ಗಾಂಧಿ ಬಜಾರ್‌ನಲ್ಲಿ ಮತ್ತೆ ಶುರು ವ್ಯಾಪಾರ, ಅಗತ್ಯ ವಸ್ತುಗಳಿಗಷ್ಟೆ ಅವಕಾಶ, ಶಿವಮೊಗ್ಗ ನಗರದಾದ್ಯಂತ ಇವತ್ತು ಹೇಗಿದೆ ಪರಿಸ್ಥಿತಿ?

270420 Gandhi Bazaar Reopen After Corona Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಏಪ್ರಿಲ್ 2020 ಒಂದು ತಿಂಗಳ ಬಳಿಕ ಗಾಂಧಿ ಬಜಾರ್‌ನಲ್ಲಿ ಮತ್ತೊಮ್ಮೆ ವಹಿವಾಟು ಆರಂಭವಾಗಿದೆ. ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಲಾಕ್‍ಡೌನ್ ಆರಂಭವಾದಾಗ ಗಾಂಧಿ ಬಜಾರ್‌ನಲ್ಲಿ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಗಾಂಧಿ ಬಜಾರ್‌ನಲ್ಲೂ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರದಲ್ಲಿ ವ್ಯಾಪಾರ ಗಾಂಧಿ ಬಜಾರ್‌ನಲ್ಲಿ ದಿನಸಿ ಅಂಗಡಿಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರದ ಬಾಕ್ಸ್ ಹಾಕಲಾಗಿದೆ. … Read more

ಡಿಸಿ ಹೇಳಿದ್ದೊಂದು, ಪೊಲೀಸರು ಮಾಡಿದ್ದೊಂದು, ಶಿವಮೊಗ್ಗದಲ್ಲಿ ಲಾಕ್‌ಡೌನ್‌ ಗೊಂದಲವೋ ಗೊಂದಲ

250420 Lockdown Confusion in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 25 ಏಪ್ರಿಲ್ 2020 ಲಾಕ್‌ಡೌನ್‌ ಸಂಬಂಧ ಶಿವಮೊಗ್ಗದಲ್ಲಿ ಜನರು ಮತ್ತು ವ್ಯಾಪಾರಿಗಳ ನಡುವೆ ಗೊಂದಲ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ವಿಭಿನ್ನ ಆದೇಶ ಹೊರಡಿಸುತ್ತಿರುವುದೆ ಗೊಂದಲಕ್ಕೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಏನಾಗುತ್ತಿದೆ? ಶಿವಮೊಗ್ಗದಲ್ಲಿ ಕರೋನ ಪಾಸಿಟಿವ್‌ ಕೇಸುಗಳಿಲ್ಲ. ಹಾಗಾಗಿ ಜಿಲ್ಲೆ ಗ್ರೀನ್‌ ಜೋನ್‌ನಲ್ಲಿದೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಹಲವು ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಸಂಬಂಧ ಜಿಲ್ಲಾಡಳಿತದ ನಿರ್ಧಾರವೊಂದು, ಪೊಲೀಸರು ನಡೆಯೊಂದು ಆಗಿದೆ. ಇದು … Read more

ಶಿವಮೊಗ್ಗದಲ್ಲಿ ನಿಗದಿಯಾಯ್ತು ಕೇಂದ್ರದ ಪಡಿತರ ವಿತರಣೆಗೆ ಟೈಮ್, ಪಾಸ್ ದುರುಪಯೋಗವಾದರೆ ಕಠಿಣ ಕ್ರಮದ ವಾರ್ನಿಂಗ್

