ಇವತ್ತು ಏಕಾದಶಿ, ಯಾವ್ಯಾವ ರಾಶಿಗೆ ಹೇಗಿದೆ ಈ ದಿನ? ಇಲ್ಲಿದೆ ಇಂದಿನ ದಿನ ಭವಿಷ್ಯ

Dina-Bhavishya-and-Panchanga-Thumbnail.webp

ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ (Horoscope), ಇವತ್ತಿನ ಪಂಚಾಂಗ ಇಲ್ಲಿದೆ. ಶಿವಮೊಗ್ಗದಲ್ಲಿ ಇವತ್ತು 6.28ಕ್ಕೆ ಸೂರ್ಯೋದಯ. 5.57ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ಏಕಾದಶಿ ಮತ್ತು ಉತ್ತರ ನಕ್ಷತ್ರದ ದಿನ. ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.48 ರಿಂದ 5.38ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.13 ರಿಂದ 6.28ರವರೆಗೆ ಅಭಿಜಿತ್‌ ಬೆಳಗ್ಗೆ 11.49 ರಿಂದ 12.35ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.07 ರಿಂದ 2.53ರವರಗೆ ಗೋಧೂಳಿ ಮುಹೂರ್ತ ಸಂಜೆ 5.57 ರಿಂದ 6.22ರವರೆಗೆ ರಾಹು, ಯಮಗಂಡ, ಗುಳಿಕ ಕಾಲ … Read more

ನೇಣು ಬಿಗಿದುಕೊಂಡು ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ

Thirthahalli-College-Student-breathed-last.

ತೀರ್ಥಹಳ್ಳಿ: ಪದವಿ ವಿದ್ಯಾರ್ಥಿನಿಯೊಬ್ಬರು ಮನೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಸಮೀಪದ ದಬ್ಬಣಗದ್ದೆ ಸಮೀಪದ ಬಚ್ಚನಕೊಡಿಗೆ ಘಟನೆ ಸಂಭವಿಸಿದೆ. ರಮೇಶ್‌ ಆಚಾರ ಅವರ ಪುತ್ರಿ ಪ್ರಾಪ್ತಿ (21) ಮೃತಳು. ಇಂದು ಬೆಳಗಿನ ಜಾವ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಾಪ್ತಿ ಪತ್ತೆಯಾಗಿದ್ದಾಳೆ. ಬಾಳೆಬೈಲಿನ ಪದವಿ ಕಾಲೇಜಿನಲ್ಲಿ ಪ್ರಾಪ್ತಿ ತೃತೀಯ ವರ್ಷದ ಬಿಬಿಎ ಪದವಿ ಓದುತ್ತಿದ್ದರು. ಇದನ್ನೂ ಓದಿ » ನಾಳೆ ಶಾಲೆ, ಕಾಲೇಜಿಗೆ ರಜೆ ಇಲ್ಲ, ಅಧಿಸೂಚನೆ ನಿಜವಲ್ಲ, ಇಲ್ಲಿದೆ ಕಂಪ್ಲೀಟ್‌ ಮಾಹಿತಿ … Read more

