ಮನೆ ಬಾಗಿಲು ತೆಗೆದಿತ್ತು, ಪತ್ನಿ ಇರಬೇಕೆಂದು ಒಳ ಬಂದ ವ್ಯಕ್ತಿಗೆ ಆಘಾತ ಕಾದಿತ್ತು, ಆಗಿದ್ದೇನು?

crime name image

SHIVAMOGGA LIVE NEWS | 8 JANUARY 2024 ತೀರ್ಥಹಳ್ಳಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ (Gold) ದೋಚಿ ಪರಾರಿಯಾಗಿದ್ದಾರೆ. ತೀರ್ಥಹಳ್ಳಿಯ ನೆಲ್ಲಿಕಟ್ಟೆಯ ರಾಮ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ರಾಮ ಅವರು ದೇವರ ಪೂಜೆಗೆ ಬೇರೆ ಊರಿಗೆ ತೆರಳಿದ್ದರು. ಮನೆ ಮರಳಿದಾಗ ಬಾಗಿಲು ತೆರೆದಿತ್ತು. ತಮ್ಮ ಪತ್ನಿ ಒಳಗಿರಬೇಕು ಎಂದು ಭಾವಿಸಿ ಒಳಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ, ನಗದು ಸೇರಿ ಒಟ್ಟು 1.40 ಲಕ್ಷ … Read more

ಹುಲಿಕಲ್‌ ಘಾಟ್‌ನಲ್ಲಿ ಪ್ರಪಾತಕ್ಕೆ ಉರುಳಿದ ಬಸ್, ಆಗಿದ್ದೇನು?

bus-mishap-at-hulikal-Ghat

SHIVAMOGGA LIVE NEWS, 7 JANUARY 2025 ಹೊಸನಗರ : ತಾಲೂಕಿನ ಹುಲಿಕಲ್ ಘಾಟ್ (Hulikal Ghat) ರಸ್ತೆ ತಿರುವಿನಲ್ಲಿ ಸಂಚರಿಸುತ್ತಿದ್ದ ಬಸ್ ಬ್ರೇಕ್ ವಿಫಲವಾಗಿ 60 ಅಡಿ ಆಳದ ಪ್ರಪಾತಕ್ಕೆ ಉರುಳಿದೆ. ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ದುರ್ಗಾಂಬಾ ಬಸ್‌ ಭಾನುವಾರ ತಡರಾತ್ರಿ 1.45ಕ್ಕೆ ಘಾಟಿ ರಸ್ತೆಯ ಶಿವಮೊಗ್ಗ ಜಿಲ್ಲೆ ಗಡಿ ಭಾಗದ ತಿರುವಿನಲ್ಲಿ ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. ಬಸ್ಸಿನಲ್ಲಿ 45 ಪ್ರಯಾಣಿಕರಿದ್ದರು. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು … Read more

ಕನಸಿನಕಟ್ಟೆಯಲ್ಲಿ ವಿದ್ಯುತ್‌ ಶಾಕ್‌ಗೆ ಯುವಕ ಸಾವು, ಹೇಗಾಯ್ತು ಘಟನೆ?

Kanasinakatte-Youth-Darshan-succumbed Electricity

SHIVAMOGGA LIVE NEWS, 6 JANUARY 2025 ಹೊಳೆಹೊನ್ನೂರು : ಪಂಪ್‌ಸೆಟ್‌ ಸ್ವಿಚ್‌ ಆಫ್‌ ಮಾಡಲು ತೆರಳಿದ್ದಾಗ ವಿದ್ಯುತ್‌ ಪ್ರವಹಿಸಿ (Electricity) ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಕನಸಿನಕಟ್ಟೆ ಗ್ರಾಮದ ದರ್ಶನ್‌ (20) ಮೃತ ಯುವಕ. ಭಾನುವಾರ ಸಂಜೆ ತಮ್ಮ ಜಮೀನಿನಲ್ಲಿ ಘಟನೆ ಸಂಭವಿಸಿದೆ. ನೀರು ಹಾಯಿಸಲು ದರ್ಶನ್‌ ತಮ್ಮ ತೋಟಕ್ಕೆ ತೆರಳಿದ್ದರು. ಈ ಸಂದರ್ಭ ಪಂಪ್‌ಸೆಟ್‌ನ ಸ್ವಿಚ್‌ ಆಫ್‌ ಮಾಡುವಾಗ ವಿದ್ಯುತ್‌ ಶಾಕ್‌ ತಗುಲಿದೆ ಎಂದು ಹೇಳಲಾಗುತ್ತಿದೆ. ನೆರೆಹೊರೆ ಜಮೀನಿನವರು ಇದನ್ನು ಗಮನಿಸಿ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ಹೊಳೆಹೊನ್ನೂರು … Read more

ಆನೆ ದಾಳಿ, ಸಾಗರದಲ್ಲಿ MLA ನೇತೃತ್ವದಲ್ಲಿ ಮಹತ್ವದ ಮೀಟಿಂಗ್‌, ಏನೆಲ್ಲ ಚರ್ಚೆಯಾಯ್ತು?

