ಶಿವಮೊಗ್ಗ to ಬೆಂಗಳೂರು ಬೈಕ್‌ ರ‍್ಯಾಲಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಚಾಲನೆ, ಏನಿದು ರ‍್ಯಾಲಿ?

Shimoga-to-Bangalore-Bike-rally

ಶಿವಮೊಗ್ಗ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಬೈಕ್‌ ರ‍್ಯಾಲಿಗೆ ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬೆಂಗಳೂರಿನ ವಿಧಾನಸೌಧದವರೆಗೆ ರ‍್ಯಾಲಿ (Rally) ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲೇಶಪ್ಪ.ಡಿ, ಪತ್ರಾಂಕಿತ ವ್ಯವಸ್ಥಾಪಕರಾದ ಸೋಮಣ್ಣ, ಸಹಾಯಕ ನಿರ್ದೇಶಕ ಸುರೇಶ್ ಕೆ.ಎನ್, ಅನಿಲ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಕೊಟ್ರೇಶ್, ಸುರೇಶ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಬೈಕ್ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷ ಆ.ನಾ. ವಿಜಯೇಂದ್ರ … Read more

ಶಿವಮೊಗ್ಗದ ಮಾಚೇನಹಳ್ಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಶೀಘ್ರ ಕ್ಲಸ್ಟರ್‌ ಸ್ಥಾಪನೆಯ ಘೋಷಣೆ

Central-Minister-Shobha-Karandlaje-Visit-Machenahalli-Industrial-Area

ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕಾ ವಲಯಕ್ಕೆ (Industrial Area) ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇಂದು ಬೆಳಗ್ಗೆ ಭೇಟಿ ನೀಡಿದ್ದರು. ಕೈಗಾರಿಕೋದ್ಯಮಿಗಳು, ಕಾರ್ಮಿಕರ ಜೊತೆ ಮಾತನಾಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳು, ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಕೊಡೇಸ್‌ ಕಂಪನಿಯ ಜಮೀನು ಖಾಲಿ ಉಳಿದೆ. ಇದರ ಸದುಪಯೋಗಕ್ಕೆ ಗಮನ ಹರಿಸಬೇಕು ಪ್ರತಿ ವರ್ಷ ಏಳು ಲಕ್ಷ ಟನ್‌ ವೇಸ್ಟ್‌ ಸ್ಯಾಂಡ್‌ ಶುದ್ಧೀಕರ ಮಾಡಲಾಗುವುದು. ಇಲ್ಲಿ ಸ್ಕಿಲ್‌ … Read more

ಯುವನಿಧಿ ಯೋಜನೆ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌, ಈಗಲೇ ನೋಂದಣಿಗೆ ಸೂಚನೆ

Shimoga-News-update

ಶಿವಮೊಗ್ಗ: ಯುವನಿಧಿ (Yuva Nidhi) ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಶಿವಮೊಗ್ಗ ಜಿಲ್ಲೆಯ ಫಲಾನುಭವಿಗಳಿಗೆ ಯುವನಿಧಿ ಪ್ಲಸ್ ಯೋಜನೆಯಡಿ ಸರ್ಕಾರ ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ), ಜಿಟಿಟಿಸಿ, ಸಿಇಡಿಒಕೆ, ಕೆಎಸ್‌ ಡಿಸಿಯಿಂದ ಉಚಿತ ಕೌಶಲ್ಯಾಧಾರಿತ ತರಬೇತಿ ನೀಡುತ್ತಿದೆ. ಯುವನಿಧಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ರಾಜ್ಯ ಕೌಶಲಾಭಿವೃದ್ಧಿ ನಿಗಮದ ವೆಬ್ ಸೈಟ್ https:// www.kaushalkar.com/app/registration_verify ಬಳಸಿ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ಕೌಶಲ್ಕಾರ್ ಪೋರ್ಟಲ್‌ನಲ್ಲಿ ಯುವನಿಧಿ ಫಲಾನುಭವಿಗಳು ತರಬೇತಿ ಪಡೆದರೆ ನಿರುದ್ಯೋಗ ಭತ್ಯೆ ತಡೆಹಿಡಿಯಲಾಗುತ್ತದೆ ಎಂದು ಭಾವಿಸಿ ಕೌಶಲ್ಕಾರ್ ಪೋರ್ಟಲ್‌ನಲ್ಲಿ … Read more

