ರೆಡಿಯಾಗ್ತಿದೆ 2041ರ ಶಿವಮೊಗ್ಗಕ್ಕೆ ಮಹಾಯೋಜನೆ, ಏನೆಲ್ಲ ಪ್ಲಾನ್‌ ಇದೆ? ಇಲ್ಲಿದೆ ಡಿಟೇಲ್ಸ್‌

HS-Sundaresh-SUDA-President-Shimoga-Bhadravathi

ಶಿವಮೊಗ್ಗ: 2041ರ ವೇಳೆಗೆ ಶಿವಮೊಗ್ಗ – ಭದ್ರಾವತಿ ನಗರಗಳ ಜನಸಂಖ್ಯೆ ಗಮನದಲ್ಲಿ ಇಟ್ಟುಕೊಂಡು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಮಹಾಯೋಜನೆ (Plan) ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸುಡಾ) ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌ ಹೇಳಿದರು. ಸೂಡಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್‌, ಶಿವಮೊಗ್ಗ ಜಿಲ್ಲೆ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದೆ. ಇಂತಹ ಸಂದರ್ಭ ಜಿಲ್ಲಾ ಕೇಂದ್ರವನ್ನು ಜನಸಂಖ್ಯೆ, ವಾಹನ ದಟ್ಟಣೆ ಆಧರಿಸಿ, ಆಸ್ಪತ್ರೆ, ಶಾಲಾ-ಕಾಲೇಜು, ಕೆರೆ-ಕಾಲುವೆ, ಸಂಪರ್ಕ ರಸ್ತೆ, ಉದ್ಯಾನ ಸೇರಿದಂತೆ ಒಟ್ಟಾರೆ ನಗರದ ಸೌಂದರ್ಯ … Read more

ಶಿವಮೊಗ್ಗದ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

SUDA-Building-in-Shimoga

ಶಿವಮೊಗ್ಗ: ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು (ಸೂಡಾ) ತನ್ನ ವ್ಯಾಪ್ತಿಯ ಖಾಸಗಿ ಬಡಾವಣೆಗಳಲ್ಲಿ ಲಭ್ಯವಿರುವ ನಿವೇಶನಗಳನ್ನು (Site Sale) ಹಂಚಿಕೆ ಮಾಡುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್‌ 6ರವರೆಗೆ ವಿಸ್ತರಿಸಿದೆ. ಜುಲೈ 29ರಂದು ಪ್ರಕಟಣೆ ಹೊರಡಿಸಿ, ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಆ. 29 ಕಡೆಯ ದಿನವೆಂದು ತಿಳಿಸಿತ್ತು. ಆದರೆ ಕಾರಣಾಂತರದಿಂದ ಈ ಅವಧಿಯನ್ನು ಸೆ.6ರವರೆಗೆ ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್ ಹಾಗೂ ಮೊಬೈಲ್‌ ಸಂಖ್ಯೆ: 99800 05678ಗೆ ಸಂಪರ್ಕಿಸಬಹುದು ಎಂದು ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ … Read more

ಸೂಡಾ ನಿವೇಶನ, ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

Shimoga-News-update

SHIMOGA NEWS, 29 OCTOBER 2024 : ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ವತಿಯಿಂದ ಶಿವಮೊಗ್ಗದ ಊರಗಡೂರುಲ್ಲಿ ಲೇಔಟ್‌ (Site) ನಿರ್ಮಿಸಲಾಗಿದೆ. ಇಲ್ಲಿ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಈಗ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್‌ 25ರ ಒಳಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗುಡ್‌ ನ್ಯೂಸ್‌ SUDA extends layout Site … Read more

ಸೂಡಾಗೆ ಒಂದು ವಾರದ ಡೆಡ್‌ಲೈನ್‌, ಬೇಡಿಕೆ ಈಡೇರಿಸದಿದ್ದರೆ ಕಾನೂನು ಹೋರಾಟದ ವಾರ್ನಿಂಗ್

Nagarika-hitarakshane-vedike-portest-in-front-of-suda.

