ಶಿವಮೊಗ್ಗದ ಬಸ್‌ ನಿಲ್ದಾಣದಲ್ಲಿ ಯುವಕ ವಶಕ್ಕೆ, ಮೆಡಿಕಲ್‌ ಟೆಸ್ಟ್‌ ಬಳಿಕ ಅರೆಸ್ಟ್‌, ಕಾರಣವೇನು?

Shimoga-Private-Bus-Stand-Board

ಶಿವಮೊಗ್ಗ: ಖಾಸಗಿ ಬಸ್‌ ನಿಲ್ದಾಣದಲ್ಲಿ ಪೊಲೀಸರು ಅನುಮಾನದ ಮೇರೆಗೆ ಯುವಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಈ ಹಿನ್ನೆಲೆ ಯುವಕನನ್ನು ಬಂಧಿಸಲಾಗಿದೆ (Arrest). ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಪೊಲೀಸರು ಗಸ್ತು ಮಾಡುವಾಗ 3ನೇ ಪ್ಲಾಟ್‌ಫಾರಂನಲ್ಲಿ ದರ್ಶನ್‌ ಎಂಬಾತ ಅಮಲಿನಲ್ಲಿದ್ದಂತೆ ಕಾಣಿಸಿತು. ಆತನನ್ನು ವಶಕ್ಕೆ ಪಡೆದು ಮೆಗ್ಗಾನ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಈ ಹಿನ್ನೆಲೆ ದೊಡ್ಡಪೇಟೆ ಠಾಣೆ ಪೊಲೀಸರು … Read more

ಆನಂದಪುರದಲ್ಲಿ ಕಸ ವಿಲೇವಾರಿ ಘಟಕಕ್ಕೆ ಬೆಂಕಿ, ಧಗಧಗ ಹೊತ್ತಿ ಉರಿದ ಲಕ್ಷಾಂತರ ಮೌಲ್ಯದ ವಸ್ತುಗಳು

161025-anandapura-waste-management-unit.webp

ಆನಂದಪುರ: ಗ್ರಾಮ ಪಂಚಾಯಿತಿಯಿಂದ ಮಲಂದೂರು ಗ್ರಾಮದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ (Waste Management) ಘಟಕಕ್ಕೆ ಬೆಂಕಿ ತಗುಲಿ ಧಗ ಧಗಿಸಿ ಉರಿದಿದೆ. ಕಳೆದ ಒಂದೂವರೆ ವರ್ಷದಲ್ಲಿ ಮೂರನೇ ಬಾರಿ ಬೆಂಕಿಗೆ ಆಹುತಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು ಒಂದೂವರೆ ಲಕ ರುಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸಾಗರದಿಂದ ಅಗ್ನಿಶಾಮಕ ದಳವನ್ನು ಕರೆಸಿ ಬೆಂಕಿ ನಂದಿಸಲಾಯಿತು. ಪ್ಲಾಸ್ಟಿಕ್ ಮತ್ತು ರಬ್ಬರ್ ಕಸಕ್ಕೆ ಬೆಂಕಿ ತಗುಲಿದ ಕಾರಣ ಬಹುದೂರದವರೆಗೆ ಹೊಗೆ ವ್ಯಾಪಿಸಿತ್ತು. ಘಟಕದ ಸುತ್ತಮುತ್ತ ವಾಸಿಸುವ ಜನರು ಹೊಗೆಯ … Read more

ಶಿವಮೊಗ್ಗ KSRTC ಬಸ್‌ ನಿಲ್ದಾಣದಿಂದ ರಾತ್ರಿ ಹೊರ ಬಂದ ವಿದ್ಯಾರ್ಥಿಗೆ ಕಾದಿತ್ತು ಶಾಕ್‌, ಆಗಿದ್ದೇನು?

161025-shimoga-ksrtc-bus-stand-general-image.webp

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಒಳಗೆ ಹೋಗಿ ಬರುವಷ್ಟರಲ್ಲಿ ಸ್ಪ್ಲೆಂಡರ್‌ ಬೈಕ್‌ ಕಳ್ಳತನವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬ (Student) ದೂರು ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿಯ ಚಂದ್ರಾನಾಯ್ಕ್‌  ರಾತ್ರಿ 9.15ಕ್ಕೆ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಅನ್ನು ಅಶೋಕ ಲಾಡ್ಜ್‌ ಮುಂಭಾಗ ನಿಲ್ಲಿಸಿದ್ದರು. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಒಳಗೆ ಹೋಗಿ ರಾತ್ರಿ 10 ಗಂಟೆಗೆ ಹಿಂತಿರುಗಿದ್ದರು. ಈ ವೇಳೆ ಪಾರ್ಕಿಂಗ್‌ ಸ್ಥಳದಲ್ಲಿ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಶಿವಮೊಗ್ಗ ಜಿಲ್ಲೆಯ 19 ಶಾಲೆಗಳು KPS ಶಾಲೆಗಳಾಗಿ ಉನ್ನತೀಕರಣ, ಯಾವೆಲ್ಲ ಶಾಲೆ? ಇಲ್ಲಿದೆ ಲಿಸ್ಟ್‌

