ಲೈಟ್‌ ವಿಚಾರಕ್ಕೆ ಅಣ್ಣ, ಅತ್ತಿಗೆ ರಾಡ್‌ನಲ್ಲಿ ಹೊಡೆದ ವ್ಯಕ್ತಿ, ಏನಿದು ರಾದ್ಧಾಂತ?

Crime-News-General-Image

ಶಿವಮೊಗ್ಗ: ಲೈಟ್ ಹಾಕುವ ವಿಷಯಕ್ಕೆ ತಮ್ಮನೆ ಅಣ್ಣ ಮತ್ತು ಅತ್ತಿಗೆ ಮೇಲೆ ಹಲ್ಲೆ (attacks) ನಡೆಸಿದ್ದಾನೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗಾಯಗೊಂಡಿರುವ ದಂಪತಿ (ಹೆಸರು ಗೌಪ್ಯ) ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಗಲು ಹೊತ್ತಿನಲ್ಲೇ ಮನೆಯಲ್ಲಿ ಲೈಟ್‌ ಹಾಕಿದ್ದೀಯ ಎಂದು ಅತ್ತಿಗೆಗೆ ಬೈದು ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ. ಜಗಳ ಬಿಡಿಸಲು ಬಂದ ಅಣ್ಣನ ಮೇಲೂ ಸಹೋದರ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಮೈದುನನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ … Read more

ಮೇಯಲು ಹೋದ ಹಸು ಮನೆಗೆ ಬರಲಿಲ್ಲ, ಸಮೀಪದ ಜಮೀಗೆ ಹೋದಾಗ ಕಾದಿತ್ತು ಆಘಾತ, ಆಗಿದ್ದೇನು?

301123-Shimoga-Rural-Police-Station.webp

ಶಿವಮೊಗ್ಗ: ಮೇಯಲು ಹೋಗಿದ್ದ ಹಸುವನ್ನು ಹತ್ಯೆ (Cow slaughtered) ಮಾಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡದಲ್ಲಿ ನಡೆದಿದೆ. ಸಯ್ಯದ್‌ ಕರೀಂ ಎಂಬುವವರಿಗೆ ಸೇರಿದ ಹಸುವನ್ನು ಮಾಂಸಕ್ಕಾಗಿ ಹತ್ಯೆ ಮಾಡಿಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಣೆಯಾದ ಹಸು, ಹಗ್ಗದಿಂದ ಗುರುತು ಸಯ್ಯದ್‌ ಕರೀಂ ಎಂಬುವವರ ಹಸು ಸಾಕಿದ್ದರು. ಈಚೆಗೆ ಅದನ್ನು ಮೇಯಲು ಬಿಟ್ಟಿದ್ದ ಮನೆಗೆ ಮರಳಿರಲಿಲ್ಲ. ಹುಡುಕಾಟ ನಡೆಸಿದಾಗ ಜಮೀನೊಂದರ ಬಳಿ ಹಸುವಿನ ರಕ್ತ, ಹೊಟ್ಟೆಯ ಭಾಗದ ತ್ಯಾಜ್ಯ ಮತ್ತು ಹಸುವನ್ನು ಕಟ್ಟಲು ಬಳಸುತ್ತಿದ್ದ … Read more

ಕೊಮ್ಮನಾಳ್‌ನಲ್ಲಿ ರಾತ್ರಿ ಇದ್ದ ಬೈಕ್‌ ಬೆಳಗ್ಗೆ ನಾಪತ್ತೆ, ಆಗಿದ್ದೇನು?

crime name image

ಶಿವಮೊಗ್ಗ: ಕೊಮ್ಮನಾಳ್ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ (Bike theft). ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ರಾತ್ರೋರಾತ್ರಿ ನಾಪತ್ತೆಯಾಗಿದೆ. ಹಾಲೇಶಪ್ಪ ಎಂಬುವವರು ತಮ್ಮ ಹೋಂಡಾ ಆಕ್ಟಿವಾ ಬೈಕನ್ನು ಸಂಜೆ ಮನೆಯ ಮುಂದೆ ನಿಲ್ಲಿಸಿದ್ದರು. ಅಂದು ಮಧ್ಯರಾತ್ರಿವರೆಗೆ ಬೈಕ್ ಅಲ್ಲೇ ಇತ್ತು. ಮಾರನೇ ದಿನ ಬೆಳಗ್ಗೆ ನೋಡಿದಾಗ ಬೈಕ್ ಕಾಣೆಯಾಗಿತ್ತು ಎಂದು ಆರೋಪಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿಕಾರಿಪುರದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ, ಆಗಿದ್ದೇನು?

ಪಿಳ್ಳಂಗೆರೆಯಲ್ಲಿ ಚಿನ್ನಾಭರಣ ಕಳ್ಳತನ, ಹೇಗಾಯ್ತು ಘಟನೆ?

301123-Shimoga-Rural-Police-Station.webp

ಶಿವಮೊಗ್ಗ: ಮನೆಯೊಂದರ ಬೀಗ ಮುರಿದು (House burglary) ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಯಾರು ಇಲ್ಲದ ಸಮಯ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿದ್ದಾರೆ. ಇದನ್ನೂ ಓದಿ » ಉದ್ಯಮಿಗಳೇ ಹುಷಾರ್‌, ಶಿವಮೊಗ್ಗ ಜಿಲ್ಲೆಯ ಡಾಂಬಾರು ವ್ಯಾಪಾರಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು? ಶಿವಮೊಗ್ಗ ತಾಲೂಕು ಪಿಳ್ಳಂಗೆರೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಇಕ್ಬಾಲ್‌ ಅಹಮದ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಬೀರುವಿನಲ್ಲಿಟ್ಟಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ನೆಕ್ಲೇಸ್, ಮಕ್ಕಳ ಚಿನ್ನದ ಉಂಗುರಗಳು, ಕಿವಿ ಓಲೆ ಮತ್ತು ಬೆಳ್ಳಿಯ ಆಭರಣಗಳನ್ನು … Read more