರು ಗಲಭೆಯಲ್ಲಿ ಕೇರಳದವರ ಕೈವಾಡ, ಗೂಂಡಾಗಿರಿ ವಿರುದ್ಧ ಕ್ರಮ ನಿಶ್ಚಿತ’

Eshwarappa MLA 1

ಶಿವಮೊಗ್ಗ ಲೈವ್.ಕಾಂ | SHIMOGA | 21 ಡಿಸೆಂಬರ್ 2019 ಮಂಗಳೂರು ಗೋಲಿಬಾರ್‌ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಿಲ್ಲ. ಗೂಂಡಾಗಿರಿ ಪ್ರದರ್ಶಿಸುವವರ ವಿರುದ್ಧ ಕ್ರಮ ನಿಶ್ಚಿತ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದು ಅದು ಕಾಯ್ದೆಯಾಗಿ ಪರಿವರ್ತನೆಯಾಗಿದೆ. ಕಾಯ್ದೆ ಬಗ್ಗೆ ಕಾಂಗ್ರೆಸ್ ದೇಶದ ಮತ್ತು ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಈಶ್ವರಪ್ಪ ದೂರಿದರು. ಈ ಕಾಯ್ದೆಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ. ಬಿಜೆಪಿ ಉಪ ಚುನಾವಣೆ ಹಾಗೂ … Read more

ಶಿವಮೊಗ್ಗದಲ್ಲಿ ಇದೇ ಮೊದಲು, ಸ್ಮಾರ್ಟ್ ಸಿಟಿಯ ವ್ಯಾಪಾರಿಗಳು, ಉದ್ಯಮಿಗಳಿಗೆ ಒಂದೊಳ್ಳೆ ಚಾನ್ಸ್, ಏನದು? ಉಪಯೋಗವೇನು?

BH Road Shivappanayaka Statue 1

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019 ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಫೋನ್ ಡೈರಿ ಶುರುವಾಗುತ್ತಿದೆ. ಪಾಕೆಟ್ ಕ್ಯಾಲೆಂಡರ್ ಯುಗ ಮುಗಿದು ವರ್ಷಗಳೇ ಕಳೆದಿದೆ. ಇನ್ನೇನಿದ್ದರು ಎಲ್ಲವು ಆನ್’ಲೈನ್. ಇಂಟರ್’ನೆಟ್ ಜಾಲ ವ್ಯಾಪಕವಾಗಿ ಹಬ್ಬುತ್ತಿದೆ. ಸರ್ವ ಸಮಸ್ಯೆಗು ಗೂಗಲ್’ನಲ್ಲಿ ಪರಿಹಾರ ಕಂಡುಕೊಳ್ಳುತ್ತಿದೆ ಇಡೀ ಜಗತ್ತು. ಹೀಗಿದ್ದೂ ಶಿವಮೊಗ್ಗದ ಹಲವು ವಿಚಾರಗಳು ಅಂತರ್ಜಾಲದಲ್ಲಿ ಈಗಲು ಮಿಸ್ಸಿಂಗ್. ಈ ಕೊರತೆ ನೀಗಿಸುವ ಸಲುವಾಗಿಯೇ ಶಿವಮೊಗ್ಗ ಲೈವ್.ಕಾಂ ಟೀಂ, ಫೋನ್ ಡೈರಿ ಆರಂಭಿಸುತ್ತಿದೆ. ಮೂರು ವರ್ಷ … Read more

ನಿಷೇಧವಿದ್ದರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು, ಸಭೆಗೆ ಬಂದರು ಮೊಬೈಲ್’ನಲ್ಲಿ ಮುಳುಗಿದ್ದರು, ಗೈರಾದವರಿಗೆ ನೊಟೀಸ್

ಶಿವಮೊಗ್ಗ ಲೈವ್.ಕಾಂ | SHIMOGA | 20 ಡಿಸೆಂಬರ್ 2019 ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಇವತ್ತು ತ್ರೈಮಾಸಿಕ ಸಭೆ ಆಯೋಜಿಸಲಾಗಿತ್ತು. ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆ ಗೈರಾಗಿದ್ದು ಶಾಸಕರ ಸಿಟ್ಟಿಗೆ ಕಾರಣವಾಯಿತು. ಮತ್ತೊಂದೆಡೆ ಪ್ಲಾಸ್ಟಿಕ್ ನಿಷೇಧವಿದ್ದರು ತಾಲೂಕು ಪಂಚಾಯಿತಿ ಸಭೆಯಲ್ಲಿ ಪ್ಲಾಸ್ಟಿಕ್ ವಾಟರ್ ಬಾಟಲ್’ಗಳು ರಾರಾಜಿಸಿದವು. ಆಫೀಸರ್’ಗಳೇ ಇಲ್ಲದ್ದಕ್ಕೆ ಗರಂ ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆಗೆ ಹಲವು ಅಧಿಕಾರಿಗಳು ಗೈರಾಗಿದ್ದರು. ಇದು ಶಾಸಕ ಅಶೋಕ್ ನಾಯ್ಕ್ ಅವರನ್ನು ಕೆರಳಿಸಿತು. ತಹಶೀಲ್ದಾರ್ ಗಿರೀಶ್, ಎಪಿಎಂಸಿ, ಕಾರ್ಮಿಕ ಇಲಾಖೆ, … Read more

