ಡಿಪಿಗೆ ಸಾವರ್ಕರ್‌ ಫೋಟೊ ಬಳಸಿದ್ದಕ್ಕೆ ವಾಟ್ಸಪ್‌ ಕರೆ ಮಾಡಿ ಜೀವ ಬೆದರಿಕೆ

Kote Police station building

ಶಿವಮೊಗ್ಗ: ವಾಟ್ಸಪ್‌ ಡಿಪಿಯಲ್ಲಿ ವೀರ ಸಾವರ್ಕರ್‌ ಫೋಟೊ (Photo) ಬಳಸಿದ್ದಕ್ಕೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಕಾನೂನು ವಿದ್ಯಾರ್ಥಿ ಚಂದನ್‌ ದೂರು ನೀಡಿದ್ದಾರೆ. ನ.6ರಂದು ಅಪರಿಚಿತ ನಂಬರ್‌ನಿಂದ ವಾಟ್ಸಪ್‌ ಕರೆ ಬಂದಿದ್ದು ವ್ಯಕ್ತಿಯೊಬ್ಬ ತನ್ನನ್ನು ಪ್ರವೀಣ್‌ ಎಂದು ಪರಿಚಯಿಸಿಕೊಂಡಿದ್ದ. ವೀರ ಸಾರ್ವಕರ್‌ ಫೋಟೊವನ್ನು ಡಿಪಿಯಲ್ಲಿ ಬಳಸಿದ್ದೇಕೆ ಎಂದು ವಿಚಾರಿಸಿ, ಕೊನೆಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಚಂದನ್‌ ಅವರು ವಾಟ್ಸಪ್‌ ಪರಿಶೀಲಿಸಿದಾಗ ಶೇಖ್‌ ಎಂಬ ಹೆಸರು ತೋರಿಸುತ್ತಿತ್ತು ಎಂದು … Read more

ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದ ಪತಿಗೆ ಜೈಲು ಶಿಕ್ಷೆ

Shivamogga-Court-Balaraja-Urs-Road

ಶಿವಮೊಗ್ಗ: ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದಲ್ಲದೆ ಮಗುವಾದ ನಂತರವು ಆಕೆಯನ್ನು ಮನೆಗೆ ಸೇರಿಸದ ಪತಿಗೆ, ಶಿವಮೊಗ್ಗ ನ್ಯಾಯಾಲಯ ಜೈಲು (Jail) ಶಿಕ್ಷೆ, ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದರೆ 30 ದಿನ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿದ ಆದೇಶಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏನಿದು ಪ್ರಕರಣ? ಭದ್ರಾವತಿ ಗುಂಡೇರಿ ಕ್ಯಾಂಪ್‌ನ ಹರೀಶ್‌ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೆ ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದ. ಮಗು ಆದ … Read more

ಶಿವಮೊಗ್ಗದಲ್ಲಿ ಟೆಕ್‌ಝೋನ್‌ ನ್ಯಾಷನಲ್ಸ್‌, ಸಾವಿರ ಸಾವಿರ ವಿದ್ಯಾರ್ಥಿಗಳು ಭಾಗಿ, ಏನಿದು ಕಾರ್ಯಕ್ರಮ?

JNNCE-college-Engineering-Shimoga

ಶಿವಮೊಗ್ಗ: ನಗರದ ಜೆ.ಎನ್.ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನ.10 ಮತ್ತು 11 ರಂದು ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ‘ಟೆಕ್‌ಝೋನ್‌ ನ್ಯಾಷನಲ್ಸ್‌ 2025’ (tech zone) ಕಾರ್ಯಕ್ರಮ ಆಯೋಜಿಸಲಾಗಿದೆ. ನ.10ರ ಬೆಳಗ್ಗೆ 9.30 ಕ್ಕೆ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೊಸೂರಿನ ಅಧಿಯಮಾನ್‌ ಇಂಜಿನಿಯರಿಂಗ್‌ ಕಾಲೇಜಿನ ನಿರ್ದೇಶಕ ಹಾಗೂ ದಿ ಇನ್ಸ್ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ ಅಧ್ಯಕ್ಷ ಡಾ.ಜಿ.ರಂಗನಾಥ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್‌ ಅಧ್ಯಕ್ಷತೆ ವಹಿಸಲಿದ್ದು, ಸಹ ಕಾರ್ಯದರ್ಶಿ … Read more

ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ, ಇಬ್ಬರ ಬಂಧನ

Shikaripura-Town-Police-Station

ಶಿರಾಳಕೊಪ್ಪ: ಪಟ್ಟಣದ ಪೊಲೀಸರು ಮಟ್ಕಾ ಅಡ್ಡೆ ಮೇಲೆ ದಾಳಿ (Raid) ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಹೆಚ್‌.ಕೆ.ರಸ್ತೆಯ ಹಳೆ ಪೆಟ್ರೋಲ್ ಬಂಕ್ ಸರ್ಕಲ್ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನ ಸರ್ಕಲ್ ಪ್ರದೇಶದಲ್ಲಿ ಮಟ್ಕಾ ಬರೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ದಾಳಿ ನಡೆಸಲಾಗಿದೆ. ರಿಯಾಜ್ ಮತ್ತು ವೀರಭದ್ರಪ್ಪ ಎಂಬುವರನ್ನು ಸಬ್ ಇನ್ಸ್‌ಪೆಕ್ಟರ್ ಟಿ.ಬಿ.ಪ್ರಶಾಂತ್ ಕುಮಾ‌ರ್ ನೇತೃತ್ವದ ತಂಡ ಬಂಧಿಸಿದೆ. ಬಂಧಿತರಿಂದ ₹5,000 ನಗದು ಹಾಗೂ ಮಟ್ಕಾ ಬರವಣಿಗೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ  … Read more

ಬೆಂಕಿ ಅನಾಹುತ, ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲು

House-incident-at-anandapura-in-Sagara-taluk

ಆನಂದಪುರಂ: ಸಮೀಪದ ನ್ಯಾವಟ್ಟಿ ಗ್ರಾಮದ ಜಯಮ್ಮ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋದ ಘಟನೆ ನಡೆದಿದೆ. ಮನೆಯ (House) ಒಲೆಗೆ ಹಾಕಿದ್ದ ಬೆಂಕಿ ತಗುಲಿ ಈ ಘಟನೆ ನಡೆದಿದ್ದು ಸುಮಾರು ₹2 ಲಕ್ಷಕ್ಕು ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್ ಎಂ.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಉಮೇಶ್, ರಮಾನಂದ್, ರಹಮತುಲ್ಲಾ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ₹150 ಗಲಾಟೆ

ತೀರ್ಥಹಳ್ಳಿಯ ಮುಡುಬ, ತೂದುರು ಸೇರಿ ಹಲವೆಡೆ ಇಡೀ ದಿನ ಕರೆಂಟ್‌ ಇರಲ್ಲ, ಯಾವಾಗ? ಎಲ್ಲೆಲ್ಲಿ?

power cut mescom ELECTRICITY

ತೀರ್ಥಹಳ್ಳಿ: ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಅನುಷ್ಠಾನದ ಹಿನ್ನೆಲೆ ನ.11ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ (Power Cut). ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಮುಸ್ಲಿಂ ಪೇಟೆ, ನಿಡಗಳಲೆ, ಮುಡುಬ, 23ನೇ ಮೈಲಿಗಲ್ಲು, ಬಿದರಹಳ್ಳಿ, ಜಂಬುವಳ್ಳಿ, ಪುಟೋಡ್ಲು, ಕೆರೆಕೊಪ್ಪ, ಮಣಿವೆ, ಶೇಡ್ಗಾರ್, ಉಬ್ಬೂರು, ಆರ್ಕೋಡು ಸುತ್ತಲಿನ ಪ್ರದೇಶಗಳು, ಯಡೇಹಳ್ಳಿ ಕ್ರಾಸ್, ಯಡೇಹಳ್ಳಿ, ತೂದೂರು, ಜಾವಳ್ಳಿ, ಮೇಲಿನ ತೂದೂರು, ಬೇಗುವಳ್ಳಿ, ಮೂಡ್ಲು, ದೊಡ್ಡಮನೆ, ಗುತ್ತಿಯಡೇಹಳ್ಳಿ, ಹಳ್ಳಿಬೈಲು, … Read more

ಶಿವಮೊಗ್ಗದಲ್ಲಿ ಚಲಿಸುತ್ತಿದ್ದಲೇ ಪುಟಾಣಿ ರೈಲಿನಲ್ಲಿ ಬೆಂಕಿ, ದಟ್ಟ ಹೊಗೆ

Heavy-Smoke-in-Toy-train-at-Shimoga-Gandhi-Bazaar.

ಶಿವಮೊಗ್ಗ: ಚಲಿಸುತ್ತಿರುವಾಗಲೆ ಪುಟಾಣಿ ರೈಲಿನಲ್ಲಿ (Toy Train) ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ರೈಲು ಚಲಿಸುವಾಗಲೆ ಪೋಷಕರು ಮತ್ತು ಮಕ್ಕಳು ಆತಂಕದಿಂದ ಕೆಳಗೆ ಇಳಿದುಕೊಂಡಿದ್ದಾರೆ. ಗಾಂಧಿ ಪಾರ್ಕ್‌ನಲ್ಲಿರುವ ಪುಟಾಣಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರೈಲು ಚಲಿಸುವಾಗಲೆ ತಾಂತ್ರಿಕ ದೋಷದಿಂದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ರೈಲಿನಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳೊಂದಿಗೆ ಇದ್ದರು. ಹೊಗೆ ಆವರಿಸಿದ್ದರಿಂದ ಆತಂಕಗೊಂಡ ಪೋಷಕರು ತಮ್ಮ ಮಕ್ಕಳ ಸಹಿತ ಚಲಿಸುವ ರೈಲಿನಿಂದ ಕೆಳಗೆ ಇಳಿದಿದ್ದಾರೆ. ಬೆಂಕಿ ನಂದಿಸಿ ಕೆಲವು ಸಮಯದ ಬಳಿಕ … Read more

