ಕಮಲಾ ನೆಹರು ಕಾಲೇಜು ಬಳಿ ಪಾಲಿಕೆ ಜಾಗಕ್ಕೆ ಉಪ ಲೋಕಾಯುಕ್ತ ದಿಢೀರ್ ಭೇಟಿ, ಅಧಿಕಾರಿಗಳ ವಿರುದ್ಧ ಸಿಡಿಮಿಡಿ

210325-Upa-Lokayukta-Visit-to-kasturba-college-in-shimoga.webp

ಶಿವಮೊಗ್ಗ : ನಗರದ ಕಮಲಾ ನೆಹರು ಮಹಿಳಾ ಕಾಲೇಜು ಪಕ್ಕದಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಜಾಗಕ್ಕೆ ಶುಕ್ರವಾರ ಭೇಟಿ (VISIT) ನೀಡಿದ ಉಪಲೋಕಾಯುಕ್ತ ನ್ಯಾ.ಫಣೀಂದ್ರ ಅಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಕಾಲೇಜಿಗೆ ಹೊಂದಿಕೊಂಡಿರುವ ಈ ಖಾಲಿ ಜಾಗದಲ್ಲಿ ತ್ಯಾಜ್ಯ, ಒಡೆದ ಮದ್ಯದ ಬಾಟಲಿಗಳು ತುಂಬಿದ್ದವು. ಇದರಿಂದ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದರು.‌ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಹಲವು ದೂರುಗಳನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಉಪಲೋಕಾಯುಕ್ತರು ಭೇಟಿ ನೀಡಿದರು‌. ತ್ಯಾಜ್ಯ, ಮದ್ಯದ ಬಾಟಲಿ ಕಂಡು ಅಸಮಾಧಾನ … Read more

ವಿವಿಧೆಡೆ ಮಳೆಯಾದರೂ ತಗ್ಗದ ತಾಪಮಾನ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಎಷ್ಟಿರುತ್ತೆ ಉಷ್ಣಾಂಶ?

WEATHER-REPORT-SHIMOGA-

ಹವಾಮಾನ ವರದಿ : ಜಿಲ್ಲೆಯ ವಿವಿಧೆಡೆ ಗುರುವಾರ ಮಳೆಯಾಗಿದೆ. ಆದರೂ ಬಿಸಿಲಿನ ಅಬ್ಬರ ತಗ್ಗಿಲ್ಲ. ಹಾಗಾಗಿ ಇವತ್ತು ಕೂಡ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಿರಲಿದೆ (Weather). ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 35 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌, … Read more

ಗಿಳಿ ಹಿಡಿಯಲು ಹೋದ ಯುವಕ ಸಾವು, ಇಬ್ಬರು ಪ್ರಾಣಪಾಯದಿಂದ ಪಾರು, ಹೇಗಾಯ್ತು ಘಟನೆ?

talaguppa-sachin-succumbed

ಸಾಗರ : ತೆಂಗಿನ ಮರದ (Tree) ಮೇಲೆ ಗೂಡು ಕಟ್ಟಿದ್ದ ಗಿಣಿಯನ್ನು ಹಿಡಿಯುವ ಸಾಹಸದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತೆಂಗಿನ ಮರ ತಲೆ ಮೇಲೆ ಬಿದ್ದು ಸಚಿನ್‌ (24) ಕೊನೆಯುಸಿರೆಳೆದಿದ್ದಾನೆ. ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಯುವಕರು ಪಾರಾಗಿದ್ದಾರೆ. ಒಣಗಿದ ತೆಂಗಿನ ಮರದ ತುದಿಯಲ್ಲಿ ಭೂತಯ್ಯನ ಕಟ್ಟೆ ಸಮೀಪ ಒಣಗಿದ ತೆಂಗಿನ ಮರದ (Tree) ತುದಿಯಲ್ಲಿ ಗಿಣಿಯೊಂದು ಗೂಡು ಕಟ್ಟಿತ್ತು. ಮರ ಉರುಳಿಸಿ ಗೂಡು ಮತ್ತು ಗಿಣಿಯನ್ನು ಸೆರೆ ಹಿಡಿಯಲು ಯುವಕರು ಮುಂದಾಗಿದ್ದರು ಎಂದು … Read more

ಲಕ್ಷ ಲಕ್ಷ ಮೌಲ್ಯದ ಮಾಂಗಲ್ಯ ಸರ ಖರೀದಿಸಿ ಮನೆಗೆ ಹೋಗಿ ನೋಡಿದಾಗ ಕಾದಿತ್ತು ಆಘಾತ, ಆಗಿದ್ದೇನು?

