ಮೈಸೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಉದ್ಯಮಿ ಕುಟುಂಬಕ್ಕೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕುಟುಂಬದವರೆಲ್ಲ ಮೈಸೂರಿನ ಚರ್ಚ್‌ಗೆ ತೆರಳಿದ್ದ ಸಂದರ್ಭ ಶಿವಮೊಗ್ಗದ ಕೀರ್ತಿನಗರದಲ್ಲಿರುವ ಮನೆಯಲ್ಲಿ ಕಳ್ಳತನವಾಗಿದೆ. ಕೊಠಡಿಯ ವಾರ್ಡ್‌ರೋಬ್‌ನಲ್ಲಿದ್ದ ಚಿನ್ನಾಭರಣ, ವಾಚುಗಳು, ಕ್ಯಾಮರಾಗಳು ಕಳುವಾಗಿವೆ (Theft) ಎಂದು ಆರೋಪಿಸಲಾಗಿದೆ. ಕೀರ್ತಿನಗರದಲ್ಲಿರುವ ಉದ್ಯಮಿ ಜೇಮ್ಸ್‌ ಸ್ಟೀವನ್‌, ಕುಟುಂಬ ಸಹಿತ ಮೈಸೂರಿನ ಡೋರನಹಳ್ಳಿಯ ಚರ್ಚ್‌ಗೆ ತೆರಳಿದ್ದರು. ಅಲ್ಲಿಂದ ವಾಪಾಸಾದಾಗ ಮನೆಯ ಗೇಟ್‌ ಮತ್ತು ಬಾಗಿಲಿನ ಬೀಗ ಮುರಿದಿರುವುದು ಗೊತ್ತಾಗಿದೆ. ಒಳಗೆ ಪರಿಶೀಲಿಸಿದಾಗ ವಾರ್ಡ್‌ ರೋಬ್‌ನಲ್ಲಿದ್ದ ₹45,000 ಮೌಲ್ಯದ 870 ಗ್ರಾಂನ ಬೆಳ್ಳಿ ವಸ್ತುಗಳು, ₹33,000 ಮೌಲ್ಯದ 7 ಗ್ರಾಂ ತೂಕದ ಚಿನ್ನದ ಬ್ರೇಸ್‌ಲೆಟ್‌, … Read more

ಇವತ್ತು ಇಡೀ ಕರ್ನಾಟಕಕ್ಕೆ ಅಲರ್ಟ್‌, ಶಿವಮೊಗ್ಗದಲ್ಲಿ ಹೇಗಿರುತ್ತೆ ವಾತಾವರಣ? – ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ರಾಜ್ಯದ್ಯಂತ ಇವತ್ತೂ ಮಳೆ ಅಲರ್ಟ್‌ ಮುಂದುವರೆದಿದೆ. ಕರಾವಳಿ ಭಾಗದ ಎರಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. (Weather) ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಜೋರು ಮಳೆಯಾಗಿದೆ. ಇವತ್ತು ಯಲ್ಲೋ ಅಲರ್ಟ್‌ ಇದ್ದು ಅಲ್ಲಲ್ಲಿ ಸಾಧಾರಣದಿಂದ ಜೋರು ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಇದ್ದು ಆ ಭಾಗಕ್ಕೆ ಹೊಂದಿಕೊಂಡಿರವ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಭಾರಿ ಮಳೆ … Read more

ಕವರ್‌ನಲ್ಲಿ ಪೆಟ್ರೋಲ್‌ ತಂದು ಅಂಗಡಿ ಮಾಲೀಕನ ಮೇಲೆ ಎಸೆದು ಬೆಂಕಿ ಹಚ್ಚಿ ಪರಾರಿಯಾದ ವ್ಯಕ್ತಿ

Police-Jeep-With-Light-New.

ಶಿವಮೊಗ್ಗ: ವೈಯಕ್ತಿಕ ದ್ವೇಷಕ್ಕೆ ಚಿಕನ್‌ ಅಂಗಡಿ ಮಾಲೀಕನ ಮೇಲೆ ಪೆಟ್ರೋಲ್‌ (petrol) ಎರಚಿ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಲಾಗಿದೆ. ಸೋಮಿನಕೊಪ್ಪ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಚಿಕನ್‌ ಅಂಗಡಿ ಮಾಲೀಕ ಜೀಶಾನ್‌ ಕಿವಿ, ಎಡಗೈಗೆ ಬೆಂಕಿಯಿಂದ ಸುಟ್ಟ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ಚಿಕನ್‌ ಅಂಗಡಿ ಬಳಿ ಬಂದಿದ್ದ ವಸೀಂ ಎಂಬಾತ ಜೀಶಾನ್‌ಗೆ ಅವಾಚ್ಯವಾಗಿ ನಿಂದಿಸಿದ್ದ. ಬಳಿಕ ಪ್ಲಾಸ್ಟಿಕ್‌ ಕವರ್‌ನಲ್ಲಿ ತಂದಿದ್ದ ಪೆಟ್ರೋಲ್‌ ಜೀಶಾನ್‌ ಮೈ ಮೇಲೆ ಎಸೆದು ಬೆಂಕಿ ಹಚ್ಚಿ ಓಡಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೆ ಸ್ಥಳೀಯರು … Read more