ಯುವನಿಧಿ ಫಲಾನುಭವಿಗಳಿಗೆ ಮಹತ್ವದ ಅಪ್‌ಡೇಟ್‌, ತಪ್ಪಿದರೆ ನಿರುದ್ಯೋಗ ಭತ್ಯೆ ಕಟ್‌

Yuvanidhi-general-image

ಶಿವಮೊಗ್ಗ: ಯುವನಿಧಿ ಯೋಜನೆ ಅಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಫಲಾನುಭವಿಗಳು ಇನ್ಮುಂದೆ ಪ್ರತಿ ತಿಂಗಳು ಸ್ವಯಂ ಘೋಷಣೆ ನೀಡಬೇಕು. ಇಲ್ಲವಾದಲ್ಲಿ ನೇರ ನಗದು ಖಾತೆಗೆ ಜಮೆ ಆಗುವುದಿಲ್ಲ ಎಂದು ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆ ಮೂಲಕ ಯುವನಿಧಿ ಯೋಜನೆ ಅಡಿ ಪ್ರತಿ ನಿರುದ್ಯೋಗಿ ಭತ್ಯೆ ನೀಡಲಾಗುತ್ತಿದೆ. ಪದವಿಧರರಿಗೆ ₹3000 ಮತ್ತು ಡಿಪ್ಲೋಮಾ ಪದವೀದರರಿಗೆ ₹1500 ಹಣ ಖಾತೆಗೆ ನೇರ ನಗದು ಮೂಲಕ ವರ್ಗವಾಗುತ್ತಿದೆ. ಇದನ್ನೂ … Read more

ನಾಳೆ ಶಾಲೆ, ಕಾಲೇಜಿಗೆ ರಜೆ ಇಲ್ಲ, ಅಧಿಸೂಚನೆ ನಿಜವಲ್ಲ, ಇಲ್ಲಿದೆ ಕಂಪ್ಲೀಟ್‌ ಮಾಹಿತಿ

fake-government-order-goes-viral.w

ಶಿವಮೊಗ್ಗ: ಸಾಲು ಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಲಾಗಿದೆ ಎಂಬ ನಕಲಿ ಆದೇಶವೊಂದು ವೈರಲ್‌ ಆಗಿದೆ. ಹಲವು ಜನಪ್ರತಿನಿಧಿಗಳು, ಶಿಕ್ಷಕರು, ಉಪನ್ಯಾಸಕರು ಈ ನಕಲಿ ಆದೇಶವನ್ನೇ ಅಸಲಿ ಎಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಗೊಂದಲ ಉಂಟಾಗಿತ್ತು. ವಾಸ್ತವ ಏನು? ಸಾಲು ಮರದ ತಿಮ್ಮಕ್ಕ ಅವರ ನಿಧನಕ್ಕೆ ಸರ್ಕಾರ ಸಂತಾಪ ಸೂಚಿಸಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಶಾಲೆ, ಕಾಲೇಜುಗಳಿಗೆ ರಜೆ … Read more

ಶಿವಮೊಗ್ಗದ ಮಹಿಳೆಗೆ 10 ದಿನದಲ್ಲಿ ₹11,46,273 ಮೋಸ, ಆಗಿದ್ದೇನು?

Instagram-Cyber-Crime-Shimoga-Station.

ಶಿವಮೊಗ್ಗ: ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಸಂಸ್ಥೆಯಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದ್ದು, ವಿವಿಧ ಟಾಸ್ಕ್‌ ಪೂರೈಸಿದರೆ ಅತ್ಯಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಗೆ ₹11,46,273 ವಂಚಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬಲೆಗೆ ಕೆಡವಿಕೊಂಡರು ಶಿವಮೊಗ್ಗದ ಮಹಿಳೆ ಇನ್‌ಸ್ಟಾಗ್ರಾಂ ವಿಕ್ಷಿಸುತ್ತಿದ್ದಾಗ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ವರ್ಕ್‌ ಫ್ರಂ ಹೋಮ್‌ ಅವಕಾಶವಿದೆ ಎಂಬ ಜಾಹೀರಾತು ಗಮನಿಸಿದ್ದರು. ಇದನ್ನು ಕ್ಲಿಕ್‌ ಮಾಡಿದಾಗ ವಿವಿಧ ಟಾಸ್ಕ್‌ ಪೂರೈಸಿ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ನಂಬಿದ ಮಹಿಳೆ ಹಣ ಪಾವತಿಸಿ ವಿವಿಧ ಟಾಸ್ಕ್‌ ಪೂರೈಸಿದ್ದಾರೆ. … Read more