Minister-Madhu-Bangarappa-in-shimoga-press-trust

ಬೆಂಗಳೂರು: ರಾಜ್ಯಾದ್ಯಂತ 474 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ (KPS) ಉನ್ನತೀಕರಿಸಿ ಹೆಚ್ಚುವರಿ ಮೂಲಸೌಲಭ್ಯ ಒದಗಿಸಲು ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 19 ಶಾಲೆಗಳನ್ನು ಉನ್ನತೀಕರಿಸಿ ಕೆಪಿಎಸ್‌ ಶಾಲೆಗಳಾಗಿ ಪರಿವರ್ತಿಸಲಾಗುತ್ತದೆ. ಯಾವ್ಯಾವ ಶಾಲೆಗಳು? ಇಲ್ಲಿದೆ ಲಿಸ್ಟ್‌ ಭದ್ರಾವತಿ: ಅರಳಿಹಳ್ಳಿಯ ಸರ್ಕಾರಿ ಹೈಸ್ಕೂಲ್‌, ದೊಣಬಘಟ್ಟದ ಉರ್ದು ಸರ್ಕಾರಿ ಪಿಯು ಕಾಲೇಜು, ಹಳೆನಗರದ ಸಂಚಿಹೊನ್ನಮ್ಮ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಹೊಳೆಹೊನ್ನೂರು ಸರ್ಕಾರಿ ಪಿಯು ಕಾಲೇಜು. ಹೊಸನಗರ: ರಿಪ್ಪನ್‌ಪೇಟೆಯ ಸರ್ಕಾರಿ ಪಿಯು ಕಾಲೇಜು ಸಾಗರ: ಬ್ಯಾಕೋಡಿನ ಸರ್ಕಾರಿ … Read more

ಆಶ್ಲೇಷ ನಕ್ಷತ್ರದ ದಿನ, ರಾಹು, ಗುಳಿಕ, ಯಮಗಂಡ ಕಾಲ ಯಾವಾಗಿದೆ? – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಗುರುವಾರ, 16 ಅಕ್ಟೋಬರ್‌ 2025 – ದಶಮಿ ಸೂರ್ಯೋದಯ : 6.19 am ಸೂರ್ಯಾಸ್ತ : 6.08 pm ನಕ್ಷತ್ರ : ಆಶ್ಲೇಷ ರಾಹು, ಯಮಗಂಡ, ಗುಳಿಕ ಕಾಲ ರಾಹು ಕಾಲ ಮಧ್ಯಾಹ್ನ 1.30 ರಿಂದ 3ರವರೆಗೆ ಗುಳಿಕ ಕಾಲ ಬೆಳಗ್ಗೆ 9 ರಿಂದ 10.30ರವರೆಗೆ ಯಮಗಂಡ ಕಾಲ ಬೆಳಗ್ಗೆ 6 ರಿಂದ 7.30ರವರೆಗೆ ಇದನ್ನೂ ಓದಿ » ₹99,999ಕ್ಕೆ ತಲುಪಿದ ಅಡಿಕೆ ರೇಟ್‌ | 15 ಅಕ್ಟೋಬರ್‌ 2025 … Read more

₹99,999ಕ್ಕೆ ತಲುಪಿದ ಅಡಿಕೆ ರೇಟ್‌ | 15 ಅಕ್ಟೋಬರ್‌ 2025 | ಇವತ್ತಿನ ಅಡಿಕೆ ಧಾರಣೆ

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Areca Price). ಶಿವಮೊಗ್ಗ ಮಾರುಕಟ್ಟೆ ಗೊರಬಲು 19000 46199 ನ್ಯೂ ವೆರೈಟಿ 48566 66699 ಬೆಟ್ಟೆ 55572 77770 ರಾಶಿ 51509 66899 ಸರಕು 54099 99999 ಭದ್ರಾವತಿ ಮಾರುಕಟ್ಟೆ ಇತರೆ 27800 27800 ತೀರ್ಥಹಳ್ಳಿ ಮಾರುಕಟ್ಟೆ ಸಿಪ್ಪೆಗೋಟು 12000 12000 ಇದನ್ನೂ ಓದಿ » ಹಣಗೆರೆಯಿಂದ ಆಯನೂರಿಗೆ ಬಸ್ಸಿನಲ್ಲಿ ಪ್ರಯಾಣ, ಆಭರಣದ ಅಂಗಡಿಗೆ ತೆರಳಿದಾಗ ಮಹಿಳೆಗೆ ಕಾದಿತ್ತು ಆಘಾತ Areca Price

ಇಂದು ಅಭಿಜಿತ್‌ ಮುಹೂರ್ತವಿಲ್ಲ, ಬೆಳ್ಳಂಬೆಳಗ್ಗೆ ಯಮಗಂಡ ಕಾಲ – ದಿನ ಪಂಚಾಂಗ

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಬುಧವಾರ, 15 ಅಕ್ಟೋಬರ್‌ 2025 – ನವಮಿ ಸೂರ್ಯೋದಯ : 6.19 am ಸೂರ್ಯಾಸ್ತ : 6.08 pm ನಕ್ಷತ್ರ : ಪುಷ್ಯ » ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.19ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.12 ರಿಂದ 2.59ರವರಗೆ ಗೋಧೂಳಿ ಮುಹೂರ್ತ ಸಂಜೆ 6.08 ರಿಂದ 6.32ರವರೆಗೆ » ರಾಹು, ಯಮಗಂಡ, … Read more

