ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಾಲಕ, ಬಾಲಕಿ ರಕ್ಷಣೆ, ಏನಿದು ಕೇಸ್‌?

railway-police-rescue-minors.

ಶಿವಮೊಗ್ಗ: ರೈಲ್ವೆ (RAILWAY) ನಿಲ್ದಾಣದಲ್ಲಿ ಇಬ್ಬರು ಅಪ್ರಾಪ್ತರನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ನಿಲ್ದಾಣದ 2ನೇ ಪ್ಲಾಟ್‌ಫಾರಂನಲ್ಲಿ 16 ವರ್ಷದ ಬಾಲಕ ಮತ್ತು 17 ವರ್ಷದ ಬಾಲಕಿ ಸುತ್ತಾಡುತ್ತಿದ್ದರು. ಅನುಮಾನದ ಮೇರೆಗೆ ಪ್ರಶ್ನಿಸಿದಾಗ ಇಬ್ಬರು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರು ಅಪ್ರಾಪ್ತರನ್ನು ಕೊನೆಗೆ ಮಕ್ಕಳ ರಕ್ಷಣಾ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇದನ್ನು ಓದಿ » ಸಹ್ಯಾದ್ರಿ ಕಾಲೇಜಿನಲ್ಲಿ ಇಂದಿನಿಂದ ಎರಡು ದಿನ ಕಾರ್ಯಾಗಾರ RAILWAY STATION

ಸಹ್ಯಾದ್ರಿ ಕಾಲೇಜಿನಲ್ಲಿ ಇಂದಿನಿಂದ ಎರಡು ದಿನ ಕಾರ್ಯಾಗಾರ

sahyadri-college-general-image

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಸೆ. 9 ಮತ್ತು 10 ರಂದು ಬೆಳಿಗ್ಗೆ 10.30ಕ್ಕೆ ಎನ್ಎಸ್ಎಸ್ ಸ್ವಯಂ ಸೇವಕರಿಗೆ ಎರಡು ದಿನ ವಿಶ್ವವಿದ್ಯಾಲಯ ಮಟ್ಟದ ‘ನಾಯಕತ್ವ ತರಬೇತಿ ಕಾರ್ಯಾಗಾರ’ (Leadership training) ಹಮ್ಮಿಕೊಳ್ಳಲಾಗಿದೆ.  ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ.ಎಲ್. ಮಂಜುನಾಥ ಕಾರ್ಯಾಗಾರ ಉದ್ಘಾಟಿಸುವರು. ಪ್ರಾಚಾರ್ಯ ಪ್ರೊ.ಟಿ. ಅವಿನಾಶ್ ಅಧ್ಯಕ್ಷತೆ ವಹಿಸುವರು. ರಾಜ್ಯ ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮ ನಿರ್ದೇಶಕ ಪ್ರೊ.ಜಿ.ಬಿ. ಶಿವರಾಜ ಅವರು ಆಶಯ ಭಾಷಣ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಹೆಚ್ಚಳ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಇದರ ಬೆನ್ನಿಗೆ ಚಳಿ ಹೆಚ್ಚಾಗಿದೆ. ಆದರೆ ಬೆಳಗಿನ ಅವಧಿಯಲ್ಲಿ ಬಿಸಿಲು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. (Weather) ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ … Read more

17 ಗಂಟೆಯ ಅದ್ಧೂರಿ ಮೆರವಣಿಗೆ ಬಳಿಕ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನೆ

Hindu-Mahasabha-Ganesh-Visarjane.

ಶಿವಮೊಗ್ಗ: ಸತತ 17 ಗಂಟೆಯ ಮೆರವಣಿಗೆ ಬಳಿಕ ತುಂಗಾ ನದಿಯಲ್ಲಿ ಹಿಂದೂ ಮಹಾಸಭಾ ಗಣಪತಿ (Ganesh) ವಿಸರ್ಜನೆ ಮಾಡಲಾಯಿತು. ಸೆ.7ರ ಬೆಳಗಿನ ಜಾವ 3.50ರ ಹೊತ್ತಿಗೆ ವಿಸರ್ಜನೆ ಕಾರ್ಯ ಪೂರ್ಣಗೊಂಡಿದೆ. ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಪಕ್ಕದ ತುಂಗಾ ನದಿಯ ಭೀಮನ ಮಡುವಿನಲ್ಲಿ ಬೆಳಗಿನ ಜಾವ 3.50ರ ಹೊತ್ತಿಗೆ ವಿಸರ್ಜನೆ ಮಾಡಲಾಯಿತು. ಹಿಂದೂ ಸಂಘಟನೆಗಳ ಮಹಾಮಂಡಳದ ಪ್ರಮುಖರು, ಭಕ್ತರು ಈ ಸಂದರ್ಭ ಇದ್ದರು. ಇಡೀ ದಿನ ಹೇಗಿತ್ತು ಮೆರವಣಿಗೆ? ಸೆ.6ರ ಬೆಳಗ್ಗೆ 11 ಗಂಟೆಗೆ ಕೋಟೆ ಶ್ರೀ … Read more

