ಶಿವಮೊಗ್ಗ ಸಿಟಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್‌ ಪೊಲೀಸ್‌

traffic-police-stops-ksrtc-buses-in-Shimoga-city.- ಕೆಎಸ್‌ಆರ್‌ಟಿಸಿ ಬಸ್‌

ಶಿವಮೊಗ್ಗ: ಭಾರಿ ವಾಹನ ಸಂಚಾರ ನಿಷೇಧವಿದ್ದರು ಶಿವಮೊಗ್ಗ ಸಿಟಿಯೊಳಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಸಂಚಾರ ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಟ್ರಾಫಿಕ್‌ ಪೊಲೀಸರ ಜೊತೆಗೆ ಕೆಎಸ್‌ಆರ್‌ಟಿಸಿ ಬಸ್‌ ಸಿಬ್ಬಂದಿ, ಪ್ರಯಾಣಿಕರು ವಾಗ್ವಾದ ನಡೆಸಿದರು. ಇಂದು ಗೋಪಿ ವೃತ್ತದಲ್ಲಿ ಸಂಚಾರ ಠಾಣೆ ಪೊಲೀಸರು ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ತಡೆದರು. ನಗರದ ಒಳಗೆ ಭಾರಿ ವಾಹನ ಸಂಚಾರ ನಿಷೇಧವಿದ್ದರು ಬಸ್ಸುಗಳು ನಗರದ ಒಳಗೆ ಸಂಚರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಈ ಸಂದರ್ಭ ವಾಗ್ವಾದ ನಡೆಯಿತು. ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ … Read more

ಶಿವಮೊಗ್ಗ ಸಿಟಿಯ ಹಲವೆಡೆ ನಾಳೆ ಅರ್ಧ ದಿನ ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ನಗರ ಉಪ ವಿಭಾಗ-2ರ ವ್ಯಾಪ್ತಿಯ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ನ.14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ವತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಕೆ.ಆರ್.ಕುಡಿಯುವ ನೀರಿನ ಘಟಕ, ಹಳೇ ಮಂಡ್ಲಿ, ಗಂಧರ್ವ ನಗರ, ಹರಕೆರೆ, ಶಂಕರ ಕಣ್ಣಿನ ಆಸ್ಪತ್ರೆ, ವಿಜಯವಾಣಿ ಪ್ರೆಸ್ ಹತ್ತಿರ, ಸವಾಯಿಪಾಳ್ಯ, ಕುರುಬರ ಪಾಳ್ಯ, ಶ್ರೀನಿವಾಸ ಲೇಔಟ್, ಇಲಿಯಾಸ್ ನಗರ 1 ರಿಂದ 4ನೇ ಕ್ರಾಸ್, ನಾರಾಯಣ … Read more

ಶಿವಮೊಗ್ಗದಲ್ಲಿ ರಸ್ತೆಗೆ ಅಡ್ಡ ಬಿತ್ತು ರೆಂಬೆ, ನಾಗರಿಕ ಪ್ರಜ್ಞೆ ಮೆರೆದ ವಿದ್ಯಾರ್ಥಿಗಳು, ತಪ್ಪಿತು ಟ್ರಾಫಿಕ್‌ ಜಾಮ್‌

ATNCC-NSS-Students-clear-road.

ಶಿವಮೊಗ್ಗ: ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ರೆಂಬೆಯನ್ನು ATNC ಕಾಲೇಜು ಎನ್‌ಎಸ್‌ಎಸ್‌ ಸ್ವಯಂ ಸೇವಕರು  (Students) ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟಿದ್ದಾರೆ. ಮಹಾವೀರ ವೃತ್ತದಿಂದ ಬಸವೇಶ್ವರ ಸರ್ಕಲ್‌ಗೆ ತೆರಳುವ ರಸ್ತೆಯಲ್ಲಿ ಮರದ ರೆಂಬೆ ತುಂಡಾಗಿ ಬಿದ್ದಿತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಒಂದು ಬದಿಯ ರಸ್ತೆ ಸಂಪೂರ್ಣ ಬಂದ್‌ ಆಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಶಾಲೆ, ಕಾಲೇಜು, ಕಚೇರಿಗಳಿಗೆ ತರಳುವವರಿಗೆ ಸಮಸ್ಯೆಯಾಗಿತ್ತು. ATNC ಕಾಲೇಜಿನ ಎನ್‌ಎಸ್‌ಎಸ್‌ ಸ್ವಯಂ ಸೇವಕರು, ಉಪನ್ಯಾಸಕರು ತುಂಡಾಗಿ ಬಿದ್ದಿದ್ದ ಮರದ ರೆಂಬೆ ತೆರವು … Read more