ಎಂದಿನಂತೆ ನಡೆಯುತ್ತಿವೆ ಶಾಲಾ, ಕಾಲೇಜು, ವಾಹನ ಸಂಚಾರವು ಮಾಮೂಲು, ನಿಷೇಧಾಜ್ಞೆ ನಡುವೆ ಶಿವಮೊಗ್ಗ ಶಾಂತಿಯುತ

BH Road Shivappanayaka Statue 1

ಶಿವಮೊಗ್ಗ ಲೈವ್.ಕಾಂ | SHIMOGA | 19 ಡಿಸೆಂಬರ್ 2019 ನಿಷೇಧಾಜ್ಞೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಇದೆ. ಆದರೆ ವಾಹನ ಸಂಚಾರ, ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಎಲ್ಲ ಪ್ರತಿಭಟನೆಗಳಿಗೆ ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – … Read more

BREAKING NEWS |ಮಚ್ಚು ಬೀಸಿದ ಶ್ರೀಗಂಧ ಕಳ್ಳರು, ಅರಣ್ಯಾಧಿಕಾರಿಗೆ ಗಂಭೀರ ಗಾಯ, ಹೇಗಾಯ್ತು ಗೊತ್ತಾ ಘಟನೆ?

ಶಿವಮೊಗ್ಗ ಲೈವ್.ಕಾಂ | HOSANAGARA | 19 ಡಿಸೆಂಬರ್ 2019 ಶ್ರೀಗಂಧ ಕಳ್ಳರು DRFO ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಹತ್ಯೆಗೆ ಪ್ರಯತ್ನ ನಡೆಸಿರುವ ಭಯಾನಕ ಘಟನೆ ರಾತ್ರಿ ನಡೆದಿದೆ. ಮಾರಣಾಂತಿಕ ಹಲ್ಲೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸನಗರದ ಸೋನಲೆ ಅರಣ್ಯ ವಲಯದ ಉಪ ಅರಣ್ಯ ಅಧಿಕಾರಿ ಗೋವಿಂದರಾಜು ಅವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಡಿಆರ್’ಎಫ್ಓ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? ಸೋನಲೆಯ ಹೆಗ್ಗರಿಸಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮಧ್ಯರಾತ್ರಿಯಿಂದ CRPC ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ, ನಿಷೇಧಾಜ್ಞೆ ಎಲ್ಲಿಯವರೆಗೆ ಗೊತ್ತಾ?

BH-Road-Aamir-Ahmed-Circle-1.jpg

ಶಿವಮೊಗ್ಗ ಲೈವ್.ಕಾಂ | SHIMOGA | 18 ಡಿಸೆಂಬರ್ 2019 ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಯಾಗಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ. ನಿಷೇಧಾಜ್ಞೆ ಯಾವಾಗಿನವರೆಗೆ? ಡಿಸೆಂಬರ್ 18ರ ಮಧ್ಯರಾತ್ರಿಯಿಂದ ಡಿಸೆಂಬರ್ 21ರ ಮಧ್ಯರಾತ್ರಿವರೆಗೆ CRPCಯ ಸೆಕ್ಷನ್ 144ರ ಅನ್ವಯ ಜಿಲ್ಲಾಧಿಕಾರಿ ಅವರು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ತಿಳಿಸಿದ್ದಾರೆ. ನಿಷೇಧಾಜ್ಞೆಗೆ ಕಾರಣವೇನು? ಪೌರತ್ವ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಇದರ ವಿರುದ್ಧ ದೇಶಾದ್ಯಂತ … Read more

ಪ್ರತಿಭಟನೆ ನಡೆಸದಂತೆ ಪೊಲೀಸರಿಂದಲೇ ಒತ್ತಡ, ಜಿಲ್ಲಾ ಕಾಂಗ್ರೆಸ್’ನಿಂದ ಆಕ್ರೋಶ, ಎಸ್.ಪಿ ದೂರು ನೀಡಲು ಚಿಂತನೆ

H-S-Sundaresh-Congress-President

ಶಿವಮೊಗ್ಗ ಲೈವ್.ಕಾಂ | SHIMOGA | 17 ಡಿಸೆಂಬರ್ 2019 ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲು ಜಿಲ್ಲಾ ಕಾಂಗ್ರೆಸ್’ಗೆ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್, ಡಿಸೆಂಬರ್ 19 ರಂದು ಜಿಲ್ಲಾ ಕಾಂಗ್ರೆಸ್ ನಿಂದ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಪ್ರತಿಭಟನೆಗೆ ಅನುಮತಿ ಕೋರಿದ್ದರು ಪೊಲೀಸ್ ಅಧಿಕಾರಿಗಳು ಕರೆಮಾಡಿ ಪ್ರತಿಭಟನೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆಪಾದಿಸಿದರು.   ಕೇಂದ್ರ … Read more

