ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮಳೆ ಸಾಧ್ಯತೆ, ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

WEATHER-REPORT-SHIMOGA-

ಹವಾಮಾನ ವರದಿ: ಕಳೆದ ಎರಡು ದಿನದಿಂದ ಶಿವಮೊಗ್ಗದಲ್ಲಿ ಹೆಚ್ಚಳವಾಗಿದ್ದ ತಾಪಮಾನ (Weather) ಮತ್ತೆ ಸ್ವಲ್ಪ ಕುಸಿತ ಕಂಡಿದೆ. ಇದರಿಂದ ಶಿವಮೊಗ್ಗದಲ್ಲಿ ಪುನಃ ಥಂಡಿ (Colder) ವಾತಾವರಣ ನಿರ್ಮಾಣವಾಗಿದೆ. ಇವತ್ತು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗುವ (Patchy Rain) ಮುನ್ಸೂಚನೆ ಇದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿನಿಮಾ ನಿರ್ದೇಶಕ ನಿಧನ, ಆಸ್ಪತ್ರೆಗೆ ದೌಡಾಯಿಸಿದ ನಟ ಸಂಜು ಬಸಯ್ಯ ಜಿಲ್ಲೆಯಲ್ಲಿ ಮತ್ತೆ ಚಳಿ ಹೆಚ್ಚಾಗಿದೆ. ನಿನ್ನೆ ಸಂಜೆಯಿಂದಲೆ ವಾತಾವರಣ ತಂಪೇರುತ್ತು. ಇವತ್ತೂ ಇದೇ ರೀತಿ ವಾತಾವರಣ ಇರುವ ಸಾಧ್ಯತೆ ಇದೆ. … Read more

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು, ಏನೇನಿದೆ ಕಂಪ್ಲೇಂಟ್‌ನಲ್ಲಿ?

SDPI-workers-memorandum-against-Mc-Gann-Hospital-staff

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಅವ್ಯವಸ್ಥೆ ಮಿತಿಮೀರಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಜೀಲಾನ್ ಖಾನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ನವೆಂಬರ್‌ 28ರಂದು ನೂರ್ ಅಫ್‌ಶಾ ಎಂಬ ಬಾಣಂತಿ ಸಾವಿಗೀಡಾಗಿದ್ದಾರೆ. ಆಕೆಯ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಎಸ್‌ಡಿಪಿಐ ಕಾರ್ಯಕರ್ತರು ಆಗ್ರಹಿಸಿದರು. ‘ಲಂಚ ಕೊಟ್ಟರಷ್ಟೆ ಮಗು ಕೊಡ್ತಾರೆʼ ಮೆಗ್ಗಾನ್‌ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಹೆಣ್ಣು … Read more

ಶಿವಮೊಗ್ಗದಲ್ಲಿ ಬಲೆ ಹಾಕಿ ಬೀದಿ ನಾಯಿ ಹಿಡಿದು ಕ್ರೂರವಾಗಿ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್‌

Attack-on-Street-dog-at-gopala-in-Shimoga

ಶಿವಮೊಗ್ಗ: ಬೀದಿ ನಾಯಿಗೆ ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯ ಸೂರಜ್.ಎಸ್ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಲ್ಲಿ ಆಗಿದ್ದು? ಹೇಗಾಯ್ತು ಘಟನೆ? ಹಂದಿ ಹಿಡಿಯುವ ಗುಂಪೊಂದು ಬೀದಿ ನಾಯಿಯೊಂದನ್ನು ಬಲೆಯಲ್ಲಿ ಸೆರೆಹಿಡಿದು ದೊಣ್ಣೆಯಿಂದ ಹೊಡೆದು ಸಾಯಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 28ರ ಬೆಳಗ್ಗೆ 8.16ಕ್ಕೆ ಶಿವಮೊಗ್ಗದ ಗೋಪಾಳ ಪೊಲೀಸ್ ಲೇಔಟ್‌ನ ವೃದ್ಧಾಶ್ರಮದ ಎದುರು ನಡೆದಿದೆ ಎಂದು … Read more