Crime-News-General-Image

ಶಿವಮೊಗ್ಗ : ಬಂಗಾರದ ಸರ (Gold Chain) ಖರೀದಿಸಿ ಸಿಟಿ ಬಸ್‌ನಲ್ಲಿ ಮನೆಗೆ ಮರಳುವ ಹೊತ್ತಿಗೆ ಕಳ್ಳತನವಾಗಿದೆ. ಮಹಿಳೆಯ ಬ್ಯಾಗಿನಿಂದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಖರೀದಿಸಿದ ಕೆಲವೇ ಹೊತ್ತಿಗೆ ಕಳವು ನಾಗರತ್ನಮ್ಮ ಎಂಬುವವರು ಗೋಪಿ ಸರ್ಕಲ್‌ ಸಮೀಪ ಆಭರಣ ಜ್ಯೂವೆಲರ್ಸ್‌ ಅಂಗಡಿಯಿಂದ 1.93 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಖರೀದಿಸಿದ್ದರು. ಅದಕ್ಕೆ 7 ಗ್ರಾಂ ತೂಕದ ತಾಳಿ, ಲಕ್ಷ್ಮಿ ಕಾಸು, ಗುಂಡುಗಳನ್ನು ಜ್ಯೂವೆಲರಿ ಅಂಗಡಿಯಲ್ಲೇ ಜೋಡಿಸಿಕೊಂಡಿದ್ದರು. ಒಟ್ಟು 2.50 ಲಕ್ಷ … Read more

ಹಸುವನ್ನು ರಕ್ಷಿಸಲು ಬಾವಿಗೆ ಇಳಿದ ವ್ಯಕ್ತಿ ಉಸಿರುಗಟ್ಟಿ ಸಾವು, ಎಲ್ಲಿ? ಹೇಗಾಯ್ತು ಘಟನೆ?

crime name image

ಕೋಣಂದೂರು : ಹಸುವನ್ನು ರಕ್ಷಿಸಲು ಬಾವಿಗಿಳಿದಿದ್ದ ವ್ಯಕ್ತಿ ಉಸಿರುಗಟ್ಟಿ (Suffocation) ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕಾರ್ಕೊಡ್ಲುವಿನಲ್ಲಿ ಘಟನೆ ಸಂಭವಿಸಿದೆ. ಕೇರಳದ ಸತೀಶ್ (45) ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಕಾರ್ಕೊಡ್ಲುವಿನಲ್ಲಿ ರಾಘು ಎಂಬುವರು ಈಚೆಗೆ ರಿಂಗ್ ಬಾವಿ ನಿರ್ಮಿಸಿದ್ದರು. ಮಂಗಳವಾರ ಹಸುವೊಂದು ಆಕಸ್ಮಿಕವಾಗಿ ಆ ಬಾವಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಸತೀಶ್ ಬಾವಿಗೆ ಇಳಿದಿದ್ದರು. ಈ ಸಂದರ್ಭ ಉಸಿರುಗಟ್ಟಿ (Suffocation) ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಸತೀಶ್‌ ಮತ್ತು ಹಸುವಿನ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ಬಾವಿಯಿಂದ ಮೇಲಕ್ಕೆ … Read more

ಎಪಿಎಂಸಿಗಳಲ್ಲಿ ಅಡಿಕೆ ನೇರ ಖರೀದಿ ನಿಷೇಧ, ಸಹಕಾರಿ ಸಂಘಗಳಿಗೆ ಸಿಗಲಿದೆ ಉತ್ತೇಜನ

meeting-with-minister-about-AMPC-and-Adike-Market

ಶಿವಮೊಗ್ಗ : ಎಪಿಎಂಸಿಗಳಲ್ಲಿ ಅಡಿಕೆ (Adike) ನೇರ ಖರೀದಿಗೆ ಕಡಿವಾಣ ಹಾಕಲಿದ್ದು, ಖಾಸಗಿಯವರಿಗೆ ಪರವಾನಗಿ ನೀಡುವುದಿಲ್ಲ. ಕ್ಯಾಂಪ್ಕೋಸ್, ಮ್ಯಾಮ್ಕೋಸ್‌ನಂತಹ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಶಿವಮೊಗ್ಗ ಜಿಲ್ಲೆಯ ಅಡಿಕೆ (Adike) ಬೆಳೆಗಾರರು ಹಾಗೂ ಅಡಿಕೆ ಮಾರಾಟ ಸಹಕಾರ ಸಂಘಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಗೋಪಾಲಕೃಷ್ಣ ಬೇಳೂರು ನೇತೃತ್ವದ ಸಹಕಾರ ಸಂಘಗಳ ಮುಖಂಡರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು. … Read more

ಶಿವಮೊಗ್ಗದ ಇಬ್ಬರು ವಿದ್ಯಾರ್ಥಿನಿಯರಿಗೆ ರ‍್ಯಾಂಕ್‌

NEWS-B.Ed-College-students-secure-rank.

