SHIVAMOGGA LIVE NEWS | 8 JANUARY 2024
ತೀರ್ಥಹಳ್ಳಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ (Gold) ದೋಚಿ ಪರಾರಿಯಾಗಿದ್ದಾರೆ. ತೀರ್ಥಹಳ್ಳಿಯ ನೆಲ್ಲಿಕಟ್ಟೆಯ ರಾಮ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.
ರಾಮ ಅವರು ದೇವರ ಪೂಜೆಗೆ ಬೇರೆ ಊರಿಗೆ ತೆರಳಿದ್ದರು. ಮನೆ ಮರಳಿದಾಗ ಬಾಗಿಲು ತೆರೆದಿತ್ತು. ತಮ್ಮ ಪತ್ನಿ ಒಳಗಿರಬೇಕು ಎಂದು ಭಾವಿಸಿ ಒಳಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ, ನಗದು ಸೇರಿ ಒಟ್ಟು 1.40 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಐದು ತಿಂಗಳ ಹಿಂದೆಯೇ ಪತ್ತೆಯಾಗಿತ್ತು HMP ಸೋಂಕು, ಡಾ.ಸರ್ಜಿ ಹೇಳಿದ್ದೇನು?