ಕೂಡಲಿಯಲ್ಲಿ ಮತ್ತೆ ಆತಂಕ, ಸ್ನಾನಘಟ್ಟದ ಬಳಿಗೆ ಬಂದು ಕುಳಿತ ಮೊಸಳೆ

031221 Crocodile in Kudli Village in Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021 ತುಂಗಾ, ಭದ್ರಾ ಸಂಗಮ ಸ್ಥಳ ಕೂಡಲಿಯಲ್ಲಿ ಮತ್ತೆ ಮೊಸಳೆ ಭೀತಿ ಎದುರಾಗಿದೆ. ಇವತ್ತು ಬೆಳಗ್ಗೆಯಿಂದ ಮೊಸಳೆಯು ಸ್ನಾನ ಘಟದ ಬಳಿಗೆ ಬಂದು ಕುಳಿತಿದೆ. ಕಳೆದ ವಾರ ಸ್ನಾನ ಘಟ್ಟದ ಎದುರು ಭಾಗದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇವತ್ತು ಸ್ನಾನ ಘಟ್ಟದ ಬಳಿಗೆ ಬಂದು ಕುಳಿತಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ. ದಡದಲ್ಲೇ ನಿಂತ ಭಕ್ತರು ಸ್ನಾನ ಘಟ್ಟದ ಬಳಿಗೆ ಮೊಸಳೆ ಬಂದಿರುವುದು ಬೆಳಗ್ಗೆ … Read more

ಕೂಡಲಿಯ ತುಂಗಭದ್ರಾ ಸಂಗಮ ಸ್ಥಳದಲ್ಲಿ ಮೊಸಳೆ ಪ್ರತ್ಯಕ್ಷ, ಫೋಟೊ ವೈರಲ್

281121 Crocodile found at Kudli TungaBhadra River

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 28 ನವೆಂಬರ್ 2021 ಪುಣ್ಯ ಸ್ನಾನಕ್ಕೆ ಹೆಸರಾದ ಕೂಡಲಿಯಲ್ಲಿ ಮೊಸಳೆ ಆತಂಕ ಶುರುವಾಗಿದೆ. ತುಂಗಾ, ಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಮೊಳಸೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹೊಳೆ ದಂಡೆ ಮೇಲೆ ಮೊಸಳೆಯೊಂದು ಬಹುಹೊತ್ತು ಕುಳಿತಿತ್ತು. ಸ್ಥಳೀಯರು ಇದರ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದೆ. ಮಳೆ ಮತ್ತು ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಮೊಸಳೆಗಳು ನೀರಿನ ಜೊತೆಗೆ ತೇಲಿ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೂಡಲಿ … Read more

ಹಣಗೆರೆ ದೇವಸ್ಥಾನದ ಸಿಬ್ಬಂದಿ ಮನೆ ಕಳ್ಳತನ, ಕಡೂರು, ಸಾಗರ, ಶಿವಮೊಗ್ಗದ ಐವರು ಅರೆಸ್ಟ್, ಎಷ್ಟು ಮೊತ್ತದ ಚಿನ್ನಾಭರಣ ಸಿಕ್ಕಿದೆ?

261121 Theft Case Five Arrest in Malur Police Station limits

ಶಿವಮೊಗ್ಗ ಲೈವ್.ಕಾಂ | THIRTHAHALLI  NEWS | 26 ನವೆಂಬರ್ 2021 ಹಣಗೆರೆ ದೇವಸ್ಥಾನದ ಡಿ ದರ್ಜೆ ನೌಕರನ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಕಡೂರಿನ ತಿಮ್ಮಣ್ಣ (61), ಸಾಗರದ ರಾಮನಗರದ ಅಪ್ಸರ್ (38), ಶಿವಮೊಗ್ಗ ಬೊಮ್ಮನಕಟ್ಟೆಯ ನರಸಿಂಹ (45). ಕಿರಣ್ (26), ನ್ಯೂ ಮಂಡ್ಲಿಯ ಸತ್ತಾರ್ ಅಬ್ದುಲ್ (50) ಬಂಧಿತರು. ಏನಿದು ಪ್ರಕರಣ? ತೀರ್ಥಹಳ್ಳಿ ತಾಲೂಕು ಹಣಗೆರೆ ಕಟ್ಟೆಯ ಸಯ್ಯದ … Read more

ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇಗುಲದ ಜಾತ್ರೆಗೆ ದಿನಾಂಕ ಫಿಕ್ಸ್, ಪೋಸ್ಟರ್ ವೈರಲ್

marikamba jathre

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ನವೆಂಬರ್ 2021 ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಜಾತ್ರೆಗೆ ದಿನಾಂಕ ನಿಗದಿಯಾಗಿದೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗಿದೆ. ಈಗಾಗಲೆ ಇದರ ಪೋಸ್ಟರ್ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2022ರ ಫೆಬ್ರವರಿ 22 ರಿಂದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭವಾಗಲಿದೆ. ಫೆ.26ರವರೆಗೆ ಜಾತ್ರೆ ನಡೆಯಲಿದೆ. ಐದು ದಿನ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ. ಇವತ್ತು ಕೋಟೆ ಶ್ರೀ ಮಾರಿಕಾಂಬ ಸೇವಾ … Read more

ಪ್ರಸಾದ ಸೇವಿಸಿದ ಹಲವರು ಅಸ್ವಸ್ಥ, ಸಾಗರ ಆಸ್ಪತ್ರೆಗೆ ದಾಖಲು

141121 Sagara People Admitted to Hopital

ಶಿವಮೊಗ್ಗ ಲೈವ್.ಕಾಂ | SAGARA NEWS | 14 ನವೆಂಬರ್ 2021 ಸಾಗರ ನಗರದ ದೇವಸ್ಥಾನ ಒಂದರಲ್ಲಿ ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ. ಎಲ್ಲರನ್ನು ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿನೋಬನಗರದ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸೇವಿಸಿದ ಸುಮಾರು 20 ಮಂದಿ ಅಸ್ವಸ್ಥಗೊಂಡಿದ್ದಾರೆ. ಶಾಸಕ ಹಾಲಪ್ಪ ಭೇಟಿ ಅಸ್ವಸ್ಥರಾದವರನ್ನು ಕೂಡಲೆ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ವಿಚಾರ ತಿಳಿಯುತ್ತಿದ್ದಂತೆ ಶಾಸಕ ಹರತಾಳು ಹಾಲಪ್ಪ ಅವರು ಆಸ್ಪತ್ರೆಗೆ … Read more

ದುರ್ಗಿಗುಡಿ ಶನಿಮಹಾತ್ಮ ದೇಗುಲಕ್ಕೆ ತೆರಳಿದ್ದಾಗ ಮೊಬೈಲ್ ಕಳವು

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ನವೆಂಬರ್ 2021 ದುರ್ಗಿಗುಡಿ ಶನಿಮಹಾತ್ಮ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಳವು ಮಾಡಲಾಗಿದೆ. ಮಹೇಶ್ ಎಂಬುವವರು ಶನಿಮಹಾತ್ಮ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ದೇಗುಲದ ಬಳಿ ಜನ ಜಂಗುಳಿ ಇತ್ತು. ಈ ಸಂದರ್ಭ ಅವರ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಳವು ಮಾಡಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ತಜ್ಞರಿಂದ ಸೂಕ್ತ ಚಿಕಿತ್ಸೆ, ಸೂಕ್ತ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ಮೇರಾ ಆಚರಣೆ, ಹೇಗಿತ್ತು ವೈಭವ?

061121 Mera Deepavali in Banjara Community

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ನವೆಂಬರ್ 2021 ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ತಾಂಡಾಗಳಲ್ಲಿ ಮೇರಾ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು. ಕರೋನ ಹಿನ್ನೆಲೆ ಕಳೆದ ವರ್ಷ ಆಚರಣೆಗೆ ಅಡ್ಡಿಯುಂಟಾಗಿತ್ತು. ಈ ಭಾರಿ ಸಾಂಪ್ರದಾಯಿಕವಾಗಿ ಮೇರಾ ಆಚರಿಣೆ ಮಾಡಲಾಯಿತು. ಆಯನೂರಿನಲ್ಲಿ ಲಂಬಾಣಿ ಸಮುದಾಯದವರ ಮೇರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸಂಪ್ರದಾಯ, ಆಚರಣೆಗಳೆಂದರೆ ಮೂಗು ಮುರಿಯುವವರ ಮಧ್ಯೆ, ಲಂಬಾಣಿ ಸಮುದಾಯದವರು ಮೇರಾ ಅಚರಣೆಯನ್ನು ಮುಂದುವರೆಸುತ್ತಿದ್ದಾರೆ. ಇದು ಸಮುದಾಯವನ್ನು ಸಾಂಪ್ರದಾಯಿಕವಾಗಿ ಗಟ್ಟಿಗೊಳಿಸುತ್ತಿದೆ. ಮೇರಾ ಹಬ್ಬ ಅಂದರೇನು? … Read more