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 24 ಏಪ್ರಿಲ್ 2020 ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಡಿತರ ವಿತರಣೆಗೆ ಜಿಲ್ಲಾಡಳಿತ ಟೈಮ್‌ ಫಿಕ್ಸ್‌ ಮಾಡಿದೆ. ಮೇ ಮೊದಲ ವಾರದಲ್ಲಿ ಪಡಿತರ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಪಡಿತರ ಅಕ್ಕಿ ಮತ್ತು ತೊಗರಿ ಬೇಳೆ ವಿತರಣೆ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪಾಸ್‌ ದುರುಪಯೋಗವಾದರೆ ಕ್ರಮ ವಿವಿಧ ಸೇವೆಗಳಿಗಾಗಿ ಜಿಲ್ಲಾಡಳಿತ ಪಾಸ್‌ ವಿತರಣೆ ಮಾಡಿದೆ. ಆದರೆ ಈ ಪಾಸ್‌ ದುರುಪಯೋಗ … Read more

ಶಿವಮೊಗ್ಗದಲ್ಲಿ ಲಾಕ್‌ಡೌನ್‌ ಸಡಿಲಿಕೆ ಇಲ್ಲ, ಬೈಕು, ಕಾರಲ್ಲಿ ಓಡಾಟಕ್ಕೂ ಇದೆ ಕಂಡೀಷನ್, ಕೆಲವು ಅಂಗಡಿಗಳಷ್ಟೇ ಓಪನ್

100420 Sectorwise Lockdown in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 24 ಏಪ್ರಿಲ್ 2020 ಕರೋನ ಹಿನ್ನೆಲೆ ವಿಧಿಸಲಾಗಿರುವ ಲಾಕ್‍ಡೌನ್‍ನಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ ಆದರೆ ಕೆಲವು ಚಟುವಟಿಕೆಗಳನ್ನು ನಡೆಸಲು ಹೆಚ್ಚುವರಿಯಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ಪಷ್ಪಪಡಿಸಿದರು. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ನಿನ್ನೆಯಿಂದ ಹೆಚ್ಚುವರಿಯಾಗಿ ಕೆಲವು ಸೇವೆಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ ಎಂದರು ಯಾವೆಲ್ಲ ಅಂಗಡಿ ತೆರೆಯಬಹುದು? ಜ್ಯೂಸ್, ಐಸ್‍ಕ್ರೀಂ ಅಂಗಡಿ, ಮೊಬೈಲ್ ರಿಚಾರ್ಜ್ ಅಂಗಡಿಗಳು, ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳನ್ನು … Read more

ಅರ್ನಬ್ ಗೋಸ್ವಾಮಿ ವಿರುದ್ಧ ಶಿವಮೊಗ್ಗದಲ್ಲಿ ಮೊತ್ತೊಂದು ದೂರು, ಕಠಿಣ ಕ್ರಮಕ್ಕೆ ಒತ್ತಾಯ

240420 Complaint Against Arnab Goswami by Youth Congress 1

ಶಿವಮೊಗ್ಗ ಲೈವ್.ಕಾಂ | SHIMOGA | 24 ಏಪ್ರಿಲ್ 2020 ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ವಿರುದ್ಧ ಶಿವಮೊಗ್ಗದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಅನಗತ್ಯ ಮತ್ತು ಆಧಾರ ರಹಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ದೂರು ನೀಡಿದ್ದಾರೆ.   ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿರುವ ಯುವ ಕಾಂಗ್ರೆಸ್‌ ಕಾರ್ಯಕರ್ತರು, ರಿಪಬ್ಲಿಕ್‌ ಟಿವಿಯ ಪೂಚ್ತಾ ಇಂಡಿಯಾ ಕಾರ್ಯಕ್ರಮದಲ್ಲಿ ಅರ್ನಬ್‌ ಗೋಸ್ವಾಮಿ ಅವರು … Read more