ಶಿವಮೊಗ್ಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ, ಸಂಘಟನೆಗಾಗಿ ಸಾಲು ಸಾಲು ಮೀಟಿಂಗ್

ಶಿವಮೊಗ್ಗ ಲೈವ್.ಕಾಂ | SHIMOGA | 17 ಡಿಸೆಂಬರ್ 2019 ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ, ನಳೀನ್ ಕುಮಾರ್ ಕಟೀಲ್ ಅವರು ಇದೇ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸಂಘಟನೆ ದೃಷ್ಟಿಯಿಂದ ಹಲವು ಸಭೆಗಳನ್ನು ನಡೆಸಿದರು. ಕೋರ್ ಕಮಿಟಿ ಮೀಟಿಂಗ್ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ, ಕಾರ್ಯಚಟುವಟಿಕೆ ಕುರಿತು ಚರ್ಚಿಸಲು ಕೋರ್ ಕಮಿಟಿ ಸಭೆ ಆಯೋಜಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಶಾಸಕರಾದ ಹರತಾಳು ಹಾಲಪ್ಪ, … Read more

ಹಾರನಹಳ್ಳಿ ಮಾರಿ ಗದ್ದುಗೆ ವಿವಾದ, ಇನ್ನೆರಡು ವಾರದಲ್ಲಿ ಕ್ಲಿಯರ್, ಶಿವಮೊಗ್ಗದಲ್ಲಿ ಅಲರ್ಟ್, ಶಾಂತಿ ಸಭೆಯಲ್ಲಿ ಏನೆಲ್ಲ ಆಯ್ತು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 17 ಡಿಸೆಂಬರ್ 2019 ತಾಲೂಕಿನ ಹಾರನಹಳ್ಳಿಯಲ್ಲಿಯ ಮಾರಿ ಗದ್ದುಗೆ ಸಂಬಂಧ ಕಳೆದ ಏಳೆಂಟು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಪ್ರಕರಣ ಇನ್ನೆರಡು ವಾರಗಳಲ್ಲಿ ಇತ್ಯರ್ಥವಾಗಲಿದೆ. ಐದು ವರ್ಷಕ್ಕೊಮ್ಮೆ ವಿವಾದ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಮಾರಿಹಬ್ಬದ ಸಂದರ್ಭದಲ್ಲಿಯೇ ವಿವಾದಿತ ಜಾಗಕ್ಕಾಗಿ ಹಾರನಹಳ್ಳಿ ಅಕ್ಷರಶಃ ಕುದಿಯುತಿರುತ್ತದೆ. ವ್ಯಕ್ತಿಯೊಬ್ಬರ ಆಸ್ತಿ ವಿವಾದವೀಗ ಸಮುದಾಯದ ಸಮಸ್ಯೆಯಂತೆ ಬಿಂಬಿಸಲಾಗಿದೆ. ಅದರ ಪರಿಣಾಮವಾಗಿಯೇ ಭಾನುವಾರ ಮಾರಿ ಹಬ್ಬಕ್ಕಾಗಿ ಪೆಂಡಾಲು ಹಾಕುವ ಸಂಬಂಧ ಸೃಷ್ಟಿಯಾದ ಸಣ್ಣ ಗಲಾಟೆ ವಿಕೋಪಕ್ಕೆ … Read more

ಶಿವಮೊಗ್ಗದಲ್ಲಿ ಬೀದಿಗಿಳಿದ ಮಹಿಳೆಯರು, ಮೈಕ್ರೋ ಫೈನಾನ್ಸ್ ವಿರುದ್ಧ ಭಾರೀ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 16 ಡಿಸೆಂಬರ್ 2019 ಮೈಕ್ರೋ ಫೈನಾನ್ಸ್’ಗಳು ನೀಡಿದ ಕಾನೂನುಬಾಹಿರ ಸಾಲ ಮನ್ನಾ ಮಾಡಬೇಕು ಹಾಗೂ ಮೈಕ್ರೋ ಫೈನಾನ್ಸ್’ಗಳ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ  ನೇತೃತ್ವದಲ್ಲಿ ಸಂತ್ರಸ್ಥ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಹಲವು ಗ್ರಾಮಗಳಲ್ಲಿ ರಾಷ್ಟ್ರೀಯ ಬ್ಯಾಂಕುಗಳ ಶಾಖೆಗಳಿದ್ದರೂ ಸಹ ಆರ್ಥಿಕ ಕಾರ್ಯವ್ಯಾಪ್ತಿಯಲ್ಲಿ ಸಾಲದ ಅಗತ್ಯ ಇರುವ ಬಡ ಜನತೆಗೆ ಸಾಲ ನೀಡುತ್ತಿಲ್ಲ. ಅದರ ಪರಿಣಾಮ ಜನರು ಸುಲಭವಾಗಿ ಮೈಕ್ರೋ ಫೈನಾನ್ಸ್’ಗಳ … Read more