ಕುವೆಂಪು ವಿವಿ ಪ್ರೊಫೆಸರ್ ಮನೆಯಲ್ಲಿ ಚಿನ್ನ, ವಜ್ರದ ಆಭರಣ ಕದ್ದಿದ್ದ ಕಳ್ಳ ಒಂದೇ ದಿನದಲ್ಲಿ ಭದ್ರಾವತಿ ಪೊಲೀಸರ ಬಲೆಗೆ

Kuvempu-University

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 22 ಜುಲೈ 2019 ಕುವೆಂಪು ವಿಶ್ವವಿದ್ಯಾಲಯದ ಪ್ರೊಫೆಸರ್ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು, ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಒಂದೇ ದಿನದಲ್ಲಿ ಬಂಧಿಸಿದ್ದಾರೆ. ಈತನಿಂದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಕ್ಯಾಂಪಸ್’ನ ಸಿಬ್ಬಂದಿಗಳ ಕ್ವಾರ್ಟರ್ಸ್’ನಲ್ಲಿ ಕಳ್ಳತನವಾಗಿತ್ತು. ಪ್ರೊಫೆಸರ್ ನಮ್ರತಾ ಅವರ ಮನೆಯಲ್ಲಿದ್ದ 7.87 ಲಕ್ಷ ರೂ. ಮೌಲ್ಯದ 217.5 ಗ್ರಾಂ ತೂಕದ ಬಂಗಾರ ಮತ್ತು ವಜ್ರದ ಆಭರಣಗಳು ಕಳುವಾಗಿದ್ದವು. ಜುಲೈ 20ರಂದು ಕಳ್ಳತನವಾಗಿತ್ತು. … Read more

ಶಿವಮೊಗ್ಗದ ಉದ್ಯಮಿ ತಲೆಗೆ ರಿವಾಲ್ವರ್ ಇಟ್ಟು ಹತ್ಯೆ ಬೆದರಿಕೆ, ಕೆಲವೇ ಗಂಟೆಯಲ್ಲಿ ಸುಪಾರಿ ಹಂತಕರು ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ರಿಯಲ್ ಎಸ್ಟೇಟ್ ಉದ್ಯಮಿ ಎದೆಗೆ ರಿವಾಲ್ವರ್ ಇಟ್ಟು, ಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದ ಪ್ರಕರಣ ಸಂಬಂಧ, ಶಿವಮೊಗ್ಗ ಪೊಲಿಸರು ಐದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ರಿವಾಲ್ವರ್ ಮತ್ತು ಒಂದು ಗುಂಡು ವಶಕ್ಕೆ ಪಡೆಯಲಾಗಿದೆ. ಉದ್ಯಮಿ ಹೆವನ್ ಇನ್ ಹಬೀಬ್ ಹತ್ಯೆ ಮಾಡಲು, ಐವರು ಸುಪಾರಿ ಕಿಲ್ಲರ್’ಗಳು ಸಂಚು ರೂಪಿಸಿದ್ದರು. ಜುಲೈ 16ರಂದು ರಾತ್ರಿ ಚಾಲುಕ್ಯ ನಗರದ ಬಳಿ, ಹಬೀಬ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ರಿವಾಲ್ವರ್ … Read more

ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿ ಶಿವಮೊಗ್ಗದ ವ್ಯಕ್ತಿಗೆ 50 ಸಾವಿರ ರೂ. ಪಂಗನಾಮ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಕರೆ ಮಾಡಿದ ವಂಚಕನೊಬ್ಬ, ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 50 ಸಾವಿರ ರೂ. ಪಂಗನಾಮ ಹಾಕಿದ್ದಾನೆ. ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬ, ಹಸೂಡಿ ಗ್ರಾಮದ ಎ.ಎನ್.ಬೆಳ್ಳಯ್ಯ ಎಂಬುವವರನ್ನು ವಂಚಿಸಿದ್ದಾನೆ. ಎಟಿಎಂ ಕಾರ್ಡ್ ಅವಧಿ ಮುಗಿದಿದೆ. ಅದನ್ನು ಕೂಡಲೇ ನವೀಕರಣ ಮಾಡಿಸಿಕೊಳ್ಳಿ. ಇದಕ್ಕಾಗಿ ಮೊಬೈಲ್’ಗೆ ಬರುವ ಒಟಿಪಿ ಪಿನ್ ನಂಬರ್ ಹೇಳುವಂತೆ ತಿಳಿಸಿದ್ದಾನೆ. ವಂಚಕನ ಮಾತು ನಂಬಿದ ಬೆಳ್ಳಯ್ಯ ಒಟಿಪಿ … Read more