ಶಿವಮೊಗ್ಗದಲ್ಲಿ ಸ್ವಲ್ಪ ಸಡಿಲಗೊಂಡ ಲಾಕ್‌ಡೌನ್‌, ರಸ್ತೆಗಿಳಿದ ಜನ, ಮುಂದುವರೆದ ನಿಷೇಧಾಜ್ಞೆ

240420 Vehicles in Shimoga City Kuvempu Road 1

ಶಿವಮೊಗ್ಗ ಲೈವ್.ಕಾಂ | SHIMOGA | 24 ಏಪ್ರಿಲ್ 2020 ಲಾಕ್‍ಡೌನ್ ಅಲ್ಪ ಸಡಿಲಿಕೆ ಬೆನ್ನಿಗೆ ಶಿವಮೊಗ್ಗದಲ್ಲಿ ವಾಹನ ಮತ್ತು ಜನರ ಸಂಚಾರ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಂಖ್ಯೆ ದುಪ್ಪಟ್ಟಾಗಿದೆ. ಅಗತ್ಯ ವಸ್ತುಗಳ ಖರೀದಿ, ಬ್ಯಾಂಕು, ಕಚೇರಿ ಸೇರಿದಂತೆ ವಿವಿಧೆಡೆಗೆ ತೆರಳಲು ಜನರು ರಸ್ತೆಗಿಳಿದಿದ್ದಾರೆ. ಇದರಿಂದ ವಾಹನಗಳು ಹೇರಳವಾಗಿದೆ. ರಸ್ತೆಯಲ್ಲಿ ಬ್ಯಾರಿಕೇಡ್, ಅನಗತ್ಯ ಓಡಾಟಕ್ಕೆ ಬ್ರೇಕ್ ಶಿವಮೊಗ್ಗ ನಗರದಲ್ಲಿ ಕಳೆದ ವಾರ ಸೆಕ್ಟರ್ ವೈಸ್ ಸೀಲ್ ಡೌನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಮುಖರ ರಸ್ತೆಗಳಲ್ಲಿ … Read more

ಏಪ್ರಿಲ್ 23ರ ಕರೋನ ರಿಪೋರ್ಟ್ | ಶಿವಮೊಗ್ಗದಲ್ಲಿ 145 ಮಂದಿ ರಿಪೋರ್ಟ್ಗೆ ವೇಯ್ಟಿಂಗ್, ಎಲ್ಲರ ಕ್ವಾರಂಟೈನ್ ಕಂಪ್ಲೀಟ್

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 24 ಏಪ್ರಿಲ್ 2020 ಕರೋನ ಸೋಂಕು ಹರಡದಂತೆ ತಡೆಯಲು ಶಿವಮೊಗ್ಗದಲ್ಲಿ ರಾಪಿಡ್‌ ಟೆಸ್ಟ್‌ ನಡೆಯುತ್ತಿದೆ. ಜಿಲ್ಲೆಯಾದ್ಯಂತ ಈವರೆಗೆ 801 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 656 ಮಂದಿಗೆ ನೆಗೆಟಿವ್‌ ಬಂದಿದೆ. ಇದು ಶಿವಮೊಗ್ಗ ಜಿಲ್ಲೆಯ ಜನರ ಪಾಲಿಗೆ ನೆಮ್ಮೆದಿ ಮೂಡಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584 14 ದಿನ ನಿಗಾ ಅವಧಿ ಪೂರೈಸಿದವರು = 00 28 ದಿನ ನಿಗಾ ಅವಧಿ ಪೂರೈಸಿದವರು = … Read more

ಪ್ರಧಾನಿ ಮೋದಿಯಿಂದ ದಿಢೀರ್ ಫೋನ್, 2 ನಿಮಿಷ ಶಂಕರಮೂರ್ತಿ ಅವರ ಜೊತೆ ಮಾತು, ಏನೆಲ್ಲ ಚರ್ಚೆಯಾಯ್ತು?

230420 Modi Calls DH Shankaramurthy 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಏಪ್ರಿಲ್ 2020 ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರಿಗೆ ದಿಢೀರ್ ಫೋನ್ ಮಾಡಿದ್ದಾರೆ. ಬೆಳಗ್ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಒಂದೂವರೆ ನಿಮಿಷದ ಮಾತು ಡಿ.ಹೆಚ್.ಶಂಕರಮೂರ್ತಿ ಅವರಿಗೆ ಬೆಳಗ್ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಒಂದೂವರೆ ನಿಮಿಷ ಮಾತನಾಡಿದ್ದಾರೆ. ಹಿಂದಿಯಲ್ಲೆ ಮಾತು ಆರಂಭಿಸಿದ ಪ್ರಧಾನಿ ಮೋದಿ, ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದಾರೆ. ಲಾಕ್‍ಡೌನ್‍ ಟೈಮಲ್ಲಿ ಏನು ಮಾಡುತ್ತಿದ್ದೀರಿ? … Read more

