ಕಲ್ಯಾಣ ಮಂಟಪದಲ್ಲಿ ಗುರಾಯಿಸಿದ್ದಕ್ಕೆ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ, ಬಿಯರ್‌ ಬಾಟಲಿಯಿಂದ ಚುಚ್ಚಿ ಗಾಯ

crime name image

SHIVAMOGGA LIVE NEWS | 30 APRIL 2024 BHADRAVATHI : ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭದ ವೇಳೆ ಗುರಾಯಿಸಿದ ಎಂಬ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭ ಮುಗಿಸಿ ಮನೆಗೆ ತೆರಳುವಾಗ ದಾಳಿ ನಡೆಸಲಾಗಿದೆ.  ಸಮಾರಂಭದಲ್ಲಿ ಯತಿನ್‌ ಬೋಸ್ಲೆ ಮತ್ತು ಸುಹಾಸ್‌ ಎಂಬುವವರು ಗುರಾಯಿಸಿದ್ದಾರೆ ಎಂದು ಆರೋಪಿಸಿ ನಾಲ್ವರ ಗುಂಪು, ರಸ್ತೆಯಲ್ಲಿ ಇಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದೆ. ಬಿಯರ್‌ … Read more

‌ಭದ್ರಾ ನಾಲೆಯಲ್ಲಿ ಮುಳುಗಿ ಕುಂದಾಪುರ ಮೂಲದ ಇಬ್ಬರು ಬಾಲಕರು ಸಾವು

Anaveri-Bhadra-Canal-search-by-local-swimmers-and-experts

SHIVAMOGGA LIVE NEWS | 24 APRIL 2024 HOLEHONNURU : ಭದ್ರಾ ನಾಲೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಗುಡುಮಗಟ್ಟೆಯಲ್ಲಿ ಘಟನೆ ಸಂಭವಿಸಿದೆ. ಆನವೇರಿಯ ಉಮೇಶ್‌ ಶೆಟ್ಟಿ ಅವರ ಮಗ ರಜತ್‌ (10) ಮತ್ತು ಕುಂದಾಪುರದ ತೆಕ್ಕಟ್ಟೆ ನಿವಾಸಿ ನವೀನ್‌ ಶೆಟ್ಟಿ ಅವರ ಮಗ ರೋಹನ್‌ (15) ಮೃತ ದುರ್ದೈವಿಗಳು. ಆಟವಾಡಲು ಹೋಗಿ ನೀರುಪಾಲದ ಮಕ್ಕಳು ರಜತ್‌ ಮತ್ತು ರೋಹನ್‌ ನೀರಿನಲ್ಲಿ ಆಟವಾಡಲು ಭದ್ರಾ ನಾಲೆ ಬಳಿ ಹೋಗಿದ್ದರು. ಈ ವೇಳೆ ಆಯಾತಪ್ಪಿ … Read more

ಭದ್ರಾವತಿಯ ಎರಡು ದೇಗುಲಗಳಲ್ಲಿ ದೇವರ ಆಭರಣ, ಕಾಣಿಕೆ ಹಣ ಕಳ್ಳತನ, ಎಲ್ಲೆಲ್ಲಿ ನಡೆಯಿತು ಘಟನೆ?

Bhadravathi-Rural-Police-Station

SHIVAMOGGA LIVE NEWS | 23 APRIL 2024 BHADRAVATHI : ದೇವಸ್ಥಾನದ ಮುಂಬಾಗಿಲಿನ ಬೀಗ ಒಡೆದು, ಹುಂಡಿ ಹಣ, ದೇವರ ಆಭರಣ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಬದನೇಹಾಳ್‌ ಗ್ರಾಮದ ಹುಚ್ಚಮ್ಮ ದೇವಸ್ಥಾನ ಮತ್ತು ಬಂಡಿಗುಡ್ಡದ ಮಾರಿಯಮ್ಮ ದೇಗುಲಗಳಲ್ಲಿ ಘಟನೆ ಸಂಭವಿಸಿದೆ. ನಿತ್ಯ ಪೂಜೆಗೆ ಬೆಳಗ್ಗೆ ಅರ್ಚಕ ಕುಮಾರ್‌ ದೇಗುಲಕ್ಕೆ ಬಂದಾಗ ಕಳ್ಳತನ ಗೊತ್ತಾಗಿದೆ. ಎರಡು ದೇಗುಲಗಳಲ್ಲಿ ಸುಮಾರು 20 ಸಾವಿರ ರೂ. ಕಾಣಿಕೆ ಹಣ, ದೇವರ ಅಭರಣಗಳು ಸೇರಿ ಒಟ್ಟು 83,200 ರೂ. ಮೌಲ್ಯದ … Read more