ಎ.ಎ. ಸರ್ಕಲ್‌ನಲ್ಲಿ ಪಟಾಕಿ ಅಬ್ಬರ, ಹೇಗಿತ್ತು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ರಿಪೋರ್ಟ್‌

Crackers-near-City-Center-Mall-in-Shimoga-Hindu-mahasabha.

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ (Ganesh) ಮೆರವಣಿಗೆಯು ನಗರದ ಅಮೀರ್‌ ಅಹಮದ್‌ ಸರ್ಕಲ್‌ಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಲಾಯಿತು. ಸುಮಾರು ಅರ್ಧ ಗಂಟೆ ನಿರಂತರವಾಗಿ ಪಟಾಕಿ ಸಿಡಿಸಿದರು. ಇದರಿಂದ ಕೆಲಕಾಲ ಸರ್ಕಲ್‌ನಲ್ಲಿ ದಟ್ಟ ಹೊಗೆ ಆವರಿಸಿತ್ತು. ಪಟಾಕಿಯ ಮಧ್ಯದಲ್ಲೇ ಕೆಲವು ಧ್ವಜಗಳನ್ನು ತಿರುಗಿಸುತ್ತ ಡಾನ್ಸ್‌ ಮಾಡಿ ಸಂಭ್ರಮಿಸಿದರು. ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಆಗಾಗ ನೂಕಾಟ ತಳ್ಳಾಟವಾಯಿತು. ಇನ್ನು, ಸರ್ಕಲ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಇಲ್ಲಿದೆ ಫೋಟೊ ವಿವರ. ಇದನ್ನೂ ಓದಿ » ಶಿವಮೊಗ್ಗ ಜೈಲಿಗೆ ತಡರಾತ್ರಿ ಧರ್ಮಸ್ಥಳದ … Read more

ಬಿಪಿಎಲ್‌ ಕುಟುಂಬಗಳಿಗೆ ಅನ್ಯಾಯ, ಕೂಡಲೆ ಕಾರ್ಡ್‌ ವಿತರಣೆಗೆ ಆಗ್ರಹ

Kalluru-Megharaj-Press-meet

ಶಿವಮೊಗ್ಗ : ಬಿಪಿಎಲ್ ಕಾರ್ಡ್‌ (BPL Card) ಪಡೆಯಲು ಈಗಾಗಲೇ ಸಲ್ಲಿಕೆಯಾದ ಅರ್ಜಿಗಳ ಪರಿಷ್ಕರಣೆ ಮಾಡಿಸಿ ಕೂಡಲೇ ಹೊಸ ಕಾರ್ಡ್ ವಿತರಿಸುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಲ್ಲೂರು ಮೇಘರಾಜ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲ್ಲೂರು ಮೇಘರಾಜ್‌, ಹೊಸ ಬಿಪಿಎಲ್ ಕಾರ್ಡ್‌ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಬೇಕು. ಬಿಪಿಎಲ್ ಕುಟುಂಬಗಳಿಗೆ ರಾಜ್ಯದ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್, ಅಲ್ಟ್ರಾಸೌಂಡ್‌ ಹಾಗೂ ಅಂಗಾಂಗ ಕಸಿ ಸೌಲಭ್ಯಗಳನ್ನು … Read more

ಶಿವಮೊಗ್ಗದಲ್ಲಿ ತುಸು ಹೆಚ್ಚಲಿದೆ ತಾಪಮಾನ, ಇವತ್ತೂ ಸುರಿಯುತ್ತಾ ಮಳೆ? ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಇದೇ ರೀತಿ ಇಂದೂ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರ ಹೊರತು ಹವಾಮಾನ ಇಲಾಖೆ ಇಂದು ಯಾವುದೇ ಅಲರ್ಟ್‌ ಪ್ರಕಟಿಸಿಲ್ಲ. (Weather Report) ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಸಾಗರ, … Read more