ಇಂದು ವಿಶಾಖ ನಕ್ಷತ್ರದ ದಿನ, ಶುಭ ಸಮಯ ಯಾವಾಗಿದೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಗುರುವಾರ, 23 ಅಕ್ಟೋಬರ್‌ 2025 – ದ್ವಿತೀಯ ಸೂರ್ಯೋದಯ : 6.20 am ಸೂರ್ಯಾಸ್ತ : 6.04 pm ನಕ್ಷತ್ರ : ವಿಶಾಖ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.42 ರಿಂದ 5.31ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.20ರವರೆಗೆ ಅಭಿಜಿತ್‌ ಬೆಳಗ್ಗೆ 11.48 ರಿಂದ 12.35ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.09 ರಿಂದ 2.56ರವರಗೆ ಗೋಧೂಳಿ ಮುಹೂರ್ತ ಸಂಜೆ 6.04 ರಿಂದ 6.28ರವರೆಗೆ ರಾಹು, … Read more

ಶಿವಮೊಗ್ಗ ಸಿಟಿಯ ಆರು ಕಡೆ ದೀಪಾವಳಿ ಗೋಪೂಜೆ, ಎಲ್ಲೆಲ್ಲಿ ನಡೆಯುತ್ತಿದೆ ಪೂಜೆ?

221025-Gow-Pooje-at-vinobanagara-shivalaya-in-shimoga.webp

ಶಿವಮೊಗ್ಗ: ದೀಪಾವಳಿ ಸಂದರ್ಭ ಮಲೆನಾಡು ಭಾಗದಲ್ಲಿ ಗೋಪೂಜೆ (Gow Pooje) ನೆರವೇರಿಸಲಾಗುತ್ತದೆ. ಶಿವಮೊಗ್ಗ ನಗರದಲ್ಲಿ ಇವತ್ತು ಗೋವರ್ಧನ ಟ್ರಸ್ಟ್‌ ವತಿಯಿಂದ ದೀಪಾವಳಿ ಗೋಪೂಜೆ ಆಯೋಜಿಸಲಾಗಿತ್ತು. ವಿನೋಬನಗರ ಶಿವಾಲಯದ ಆವರಣದಲ್ಲಿ ಯಡಿಯೂರಿನ ರಂಭಾಪುರಿ ಶಾಖಾಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗೋಪೂಜೆ ನೆರವೇರಿಸಲಾಯಿತು. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. ಗೋವುಗಳಿಗೆ ಪೂರ್ಣ ರಕ್ಷಣೆ, ಸಾಧು – ಸಂತರಿಗೆ ಪೂರ್ಣ ಭಕ್ತಿ, ದೇವರುಗಳಿಗೆ … Read more

ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೆ ಇವತ್ತು ಎಷ್ಟಿದೆ ಒಳಹರಿವು? ಇಲ್ಲಿದೆ ಡಿಟೇಲ್ಸ್

Tunga-Dam-Gajanuru.

ಜಲಾಶಯಗಳ ಸುದ್ದಿ: ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳು ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಜಿಲ್ಲೆಯ ಡ್ಯಾಮ್‌ಗಳಿಗೆ ಮತ್ತೆ ನೀರಿನ ಒಳ ಹರಿವು ಶುರುವಾಗಿದೆ. ಇವತ್ತು ಯಾವ್ಯಾವ ಡ್ಯಾಮ್‌ಗಳಲ್ಲಿ ಎಷ್ಟು ಒಳ ಹರಿವು ಇದೆ. ಇಲ್ಲಿದೆ ಡಿಟೇಲ್ಸ್‌. (Dam Level) ಲಿಂಗನಮಕ್ಕಿ ಜಲಾಶಯ: ಇವತ್ತು 6078 ಕ್ಯೂಸೆಕ್‌ ಒಳ ಹರಿವು ಇದೆ. ಜಲಾಶಯದ ನೀರಿನ ಮಟ್ಟ 1815.35 ಅಡಿ ಇದೆ. ಒಟ್ಟು 7177 ಕ್ಯೂಸೆಕ್‌ ಹೊರ ಹರಿವು ಇದೆ. ತುಂಗಾ ಜಲಾಶಯ: ಇವತ್ತು 5601 ಕ್ಯೂಸೆಕ್‌ ಒಳ ಹರಿವು … Read more

ಶಿವಮೊಗ್ಗ ಹಾಪ್‌ಕಾಮ್ಸ್‌ಗೆ 15 ನಿರ್ದೇಶಕರು ಅವಿರೋಧ ಆಯ್ಕೆ, ವಿಜಯ್‌ಕುಮಾರ್‌ ಹ್ಯಾಟ್ರಿಕ್‌ ಸಾಧನೆ