ಗಾಳಿ, ಮಳೆ, ತೀರ್ಥಹಳ್ಳಿಯಲ್ಲಿ ವ್ಯಕ್ತಿ ಸಾವು, ಆನಂದಪುರ, ಆಗುಂಬೆ ಸೇರಿ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ?

tree-fall-on-road-near-konandur-and-Anandapura

SHIVAMOGGA LIVE NEWS | 18 APRIL 2024 RAIN REPORT : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ಜೋರು ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಧರೆಗುರುಳಿರುವ ವರದಿಯಾಗಿದೆ. ತೀರ್ಥಹಳ್ಳಿಯಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ತೀರ್ಥಹಳ್ಳಿ : ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಜೋರು ಗಾಳಿಗೆ ಕೋಣಂದೂರು ಸಮೀಪದ ದೇಮ್ಲಾಪುರದಲ್ಲಿ ಮರ ಬಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೋಣಂದೂರಿನಿಂದ ಸಂಪಗಾರಿಗೆ … Read more

ಕಾರು, ಗ್ಯಾರೇಜ್‌ನಲ್ಲಿದ್ದ ವಸ್ತುಗಳು ಭಸ್ಮ, ಮಾಲೀಕನಿಗೆ ಗಾಯ, ಹೇಗಾಯ್ತು ಘಟನೆ?

car-gas-leak-near-koppa-circle-in-Thirthahalli

SHIVAMOGGA LIVE NEWS | 12 APRIL 2024 THIRTHAHALLI : ಕಾರಿನ ಗ್ಯಾಸ್ ಸಿಲಿಂಡರ್‌ ಸ್ಪೋಟೊಗೊಂಡು ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಾರುತಿ ಓಮ್ನಿ ಕಾರು ಸುಟ್ಟು ಕರಕಲಾಗಿದೆ. ಗ್ಯಾರೇಜಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿವೆ. ತೀರ್ಥಹಳ್ಳಿ  ಕುವೆಂಪು ವೃತ್ತದ ಬಳಿ ಗ್ಯಾರೇಜಿನಲ್ಲಿ ಘಟನೆ ಸಂಭವಿಸಿದೆ. ಕೂಡಲೆ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಗ್ಯಾರೇಜ್ ಮಾಲೀಕ ವಿಠಲ್ ಗಾಯಗೊಂಡಿದ್ದಾರೆ. ಅವರನ್ನು ಜೆ.ಸಿ.ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿವೈಎಸ್‌ಪಿ ಗಜಾನನ ವಾಮನಾ ಸುತಾರ ಸ್ಥಳಕ್ಕಾಗಮಿಸಿ … Read more

ತುಂಗಾ ನದಿಯಲ್ಲಿ ಮೂವರು ಬಾಲಕರು ನೀರು ಪಾಲು

three-SSLC-students-from-thirthahalli-no-more

SHIVAMOGGA LIVE NEWS | 2 APRIL 2024 THIRTHAHALLI : ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ಸೋಮವಾರ ಸಂಜೆ ನಡೆದಿದೆ. ರಫನ್, ಆಯನ್, ಸಮ್ಮರ್ ಮೃತಪಟ್ಟ ಬಾಲಕರು. ಪಟ್ಟಣದ ರಾಮ ಮಂಟಪದ ಪಕ್ಕ ಸಂಜೆ ಘಟನೆ ನಡೆದಿದೆ. ಮೂವರು ಬಾಲಕರ ಶವ ಪತ್ತೆಯಾಗಿದೆ. ತುಂಗಾ ನದಿಯ ತೀರದಲ್ಲಿ ಅಗ್ನಿಶಾಮಕ ಸಿಬ್ಬಂದು ಮತ್ತು ಪೊಲೀಸರು ಸತತ ಒಂದು ಘಂಟೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು … Read more

BREAKING NEWS | ಬೆಂಗಳೂರು ಬಾಂಬ್‌ ಸ್ಪೋಟ ಕೇಸ್‌, ತೀರ್ಥಹಳ್ಳಿಯಲ್ಲಿ ದಾಳಿ

NIA-raid-in-Thirthahalli.