ಹಣಗೆರೆಯಿಂದ ಆಯನೂರಿಗೆ ಬಸ್ಸಿನಲ್ಲಿ ಪ್ರಯಾಣ, ಆಭರಣದ ಅಂಗಡಿಗೆ ತೆರಳಿದಾಗ ಮಹಿಳೆಗೆ ಕಾದಿತ್ತು ಆಘಾತ

Ayanur Graphics

ಶಿವಮೊಗ್ಗ: ಹಣಗೆರೆಯಿಂದ ಆಯನೂರಿಗೆ ಖಾಸಗಿ ಬಸ್ಸಿನಲ್ಲಿ ತೆರಳುವಾಗ ಮಹಿಳೆಯ ಮಾಂಗಲ್ಯ (Mangalya) ಸರ ಕಳ್ಳತನವಾಗಿದೆ. ಚಿನ್ನದ ಅಂಗಡಿಗೆ ತೆರಳಿದಾಗಲೆ ಮಹಿಳೆಗೆ ತನ್ನ ಮಾಂಗಲ್ಯ ಸರ ಕಳುವಾಗಿರುವುದು ಗೊತ್ತಾಗಿದ್ದು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗಿರಿಜಾ ಎಂಬುವವರು ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಆಯನೂರಿನಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದು, ಇಲ್ಲಿನ ಗಣೇಶ ಜ್ಯೂವೆಲರಿ ಅಭರಣ ಮಳಿಗೆಗೆ ತೆರಳಿದ್ದರು. ಅಂಗಡಿಯವರು ಕೊರಳು ನೋಡಿ ಸರ ಇಲ್ಲವ ಎಂದು ಪ್ರಶ್ನಿಸಿದಾಗ ಗಿರಿಜಾ ಅವರಿಗೆ ತಮ್ಮ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. … Read more

ಶಿವಮೊಗ್ಗ ಸಿಟಿಯಲ್ಲಿ ರಾತ್ರೋರಾತ್ರಿ ಶ್ರೀಗಂಧದ ಮರ ನಾಪತ್ತೆ, ಬೈಕುಗಳಲ್ಲಿದ್ದ ಪೆಟ್ರೋಲ್‌ ಕಳವು

Sandalwood-theft-at-basavanagudi-officers-quarters

ಶಿವಮೊಗ್ಗ: ಅಧಿಕಾರಿಗಳ ಮನೆ ಪಕ್ಕದಲ್ಲಿದ್ದ ಶ್ರೀಗಂಧದ (Sandalwood) ಮರ ಕಡಿದು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಇದೇ ವೇಳೆ ಬೈಕುಗಳಲ್ಲಿ ಪೆಟ್ರೋಲ್‌ ಕೂಡ ಕಳುವಾಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗ ನಗರದ ಬಸವನಗುಡಿಯ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಕಾಂಪೌಂಡ್‌ನಲ್ಲಿದ್ದ ಎರಡು ಶ್ರೀಗಂಧದ ಮರಕ್ಕೆ ಕಳ್ಳರು ಕೊಡಲಿ ಹಾಕಿದ್ದಾರೆ. ಒಂದು ಮರವನ್ನು ಕದ್ದೊಯ್ದಿದ್ದು ಮತ್ತೊಂದು ಮರಕ್ಕೆ ಕೊಡಲಿ ಏಟು ಬಿದ್ದಿದೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಇದೆ. ಇದೆ ವೇಳೆ ವಸತಿ ಗೃಹದ ಬಳಿ ನಿಲ್ಲಿಸಿದ್ದ ಬೈಕುಗಳಲ್ಲಿ ಪೆಟ್ರೋಲ್‌ … Read more

BREAKING NEWS – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ, ಅಧಿಕಾರಿ ಮನೆಯಲ್ಲಿ ಪರಿಶೀಲನೆ

Lokayukta-Raid-in-shimoga-near-krushi-nagara

ಶಿವಮೊಗ್ಗ: ರಾಜ್ಯದ‌ ವಿವಿಧೆಡೆ 12 ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ (lokayukta raid) ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರ ಶಿವಮೊಗ್ಗದ ಮನೆ ಮೇಲು ದಾಳಿಯಾಗಿದೆ. ದಾವಣಗೆರೆಯ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಎಇಇ ಜಗದೀಶ್‌ ನಾಯ್ಕ್‌ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಸವಳಂಗ ರಸ್ತೆಯ ಶಿವಬಸವ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿರುವ ಅವರ ಮನೆ ಮೇಲು ದಾಳಿಯಾಗಿದೆ. ದಾವಣಗೆರೆಯಿಂದ … Read more