ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

Kote Police station building

ಶಿವಮೊಗ್ಗ: ನಗರದ ರೈಸ್ ಮಿಲ್ (rice mill) ಮಾಲೀಕ ಶಿವಕುಮಾರ್ ಅವರಿಗೆ ಅಕ್ಕಿ ವ್ಯಾಪಾರದಲ್ಲಿ ಸುಮಾರು ₹30 ಲಕ್ಷಕ್ಕು ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ. ಇದನ್ನೂ ಓದಿ » ‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು? ಹಾಸನದ ವಾಸೀಂ ಎಂಬಾತ ಕಳೆದ ಒಂದು ವರ್ಷದಿಂದ ಶಿವಕುಮಾರ್ ಅವರ ಮಿಲ್‌ನಿಂದ ಅಕ್ಕಿ ಮೂಟೆಗಳನ್ನು ಪಡೆದುಕೊಂಡಿದ್ದರು. ಆರಂಭದಲ್ಲಿ ಸಕಾಲಕ್ಕೆ ಹಣ ಪಾವತಿಸಿ ನಂಬಿಕೆ ಗಳಿಸಿದ್ದರು. ನಂತರ ಅಕ್ಕಿ ಪಡೆದು ಹಣ ನೀಡದೆ ಸತಾಯಿಸಿದ್ದಾರೆ … Read more

ಹೊಸ ವರ್ಷದ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿದ ಯುವಕರು, ಚೇರ್‌ಗಳಿಂದಲೇ ಬಡಿದಾಟ

Altercation-in-New-Year-party-in-Shimoga

ಶಿವಮೊಗ್ಗ: ನಗರದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಾಚರಣೆಯ ಅಂತಿಮ ಹಂತದಲ್ಲಿ ಯುವಕರ ಎರಡು ಗುಂಪುಗಳ (Youth Clash) ಮಧ್ಯೆ ಗಲಾಟೆಯಾಗಿದೆ. ಪಾರ್ಟಿಯಲ್ಲಿ ಹಾಕಿದ್ದ ಚೇರ್‌ಗಳಿಂದಲೇ ಹೊಡೆದಾಡಿಕೊಂಡಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯ ಅಡಿಕೆ ಮಂಡಿ ಮರ್ಚೆಂಟ್ಸ್‌ ಕ್ಲಬ್‌ನಲ್ಲಿ ನಡೆದ ಪಾರ್ಟಿ ವೇಳೆ ಘಟನೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಗಲಾಟೆ ವಿಕೋಪಕ್ಕೆ ತಿರುಗಿದಾಗ ಎರಡು ಗುಂಪಿನವರು ಪರಸ್ಪರ ಚೇರ್‌ಗಳಿಂದಲೇ ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ತುಂಗಾನಗರ ಠಾಣೆ ಇನ್ಸ್‌ಪೆಕ್ಟರ್‌ … Read more

ವಿನೋಬನಗರ ತರಕಾರಿ ಮಂಡಿ ಮುಂದೆ ಕೊಲೆ, ಕಾರಣವೇನು? ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ?

Vinobanagara-Incident-Police-visit-the-spot

ಶಿವಮೊಗ್ಗ: ವಿನೋಬನಗರದ ತರಕಾರಿ ಮಂಡಿ ಬಳಿ 26 ವರ್ಷದ ಯುವಕನ ಹತ್ಯೆಯಾಗಿದೆ (Murder). ರಾಡ್‌ನಿಂದ ತಲೆಗೆ ಹೊಡೆದು ಕೊಲೆಗೈಯಲಾಗಿದೆ. ತರಕಾರಿ ಮಂಡಿ ಎದುರಿಗಿರುವ ಶ್ರೀನಿಧಿ ವೈನ್ಸ್‌ ಮಳಿಗೆ ಮುಂಭಾಗ ಇಂದು ಸಂಜೆ ಘಟನೆ ನಡೆದಿದೆ. ಅರುಣ್‌ (26) ಕೊಲೆಯಾದವನು. ಹೇಗಾಯ್ತು ಘಟನೆ? ವೈನ್ಸ್‌ ಶಾಪ್‌ ಮುಂದೆ ನಿಂತಿದ್ದ ಅರುಣ್‌ ಮೇಲೆ ಇಬ್ಬರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಡ್‌ನಿಂದ ಅರುಣ ತಲೆಗೆ ಹೊಡೆದಿದ್ದಾರೆ. ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಅರುಣ್‌ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆಯ … Read more