ಶಿವಮೊಗ್ಗದ ಸರ್ಜಿ ಫೌಂಡೇಷನ್‌ಗೆ ಆಂಬುಲೆನ್ಸ್‌

Ambulance-for-Sarji-Foundation

ಶಿವಮೊಗ್ಗ: ಶಿವಮೊಗ್ಗ ರೌಂಡ್ ಟೇಬಲ್ 166 ವತಿಯಿಂದ ಸರ್ಜಿ ಫೌಂಡೇಷನ್‌ಗೆ ಆಂಬುಲೆನ್ಸ್ ಹಸ್ತಾಂತರ ಮಾಡಲಾಯಿತು. ಈ ಸಂದರ್ಭ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಚಿಂತೆ ಬೆಂಬಿಡದೆ ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ರೌಂಡ್ ಟೇಬಲ್‌ನಂತಹ ಸಂಸ್ಥೆಗಳು ಸಮಾಜದ ಆರೋಗ್ಯ ಕಾಪಾಡಲು, ಮೂಲಸೌಕರ್ಯ ಬಲಪಡಿಸಲು ನೀಡುತ್ತಿರುವ ಕೊಡುಗೆ ಅಪಾರ ಎಂದರು. ಸರ್ಜಿ ಸಮೂಹ ಸಂಸ್ಥೆಯ ನಿರ್ದೇಶಕರಾದ ಈಶ್ವರ್ ಸರ್ಜಿ, ನಮಿತಾ ಸರ್ಜಿ, ಶುಶ್ರುತ್, ಗಗನ್ ಕೋಟೆ, ವಾದಿರಾಜ್ ಕುಲಕರ್ಣಿ, … Read more

ಅಡ್ಡಗಟ್ಟಿ ಚಿನ್ನ, ನಗದು ಕಸಿದವನು ಅರೆಸ್ಟ್‌, ರಂಗೋಲೆ ಹಾಕುತ್ತಿದ್ದ ಮಹಿಳೆ ಸರ ಕಿತ್ತುಕೊಂಡವನು ಜೈಲಿಗೆ

Thieves-nabbed-by-Vinobanagara-Police-in-shimoga.

ಶಿವಮೊಗ್ಗ: ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿನೋಬನಗರ ಠಾಣೆ ಪೊಲೀಸರು ಇಬ್ಬರು ಕಳ್ಳರನ್ನು ಅರೆಸ್ಟ್‌ ಮಾಡಿ, ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ 1 ನವುಲೆಯ ಶಿವಬಸವ ನಗರ ಕ್ರಾಸ್‌ ಬಳಿ ಅಕ್ಟೋಬರ್‌ 10ರಂದು ಬೆಳಗಿನ ಜಾವ 4 ಗಂಟೆಗೆ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅಡ್ಡಗಟ್ಟಿದ್ದ. ಉಂಗುರ, ನಗದು ಕಸಿದುಕೊಂಡು ವ್ಯಕ್ತಿಯನ್ನ ತಳ್ಳಿ ಪರಾರಿಯಾಗಿದ್ದ. ಈ ಪ್ರಕರಣ ಸಂಬಂಧ ಸಚಿನ್‌ ಅಲಿಯಾಸ್‌ ಶ್ಯಾಡೋ (27) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ₹55,000 … Read more

ರಿಂಗ್‌ ರಸ್ತೆಯಲ್ಲಿ ಓಡಾಡುವಾಗ ಹುಷಾರ್‌, ಬೈಕಿನಲ್ಲಿ ತೆರಳಿದ್ದ ಯುವಕ, ಯುವತಿಯಿಂದ ಕೇಸ್‌ ದಾಖಲು

