ಮಂಡಗದ್ದೆ ಹೋಬಳಿಯಲ್ಲಿ ಕಲ್ಲು, ಮಣ್ಣು ಮಿಶ್ರಿತ ಗೋಧಿ ವಿತರಣೆ, ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 27 MARCH 2021 ನ್ಯಾಯಬೆಲೆ ಅಂಗಡಿಯಲ್ಲಿ  ಕಲ್ಲು, ಮಣ್ಣು ಮಿಶ್ರಿತ ಗೋಧಿ ವಿತರಣೆ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಆರೋಪಿಸಿದ್ದಾರೆ. ಕಲಬೆರಕೆ ಗೋಧಿಯನ್ನು ತಾಲೂಕು ಕಚೇರಿಯಲ್ಲಿರುವ ಆಹಾರ ವಿಭಾಗದ ಶಿರಸ್ತೇದಾರ್‌ ಅವರಿಗೆ ಪ್ರದರ್ಶಿಸಿ ಕ್ರಮಕ್ಕೆ ಆಗ್ರಹಿಸಿದರು. ಮಂಡಗದ್ದೆ ಹೋಬಳಿ ಸಿಂಗನಬಿದಿರೆ ನ್ಯಾಯಬೆಲೆ ಅಂಗಡಿಯಲ್ಲಿ ಕಲಬೆರಕೆ ಗೋಧಿ ವಿತರಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಟಿ.ಟಿ.ತಿಮ್ಮಪ್ಪ  ಆರೋಪಿಸಿದ್ದಾರೆ. ತಾಲೂಕು ಪಂಚಾಯಿತಿಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಪ್ರಕಾಶ್‌ ಅವರಿಗೂ … Read more

ಔಷಧ ಇಲ್ಲ ಅಂದಿದ್ದಕ್ಕೆ ಕಾರ್ಗಲ್‌ನಲ್ಲಿ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ

ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021 ಔಷಧ ಇಲ್ಲ ಎಂದು ಹೇಳಿದ್ದಕ್ಕೆ ಮೆಡಿಕಲ್‌ ಶಾಪ್‌ ಮಾಲೀಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಸ್ಥಳೀಯರೆ ಅತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕು ಕಾರ್ಗಲ್‌ ಮುಖ್ಯ ಪಟ್ಟಣ ಬೀದಿಯಲ್ಲಿನ ಲಕ್ಷ್ಮೀ ಮೆಡಿಕಲ್‌ ಶಾಪ್‌ ಮಾಲೀಕ ರಾಹುಲ್‌ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ಮಾಡಿದ ತೇಜಸ್‌ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೆಡಿಕಲ್‌ ಶಾಪ್‌ಗೆ ಬಂದ ತೇಜಸ್‌ ಕೆಲವು ಔಷಧಗಳನ್ನು ಖರೀದಿಸಲು ಕೇಳಿದ್ದಾನೆ. ಈ … Read more

ಶಿವಮೊಗ್ಗ ಗಾರ್ಡನ್ ಏರಿಯಾದ ಅಂಗಡಿಯೊಂದರಲ್ಲಿ ಬೆಂಕಿ

070321 Fire at Green Land Shop Garden Area 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 MARCH 2021 ಶಿವಮೊಗ್ಗದ ಗಾರ್ಡನ್‍ ಏರಿಯಾದ ಮಳಿಗೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಗೃಹ ಬಳಕೆ ವಸ್ತುಗಳ ಮಾರಾಟ ಮಾಡುವ ಗ್ರೀನ್ ಲ್ಯಾಂಡ್‍ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೆಲ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200 … Read more

ನಮ್ಮೂರಿಗೆ ಮದ್ಯದ ಅಂಗಡಿ ಬೇಡ, ರೊಚ್ಚಿಗೆದ್ದ ಮಹಿಳೆಯರಿಂದ ಸಾಗರದಲ್ಲಿ ರಸ್ತೆ ತಡೆ, ಪೊಲೀಸರ ಜೊತೆ ಮಾತಿನ ಚಕಮಕಿ

090121 Protest Against MSIL Shop in Sagara 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SAGARA NEWS | 09 JANUARY 2021 ನಮ್ಮೂರಿಗೆ ಮದ್ಯದ ಅಂಗಡಿ ಬೇಡ ಅಂತಾ ಆಗ್ರಹಿಸಿ, ಮಹಿಳೆಯರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಲಿಂಗದಹಳ್ಳಿ ಪಡವಗೋಡು ನಡುವೆ ಇರುವ ಬೆಳ್ಳಿಕೊಪ್ಪದಲ್ಲಿ ಎಂಎಸ್‍ಐಎಲ್ ಮದ್ಯದ ಅಂಗಡಿ ತೆರೆಯಲಾಗಿದೆ. ಇದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ … Read more

ಕಬ್ಬಿಣದ ಬೆಲೆ ದಿಢೀರ್ ಏರಿಕೆ, ಶಿವಮೊಗ್ಗದ ವೆಲ್ಡಿಂಗ್ ಅಂಗಡಿ ಮಾಲೀಕರ ಆಕ್ರೋಶ

281220 Welding Association Protest in Shimoga 1

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 28 DECEMBER 2020 ಕಬ್ಬಿಣದ ಬೆಲೆ ದಿಢೀರ್ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿ ಟನ್ ಕಬ್ಬಿಣಕ್ಕೆ ಸುಮಾರು 20 ಸಾವಿರ ರೂ. ಹೆಚ್ಚಳವಾಗಿದೆ. ಇದರಿಂದ ವೆಲ್ಡಿಂಗ್ ಶಾಪ್‍ನವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿ ಕರ್ನಾಟಕ ವೆಲ್ಡಿಂಗ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅಸೋಷಿಯೇಷನ್ ಸದಸ್ಯರು, ಪ್ರತಿ … Read more

ಗಾಂಧಿ ಬಜಾರ್ ಚಿನ್ನದ ವ್ಯಾಪಾರಿಗೆ ರಿವಲ್ವಾರ್ ತೋರಿಸಿ ಹಣ ದೋಚಿದ ಖದೀಮರು

shivamogga graphics map

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019 ಶಿವಮೊಗ್ಗದ ಚಿನ್ನ, ಬೆಳ್ಳಿ ವ್ಯಾಪಾರಿ ಮೇಲೆ ಹಲ್ಲೆ ನಡಸಿ, ರಿವಲ್ವಾರ್ ತೋರಿಸಿ ಹಣ ದೋಚಲಾಗಿದೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಧರ್ವ ನಗರ ನಿವಾಸಿ ಎಂ.ಕೆ.ಅನೀಸುರ್ ಇಸ್ಲಾಂ ಅವರ ಮೇಲೆ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ, ಹಣ ದೋಚಲಾಗಿದೆ. ಸಾದಿಕ್ ಅಲಿಯಾಸ್ ಸಾತು ಎಂಬಾತ ಕೃತ್ಯ ಎಸಗಿದವನು. ಗಾಂಧಿ ಬಜಾರ್’ನಲ್ಲಿರುವ ಅನೀಸುರ್ ಇಸ್ಲಾಂ ಅವರ … Read more