BREAKING NEWS – ಶಿವಮೊಗ್ಗದಲ್ಲಿ 26 ವರ್ಷದ ಯುವಕನ ಕೊಲೆ

BREAKING NEWS GENERAL IMAGE 1

ಶಿವಮೊಗ್ಗ: ಕೌಟುಂಬಿಕ ಕಲಹಕ್ಕೆ ಸಂಬಂಧಿಕರಿಂದಲೆ ಯುವಕನ ಹತ್ಯೆಯಾಗಿದೆ (murdered). ಅರುಣ್‌ (26) ಹತ್ಯೆಯಾದ ಯುವಕ. ವಿನೋಬನಗರ ಪೊಲೀಸ್‌ ಠಾಣೆಯ ತರಕಾರಿ ಮಾರುಕಟ್ಟೆ ಬಳಿ ಇಂದು ಸಂಜೆ ಘಟನೆ ಸಂಭವಿಸಿದೆ. ‘ವೈವಾಹಿಕ ವಿಚಾರವಾಗಿ ಗಲಾಟೆಯೆ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಕೃತ್ಯ ಎಸಗಿದ ಇಬ್ಬರ ಕುರಿತು ಮಾಹಿತಿ ಲಭ್ಯವಾಗಿದೆ. ಅವರನ್ನು ಬಂಧಿಸಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಇದನ್ನೂ ಓದಿ » ಹೊಸ ವರ್ಷಾಚರಣೆ, … Read more

ATMನಲ್ಲಿ ಹಣ ಬಿಡಿಸಲು ಹೋದಾಗ ಎಚ್ಚರ, ಭದ್ರಾವತಿಯ ರೈತನಿಗೆ ವಂಚನೆ, ಆಗಿದ್ದೇನು?

Bhadravathi-News-Update

ಭದ್ರಾವತಿ: ATMನಲ್ಲಿ ಹಣ ಬಿಡಿಸಲು ಹೋದಾಗ ರೈತರೊಬ್ಬರು ವಂಚನೆಗೆ ಒಳಗಾಗಿ ₹79,000 ಕಳೆದುಕೊಂಡಿದ್ದಾರೆ. ವಂಚನೆ ಆಗಿದ್ದು ಹೇಗೆ? ಬೊಮ್ಮನಕಟ್ಟೆಯ ನಾರಾಯಣ ಅವರು 11 ತಿಂಗಳ ಹಿಂದೆ ರಂಗಪ್ಪ ವೃತ್ತ ಸಮೀಪದ ಬ್ಯಾಂಕ್ ಆಫ್ ಬರೋಡದ ಎಟಿಎಂನಲ್ಲಿ ಹಣ ಬಿಡಿಸಲು ಹೋಗಿದ್ದರು. ಆಗ ಹಿಂದೆ ನಿಂತಿದ್ದ ಇಬ್ಬರು ಅಪರಿಚಿತರಲ್ಲಿ ಒಬ್ಬ, ಹಣ ಬಿಡಿಸಿಕೊಡುವುದಾಗಿ ಎಟಿಎಂ ಕಾರ್ಡ್ ಪಡೆದಿದ್ದ. 3 ಬಾರಿ ಪ್ರಯತ್ನಿಸಿದರೂ ಹಣ ಬಂದಿರಲಿಲ್ಲ. ಹೀಗಾಗಿ ಅವರು ಕಾರ್ಡ್‌ ಹಿಂದಕ್ಕೆ ಪಡೆದು ಮನೆಗೆ ಹೋಗಿದ್ದರು. ನಂತರ ಅವರ ಖಾತೆಯಿಂದ … Read more

ವಿಷ ಸೇವಿಸಿದ್ದ ಭದ್ರಾವತಿಯ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವು

Bhadravathi-ayesha-ends-life

ಭದ್ರಾವತಿ: ಗಂಡನ ಮನೆಯವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆಯಿಷಾ (23) ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. (mother) ಭದ್ರಾವತಿಯ ಸಾದತ್‌ ಕಾಲೋನಿಯಲ್ಲಿ ಮೂರು ದಿನದ ಹಿಂದೆ ಆಯಿಷಾ ವಿಷ ಸೇವಿಸಿದ್ದರು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದು, ಹಳೇನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಇವತ್ತು ಪಲ್ಸ್‌ ಪೋಲಿಯೊ, ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿದೆ ವ್ಯವಸ್ಥೆ? ಎಷ್ಟು ಬೂತ್‌ ಸ್ಥಾಪಿಸಲಾಗಿದೆ?