ಶಿವಮೊಗ್ಗದ ಕೈಗಾರಿಕೆಗಳಿಗೆ ಪ್ರಶಸ್ತಿ, ಅತ್ಯುತ್ತಮ ಕಾರ್ಮಿಕರಿಗೆ ಗೌರವ, ವಿಜೇತರ ಪಟ್ಟಿ ಪ್ರಕಟ

Chamber-of-Commerce-Press-Meet-Gopinath

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ (Industries) ಸಂಘದಿಂದ ಸೆ.15ರಂದು ಬೆಳಗ್ಗೆ 10.30ಕ್ಕೆ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಎಂಜಿನಿರ‍್ಸ್ ಡೇ, ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ಹಾಗೂ ಟಿ.ವಿ.ನಾರಾಯಣ ಶಾಸ್ತ್ರಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರ ದೂರದೃಷ್ಟಿತ್ವದಿಂದ ಜಿಲ್ಲೆಯಲ್ಲಿ ಹಲವು ಸಣ್ಣ, ಮಧ್ಯಮ ಕೈಗಾರಿಕೆಗಳು ಪ್ರಾರಂಭವಾದವು. ಅದೇ ರೀತಿ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಶ್ರಮದಿಂದ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ಈ ಮೂಲಕ … Read more

15 ನಿಮಿಷದ ಬಳಿಕ ಗಾಂಧಿ ಪಾರ್ಕ್‌ ಗೇಟ್‌ ಬಳಿ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

crime name image

ಶಿವಮೊಗ್ಗ: ಡಿವಿಎಸ್‌ ಸರ್ಕಲ್‌ ಬಳಿ ಗಾಂಧಿ ಪಾರ್ಕ್‌ ಗೇಟ್‌ ಮುಂಭಾಗ ನಿಲ್ಲಿಸಿದ್ದ ಆರ್‌.ಎಕ್ಸ್‌..100 ಬೈಕ್‌ (Bike) ಕಳ್ಳತನವಾಗಿದೆ. ಬೈಕ್‌ ನಿಲ್ಲಿಸಿ 15 ನಿಮಿಷದೊಳಗೆ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಜೇಂದ್ರನಗರದ ರಾಜೇಶ್‌ ಎಂಬುವವರು ಸೆ.10ರ ಸಂಜೆ 7.30ರ ಹೊತ್ತಿಗೆ ತಮ್ಮ ಆರ್‌.ಎಕ್ಸ್‌.100 ಬೈಕ್‌ ನಿಲ್ಲಿಸಿ ತೆರಳಿದ್ದರು. ಸಂಜೆ 7.45ರ ಹೊತ್ತಿಗೆ ಅಲ್ಲಿಗೆ ಬಂದಾಗ ಬೈಕ್‌ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ » ಹೊಸನಗರದಲ್ಲಿ ಉಕ್ಕಡ ಮಗುಚಿ … Read more

ಶಿವಮೊಗ್ಗದಲ್ಲಿ ಇವತ್ತು ತೇಜಸ್ವಿನಿ ರಂಗಪ್ರವೇಶ, ಎಲ್ಲಿ? ಎಷ್ಟೊತ್ತಿಗೆ ಕಾರ್ಯಕ್ರಮ?

Natanam-Balya-Natya-kendra-tejaswini-Bharatanatyam.

ಶಿವಮೊಗ್ಗ: ನಗರದ ನಟನಂ ಬಾಲ ನಾಟ್ಯ ಕೇಂದ್ರದ ವಿದ್ಯಾರ್ಥಿನಿ ಎನ್.ಪಿ.ತೇಜಸ್ವಿನಿ ಅವರ ಭರತನಾಟ್ಯ (Bharatanatyam) ರಂಗಪ್ರವೇಶ ಕಾರ್ಯಕ್ರಮವನ್ನು ಸೆ.14ರಂದು ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ. ಎಸ್.ಕೇಶವಕುಮಾರ್ ಪಿಳ್ಳೈ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಂಗಪ್ರವೇಶ ನಮ್ಮ ಕೇಂದ್ರದ 22ನೇ ರಂಗ ಪ್ರವೇಶ ಕಾರ್ಯಕ್ರಮವಾಗಿದೆ. ತೇಜಸ್ವಿನಿ ಎರಡನೆ ತರಗತಿಯಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರೂ ಆಗಿದ್ದಾರೆ ಎಂದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ … Read more

ಶಿವಮೊಗ್ಗದ ಲೇಡಿ ಡಾಕ್ಟರ್‌ ವಾಟ್ಸಪ್‌ನಿಂದ ಬಂತು ಮೆಸೇಜ್‌, ನಂಬಿದ ವೈದ್ಯನಿಗೆ ನಂತರ ಕಾದಿತ್ತು ಶಾಕ್, ಏನಿದು ಕೇಸ್?