ಗಾಂಧಿ ಬಜಾರ್ ಚಿನ್ನದ ವ್ಯಾಪಾರಿಗೆ ರಿವಲ್ವಾರ್ ತೋರಿಸಿ ಹಣ ದೋಚಿದ ಖದೀಮರು

shivamogga graphics map

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ಶಿವಮೊಗ್ಗದ ಚಿನ್ನ, ಬೆಳ್ಳಿ ವ್ಯಾಪಾರಿ ಮೇಲೆ ಹಲ್ಲೆ ನಡಸಿ, ರಿವಲ್ವಾರ್ ತೋರಿಸಿ ಹಣ ದೋಚಲಾಗಿದೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಧರ್ವ ನಗರ ನಿವಾಸಿ ಎಂ.ಕೆ.ಅನೀಸುರ್ ಇಸ್ಲಾಂ ಅವರ ಮೇಲೆ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ, ಹಣ ದೋಚಲಾಗಿದೆ. ಸಾದಿಕ್ ಅಲಿಯಾಸ್ ಸಾತು ಎಂಬಾತ ಕೃತ್ಯ ಎಸಗಿದವನು. ಗಾಂಧಿ ಬಜಾರ್’ನಲ್ಲಿರುವ ಅನೀಸುರ್ ಇಸ್ಲಾಂ ಅವರ … Read more

ಆಗುಂಬೆಯಲ್ಲಿ ಮದ್ಯದಂಗಡಿ ತೆರೆಯಲು ಗ್ರಾಮಸ್ಥರ ವಿರೋಧ, ವಾತಾವರಣ ಹಾಳುಗೆಡವದಂತೆ ಆಗ್ರಹ

Agumbe-Board-General

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 16 ಜುಲೈ 2019 ಪ್ರಕೃತಿ ಸೌಂದರ್ಯ, ಸೂರ್ಯಾಸ್ತಮಾನ ವೀಕ್ಷಣೆಗೆ ಪ್ರಖ್ಯಾತಿ ಪಡೆದಿರುವ ಆಗುಂಬೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬಾರದು ಎಂದು ಆಗ್ರಹಿಸಿ, ಗ್ರಾಮಸ್ಥರು ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ. ಆಗುಂಬೆಯಲ್ಲಿ ಅಭಯಾರಣ್ಯ, ನಕ್ಸಲ್ ಬಾಧಿತ ಪ್ರದೇಶವೆಂಬ ಕಾರಣಕ್ಕೆ ನಲುಗಿ ಹೋಗಿದ್ದೇವೆ. ಈಗ ಮದ್ಯದಂಗಡಿ ತೆರೆದರೆ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ. ಸದ್ಯ ಇಲ್ಲಿಗೆ ದೇಶ, ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಾರೆ. ಪ್ರಕೃತಿ ಸೌಂದರ್ಯ ಸವಿಯಲು ಪ್ರಶಸ್ತ ಸ್ಥಳವಾಗಿದೆ. ಉದ್ದೇಶಿತ ಮದ್ಯದಂಗಡಿ ತೆರೆದರೆ, ಇಡೀ … Read more

ಆಯನೂರಿನ ಹೊಟೇಲ್ ಮಾಲೀಕನ ಮನೆ ಬಾಗಿಲು ಮುರಿದು ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | ಕುಂಸಿ | 16 ಜುಲೈ 2019 ಹೊಟೇಲ್ ಮಾಲೀಕರೊಬ್ಬರ ಮನೆಗೆ ನುಗ್ಗಿದ ಕಳ್ಳರು ಚಿನ್ನದ ಆಭರಣ, ಗೃಹೋಪಯೋಗಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರನಹಳ್ಳಿಯಲ್ಲಿರುವ ನಾಗರಾಜ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ನಾಗರಾಜ್, ಹೆಂಡಿತ, ಮಕ್ಕಳ ಜೊತೆಗೆ ಆಯನೂರಿನಲ್ಲಿರುವ ತಮ್ಮ ಹೊಟೇಲ್’ಗೆ ತೆರಳಿದ್ದ ವೇಳೆ, ಕಳ್ಳರು ಕೈಚಳಕ ತೋರಿಸಿದ್ದಾರೆ. ಮನೆಯ ಕರೆಂಟ್ ಕಟ್ ಮಾಡಿ, ಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು, 23,500 ರೂ. ಮೌಲ್ಯದ … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸಗೆ ಬಂದವರ ಪರ್ಸ್ ಕದಿಯುತ್ತಿದ್ದ ಕಳ್ಳಿ ಅರೆಸ್ಟ್, ಈಕೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 16 ಜುಲೈ 2019 ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಔಷಧಿ ತೆಗೆದುಕೊಳ್ಳಲು ಕ್ಯೂನಲ್ಲಿ ನಿಂತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್’ನಿಂದ ಪರ್ಸ್ ಕಳ್ಳತನ ಮಾಡಿದ್ದ ಮಹಿಳೆಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಆಕೆಯಿಂದ 1.69 ಲಕ್ಷ ರೂ. ಮೌಲ್ಯದ ಮೊಬೈಲ್, ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಗೋಪಾಳದ ತಾಹೀರಾ ರೂಹಿ ಬಂಧಿತಳು. ಭದ್ರಾವತಿಯ ಹೆಬ್ಬಂಡಿಯ ನೇತ್ರಾವತಿ ಎಂಬುವವರ ವ್ಯಾನಿಟಿ ಬ್ಯಾಗ್’ನಿಂದ ಪರ್ಸ್ ಕಳ್ಳತನ ಮಾಡಿದ್ದಳು. ಈ ಕುರಿತು ನೇತ್ರಾವತಿ ಅವರು ದೊಡ್ಡಪೇಟೆ ಪೊಲೀಸ್ … Read more