Beluru-Gopalakrishna-holds-meeting-with-forest-officials about elephants menace

SHIVAMOGGA LIVE NEWS, 6 JANUARY 2025 ಸಾಗರ : ಪ್ರವಾಸಿ ಮಂದಿರದಲ್ಲಿ ಅರಣ್ಯಾಧಿಕಾರಿಗಳ ಜೊತೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸಭೆ ನಡೆಸಿದರು. ಆನೆಗಳ (Elephants) ದಾಳಿ, ಬೆಳೆ ಹಾನಿ ಕುರಿತು ಚರ್ಚೆ ನಡೆಸಿದರು. ಸಮಾಲೋಚನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಬೇರೆ ಪ್ರದೇಶಗಳಿಂದ ಸಾಗರ ತಾಲೂಕಿಗೆ ಆನೆಗಳು ಲಗ್ಗೆ ಇಡುತ್ತಿವೆ. ಇವುಗಳ ನಿಯಂತ್ರಣದ ವಿಷಯವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ ಎಂದರು. ತಾಲ್ಲೂಕಿನ ಗೌತಮಪುರ, ಆನಂದಪುರಂ, ಗಿಳಲಗುಂಡಿ ಹಾಗೂ ಸುತ್ತಮುತ್ತಲ … Read more

ಅಡಿಕೆ ಧಾರಣೆ | 6 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS, 6 JANUARY 2025 ಮಾರುಕಟ್ಟೆ ಮಾಹಿತಿ : ಶಿವಮೊಗ್ಗ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 18009 29009 ಬೆಟ್ಟೆ 47499 53009 ರಾಶಿ 31001 51500 ಸರಕು 55599 79470 ಸಾಗರ ಮಾರುಕಟ್ಟೆ ಕೆಂಪುಗೋಟು 14821 31699 ಕೋಕ 9099 25309 ಚಾಲಿ 18699 34009 ಬಿಳೆ ಗೋಟು 11099 25929 ರಾಶಿ 34899 50989 ಸಿಪ್ಪೆಗೋಟು 7001 17331 ತೀರ್ಥಹಳ್ಳಿ ಮಾರುಕಟ್ಟೆ … Read more

ಶಿವಮೊಗ್ಗದಲ್ಲಿ ಪ್ರಕಟವಾಗುತ್ತೆ ಮತದಾರರ ಪಟ್ಟಿ, ನಿಮ್‌ ಹೆಸರಿದ್ಯಾ ಇಂದೇ ಚೆಕ್‌ ಮಾಡಿಕೊಳ್ಳಿ

Check-your-name-in-election-voters-list-2

SHIVAMOGGA LIVE NEWS, 6 JANUARY 2024 ಶಿವಮೊಗ್ಗ : ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅರ್ಹ ಅಂತಿಮ ಮತದಾರರ ಪಟ್ಟಿಯನ್ನು (Voters) ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಜನವರಿ 6ರಂದು ಪ್ರಕಟಿಸಲಾಗುತ್ತದೆ. ಯಾವುದಾದರೂ ಒಂದು ಮತಗಟ್ಟೆಯಲ್ಲಿ ಹೆಸರು ನೋಂದಣಿ, ಕ್ಷೇತ್ರದ ಮತ್ತೊಂದು ಮತಗಟ್ಟೆಗೆ ವರ್ಗಾವಣೆ, ಮರಣ ಹಾಗೂ ಇನ್ನಿತರ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಬಗ್ಗೆ ಈ ಹಿಂದೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಭಾವಚಿತ್ರ ಸಹಿತ ಮತದಾರರ ಪಟ್ಟಿಯನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ … Read more

