ಶಿವಮೊಗ್ಗ ನಗರದ ವಿವಿಧೆಡೆ ಮಧ್ಯಾಹ್ನ ಗಾಳಿ, ಗುಡುಗು, ಮಳೆ, ಸಂಜೆಗೆ ಪುನಃ ವರುಣ ಅಬ್ಬರಿಸುವ ಸಾದ್ಯತೆ

020520 Rain in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020 ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನದಿಂದ ಮಳೆ ಸುರಿಯುತ್ತಿದೆ. ಕೆಲವು ಅವಧಿ ಬಿಡುವು ನೀಡಿದ ಮಳೆ, ಸಂಜೆ ಪುನಃ ಆರಂಭವಾಗಿದೆ. ಮಧ್ಯಾಹ್ನ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿತ್ತು.  ಕೆಲವು ಹೊತ್ತು ಬಿಡುವು ನೀಡಿದ್ದ ಮಳೆ, ಸಂಜೆ ವೇಳೆಗೆ ಮತ್ತೆ ಆರಂಭವಾಗಿದೆ. ವಿವಿಧೆಡೆ ಮತ್ತೆ ಮಳೆಯಾಗುತ್ತಿರುವ ವರದಿ ಇದೆ. ಕಳೆದ ಎರಡ್ಮೂರು ದಿನದಿಂದ ಭಾರಿ ಬಿಸಿಲಿದ್ದು, ಜನರು ಶಕೆಯಿಂದ ಕಂಗೆಟ್ಟಿದ್ದರು. ಮಳೆ, ಗಾಳಿಯಿಂದಾಗಿ ಸದ್ಯಕ್ಕೆ ಕೂಲ್‌ ಕೂಲ್‌ ಅನಿಸಿದೆ. … Read more

ಇನ್ನೂ ಆರೇಳು ತಿಂಗಳು ಕರೋನದೊಂದಿಗೆ ಬದುಕಲು ಸಿದ್ಧವಾಗಿ, ಶಿವಮೊಗ್ಗದಲ್ಲಿ ಆರೋಗ್ಯ ಸಚಿವರ ಎಚ್ಚರಿಕೆ

020520 Corona Meeting By Sriramulu in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020 ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಕರೋನಾ ಜಿಲ್ಲೆಗೆ ಕಾಲಿರಿಸಿಲ್ಲ. ಆದರೆ ಈ ಬಗ್ಗೆ ನಿರ್ಲಕ್ಷ್ಯ ತೋರಬಾರದು. ಕರೋನಾ ವಿರುದ್ಧ ದೀರ್ಘಕಾಲೀನ ಹೋರಾಟ ನಡೆಸಬೇಕಾಗಿದ್ದು,  ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾ ಇನ್ನೂ 6-7 ತಿಂಗಳ ಕಾಲ ಕರೋನಾದೊಂದಿಗೆ ಬದುಕಲು ಮಾನಸಿಕವಾಗಿ ಸನ್ನದ್ಧರಾಗಬೇಕಿದೆ ಎಂದು ಸಚಿವರು ಹೇಳಿದರು. ಕರೋನ ನಿಯಂತ್ರಣ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕರೋನಾ ಚಿಕಿತ್ಸೆಗೆ … Read more

ಸಚಿವರ ಕಾಲಿಗೆ ಬಿದ್ದ ತಹಶೀಲ್ದಾರ್ ಕೂಡಲೆ ಅಮಾನತು ಮಾಡುವಂತೆ ಆಗ್ರಹ

010520 Thahasildar Fall to Eshwarappas Feet 1

ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020 ಸಚಿವ ಈಶ್ವರಪ್ಪ ಅವರ ಕಾಲಿಗೆ ಬೀಳುವ ಮೂಲಕ ಶಿವಮೊಗ್ಗ ತಹಶೀಲ್ದಾರ್ ಅವರು ಪಕ್ಷದ ಕಾರ್ಯಕರ್ತರಂತೆ ವರ್ತಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಎಸ್.ಸುಂದರೇಶ್, ತಾಲೂಕು ದಂಢಾಧಿಕಾರಿ ಆಗಿ ಸಾರ್ವಜನಿಕವಾಗಿ ಸಚಿವರ ಕಾಲಿಗೆ ಬಿದ್ದಿರುವುದು ಖಂಡನೀಯ. ಈ ವರ್ತನೆಯಿಂದ ಸಮಸ್ತ ಸರ್ಕಾರಿ ನೌಕರರಿಗೆ ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಕಾಲಿಗೆ ಬಿದ್ದ ಅಧಿಕಾರಿಯನ್ನು ಕೂಡಲೇ ಅಮಾನತು … Read more

ಯಾವ್ಯಾವ ಬಾರ್‌ನಲ್ಲಿ ಎಷ್ಟು ಸ್ಟಾಕ್ ಇದೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಪರಿಶೀಲನೆ ಶುರು