Shimoga-News-update

ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್‌ಕಾಮ್ಸ್) ನಿರ್ದೇಶಕರಾಗಿ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂತೇಕಡೂರು ವಿಜಯಕುಮಾರ್ ಸತತ ಮೂರನೇ ಬಾರಿಗೆ ಆಯ್ಕೆಯಾದರೆ, ಡಾ.ಶರತ್ ಮರಿಯಪ್ಪ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡರು. (Hopcoms) ಯಾರೆಲ್ಲ ಆಯ್ಕೆ ಆಗಿದ್ದಾರೆ? ಈ ಪೈಕಿ ಶಿವಮೊಗ್ಗ ತಾಲೂಕಿನಿಂದ ಆರು ಮಂದಿ ಆಯ್ಕೆಯಾಗಿದ್ದಾರೆ. ಸಂತೇಕಡೂರಿನ ಆರ್.ವಿಜಯಕುಮಾ‌ರ್ (ದನಿ), ಶಿವಮೊಗ್ಗ ತಾಲೂಕು ಕೈದೊಟ್ಟು ಕೆ.ಎಸ್.ಚಂದ್ರೇಗೌಡ, ಬಿ.ಬೀರನಹಳ್ಳಿಯ ಎಂ.ಪಿ.ದಿನೇಶ್ ಪಟೇಲ್, ಕುಂಚೇನಹಳ್ಳಿಯ ಕೆ.ಜಿ.ನಾಗೇಶ್ ನಾಯ್ಕ, ಶೆಟ್ಟಿಹಳ್ಳಿಯ ಪರಶುರಾಮಪ್ಪ, ಶಿವಮೊಗ್ಗ … Read more

ರಾತ್ರೋರಾತ್ರಿ ಒಡ್ಡಿಕೊಪ್ಪದ ಮನೆ ಬಾಗಿಲಿನ ಬೀಗ ಮುರಿದ ಕಳ್ಳರು

221025 House Theft at voddinakoppa 112 police visit the spot

ಶಿವಮೊಗ್ಗ: ದೀಪಾವಳಿ ಹಿನ್ನೆಲೆ ಮನೆಯಲ್ಲಿ ಯಾರೂ ಇಲ್ಲದಾಗ ಬಾಗಿಲಿನ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ (Theft) ಮಾಡಲಾಗಿದೆ. ಶಿವಮೊಗ್ಗದ ಒಡ್ಡಿನಕೊಪ್ಪ ಗ್ರಾಮದಲ್ಲಿ ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಯಶೋದಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬಾಗಿಲಿನ ಬೀಗ ಮುರಿದು ಬೀರುವಿನಲ್ಲಿದ್ದ ₹80,000 ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೀಪಾವಳಿ ಹಿನ್ನೆಲೆ ಯಶೋದಮ್ಮ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ವಿಷಯ ತಿಳಿದು ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ … Read more

ದೀಪಾವಳಿ ಸಂಭ್ರಮದ ಮಧ್ಯೆ ಮಲೆನಾಡಲ್ಲಿ ಮಳೆ ಅಬ್ಬರ – ಇಲ್ಲಿದೆ ಶಿವಮೊಗ್ಗದ ಇವತ್ತಿನ ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ದೀಪಾವಳಿ ಸಂಭ್ರಮದ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಿದೆ. ಮಂಗಳವಾರ ಜಿಲ್ಲೆಯಾದ್ಯಂತ ಮಳೆಯಾಗಿದೆ. ಕಳೆದ ರಾತ್ರಿ ಬಹು ಹೊತ್ತು ಮಳೆ ಸುರಿದಿದ್ದು, ಇವತ್ತೂ ವರ್ಷಧಾರೆಯ ನಿರೀಕ್ಷೆ ಇದೆ. (Weather) ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಉತ್ತರ ಒಳನಾಡು ಕೆಲವು ಜಿಲ್ಲೆಗಳಿಗೆ ಇವತ್ತು ಅಲರ್ಟ್‌ ಪ್ರಕಟಿಸಲಾಗಿದೆ. ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಪ್ರಕಟಿಸಿದೆ. ಈ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ … Read more

ದೀಪಾವಳಿ: ಶಿವಮೊಗ್ಗ, ತಾಳಗುಪ್ಪದಿಂದ ಮೆಜಸ್ಟಿಕ್‌, ಯಶವಂತಪುರ, ಕಂಟೋನ್ಮೆಂಟ್‌ಗೆ ವಿಶೇಷ ರೈಲುಗಳು

Electric-Locomotive-train-for-Shimoga

ರೈಲ್ವೆ ಸುದ್ದಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ನಿರೀಕ್ಷಿತ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆಯು ಯಶವಂತಪುರ– ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ (Express Trains) ರೈಲು, ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ನಡುವೆ ಹಾಗೂ ಬೆಂಗಳೂರು ಕಂಟೋನ್ಮಂಟ್ – ಶಿವಮೊಗ್ಗ ಟೌನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲುಗಳ ವಿವರಗಳು ಇಲ್ಲಿದೆ ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ವಿಶೇಷ ರೈಲು: ಅಕ್ಟೋಬರ್ 24 ರಂದು ರಾತ್ರಿ … Read more