ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ನಲ್ಲಿ ಸಿಗ್ನಲ್‌ ಲೈಟ್‌

Signal-at-Usha-Nursing-home-circle.

ಶಿವಮೊಗ್ಗ: ಸಂಚಾರ ದಟ್ಟಣೆ ಉಂಟಾಗುತ್ತಿದ್ದ ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ನಲ್ಲಿ ತಾತ್ಕಾಲಿಕ ಸಿಗ್ನಲ್‌ ಲೈಟ್‌ ಅಳವಡಿಸಲಾದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಇಂದು ಸಿಗ್ನಲ್‌ ಲೈಟ್‌ (Signal Light) ಉದ್ಘಾಟಿಸಿದರು. ಉಷಾ ನರ್ಸಿಂಗ್‌ ಹೋಂ ಸರ್ಕಲ್‌ನಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ನಾಲ್ಕು ರಸ್ತೆಗಳು ಕೂಡುವುದರಿಂದ ಇಲ್ಲಿ ಸಂಚಾರ ದಟ್ಟಣೆ ಉಂಟಾಗುತಿತ್ತು. ಇದೇ ಕಾರಣಕ್ಕೆ ಈ ಸರ್ಕಲ್‌ನಲ್ಲಿ ಸಿಗ್ನಲ್‌ ಅಳವಡಿಸುವಂತೆ ಎಂಬ ಒತ್ತಾಯವಿತ್ತು. ಇದನ್ನೂ ಓದಿ » ಜೇನು ಸಾಕಾಣೆ, ಸಹಾಯಧನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?