020520 Bar Checking in Shimoga 2

ಶಿವಮೊಗ್ಗ ಲೈವ್.ಕಾಂ | SHIMOGA | 2 ಮೇ 2020 ಶಿವಮೊಗ್ಗ ಜಿಲ್ಲೆ ಗ್ರೀನ್‍ ಜೋನ್‍ನಲ್ಲಿದೆ. ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತೋ ಇಲ್ಲವೋ ಅಂತಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಬಾರ್‍ಗಳಲ್ಲಿ ಪರಿಶೀಲನೆ ಆರಂಭಿಸಿದ್ದಾರೆ. ಅಧಿಕಾರಿಗಳು ಏನೆಲ್ಲ ಪರಿಶೀಲಿಸುತ್ತಿದ್ದಾರೆ? ಅಬಕಾರಿ ಆಯುಕ್ತರಿಂದ ಸ್ಟಾಕ್‍ ಚೆಕ್ ನಡೆಸುವಂತೆ ನಿರ್ದೇಶನ ಬಂದಿದೆ. ಈ ಹಿನ್ನೆಯಲ್ಲಿ ಮದ್ಯದಂಗಡಿಯಲ್ಲಿ ಇರುವ ದಾಸ್ತಾನು ಪರಿಶೀಲನೆ ನಡೆಸಲಾಗುತ್ತಿದೆ. ಪುಸ್ತಕದಲ್ಲಿ ಎಂಟ್ರಿ ಅಗಿರುವ ದಾಸ್ತಾನು ಪ್ರಮಾಣ ಮತ್ತು ಅಂಗಡಿಯಲ್ಲಿ ಎಷ್ಟು ಸ್ಟಾಕ್ … Read more

ಮೇ 1ರ ಕರೋನ ರಿಪೋರ್ಟ್ | 12 ಜನ ಆಸ್ಪತ್ರೆಯಲ್ಲಿ ಕ್ವಾರಂಟೈನ್, ಬರಬೇಕಿದೆ 58 ಮಂದಿಯ ಟೆಸ್ಟಿಂಗ್ ರಿಪೋರ್ಟ್

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA | 02 ಮೇ 2020 ಕರೋನ ಸೋಂಕ ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಜನರಿಗೆ ಪರೀಕ್ಷೆಯಾಗಿದೆ. ಬಹುತೇಕ ನೆಗಟಿವ್ ರಿಪೋರ್ಟ್ ಬರುತ್ತಿರುವುದು ಶಿವಮೊಗ್ಗದವರ ಪಾಲಿಗೆ ನೆಮ್ಮದಿ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 00 28 ದಿನ ನಿಗಾ ಅವಧಿ ಪೂರೈಸಿದವರು = 584 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 12 ಹಾಸ್ಟೆಲ್ ಕ್ವಾರಂಟೈನ್’ನಲ್ಲಿ … Read more

ಅಧಿಕಾರ ವಹಿಸಿಕೊಂಡ ಮರುದಿನ ಶಿವಮೊಗ್ಗದಲ್ಲಿ ಸಚಿವರ ಕಾಲಿಗೆ ಬಿದ್ದ ತಹಶೀಲ್ದಾರ್

010520 Thahasildar Fall to Eshwarappas Feet 1

ಶಿವಮೊಗ್ಗ ಲೈವ್.ಕಾಂ | SHIMOGA | 1 ಮೇ 2020 ಅಧಿಕಾರ ವಹಿಸಿಕೊಂಡು ಕೆಲವೇ ಗಂಟೆಯಲ್ಲಿ ತಹಶೀಲ್ದಾರ್‌ ಅವರು ಗ್ರಾಮೀಣಾಭಿವೃ‍ದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ನೂತನ ತಹಶೀಲ್ದಾರ್‌ ನಾಗರಾಜ್‌ ಅವರು ಏಪ್ರಿಲ್‌ 30ರಂದು ಅಧಿಕಾರ ವಹಿಸಿಕೊಂಡಿದ್ದರು. ಇವತ್ತು ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಹೊರ ಬರುತ್ತಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತಹಶೀಲ್ದಾರ್‌ ನಾಗರಾಜ್‌ ಅವರು ಭೇಟಿಯಾದರು. ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಪರಿಚಯಿಸಿಕೊಂಡ ನೂತನ ತಹಶೀಲ್ದಾರ್‌ ಅವರು, ಮೊದಲಿಗೆ ಕೈ ಮುಗಿಸಿದರು. … Read more

ಸಾಗರದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ನಿಂದಿಸಿದ ಯುವಕನ ವಿರುದ್ಧ ಕೇಸ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 1 ಮೇ 2020 ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆ ಯುವಕನೊಬ್ಬನ ವಿರುದ್ಧ ಸಾಗರದಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಇಲ್ಲಿನ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ವೈದ್ಯರನ್ನು ನಿಂದಿಸಿದ್ಯಾರು? ಘಟನೆಗೇನು ಕಾರಣ? ಸಾಗರ ಪಟ್ಟಣದ ಸಮೀರ್‌ ಎಂಬಾತ ತನ್ನ ಸಹೋದರನನ್ನು ಆಸ್ಪತ್ರೆಗೆ ಕರೆತಂದಿದ್ದ. ಸಹೋದರನ ಕಾಲಿಗೆ ಗಾಯವಾಗಿದ್ದು, ತುರ್ತು ಚಿಕಿತ್ಸೆ ನೀಡಬೇಕು ಎಂದು ಸಮೀರ್‌ ವೈದ್ಯರನ್ನು ಒತ್ತಾಯಿಸಿದ. ಈ ವೇಳೆ ಕೀಲು ಮತ್ತು … Read more

ಕರೋನ ಟೆಸ್ಟಿಂಗ್, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೇಗೆ ನಡೆಯುತ್ತೆ ಪರೀಕ್ಷೆ? ಏನೆಲ್ಲ ಮಾಹಿತಿ ನೀಡಬೇಕು?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA | 1 ಮೇ 2020 ಕರೋನ ಸೋಂಕು ಪತ್ತೆಗೆ ಶಿವಮೊಗ್ಗದಲ್ಲಿ ರಾಪಿಡ್ ಟೆಸ್ಟ್‌ಗಳನ್ನು ಕೈಗೊಳ್ಳಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಅಷ್ಟಕ್ಕೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಯಾರಿಗೆಲ್ಲ ಟೆಸ್ಟ್‌  ನಡೆಸಲಾಗುತ್ತಿದೆ? ಟೆಸ್ಟಿಂಗ್ ಹೇಗೆ ನಡೆಯುತ್ತಿದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್. ಯಾರಿಗೆಲ್ಲ ಟೆಸ್ಟ್ ಮಾಡಲಾಗುತ್ತಿದೆ? ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ದೇಶಿತ ಕಟ್ಟಡದಲ್ಲಿ ಕರೋನ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿಗೆ ಬರುವವರು ಮೊದಲು ತಮ್ಮ ಮಾಹಿತಿ ನೀಡಬೇಕು, ಪ್ರವಾಸದ ವಿವರ … Read more

ಏಪ್ರಿಲ್ 30ರ ಕರೋನ ರಿಪೋರ್ಟ್ | ತಿಂಗಳ ಕೊನೆವರೆಗೆ ಎಷ್ಟಾಯ್ತು ಟೆಸ್ಟ್? ಆಸ್ಪತ್ರೆಯಲ್ಲಿ ಇರೋರೆಷ್ಟು? ಕ್ವಾರಂಟೈನ್ ಮುಗಿಸಿದವರೆಷ್ಟು?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 01 ಮೇ 2020 ಕರೋನ ಸೋಂಕ ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ಹೆಚ್ಚು ಜನರನ್ನು ಟೆಸ್ಟ್‍ಗೆ ಒಳಪಡಿಸಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಜನರಿಗೆ ಪರೀಕ್ಷೆಯಾಗಿದೆ. ಬಹುತೇಕ ನೆಗಟಿವ್ ರಿಪೋರ್ಟ್ ಬರುತ್ತಿರುವುದು ಶಿವಮೊಗ್ಗದವರ ಪಾಲಿಗೆ ನೆಮ್ಮದಿ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 00 28 ದಿನ ನಿಗಾ ಅವಧಿ ಪೂರೈಸಿದವರು = 584 ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 16 ಹಾಸ್ಟೆಲ್ ಕ್ವಾರಂಟೈನ್’ನಲ್ಲಿ … Read more

ಕಂಡಲ್ಲೆಲ್ಲ ಉಗಿದರೆ ಬೀಳುತ್ತೆ ದಂಡ, ಶಿವಮೊಗ್ಗ ಪಾಲಿಕೆಯಿಂದ ಕಾರ್ಯಾಚರಣೆ ಆರಂಭ, ಇನ್ನು ಯಾವ್ಯಾವುಕ್ಕೆ ಇದೆ ಗೊತ್ತಾ ಫೈನ್?

300420 Spitting Fine by Mahanagara Palike in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020 ಎಲ್ಲೆಂದರಲ್ಲಿ ಉಗಿಯುವವರು, ಮಾಸ್ಕ್‌ ಹಾಕದೆ ನಗರದಾದ್ಯಂತ ಓಡಾಡುತ್ತಿರುವವರಿಗೆ ಈಗ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸುತಿದೆ. ದಿಢೀರ್‌ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ ದಂಡ ಹಾಕಿದೆ. ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಗ್ಗೆಯಿಂದ ಶಿವಮೊಗ್ಗ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಕಂಡಕಂಡಲ್ಲಿ ಉಗಿಯುವವರನ್ನು ಹಿಡಿದು, ಸ್ಥಳದಲ್ಲೇ ದಂಡ ಕಟ್ಟಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ. ಉಗಿದರೆ 500 ರೂ. ಫೈನ್‌ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಈತನಕ 12 … Read more