SHIVAMOGGA LIVE NEWS | 27 MARCH 2024 THIRTHAHALLI : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಸಂಬಂಧ ವಿಚಾರಣೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ದಾಳಿ ನಡೆಸಿದ್ದಾರೆ. ಎರಡು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮತ್ತು ಮಾರ್ಕೆಟ್‌ ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಇದನ್ನೂ ಓದಿ – ಊರುಗಡೂರಿನಲ್ಲಿ ಶೆಡ್‌ ಮೇಲೆ ಪೊಲೀಸ್‌ ದಾಳಿ | ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಅಪಘಾತ, ಗಂಭೀರ ಗಾಯ

ಕಾಡಿನ ಮಧ್ಯೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಗ್ರಾಮಸ್ಥರ ಶಂಕೆ ಏನು?

unknown-body-at-avige-near-Bykodu-in-Sagara-taluk

SHIVAMOGGA LIVE NEWS | 4 MARCH 2024 BYKODU : ಕಾಡಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿರುವ ಮೃತದೇಹ ಸಂಪೂರ್ಣ ಕೊಳೆತಿದೆ. ಗ್ರಾಮಸ್ಥರು ಕಟ್ಟಿಗೆಗಾಗಿ ಕಾಡಿಗೆ ತೆರಳಿದ್ದಾಗ ಮೃತದೇಹ ಪತ್ತೆಯಾಗಿದೆ. ಸಾಗರ ತಾಲೂಕು ಬ್ಯಾಕೋಡು ಸಮೀಪದ ಆವಿಗೆಯ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಗ್ರಾಮಸ್ಥರ ದೂರಿನ ಮೇರೆಗೆ ಕಾರ್ಗಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಮತ್ತು ಡಿಎನ್‌ಎ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಲಾಗಿದೆ. ಪತ್ನಿ ಕೊಂದವನ ಮೃತದೇಹ ಶಂಕೆ 2024ರ … Read more

ಫೆ.27ರಂದು ಗ್ರಾಮ, ತಾಲೂಕು ಬಂದ್‌ಗೆ ಕರೆ, ಶಿವಮೊಗ್ಗದಲ್ಲಿ ಹೇಗಿರುತ್ತೆ ಹೋರಾಟ?

KT-Gangadhar-Farmer-Leader

SHIVAMOGGA LIVE NEWS | 21 FEBRUARY 2024 SHIMOGA : ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಫೆ.27ರಂದು ಗ್ರಾಮ ಹಾಗೂ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 11ಕ್ಕೆ ಮಲವಗೊಪ್ಪದ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಕೆ.ಟಿ.ಗಂಗಾಧ‌ರ್ ತಿಳಿಸಿದರು. ರೈತರ ಹಕ್ಕುಗಳಿಗಾಗಿ ದೆಹಲಿ ಗಡಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರ ಆಗ್ರಹಕ್ಕೆ … Read more

ಮೆಕ್ಕೆಜೋಳದ ರಾಶಿಗೆ ಬೆಂಕಿ, ಸುಟ್ಟು ಕರಕಲಾಯ್ತು ಬೆಳೆ

Mekke-Jola-incident-near-anavatti.

SHIVAMOGGA LIVE NEWS | 9 FEBRUARY 2024 ANAVATTI : ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಬೆಣ್ಣೆಗೇರಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬಸವರಾಜ ಪೇಟ್ಯಾರ್‌ ಎಂಬುವವರು 12 ಎಕರೆ ಹೊಲದಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಮುರಿದು ರಾಶಿ ಹಾಕಿದ್ದರು. ಮೆಕ್ಕೆಜೋಳದ ರಾಶಿಗೆ ಬೆಂಕಿ ತಗುಲಲು ಕಾರಣವೇನು ಅನ್ನುವುದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ವಿಚಾರ ತಿಳಿದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬಂಧ ಪೊಲೀಸ್‌ ಠಾಣೆಗೆ ದೂರು … Read more