ಶಿವಮೊಗ್ಗದಲ್ಲಿ ಮುತ್ತಿಗೆ ಯತ್ನ, ಬಿಜೆಪಿ ಕಾರ್ಯಕರ್ತರ ಬಂಧನ

BJP-Workers-arrested-at-SP-Office-in-Shimoga-city

ಶಿವಮೊಗ್ಗ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾಥಿತ್ಯ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾ ಪೊಲೀಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದರು (Arrest). ಇದಕ್ಕೂ ಮುನ್ನ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್‌ ಕುಕ್ಕೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಐಷಾರಾಮಿ ಹೋಟೆಲ್, ಮನರಂಜನಾ ಕ್ಲಬ್‌ ಆಗಿ ಪರಿವರ್ತನೆಗೊಂಡಿದೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರು ರಾಜೀನಾಮೆ … Read more

ಭದ್ರಾವತಿ ಸಿಟಿಯ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?‌ ಇಲ್ಲಿದೆ ಲಿಸ್ಟ್

power cut mescom ELECTRICITY

ಭದ್ರಾವತಿ: ನಗರ ಉಪವಿಭಾಗಗಳ ಘಟಕ– 3 ಹಾಗೂ 4ರ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಹಲವು ಬಡಾವಣೆಗಳಲ್ಲಿ ನ.13ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೂ ವಿದ್ಯುತ್ ವ್ಯತ್ಯಯ  (Power Cut) ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಹೊಸಮನೆ, ಎನ್‌ಎಂಸಿ ರಸ್ತೆ, ಭೋವಿ ಕಾಲೊನಿ, ಸಂತೆ ಮೈದಾನ, ಕೇಶವಪುರ, ಬಾಬಳ್ಳಿ ರಸ್ತೆ, ಸತ್ಯಸಾಯಿ ನಗರ, ಶಿವಾಜಿ ವೃತ್ತ, ಹನುಮಂತ ನಗರ, ತಮ್ಮಣ್ಣ ಕಾಲೊನಿ, ಸುಭಾಷ ನಗರ, ವಿಜಯನಗರ, ಕುವೆಂಪುನಗರ, ನೃಪತುಂಗ … Read more

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಲೋಕಾಯುಕ್ತರು ದಿಢೀರ್‌ ಭೇಟಿ, ಪರಿಶೀಲನೆ

290823-Thirthahalli-Pattana-Pancahayath-Building.

ತೀರ್ಥಹಳ್ಳಿ: ದುರಾಡಳಿತ, ಅವ್ಯವಹಾರಗಳ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿಗೆ ಲೋಕಾಯುಕ್ತ ಪೊಲೀಸರು ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ನಿವೇಶನ ಇ–ಸ್ವತ್ತು ನೋಂದಣಿಯಲ್ಲಿ ಅಕ್ರಮ, ಅವ್ಯವಹಾರ, ಸಾರ್ವಜನಿಕರ ಅರ್ಜಿ ವಿಲೇವಾರಿ ವಿಳಂಬ, ಸರ್ಕಾರಿ ಸೌಕರ್ಯ ವಿತರಣೆಯಲ್ಲಿ ಲೋಪ, ದುರಾಡಳಿತ ಕುರಿತಂತೆ ಆರೋಪಗಳು ಕೇಳಿ ಬಂದಿದ್ದರಿಂದ ದಾಳಿ ನಡೆಸಲಾಗಿದೆ ಎಂದು‌ ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ » ತೀರ್ಥಹಳ್ಳಿ ಮುಖ್ಯರಸ್ತೆಯಲ್ಲೇ ಬಸ್‌ ಬ್ರೇಕ್ ಫೇಲ್‌, ಬೈಕುಗಳು ಜಖಂ ಕಾಮಗಾರಿ, ಆರೋಗ್ಯ, ಕಂದಾಯ, … Read more

ರಾಜ್ಯಕ್ಕೆ ಮತ್ತೆ ಮಳೆ ಮುನ್ಸೂಚನೆ, ಶಿವಮೊಗ್ಗದಲ್ಲಿ ಹೇಗಿರುತ್ತೆ ವಾತಾವರಣ? ಇವತ್ತಿನ ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ಕರ್ನಾಟಕದ ವಿವಿಧೆಡೆ ಇನ್ನೆರಡು ದಿನ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇದರ ಜೊತೆಗೆ ಚಳಿಯ ತೀವ್ರತೆಯು ಹೆಚ್ಚಿರಲಿದೆ. (weather) ಶಿವಮೊಗ್ಗ ಜಿಲ್ಲೆಯಲ್ಲಿಯು ಥಂಡಿ ಜೋರಿದೆ. ಕಳೆದ ರಾತ್ರಿ ಶಿವಮೊಗ್ಗ ನಗರದಲ್ಲಿ ಚಳಿ ಪ್ರಮಾಣ ಕಡಿಮೆ ಇತ್ತು. ಆದರೆ ತಡರಾತ್ರಿ ಮತ್ತು ಬೆಳಗಿನ ಜಾವದ ಹೊತ್ತಿಗೆ ಥಂಡಿ ಹೆಚ್ಚಾಗಿದೆ. ಇವತ್ತು ಬಿಸಿಲಿನ ಅಬ್ಬರ ಮುಂದುವರೆಯಲಿದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ … Read more