ಶುಭೋದಯ ಶಿವಮೊಗ್ಗ | 6 ಸೆಪ್ಟೆಂಬರ್ 2025 | ಭಗೀರಥ ಪ್ರಯತ್ನದ ಬಗ್ಗೆ ಗೊತ್ತಾ? ಇಲ್ಲಿದೆ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಸೂರ್ಯವಂಶದ ಸಗರ ಮಹಾರಾಜನ 60 ಸಾವಿರ ಮಕ್ಕಳು ಕಪಿನ ಮಹರ್ಷಿಯ ಕೋಪಕ್ಕೆ ಭಸ್ಮವಾಗಿದ್ದರು. ಇವರಿಗೆ ಮೋಕ್ಷ ದೊರೆಯಬೇಕಿದ್ದರೆ ಸ್ವರ್ಗದಿಂದ ಗಂಗೆಯನ್ನು ಧರೆಗಿಳಿಸಬೇಕಿತ್ತು. ಇದಕ್ಕಾಗಿ ಭಗೀರಥನು ಕಠಿಣ ಪರಿಶ್ರಮ ಪಟ್ಟನು. ಮೊದಲು ಬ್ರಹ್ಮನನ್ನು ಪ್ರಸನ್ನಗೊಳಿಸಿದನು. ನಂತರ ಶಿವನಿಗೆ ಪ್ರಾರ್ಥನೆ ಸಲ್ಲಿಸಿದನು. ಗಂಗೆಯನ್ನು ಭೂಮಿಗೆ ಬರಲು ಒಪ್ಪಿಸಿದನು. ಪ್ರವಾಹ ನಿಯಂತ್ರಿಸಲು ಶಿವನು ಜಟೆಯಲ್ಲಿ ಹಿಡಿದನು. ಕೊನೆಗೆ ಭಗೀರಥನೆ ಗಂಗೆಗೆ ಸಮುದ್ರದ ದಾರಿ ತೋರಿಸಿದನು. ಕಠಿಣ ಪರಿಶ್ರಮ, ನಿರಂತರ … Read more

ದಿನ ಪಂಚಾಂಗ | 6 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?

Indina-Panchanga-today Panchanga

ಈ ದಿನದ ಪಂಚಾಂಗ (Panchanga Online) ವಾರ : ಶನಿವಾರ, 5 ಸೆಪ್ಟೆಂಬರ್ 2025‌ – ಚತುರ್ದಶಿ ಸೂರ್ಯೋದಯ : 6.16 am ಸೂರ್ಯಾಸ್ತ : 6.36 pm ನಕ್ಷತ್ರ : ಧನಿಷ್ಠ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.30ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ ಮಧ್ಯಾಹ್ನ 12.01 ರಿಂದ 12.51ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.29 ರಿಂದ 3.18ರವರಗೆ ಗೋಧೂಳಿ ಮುಹೂರ್ತ ಸಂಜೆ 6.36 ರಿಂದ 6.59ರವರೆಗೆ … Read more

ವ್ಯಕ್ತಿಯನ್ನು ಮನೆಯೊಳಗೆ ಕೂಡಿ ಹಾಕಿ ಫೈನಾನ್ಸ್‌ ಸಿಬ್ಬಂದಿಯಿಂದ ಜೀವ ಬೆದರಿಕೆ

soraba-News-Update

ಸೊರಬ: ಸಾಲದ ಕಂತು ಕಟ್ಟದ್ದಕ್ಕೆ ವ್ಯಕ್ತಿಯೊಬ್ಬರನ್ನು ಮನೆಯೊಳಗೆ ಕೂಡಿ ಹಾಕಿದ ಫೈನಾನ್ಸ್‌ (finance) ಸಂಸ್ಥೆಯ ಸಿಬ್ಬಂದಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಸೊರಬ ತಾಲೂಕು ಆನವಟ್ಟಿಯ ಜೆ.ಸಿ. ಬಡಾವಣೆಯ ಮಂಜುನಾಥ್‌ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಮಂಜುನಾಥ ಅವರ ತಾಯಿ ಫೈನಾನ್ಸ್‌ ಸಂಸ್ಥೆಯಿಂದ ₹11 ಲಕ್ಷ ಗೃಹ ಸಾಲ ಪಡೆದಿದ್ದರು. ಒಂದು ವರ್ಷದ ಹಿಂದೆ ಅವರ ತಾಯಿ ತೀರಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈಚೆಗೆ ಮನೆ ಬಳಿಗೆ ಬಂದ ಫೈನಾನ್ಸ್‌ ಸಂಸ್ಥೆಯ ಸಿಬ್ಬಂದಿ, ಮಂಜುನಾಥ … Read more