ರಿಪ್ಪನ್‌ಪೇಟೆ ಸೇರಿ ವಿವಿಧೆಡೆ ಡಿ.3ರಂದು ಇಡೀ ದಿನ ಕರೆಂಟ್‌ ಇರಲ್ಲ

POWER-CUT-UPDATE-NEWs ELECTRICITY

ರಿಪ್ಪನ್‌ಪೇಟೆ: ಹೊಸನಗರ ಉಪವಿಭಾಗದ ರಿಪ್ಪನ್‌ಪೇಟೆ ಮೆಸ್ಕಾಂ ಶಾಖೆ ವ್ಯಾಪ್ತಿಯಲ್ಲಿ ಡಿ.3ರಂದು ಬೆಳಗ್ಗೆ 9.30ರಿಂದ ಸಂಜೆ 6 ರವರೆಗೆ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ರಿಪ್ಪನ್‌ಪೇಟೆ, ಹೆದ್ದಾರಿಪುರ, ಕೆಂಚನಾಲ, ಗರ್ತಿಕೆರೆ, ಬಾಳೂರು, ಬೆಳ್ಳೂರು, ಅರಸಾಳು, ಕೋಡೂರು, ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶ ಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ತಿಳಿಸಿದೆ. ಇದನ್ನೂ ಓದಿ » ಕೋಣಂದೂರು ಬಳಿ ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಮಂಗಳೂರು ವಲಯ ಮಟ್ಟದ ಯುವಜನೋತ್ಸವ, ಶಿವಮೊಗ್ಗದ ಕಾಲೇಜು ಚಾಂಪಿಯನ್‌

Shimoga-SBR-Law-students-became-champions-at-mangalore

ಶಿವಮೊಗ್ಗ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನ ರಾವ್ ಕಾನೂನು ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ಮಂಗಳೂರು ವಲಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಸಿ.ಬಿ.ಆರ್ ಕಾನೂನು ಕಾಲೇಜು ವಿದ್ಯಾರ್ಥಿಗಳ ತಂಡ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದರು. ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಹಾಗೂ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ ರನ್ನರ್ ಅಪ್ ಆಗಿ ಬಹುಮಾನ ಪಡೆದರು. ಎರಡು ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ 10 ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು.  … Read more

ಶಿವಮೊಗ್ಗದ ಸುಗುಣಾ ಸತೀಶ್‌ಗೆ ಅಪರ್ಣ ನಿರೂಪಣಾ ರತ್ನ ಪ್ರಶಸ್ತಿ

award-for-anchor-suguna-satish

ಶಿವಮೊಗ್ಗ: ದೂರದರ್ಶನ ಚಂದನ ಮತ್ತು ಆಕಾಶವಾಣಿಯ ವಾರ್ತಾ ವಾಚಕಿ ಹಾಗೂ ನಿರೂಪಕಿ ಸುಗುಣಾ ಸತೀಶ್ ಅವರಿಗೆ ‘ಅಪರ್ಣ ನಿರೂಪಣಾ ರತ್ನ’ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನ 2025 ರಲ್ಲಿ ಸೂರ್ಯ ಫೌಂಡೇಶನ್ ಮತ್ತು ಸ್ಪಾರ್ಕ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಸೋಮೇಶ್ವರ ನವೋದಯ, ಚಲನಚಿತ್ರ ನಟ ಸಾಯಿಪ್ರಕಾಶ್, ನಿಶ್ಚಿತ ಫೌಂಡೇಶನ್ ನ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಕ್ಷದ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಿಶ್ಚಿತ, ರಾಜ್ಯ … Read more

ಕೋಣಂದೂರು ಬಳಿ ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

KONANDUR-THIRTHAHALLI-NEWS

ಕೋಣಂದೂರು: ಸಮೀಪದ ಹೊಸಕೇರಿ ನಿವಾಸಿ ನಾಗರಾಜ (52) ಡೆತ್ ನೋಟ್ ಬರೆದಿಟ್ಟು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಟ್ ಫಂಡ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತನ್ನ ಮನೆಯ ದಾಖಲೆ ಪತ್ರಗಳನ್ನು ಸಂಬಂಧಿಕರೊಬ್ಬರಿಗೆ ಕೊಟ್ಟು ಜಾಮೀನಿಗೆ ಸಹಿ ಮಾಡಿದ್ದರು.  ಇದನ್ನೂ ಓದಿ » ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ ರೈತ ಈ ಕಾರಣಕ್ಕೆ ಚಿಟ್ ಫಂಡ್‌ನವರು ಕಿರುಕುಳ ನೀಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿಯಲ್ಲಿ ಇವತ್ತು ಬ್ರಹ್ಮ ರಥೋತ್ಸವ