SHIVAMOGGA LIVE NEWS | 28 MAY 2024 SHIMOGA : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಪಕ್ಕದಲ್ಲಿ ಸಾರ್ವಜನಿಕರು ಬಳಕೆಯ ರಸ್ತೆಯಲ್ಲಿ ವಾಹನಗಳ ನಿಲುಗಡೆಗಾಗಿ ಶೆಡ್ (Shed) ನಿರ್ಮಿಸಲಾಗಿದೆ. ಇದನ್ನು ತಕ್ಷಣ ತೆರವು ಮಾಡಬೇಕು ಎಂದು ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಸೂಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಶೆಡ್‌ ನಿರ್ಮಿಸಿರುವುದು ಕಾನೂನು ಬಾಹಿರ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಶೆಡ್‌ ತೆರವಾಗಿಲ್ಲ. ಶಿವಮೊಗ್ಗ ಮಹಾನಗರ ಯೋಜನೆ-2030ರ ನಕ್ಷೆ ಪ್ರಕಾರ … Read more

ಸ್ನೇಹಿತರೊಂದಿಗೆ ಆಟವಾಡಲು ತೆರಳಿದ್ದ ಯುವಕ ಆಲ್ಕೊಳ ಬಳಿ ಈಜುಕೊಳದಲ್ಲಿ ಶವವಾಗಿ ಪತ್ತೆ

Drowned-Reference-Image-

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟೆಂಬರ್ 2021 ಕಾಲು ಜಾರಿ ಈಜುಕೊಳಕ್ಕೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಗುತ್ತಿಗೆದಾರನ ವಿರುದ್ಧ ದೂರು ದಾಖಲಾಗಿದೆ. ಆಲ್ಕೊಳದ ಪ್ರಿಯದರ್ಶಿನಿ ಲೇಔಟ್’ನಲ್ಲಿ ಘಟನೆ ಸಂಭವಿಸಿದೆ. ಸ್ನೇಹಿತರೊಂದಿಗೆ ಆಟವಾಡಲು ತೆರಳಿದ್ದ ಯುವಕ ಕಾಲು ಜಾರಿ ಈಜುಕೊಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಹೇಗಾಯ್ತು ಘಟನೆ? ಸಂದೇಶ್ (16) ಮೃತ ದುರ್ದೈವಿ. ನಂದಿನಿ ಬಡಾವಣೆಯ ನಿವಾಸಿ ಸಂದೇಶ್, ಸ್ನೇಹಿತರ ಜೊತೆ ಆಟವಾಡಲು ತೆರಳಿದ್ದ. ಪ್ರಿಯದರ್ಶಿನಿ ಬಡಾವಣೆಯ ಸಂಜೀವಿನಿ ಬಡಾವಣೆಯಲ್ಲಿ ಆಟವಾಡುತ್ತಿದ್ದಾಗ ಈಜುಕೊಳಕ್ಕೆ … Read more

ಸೂಡಾ ಅಧ್ಯಕ್ಷರಾಗಿ ಜ್ಯೋತಿಪ್ರಕಾಶ್, ನಾಲ್ವರು ಸದಸ್ಯರ ನೇಮಕ, ಯಾರೆಲ್ಲ ಸದಸ್ಯರು? ಅಧಿಕಾರವಧಿ ಎಷ್ಟು ವರ್ಷ?

shivamogga graphics map

‌ ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2020 ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ ಅವರು ಈ ಅಧಿಸೂಚನೆ ಪ್ರಕಟಿಸಿದ್ದಾರೆ. ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಗೋಪಾಳದ ಉಮಾ ಮೂರ್ತಿ, ಭದ್ರಾವತಿ ಜನ್ನಾಪುರದ ಬಿ.ಜಿ.ರಾಮಲಿಂಗಯ್ಯ, ಭದ್ರಾವತಿ ಹೊಸಮನೆ ಮುಖ್ಯ ರಸ್ತೆಯ ಕದಿರೇಶ್, ಶಿವಮೊಗ್ಗ ವಿದ್ಯಾನಗರದ ಎಸ್.ದೇವರಾಜ್ ಅವರನ್ನು ಪ್ರಾಧಿಕಾರದ … Read more