Police-Jeep-at-Shimoga-General-Image

ಶಿವಮೊಗ್ಗ: ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆಗೆ (ಇಬ್ಬರ ಹೆಸರು ಗೌಪ್ಯ) ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ಚಿನ್ನದ ಸರಗಳು, ಮೊಬೈಲ್‌ ಫೋನ್‌ ಕಸಿದು ಪರಾರಿಯಾಗಿದ್ದಾರೆ. ಶಿವಮೊಗ್ಗದ ಹೊಸ ರಿಂಗ್‌ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ವಿದ್ಯಾರ್ಥಿ ಮತ್ತು ಆತನ ಸ್ನೇಹಿತೆ ಪೆಸೆಟ್‌ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ಯಾಂಪಸ್‌ ಸೆಲೆಕ್ಷನ್‌ಗೆ ಬೈಕಿನಲ್ಲಿ ತೆರಳುತ್ತಿದ್ದರು. ರಿಂಗ್‌ ರಸ್ತೆಯಲ್ಲಿ ಮಧ್ಯಾಹ್ನ 1.30ರ ಹೊತ್ತಿಗೆ ಬೈಕ್‌ ನಿಲ್ಲಿಸಿ ಇಬ್ಬರು ಫೋಟೊ ಕ್ಲಿಕ್ಕಿಸಿಕೊಳ್ಳೂತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿದ್ಯಾರ್ಥಿ ಮತ್ತು ಸ್ನೇಹಿತೆಗೆ … Read more

12 ಹಕ್ಕೊತ್ತಾಯಕ್ಕೆ ಬೆಂಗಳೂರು ಚಲೋ, ದಿನಾಂಕ ಪ್ರಕಟಿಸಿದ ರೈತರ ಸಂಘ, ಕಾರಣವೇನು?

HR-Basavarajappa-Raitha-Sanga-President.webp

ಶಿವಮೊಗ್ಗ: ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಕೈಬಿಡಬೇಕು, ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಲ್ಲಿ ಆಗುತ್ತಿರುವ ಅನ್ಯಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್‌ 26ರಂದು ಬೆಂಗಳೂರು ಚಲೋ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್‌.ಆರ್‌.ಬಸವರಾಜಪ್ಪ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‌.ಆರ್‌.ಬಸವರಾಜಪ್ಪ, ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬೆಂಗಳೂರು ಚಲೋ ಆಯೋಜಿಸಲಾಗಿದೆ ಎಂದರು. 12 ಪ್ರಮುಖ ಹಕ್ಕೊತ್ತಾಯ … Read more

ಊರಿಗೆ ಹೋಗಿದ್ದಾಗ ಪಕ್ಕದ ಮನೆ ಮಹಿಳೆಯಿಂದ ಬಂತು ಫೋನ್‌, ವಾಪಸಾದಾಗ ಕಾದಿತ್ತು ಶಾಕ್

crime name image

ಶಿವಮೊಗ್ಗ: ಕುಟುಂಬದವರು ಊರಿಗೆ ಹೋಗಿದ್ದಾಗ ಮನೆ ಬಾಗಿಲಿನ ಲಾಕ್‌ ಮೀಟಿ ಒಳಗೆ ನುಗ್ಗಿರುವ ಕಳ್ಳರು ಚಿನ್ನಾಭರಣ, ನಗದು ಮತ್ತು ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಡಿ ಬ್ಲಾಕ್‌ನಲ್ಲಿರುವ ದಿನೇಶ್‌ ಕುಮಾರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ದಿನೇಶ್‌ ಕುಮಾರ್‌ ಮತ್ತು ಅವರ ಪೋಷಕರು ಸಾಗರದ ತಮ್ಮೂರಿಗೆ ತೆರಳಿದ್ದರು. ಪಕ್ಕದ ಮನೆಯ ಮಹಿಳೆ ಕರೆ ಮಾಡಿ ಮನೆಯಲ್ಲಿ ಕಳ್ಳತನವಾಗಿದೆ ಎಂದು ಮಾಹಿತಿ ನೀಡಿದ್ದರು. ಕೂಡಲೆ ದಿನೇಶ್‌ ಕುಮಾರ್‌ ಮನೆಗೆ ಮರಳಿದ್ದು ಬೀರುವಿನಲ್ಲಿದ್ದ ಚಿನ್ನಾಭರಣ, ನಗದು … Read more