ಶಿವಮೊಗ್ಗದಲ್ಲಿ ಆಟೋ, ಕಾರು ಡಿಕ್ಕಿ, ಆಟೋ ಚಾಲಕ ಸಾವು, ಹೇಗಾಯ್ತು ಘಟನೆ?

Car-and-Auto-mishap-at-mahaveera-circle-in-Shimoga

ಶಿವಮೊಗ್ಗ: ಆಟೋ ಮತ್ತು ಕಾರು ಡಿಕ್ಕಿಯಾಗಿ ಆಟೋ ಚಾಲಕ (auto driver) ಅಣ್ಣಾನಗರ ನಿವಾಸಿ ಅಲ್ತಾಫ್‌ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಮಹಾವೀರ ವೃತ್ತದಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ನೇಣು ಬಿಗಿದುಕೊಂಡು ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಆಟೋ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಕಾರಿನಲ್ಲಿದವರು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಟೋ ಚಾಲಕ ಅಲ್ತಾಫ್‌ ಪಾಷಾ ಅವರ ಪತ್ನಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೇಗಾಯ್ತು ಅಪಘಾತ? ಆಟೋ ಗೋಪಿವೃತ್ತದಿಂದ ರೈಲ್ವೆ ನಿಲ್ದಾಣದ ಕಡೆಗೆ … Read more

ನೇಣು ಬಿಗಿದುಕೊಂಡು ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

-Bcom-student-hosanagara-rachana.

ಹೊಸನಗರ: ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಯುವತಿಯನ್ನು ರಚನಾ (20) ಎಂದು ಗುರುತಿಸಲಾಗಿದೆ. ಇವರು ಹೊಸನಗರದ ಕೊಡಚಾದ್ರಿ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದರು (College Student). ಹೊಸನಗರ ತಾಲೂಕಿನ ವಸವೆ ಗ್ರಾಮದಲ್ಲಿ ನಡೆದ ಘಟನೆ. ಕಾಲೇಜಿನಿಂದ ಮನೆಗೆ ಮರಳಿದ ರಚನಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶೃಂಗೇರಿಯಲ್ಲಿ ತೀರ್ಥಹಳ್ಳಿ ಮೂಲದ ವಿದ್ಯಾರ್ಥಿನಿಗೆ ಹೃದಯಾಘಾತ, … Read more

ಭದ್ರಾವತಿ – ಶಿವಮೊಗ್ಗ ರಸ್ತೆಯಲ್ಲಿ ರಾತ್ರಿ ಕಾರು ಅಡ್ಡಗಟ್ಟಿ ದಾಳಿ, ಆಗಿದ್ದೇನು?

Shimoga-Bhadravathi-Road-Old-Photo.webp

ಶಿವಮೊಗ್ಗ: ಭದ್ರಾವತಿಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುತ್ತಿದ್ದ ಧನುಷ್ ಎಂ. ಜಾಧವ್ ಎಂಬುವರ ಕಾರನ್ನು ಮತ್ತೊಂದು ಕಾರು ಓವರ್‌ಟೇಕ್ (Overtake) ಮಾಡಿ ಅಡ್ಡಗಟ್ಟಿ, ಅದರಲ್ಲಿದ್ದ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ನವೆಂಬರ್ 25ರ ರಾತ್ರಿ ಘಟನೆ ನಡೆದಿದೆ. ಭದ್ರಾವತಿಯಲ್ಲಿ (Bhadravathi) ಸ್ನೇಹಿತನ ಮದುವೆ ಕಾರ್ಯಕ್ರಮ ಮುಗಿಸಿ ಧನುಷ್ ಜಾಧವ್ ಶಿವಮೊಗ್ಗಕ್ಕೆ ಬರುತ್ತಿದ್ದರು. ಬಿದಿರೆ ಜಯಲಕ್ಷ್ಮಿ ಫೂಯೆಲ್ಸ್ (Jayalaxmi Fuels) ಬಳಿ ಹೆದ್ದಾರಿಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಕಾರು ಓವರ್‌ಟೇಕ್ ಮಾಡಿ … Read more