BHADRAVATHI-NEWS-UPDATE

ಭದ್ರಾವತಿ: ನಗರದ ಹುತ್ತಾ ಕಾಲೊನಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ.2ರಂದು ಮಧ್ಯಾಹ್ನ 12.30ಕ್ಕೆ ವೈಭವದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರದಾನ ಹೋಮ, ರಥಶುದ್ದಿ, ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ ನಡೆಯಲಿದೆ. ಅಷ್ಟಾವದಾನ ಸೇವೆ, ಮಹಾಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ರಥೋತ್ಸವ ನಂತರ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ದಾನಿ ಹೆಚ್.ಸಿ.ದಾಸೇಗೌಡರ ಕುಟುಂಬದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಇದನ್ನೂ ಓದಿ » ಭದ್ರಾವತಿ ಸಿಟಿಯ ವಿವಿಧೆಡೆ ಇವತ್ತು ಇಡೀ ದಿನ ವಿದ್ಯುತ್‌ … Read more

ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ ರೈತ

shikaripura-anjanapura-village-board

ಶಿಕಾರಿಪುರ: ಸಾಲದ ಹೊರೆ ತಾಳಲಾರದೆ ಶಿಕಾರಿಪುರ (Shikaripura) ತಾಲೂಕು ಹಿರೇಕೊರಲಹಳ್ಳಿ (Hirekoralahalli) ಗ್ರಾಮದ ವೃದ್ಧ ರೈತ ಪೀಕ್ಲಾ ನಾಯ್ಕ (70) ಅಂಜನಾಪುರ ಜಲಾಶಯದ (Anjanapura Dam) ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಜಮೀನಿಗೆ ಹೋದಾಗ ಸಮೀಪದ ಅಂಜನಾಪುರ ಜಲಾಶಯ ಹಿನ್ನೀರಿಗೆ ಹಾರಿದ್ದಾರೆ ಎಂದು ಆರೋಪಿಸಲಾಗಿದೆ. ಹಾರೋಗೊಪ್ಪ (Harogoppa) ಗ್ರಾಮೀಣ ಬ್ಯಾಂಕ್‌, ಫೈನಾನ್ಸ್‌ನಲ್ಲಿ (Finance) ಸಾಲ ಹಾಗೂ ಕೈಸಾಲವನ್ನು ಮಾಡಿಕೊಂಡಿದ್ದರು ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಶಿವಮೊಗ್ಗದಲ್ಲಿ ಕಡಿಮೆಯಾದ ಚಳಿ, ಹೇಗಿರಲಿದೆ ಇವತ್ತಿನ ವಾತಾವರಣ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಕಡಿಮೆಯಾಗಿದ್ದು ತಾಪಮಾನದಲ್ಲಿಯು ಏರಿಕೆಯಾಗಿದೆ. ಬಿಸಿಲಿನ ಝಳ ಜೋರಿರಲಿದೆ. ಜಿಲ್ಲೆಯಲ್ಲಿ ಬಿಸಿಲು ಜೋರಾಗಿದೆ. ಮಧ್ಯಾಹ್ನದ ವೇಳೆಗೆ ಬೇಸಿಗೆಯಂತಹ ವಾತಾವರಣ ಇರಲಿದೆ. ಸಂಜೆ ಬಳಿಕ ವಾತಾವರಣ ತಂಪೇರಿದರು ಚಳಿ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ » ಹೆಚ್ಚಿನ ತೆರಿಗೆಯಿಂದಾಗಿ ವ್ಯಸನಿಗರು ಗಾಂಜಾಗೆ ದಾಸರಾಗುತ್ತಿದ್ದಾರೆ, ಎಂಎಲ್‌ಸಿ ಆಕ್ರೋಶ ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌. ತೀರ್ಥಹಳ್ಳಿಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌. ಸೊರಬ, … Read more