ಕೊಟ್ಟಿಗೆಗೆ ಬೆಂಕಿ, ಎರಡು ಹಸುಗಳು ಸಜೀವ ದಹನ

Incident-at-barn-in-kyatinakoppa-in-Shimoga-taluk

ಶಿವಮೊಗ್ಗ: ಕೊಟ್ಟಿಗೆಗೆ ಬೆಂಕಿ ಹೊತ್ತುಕೊಂಡು ಎರಡು ಗೋವುಗಳು (cows) ಸಜೀವ ದಹನವಾಗಿವೆ. ಶಿವಮೊಗ್ಗ ತಾಲೂಕು ಸೂಗೂರು ಬಳಿಯ ಕ್ಯಾತಿಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಸಂತೋಷ್‌ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಗೆ ಬೆಂಕಿ ಹೊತ್ತಿದ್ದು, ಎರಡು ಹಸುಗಳು ಸಜೀವ ದಹನವಾಗಿವೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ » ಅಮಿತ್‌ ಷಾಗೆ ಶಿವಮೊಗ್ಗದಿಂದ ಬಳೆ ಪೋಸ್ಟ್‌ ಮಾಡಿದ ಮಹಿಳೆಯರು, ಆಕ್ರೋಶ ವ್ಯಕ್ತಪಡಿಸಿದ ಯುವಕರು

ಅಮಿತ್‌ ಷಾಗೆ ಶಿವಮೊಗ್ಗದಿಂದ ಬಳೆ ಪೋಸ್ಟ್‌ ಮಾಡಿದ ಮಹಿಳೆಯರು, ಆಕ್ರೋಶ ವ್ಯಕ್ತಪಡಿಸಿದ ಯುವಕರು

Youth-Congress-workers-post-bangles-to-Home-Minister-Amith-Shah

ಶಿವಮೊಗ್ಗ: ದೇಶದಲ್ಲಿ ಪದೇ ಪದೆ ದಾಳಿಯಾಗುತ್ತಿದ್ದರು ಉಗ್ರರ ಅಟ್ಟಹಾಸ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಷಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿ ಮುಂಭಾಗ ನಗರ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. (Bangle) 2019ರಲ್ಲಿ 800 ಕೆ.ಜಿ ಸ್ಪೋಟಕ ಹೊತ್ತು ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಪುಲ್ವಾಮಾದಲ್ಲಿ ದಾಳಿಯಾಗಿತ್ತು. 2025ರಲ್ಲಿ ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ನಾಗರಿಕರ ಹತ್ಯೆ ಮಾಡಲಾಗಿತ್ತು. ಈಗ ದಹೆಲಿಯ ಅತ್ಯಂತ ಬಿಗಿ ಭದ್ರತಾ ಪ್ರದೇಶವಾದ ಕೆಂಪು … Read more

ತೀರ್ಥಹಳ್ಳಿ ಮುಖ್ಯರಸ್ತೆಯಲ್ಲೇ ಬಸ್‌ ಬ್ರೇಕ್ ಫೇಲ್‌, ಬೈಕುಗಳು ಜಖಂ

bus-incident-at-koppa-circle-in-Thirthahalli-city.

ತೀರ್ಥಹಳ್ಳಿ: ತಾಂತ್ರಿಕ ದೋಷದಿಂದಾಗಿ ಖಾಸಗಿ ಬಸ್ಸೊಂದು (Bus) ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ತೀರ್ಥಹಳ್ಳಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಕೊಪ್ಪ ಸರ್ಕಲ್‌ ಸಮೀಪ ಅಪಘಾತಕ್ಕೀಡಾಗಿದೆ. ತೀರ್ಥಹಳ್ಳಿ ನಿಲ್ದಾಣದಿಂದ ಆಜಾದ್‌ ನಗರ ಮಾರ್ಗವಾಗಿ ತೆರಳುತಿತ್ತು. ಕೊಪ್ಪ ಸರ್ಕಲ್‌ ಬಳಿ ಬಸ್ಸಿನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಬ್ರೇಕ್‌ ಹಿಡಿಯುತ್ತಿರಲಿಲ್ಲ. ಎಚ್ಚೆತ್ತುಕೊಂಡ ಚಾಲಕ ಜಾಗರೂಕೆ ವಹಿಸಿ ಬಸ್‌ ನಿಲ್ಲಿಸಿಲು ಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸ್‌ ಬ್ಯಾರಿಕೇಡ್‌, ಫುಟ್‌ಪಾತ್‌ನ ರೇಲಿಂಗ್‌ ಮತ್ತು ದ್ವಿಚಕ್ರ ವಾಹನಗಳಿಗೆ ಬಸ್‌ … Read more