whatsapp-general-image

ಶಿವಮೊಗ್ಗ: ವೈದ್ಯೆಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ವೈದ್ಯರೊಬ್ಬರ ಮೊಬೈಲ್‌ಗೆ ಮೆಸೇಜ್‌ ಕಳುಹಿಸಿ ₹95,000 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ವೈದ್ಯೆಯೊಬ್ಬರ (ಹೆಸರು ಗೌಪ್ಯ) ವಾಟ್ಸಪ್‌ ನಂಬರ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಹಣದ ತುರ್ತು ಅಗತ್ಯವಿದೆ ಎಂದು ಸಹೋದ್ಯೋಗಿಗೆ ಮೆಸೇಜ್‌ ಕಳುಹಿಸಿದ್ದರು. ಅದನ್ನು ನಂಬಿದ ಸಹೋದ್ಯೋಗಿ ಆ ವಾಟ್ಸಪ್‌ ಮೆಸೇಜ್‌ನಲ್ಲಿ ಕಳುಹಿಸಲಾಗಿದ್ದ ಮತ್ತೊಂದು ಮೊಬೈಲ್‌ ನಂಬರ್‌ಗೆ ಫೋನ್‌ ಪೇ ಮೂಲಕ ಎರಡು ಬಾರಿ … Read more

ಶುಭೋದಯ ಶಿವಮೊಗ್ಗ | 14 ಸೆಪ್ಟೆಂಬರ್ 2025 | ಅಜೀಂ ಪ್ರೇಮ್‌ಜೀ ಉದಾಹರಣೆ ಸಹಿತ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಆ ಯುವಕ 21 ವರ್ಷದವರಿದ್ದಾಗ ತಂದೆ ಇಹಲೋಕ ತ್ಯಜಿಸಿದರು. ಬದುಕು ಬೆಳಕಿಲ್ಲದ ದಾರಿಯಂತಾಯಿತು. ತಂದೆ ನಡೆಸುತ್ತಿದ್ದ ಅಡುಗೆ ಎಣ್ಣೆ ಮತ್ತು ಸೋಪ್‌ ಉತ್ಪಾದನೆ ಉದ್ಯಮವನ್ನೇ ಯುವಕ ಮುಂದುವರೆಸಿದರು. ಒಮ್ಮೆ ಅವರ ದೃಷ್ಟಿ ಬೇರೊಂದು ಉದ್ಯಮದತ್ತ ಹರಿಯಿತು. ಐಟಿ ಉದ್ಯಮದ ಕನಸು ಕಟ್ಟಿಕೊಂಡರು. ಇವತ್ತು ವಿಪ್ರೋ ಎಂಬ ಸಂಸ್ಥೆ ಭಾರತದ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಆ ಸಂಸ್ಥೆಯ ಸ್ಥಾಪಕ ಅಜೀಂ ಪ್ರೇಮ್‌ಜೀ. ತಂದೆಯ ಉದ್ಯಮಕ್ಕಷ್ಟೆ ಸೀಮಿತವಾಗದೆ … Read more

ದಿನ ಪಂಚಾಂಗ | 14 ಸೆಪ್ಟೆಂಬರ್ 2025 | ಇವತ್ತು ಅಷ್ಟಮಿ, ರೋಹಿಣಿ ನಕ್ಷತ್ರದ ದಿನ, ರಾಹುಕಾಲ ಯಾವಾಗಿರುತ್ತೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಭಾನುವಾರ, 13 ಸೆಪ್ಟೆಂಬರ್ 2025‌ – ಅಷ್ಟಮಿ ಸೂರ್ಯೋದಯ : 6.16 am ಸೂರ್ಯಾಸ್ತ : 6.31 pm ನಕ್ಷತ್ರ : ರೋಹಿಣಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.42 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.17ರವರೆಗೆ ಅಭಿಜಿತ್‌ ಮಧ್ಯಾಹ್ನ 11.59 ರಿಂದ 12.48ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.25 ರಿಂದ 3.14ರವರಗೆ ಗೋಧೂಳಿ ಮುಹೂರ್ತ ಸಂಜೆ 6.30 ರಿಂದ 6.53ರವರೆಗೆ … Read more

ಶಿವಮೊಗ್ಗ, ತೀರ್ಥಹಳ್ಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರವಾಸ, ಎಲ್ಲೆಲ್ಲಿಗೆ ತೆರಳಲಿದ್ದಾರೆ?

Shobha-Karandlaje-general-Image

ಶಿವಮೊಗ್ಗ: ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ (Minister) ಶೋಭಾ ಕರಂದ್ಲಾಜೆ ಸೆ.14ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸ್ಥಳೀಯ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ. ಎಲ್ಲೆಲ್ಲಿಗೆ ತೆರಳಲಿದ್ದಾರೆ ಮಿನಿಸ್ಟರ್‌? ಸೆ.14ರಂದು ಬೆಳಗ್ಗೆ 9.35ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 10.45ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ತಲುಪಲಿದ್ದಾರೆ. ಬೆಳಗ್ಗೆ 11.30ಕ್ಕೆ ಸಾಗರ ರಸ್ತೆಯ ಪಿಇಎಸ್‌ಐಟಿ ಕಾಲೇಜಿನ ಪ್ರರೇಣಾ ಸಭಾಂಗಣದಲ್ಲಿ ಇಂಜಿನಿಯರಿಂಗ್‌ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕೆ ಇಎಸ್‌ಐ ಅಸ್ಪತ್ರೆ … Read more