ಕೂಡಲಿ ದೇಗುಲದಲ್ಲಿ ಗೋ ಪೂಜೆ, ಪ್ರಧಾನಿ ಮೋದಿ ಕಾರ್ಯಕ್ರಮದ ಲೈವ್ ವೀಕ್ಷಣೆ

051121 Gho Pooje at Kudli Temple

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021 ಶ್ರೀ ಕ್ಷೇತ್ರ ಕೂಡಲಿಯಲ್ಲಿ ಇವತ್ತು ಗೂ ಪೂಜೆ ಮತ್ತು ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಕಾರ್ಯಕ್ರಮದ ನೇರ ಪ್ರದರ್ಶನ ಆಯೋಜಿಸಲಾಗಿತ್ತು. ತಾಲೂಕು ಆಡಳಿತ, ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಕಾರ್ಯಕ್ರಮ ನಡೆಯಿತು. ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಮೋದಿ ಕಾರ್ಯಕ್ರಮದ ಲೈವ್ ಉತ್ತರಾಖಂಡದ ಕೇದಾರನಾಥದಲ್ಲಿ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ … Read more

ಶಿವಮೊಗ್ಗದಾದ್ಯಂತ ಏಕಕಾಲಕ್ಕೆ ಕನ್ನಡ ಗೀತ ಗಾಯನ, ಜೋಗದ ವಿಡಿಯೋ ವರೈಲ್, ಎಲ್ಲೆಲ್ಲಿ ಹೇಗೆ ಮೊಳಗಿತು ಕನ್ನಡ ಡಿಂಡಿಮ?

291021 Karnataka Rajyotsava at jog falls

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಅಕ್ಟೋಬರ್ 2021 ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ಜಿಲ್ಲೆಯಾದ್ಯಂತ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಯಿತು. ಸುಮಾರು 15 ಸ್ಥಳಗಳಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ಜನರು ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲೆಲ್ಲಿ ಹೇಗಿತ್ತು ಗೀತ ಗಾಯನ? ಜಿಲ್ಲಾಧಿಕಾರಿ ಕಚೇರಿ : ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ತಹಶೀಲ್ದಾರ್ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ … Read more

ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿ ಬೈಕ್ ಫುಟ್ ರೆಸ್ಟ್ ಮೇಲೆ ಕಾಲಿಟ್ಟಿದ್ದಕ್ಕೆ ಜಗಳ, ಇಬ್ಬರ ಮೇಲೆ ಹಲ್ಲೆ

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಅಕ್ಟೋಬರ್ 2021 ಬೈಕಿನ ಫುಟ್ ರೆಸ್ಟ್ ಮೇಲೆ ಕಾಲಿಟ್ಟ ವಿಚಾರಕ್ಕೆ ಯುವಕರ ಮಧ್ಯೆ ಗಲಾಟೆಯಾಗಿದೆ. ಘಟನೆಯಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯ ಹರಕೆರೆಯಲ್ಲಿ ಘಟನೆ ಸಂಭವಿಸಿದೆ. ಶಿವಾಲಯ ಸಮೀಪ ಟೀ ಅಂಗಡಿಯೊಂದರ ಬಳಿ ಗಲಾಟೆಯಾಗಿದೆ. ಕಾಲಿಟ್ಟಿದ್ದಕ್ಕೆ ಶುರುವಯ್ತು ಜಗಳ ಇತ್ತೀಚೆಗೆ ಸುನಿಲ್ ಎಂಬುವವರು ಸ್ನೇಹಿತನೊಂದಿಗೆ ವಾಕಿಂಗ್’ಗೆ ತೆರಳಿದ್ದರು. ಮಳೆ ಬಂದಿದ್ದರಿಂದ ಟೀ ಅಂಗಡಿಯೊಂದರ ಮುಂದೆ ನಿಂತಿದ್ದರು. … Read more