ಪದವಿ ಮುಗಿಸಿ ಉದ್ಯೋಗ ಸಿಗದ ಗುಡ್‌ ನ್ಯೂಸ್‌, ಇಂದಿನಿಂದ ವಿಶೇಷ ಅಭಿಯಾನ

Shimoga-News-update

SHIVAMOGGA LIVE NEWS, 6 JANUARY 2024 ಶಿವಮೊಗ್ಗ : 2022-23 ಮತ್ತು 2023-24ನೇ ಸಾಲಿನಲ್ಲಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಪದವಿಯಲ್ಲಿ ತೇರ್ಗಡೆಯಾಗಿ ಉದ್ಯೋಗ ಸಿಗದ ಅರ್ಹ ಅಭ್ಯರ್ಥಿಗಳು ಯುವ ನಿಧಿ (Yuva Nidhi) ಯೋಜನೆಯಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಜನವರಿ 6ರಿಂದ 20ರ ವರೆಗೆ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅರ್ಹ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ https://sevasindhugs. karnataka.gov.in ಮೂಲಕ ಹೆಸರು ನೋಂದಣಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಪ್ರಥಮ ದರ್ಜೆ … Read more

ರಾತ್ರಿ ನಡೆದು ಹೋಗುತ್ತಿದ್ದ ಮಹಿಳೆಗೆ ಕಾದಿತ್ತು ಆಘಾತ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

gold-chain-theft-at-soraba-in-Shimoga-district.

SHIVAMOGGA LIVE NEWS, 6 JANUARY 2024 ಸೊರಬ : ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಅಂದಾಜು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು  (GOLD CHAIN) ಕಿತ್ತು ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೊರಬ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀಬಾಯಿ ಸರ ಕಳೆದುಕೊಂಡವರು. ಸೊರಬ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರುಳುತ್ತಿದ್ದ ವೇಳೆ … Read more

ಸಾಹಿತಿ ನಾ.ಡಿಸೋಜ ನಿಧನ, ಸಿಎಂ ಸೇರಿ ಹಲವರಿಂದ ಸಂತಾಪ, ಯಾರೆಲ್ಲ ಏನೆಲ್ಲ ಹೇಳಿದ್ದಾರೆ?

condolence-for-na-dsouza.

SHIVAMOGGA LIVE NEWS, 6 JANUARY 2025 ಸಾಗರ : ಕನ್ನಡದ ಹಿರಿಯ ಸಾಹಿತಿ ನಾ.ಡಿಸೋಜ ನಿಧನಕ್ಕೆ ರಾಜಕಾರಣಿಗಳು, ಸಾಹಿತಿಗಳು, ಸಾರ್ವಜನಿಕರುಗೆ ಕಂಬಿನಿ (Condolence) ಮಿಡಿದಿದ್ದಾರೆ. ನಾ.ಡಿಸೋಜ ಅವರು ಬರಹಗಳು ಮೂಲಕ ಜನಜಾಗೃತಿ ಮೂಡಿಸಿದ ಬಗೆಯನ್ನು ಸ್ಮರಿಸಿಕೊಂಡಿದ್ದಾರೆ. ಯಾರೆಲ್ಲ ಸಂತಾಪ ಸೂಚಿಸಿದ್ದಾರೆ? ಇಲ್ಲಿದೆ ಕೆಲವು ಪ್ರಮುಖರ ಸಂತಾಪ ಸಂದೇಶ. ಇದನ್ನೂ ಓದಿ » ನಾ.ಡಿಸೋಜ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಲು ಕಾರಣ ಆ ಎರಡು ಘಟ್ಟ, ಯಾವುದದು?

ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ತೀವ್ರ, ಕುಸಿದ ಕನಿಷ್ಠ ತಾಪಮಾನ, ಎಲ್ಲೆಲ್ಲಿ ಎಷ್ಟಿದೆ?

WEATHER-REPORT-SHIMOGA-

SHIVAMOGGA LIVE NEWS, 6 JANUARY 2024 ಹವಾಮಾನ ವರದಿ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಥಂಡಿ ಹೆಚ್ಚಾಗಿದೆ. ಸಂಜೆಯಾಗುತ್ತಲೆ ನಿಧಾನಕ್ಕೆ ಚಳಿ ಏರುತ್ತದ್ದು, ರಾತ್ರಿ ವೇಳೆ ಚಳಿ ಪ್ರಮಾಣ ತೀವ್ರವಾಗಿರಲಿದೆ. ಹಾಗಾಗಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ (Weather) ಇಳಿಕೆಯಾಗಿದೆ. ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 15 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ … Read more