ಗುಟ್ಕಾ ಜಗಿದು ಕಂಡಲ್ಲೆಲ್ಲ ಉಗುಳುವವರೆ ಹುಷಾರ್‌, ಕೋರ್ಟಲ್ಲಿ ಗೋಡೆಗೆ ಉಗಿದವನಿಗೆ ತಕ್ಕ ಪಾಠ ಕಲಿಸಿದ ಜಡ್ಜ್‌

Bhadravathi-Judge-Punishes-youth-for-spitting-gutka-in-court-premises

SHIVAMOGGA LIVE | 18 JULY 2023 BHADRAVATHI : ಗುಟ್ಕಾ ತಿಂದು ಕಂಡ ಕಂಡಲ್ಲಿ ಉಗುಳುವವರಿಗೇನು (spitting gutka) ಕಮ್ಮಿಯಿಲ್ಲ. ನ್ಯಾಯಾಲಯದ ಆವರಣದಲ್ಲಿ ಗುಟ್ಕಾ ಜಗಿದು ಗೋಡೆಗೆ ಉಗಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಧೀಶರು ತಕ್ಕ ಪಾಠ ಕಲಿಸಿದ್ದಾರೆ. ಆತನಿಂದಲೇ ಗೋಡೆ ಸ್ವಚ್ಛಗೊಳಿಸಿದ್ದಾರೆ. ಭದ್ರಾವತಿ ನ್ಯಾಯಾಲಯದಲ್ಲಿ ಸೋಮವಾರ ಘಟನೆ ಸಂಭವಿಸಿದೆ. ಹಿರಿಯ ಸಿವಿಲ್‌ ನ್ಯಾಯಾಲಯದ ಹೊರ ಆವರಣದಲ್ಲಿ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ಗೋಡೆ ಮೇಲೆ ಉಗುಳಿದ್ದ (spitting gutka). ಇದನ್ನು ಗಮನಿಸಿದ ನ್ಯಾಯಾಧೀಶರು ಆತನನ್ನು ಕರೆಸಿ ಬುದ್ದಿವಾದ ಹೇಳಿದ್ದಾರೆ. … Read more

ಕಂಡಲ್ಲೆಲ್ಲ ಉಗಿದರೆ ಬೀಳುತ್ತೆ ದಂಡ, ಶಿವಮೊಗ್ಗ ಪಾಲಿಕೆಯಿಂದ ಕಾರ್ಯಾಚರಣೆ ಆರಂಭ, ಇನ್ನು ಯಾವ್ಯಾವುಕ್ಕೆ ಇದೆ ಗೊತ್ತಾ ಫೈನ್?

300420 Spitting Fine by Mahanagara Palike in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020 ಎಲ್ಲೆಂದರಲ್ಲಿ ಉಗಿಯುವವರು, ಮಾಸ್ಕ್‌ ಹಾಕದೆ ನಗರದಾದ್ಯಂತ ಓಡಾಡುತ್ತಿರುವವರಿಗೆ ಈಗ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸುತಿದೆ. ದಿಢೀರ್‌ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ ದಂಡ ಹಾಕಿದೆ. ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಗ್ಗೆಯಿಂದ ಶಿವಮೊಗ್ಗ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಕಂಡಕಂಡಲ್ಲಿ ಉಗಿಯುವವರನ್ನು ಹಿಡಿದು, ಸ್ಥಳದಲ್ಲೇ ದಂಡ ಕಟ್ಟಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ. ಉಗಿದರೆ 500 ರೂ. ಫೈನ್‌ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಈತನಕ 12 … Read more