ಶಿವಮೊಗ್ಗದಲ್ಲಿ ಲಾಕ್‌ಡೌನ್‌ ಉಲ್ಲಂಘಿಸಿ ವಾಕಿಂಗ್ ಮಾಡಿದವರಿಗೆ ಫಿಟ್ನೆಸ್ ಕ್ಲಾಸ್, ಪೊಲೀಸರ ಪಾಠಕ್ಕೆ ಯುವಕರು ಸುಸ್ತೋ ಸುಸ್ತು

220420 Shimoga Rural Inspector Different Punishment 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಏಪ್ರಿಲ್ 2020 ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಬೆಳಗ್ಗೆ ವಾಕಿಂಗ್‌ ಹೋದವರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ವಾಕಿಂಗ್‌ ಹೋಗುತ್ತಿದ್ದವರನ್ನು ತಡೆದು ತಿಳಿ ಹೇಳಿದ್ದಾರೆ. ಕೆಲವರಿಗೆ ನಿಂತಲ್ಲೇ ಜಾಗಿಂಗ್‌ ಮಾಡಿಸಿ, ಫಿಟ್ನೆಸ್‌ ಶಿಕ್ಷೆ ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಸಂಜೀವ್‌ ಕುಮಾರ್‌ ಅವರು ಬೆಳಗ್ಗೆ ರೌಂಡ್ಸ್‌ ಹೋಗಿದ್ದರು. ಈ ವೇಳೆ ಆಲ್ಕೊಳ, ಗುಡ್‌ಲಕ್‌ ಸರ್ಕಲ್‌ ಸುತ್ತಮುತ್ತ ಜನರು ವಾಕಿಂಗ್‌ ಮಾಡುತ್ತಿದ್ದರು. ಇವರನ್ನು ತಡೆದು ವಾಕಿಂಗ್‌ ಮಾಡದಂತೆ ಮನವಿ ಮಾಡಿದ್ದಾರೆ. … Read more

ಮತ್ತಿಬ್ಬರು ಮಹಿಳೆಯರಿಗೆ KFD ಪಾಸಿಟಿವ್, ಕರೋನ ಆತಂಕದ ಮಧ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಾಗ್ತಿದೆ ಕೇಸ್

KFD Van By VDL Lab in Shimoga Mangana Kayale 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಏಪ್ರಿಲ್ 2020 ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಮಂಗನ ಕಾಯಿಲೆ ಪಾಸಿಟಿವ್ ಬಂದಿದೆ. ಇದರಿಂದ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಎಲ್ಲೆಲ್ಲಿ ಸೋಂಕು ಪತ್ತೆಯಾಗಿದೆ? ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮವೊಂದರ ಮಹಿಳೆಯೊಬ್ಬರಿಗೆ ಕೆಎಫ್‍ಡಿ ಪಾಸಿಟಿವ್ ಬಂದಿದೆ. ಮತ್ತೊಂದೆಡೆ ಸಾಗರ ತಾಲೂಕು ಹೆನ್ನಿ ಗ್ರಾಮದ ಮಹಿಳೆಯೊಬ್ಬರಲ್ಲಿ ಕೆಎಫ್‍ಡಿ ಸೋಂಕು ಪತ್ತೆಯಾಗಿದೆ. 160ಕ್ಕೆ ಏರಿದ ಸೋಂಕಿತರ ಸಂಖ್ಯೆ ಕೆಎಫ್‍ಡಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೆ ಇದೆ. ತೀರ್ಥಹಳ್ಳಿ ತಾಲೂಕಿನಲ್ಲಿ … Read more