ವಿಷ ಸೇವಿಸಿ ಐದು ತಿಂಗಳ ಬಾಣಂತಿ ಆತ್ಮಹತ್ಯೆ

New-Mother-ramya-thirthahalli.

ತೀರ್ಥಹಳ್ಳಿ: ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಸಾಲುಕೊಪ್ಪ ಮಜರೆ ಗ್ರಾಮದ ಐದು ತಿಂಗಳ ಬಾಣಂತಿ (New Mother) ರಮ್ಯಾ (28) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಇವರು ಅಸ್ವಸ್ಥರಾಗಿದ್ದರು. ತಕ್ಷಣ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಬಾಳೆಹೊನ್ನೂರಿನವರಾದ ರಮ್ಯಾ ನಾಲ್ಕು ವರ್ಷಗಳ ಹಿಂದೆ ಅಕ್ಸಾಲುಕೊಪ್ಪದ ಮಣಿಕಂಠ ಎಂಬುವವರ ಜೊತೆ ವಿವಾಹವಾಗಿದ್ದರು. ಮೃತರಿಗೆ ಎರಡೂವರೆ ವರ್ಷದ ಹಾಗೂ ಐದು ತಿಂಗಳ ಗಂಡು ಮಕ್ಕಳಿವೆ. ಮಾಳೂರು ಠಾಣೆಯಲ್ಲಿ ಪ್ರಕರಣ … Read more

ಡಿಸಿ ಕಚೇರಿ ಮುಂದೆ PUC ಉಪನ್ಯಾಸಕ ಹೋರಾಟ, ಸಾಲು ಸಾಲು ಬೇಡಿಕೆ ಈಡೇರಿಕೆಗೆ ಆಗ್ರಹ

PUC-Lecturers-protest-in-Front-of-DC-Office

ಶಿವಮೊಗ್ಗ: ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಲ್ಲದ ಆದೇಶಗಳು ಸರ್ಕಾರದಿಂದ ಬರುತ್ತಿವೆ. ಇದರಿಂದ ಉಪನ್ಯಾಸಕರ ದೈನಂದಿನ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜೊತೆಗೆ ಅವರ ಆತ್ಮಸ್ಥೆರ್ಯ ಕುಗ್ಗಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ (Lecturers) ಸಂಘದಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ದೇಶದಲ್ಲಿ ಮಾದರಿಯಾಗಿದ್ದ ಪದವಿ ಪೂರ್ವ ಶಿಕ್ಷಣ ಈಗ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧವೇ ಇಲ್ಲದ ಡಯೆಟ್‌ನ ಪ್ರಶಿಕ್ಷಣಾರ್ಥಿಗಳನ್ನು ಪದವಿಪೂರ್ವ ಕಾಲೇಜುಗಳ ಸ್ಥಿತಿಗತಿಯ ದತ್ತಾಂಶ ಕ್ರೋಢೀಕರಿಸಲು ಕಳುಹಿಸಲಾಗುತ್ತಿದೆ. … Read more

ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ₹150 ಗಲಾಟೆ

Kote Police station building

ಶಿವಮೊಗ್ಗ: ₹150 ಹಣಕ್ಕಾಗಿ (Money) ಗುಜರಿ ಆಯುವವರ ಮಧ್ಯೆ ಗಲಾಟೆಯಾಗಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಇಬ್ಬರು ಬಡಿದಾಡಿಕೊಂಡಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರಿನ ಮಧುಸೂದನ ಗಾಯಗೊಂಡಿದ್ದಾರೆ. ರವಿನಾಯ್ಕ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ರವಿನಾಯ್ಕನು ಮಧುಸೂದನನಿಂದ ₹150 ಹಣ ಪಡೆದಿದ್ದ. ಆ ಹಣವನ್ನು ಹಿಂತಿರುಗಿಸುವಂತೆ ಮಧುಸೂದನ ಕೇಳಿದಾಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆ. ರವೀನಾಯ್ಕ ತನ್ನ ಬಳಿ ಇದ್ದ ದೊಣ್ಣೆಯಿಂದ ರಕ್ತ ಬರುವಂತೆ ಹೊಡೆದಿದ್ದಾನೆ ಎಂದು … Read more