ಹಾಸ್ಟೆಲ್’ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಯುವತಿ ಅನುಮಾನಾಸ್ಪದ ಸಾವು, ಕೊಲೆ ಶಂಕೆ

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸೊರಬ | 15 ಜುಲೈ 2019 ಸೊರಬ ಪಟ್ಟಣದ ಕಾನಕೇರಿಯಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಈ ಯುವತಿ, ಹಾಸ್ಟೆಲ್ ಒಂದರಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ಅಶ್ವಿನಿ ಕಲ್ಲಹಳ್ಳಿ (21) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಇವತ್ತು ಬೆಳಗ್ಗೆ ಕಾನಕೇರಿಯಲ್ಲಿ, ಅಶ್ವಿನಿ ಮೃತದೇಹ ಪತ್ತೆಯಾಗಿದೆ. ಈಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮಹಳ್ಳಿಯ ಅಶ್ವಿನಿ ಕಲ್ಲಹಳ್ಳಿ, ಒಂದೂವರೆ ವರ್ಷದಿಂದ ಶ್ರೀ ರಂಗನಾಥ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಹಿಂದುಳಿದ ವರ್ಗಗಳ … Read more

ಭದ್ರಾವತಿ ಅಂಬೇಡ್ಕರ್ ಸರ್ಕಲ್’ನಲ್ಲಿ ವಿಐಎಸ್ಎಲ್ ಕಾರ್ಮಿಕರ ಅರೆಬೆತ್ತಲೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 13 ಜುಲೈ 2019 ಭದ್ರಾವತಿ ವಿಐಎಸ್ಎಲ್ ಖಾಸಗೀಕರಣ ಮಾಡಬಾರದು ಹಾಗೂ ಮುಚ್ಚಬಾರದು ಅಂತಾ, ಕಾರ್ಖಾನೆಯ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು ಭದ್ರಾವತಿಯಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ, ಪ್ರತಿಭಟಿಸಿದರು. ಅಂಬೇಡ್ಕರ್ ಸರ್ಕಲ್’ನಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾರ್ಮಿಕರು, ರಸ್ತೆ ತಡೆ ಮಾಡಿದರು. ಕೇಂದ್ರ ಸರ್ಕಾರ, ಬಿಜೆಪಿ ಮುಖಂಡರು, ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್, ಈಗಾಗಲೆ … Read more

ತೀರ್ಥಹಳ್ಳಿಯ ಕನ್ನಂಗಿ ಸೊಸೈಟಿಯಲ್ಲಿ ಕಳ್ಳರ ಕೈ ಚಳಕ, ಕಿಟಕಿ ಮುರಿದು ಹಣ ಕಳವು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 13 ಜುಲೈ 2019 ಗ್ಯಾಸ್ ಕಟಿಂಗ್ ಮಿಷನ್ ಬಳಸಿ ಕಬ್ಬಿಣದ ಕಿಟಕಿಯ ಸರಳುಗಳನ್ನು ಮುರಿದು, ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿಯಲ್ಲಿರುವ ಸಂಘದಲ್ಲಿ ಘಟನೆ ನಡೆದಿದೆ. ಮಂಡಗದ್ದೆ ಹೋಬಳಿಯ ಕನ್ನಂಗಿ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂಭಾಗದ ಕಬ್ಬಿಣದ ಕಿಟಕಿಯನ್ನು, ಗ್ಯಾಸ್ ಕಟಿಂಗ್ ಬಳಸಿ ಮುರಿಯಲಾಗಿದೆ. ಒಳಗೆ ನುಗ್ಗಿರುವ ಕಳ್ಳರು ಕ್ಯಾಶ್ ಕೌಂಟರ್’ನಲ್ಲಿದ್ದ 13,700 ರೂ. ಹಣವನ್ನು ಕಳ್ಳತನ ಮಾಡಿದ್ದಾರೆ. ಗುರುವಾರ … Read more