ಶಿವಮೊಗ್ಗ : ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಕೆಎಸ್ಒಯು ಬಿ.ಎಡ್ ಅಧ್ಯಯನ ಕೇಂದ್ರಕ್ಕೆ 2021-22 ನೇ ಜನವರಿ ಬ್ಯಾಚ್‌ನ 2024 ರ ಪರೀಕ್ಷೆಯಲ್ಲಿ ಎರಡು ರ‍್ಯಾಂಕ್‌ಗಳು (Ranks) ಲಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಶಿಕ್ಷಣಾರ್ಥಿ ಲಕ್ಷ್ಮಿ. ಎಸ್ ಮೂರನೇ ರ‍್ಯಾಂಕ್‌ ಪಡೆದಿದ್ದು ಮತ್ತೊರ್ವ ಪ್ರಶಿಕ್ಷಣಾರ್ಥಿ ಸರಿತ ಸಿರಗುಪ್ಪೆ ಐದನೇ ರ‍್ಯಾಂಕ್‌ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿ ವರ್ಗ ಅಭಿನಂದಿಸಿದೆ. ಇದನ್ನೂ ಓದಿ » ಶರಾವತಿ ಭೂಗತ … Read more

ಸಹ್ಯಾದ್ರಿ ಕಾಲೇಜಿನಲ್ಲಿ ಬೆಳಗ್ಗೆ ಲ್ಯಾಬ್ ಬಾಗಿಲು ತೆರೆಯಲು ಬಂದ ಸಿಬ್ಬಂದಿಗೆ ಕಾದಿತ್ತು ಶಾಕ್‌, ಆಗಿದ್ದೇನು?

sahyadri-college-general-image

ಶಿವಮೊಗ್ಗ : ಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಲ್ಯಾಬ್‌ನ (Lab) ಬಾಗಿಲಿನ ಬೀಗ ಒಡೆದು ಸಂಶೋಧನೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ » ವಿಧಾನಸೌಧದಲ್ಲಿ ಕುವೆಂಪು ವಿ.ವಿ ಕುರಿತು ಚರ್ಚೆ, ಡಾ. ಸರ್ಜಿ ಏನೆಲ್ಲ ವಿಷಯ ಪ್ರಸ್ತಾಪಿಸಿದರು? ಮಾ.12ರಂದು ಬೆಳಗ್ಗೆ ಸಿಬ್ಬಂದಿ ಲ್ಯಾಬ್‌ ಬಾಗಿಲು ತೆರೆಯಲು ಬಂದಾಗಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಮತ್ತು ಎಸ್ಟೇಟ್‌ ಆಫೀಸರ್‌ಗೆ … Read more

ಶರಾವತಿ ಭೂಗತ ವಿದ್ಯುತ್‌ ಯೋಜನೆ, ಶಿವಮೊಗ್ಗದಲ್ಲಿ ಬೀದಿಗಿಳಿದ ಪರಿಸರವಾದಿಗಳು, ವಿದ್ಯಾರ್ಥಿಗಳು, ಕಾರಣವೇನು?

Sharavathi-project-Protest-in-shimoga-city.

ಶಿವಮೊಗ್ಗ : ಶರಾವತಿ ಅಂತರ್ಗತ ಜಲ ವಿದ್ಯುತ್‌ ಯೋಜನೆ (Project) ಮತ್ತು ಶರಾವತಿ ನದಿ ತಿರುವು ಯೋಜನೆ ವಿರೋಧಿಸಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಗೋಪಿ ಸರ್ಕಲ್‌ನಿಂದ ಮೆರವಣಿಗೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಶಿವಮೊಗ್ಗದ ಗೋಪಿ ಸರ್ಕಲ್‌ನಿಂದ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಪರಿಸರವಾದಿಗಳು, ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಿತು. ಯಾರೆಲ್ಲ … Read more

ಶಿವಮೊಗ್ಗ ಪಾಲಿಕೆ ವಲಯ ಕಚೇರಿಗೆ ವಾರ್ಡ್‌ಗಳ ವಿಂಗಡಣೆ ಅವೈಜ್ಞಾನಿಕ, ಜೆಡಿಎಸ್‌ ಆಕ್ರೋಶ, ಮನವಿಯಲ್ಲಿ ಏನೇನಿದೆ?

JDS-Submits-Memorandum-about-Palike-division-office

ಶಿವಮೊಗ್ಗ : ಆಡಳಿತದ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯನ್ನು ಮೂರು ವಿಭಾಗವಾಗಿ (Division) ವಿಂಗಡಿಸಲಾಗಿದೆ. ಆದರೆ ಈ ವಿಂಗಡಣೆಯಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕುವೆಂಪು ರಂಗಮಂದಿರದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಜೆಡಿಎಸ್‌ ನಗರ ಅಧ್ಯಕ್ಷ ದೀಪಕ್‌ ಸಿಂಗ್‌ ಮನವಿ ಸಲ್ಲಿಸಿದರು. ಏನೆಲ್ಲ ನ್ಯೂನತೆಗಳಿವೆ? ಪಾಲಿಕೆಯ ವಲಯ 1ರ ಕಚೇರಿಯು ವಿನೋಬಗರದಲ್ಲಿದೆ. ಈ ವಲಯಕ್ಕೆ ಟಿಪ್ಪು ನಗರ, ಸವಾಯಿ ಪಾಳ್ಯ ಮತ್ತು ವಿದ್ಯಾನಗರವನ್ನು ಸೇರಿಸಲಾಗಿದೆ. … Read more