VISLನಲ್ಲಿ ಕೆಜಿಗಟ್ಟಲೆ ತಾಮ್ರ ಕದ್ದವರು ಅರೆಸ್ಟ್‌, ಯಾರದು ಬಂಧಿತರು?

110823 VISL Factory Bhadravathi

BHADRAVATHI NEWS, 8 OCTOBER 2024 : ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ತಾಮ್ರದ ತಂತಿ (COPPER WIRE) ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಬೈಕ್‌, ಆಟೋ ಮತ್ತು ತಾಮ್ರದ ತಂತಿಯನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಖಾನೆಯ ಸೆಂಟ್ರಲ್‌ ಎಲೆಕ್ಟ್ರಿಕ್‌ ವರ್ಕ್‌ ಶಾಪ್‌ ರಿಪೇರಿಗೆ ತರಿಸಲಾಗಿದ್ದ ವೆಲ್ಡಿಂಗ್‌ ಮೆಷಿನ್‌ನಲ್ಲಿದ್ದ 50 ಕೆ.ಜಿ ತೂಕದ ತಾಮ್ರದ ತಂತಿ ಕಳುವಾಗಿತ್ತು. ಈ ಸಂಬಂಧ ವಿಐಎಸ್‌ಎಲ್‌ ಕಾರ್ಖಾನೆಯ ಭದ್ರತಾ ಸಿಬ್ಬಂದಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. … Read more

ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಆರು ಕತ್ತೆಗಳ ಕಳ್ಳತನ

Crime-News-General-Image

SHIMOGA NEWS, 8 OCTOBER 2024 : ತೋಟದಲ್ಲಿ ಕಟ್ಟಿದ್ದ ಆರು ಕತ್ತೆಗಳು (Donkeys) ಕಳ್ಳತನವಾಗಿವೆ. ಮಾಲೀಕರು ಬೆಳಗ್ಗೆ ತೋಟಕ್ಕೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಆರು ಕತ್ತೆಗಳು ನಾಪತ್ತೆ ಮಿಳಘಟ್ಟದ ನಾಗರತ್ನ ಎಂಬುವವರು ಕತ್ತೆ ಸಾಕಾಣಿಕೆ ಮಾಡುತ್ತಿದ್ದಾರೆ. ತಮ್ಮ ಬಳಿ ಇದ್ದ ಆರು ಕತ್ತೆಗಳನ್ನು ಸಂತೆ ಕಡೂರಿನ ತೋಟವೊಂದರಲ್ಲಿ ಕಟ್ಟುತ್ತಿದ್ದರು. ಸೆ.27ರಂದು ರಾತ್ರಿ ತೋಟದಲ್ಲಿ ಕತ್ತೆಗಳನ್ನು ಕಟ್ಟಿ ಹಾಕಿ ಹೋಗಿದ್ದರು. ಮರುದಿನ ಬೆಳಗ್ಗೆ ತೋಟಕ್ಕೆ ಬಂದಾಗ ಕತ್ತೆಗಳು ನಾಪತ್ತೆಯಾಗಿದ್ದವು.  ಇಬ್ಬರ ಮೇಲೆ ಅನುಮಾನ ಶಿವಮೊಗ್ಗದ ಇಬ್ಬರು … Read more

ಬೇಲಿ ಹಾರಿ ಕಾರ್ಖಾನೆಗೆ ನುಗ್ಗಿ ಮಾಲೀಕನಿಗೆ ಮಚ್ಚು ತೋರಿಸಿ ಕಳವು

Crime-News-General-Image

BHADRAVATHI NEWS, 4 OCTOBER 2024 : ರಾತ್ರಿ ವೇಳೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿದ್ದ ಮಾಲೀಕನಿಗೆ (owner) ಮಚ್ಚು ತೋರಿಸಿ, ಮೊಬೈಲ್‌ ಕಸಿದುಕೊಂಡು ಬೆದರಿಕೆ ಒಡ್ಡಲಾಗಿದೆ. ಅಲ್ಲದೆ ಕಾರ್ಖಾನೆಯಿಂದ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮಾಚೇನಹಳ್ಳಿಯ ಇಂಡಸ್ಟ್ರಿಯಲ್‌ ಏರಿಯಾದ ಸ್ವಯಂ ಅಲಾಯ್‌ ಕಾಸ್ಟಿಂಗ್‌ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. ಕಾರ್ಖಾನೆ ಮಾಲೀಕ ರವಿಶಂಕರ್‌ ಅವರು ಊಟ ಮುಗಿಸಿ ರಾತ್ರಿ ಕಾರ್ಖಾನೆ ಸ್ಥಳಕ್ಕೆ ಬಂದಿದ್ದರು. ಟಾರ್ಚ್‌ ಹಾಕಿ ಪರಿಶೀಲಿಸುತ್ತಿದ್ದಾಗ ಎಂಟು ಮಂದಿ ಬೇಲಿ ಹಾರಿ ಬಂದಿದ್ದರು. … Read more

ಬಾಗಿಲು ತೆಗೆದು ಅಂಗಡಿಯೊಳಗೆ ಕಾಲಿಟ್ಟ ಮಾಲೀಕನಿಗೆ ಕಾದಿತ್ತು ಶಾಕ್

Police-Van-Jeep-at-Shimoga-Nehru-Road

SHIMOGA NEWS, 3 OCTOBER 2024 : ಬಟ್ಟೆ ಅಂಗಡಿಯೊಂದರ (Shop) ಮೇಲಿನ ಅಂತಸ್ಥಿನ ಷಟರ್‌ ಬಾಗಿಲಿನ ಬೀಗ ಮುರಿದು ನಗದು ಮತ್ತು ಸಿಸಿಟಿವಿ ಡಿವಿಆರ್‌ನ ಹಾರ್ಡ್‌ ಡಿಸ್ಕ್‌ ಕಳವು ಮಾಡಲಾಗಿದೆ. ಶಿವಮೊಗ್ಗ ನೆಹರು ರಸ್ತೆಯ ಸುಭಾಷಿತ ಫ್ಯಾಷನ್‌ ರೆಡಿಮೇಡ್‌ ಬಟ್ಟೆ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಬೆಳಗ್ಗೆ ಅಂಗಡಿಯ ಬಾಗಿಲು ತೆಗೆದು ಒಳ ಹೋದಾಗ ಕ್ಯಾಶ್‌ ಡ್ರಾ ತೆರೆದಿರುವುದನ್ನು ಗಮನಿಸಿದ ಅಂಗಡಿ ಮಾಲೀಕರು ಗಾಬರಿಯಾಗಿದ್ದಾರೆ. ಪರಿಶೀಲಿಸಿದಾಗ ಮೊದಲ ಅಂತಸ್ಥಿನ ಷಟರ್‌ ಬೀಗ ಮುರಿದಿರುವುದು ಗೊತ್ತಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ … Read more

ಹಿಂದೂ ಮಹಾಸಭಾ ಮೆರವಣಿಗೆ, ಮಫ್ತಿಯಲ್ಲಿದ್ದ ಮಹಿಳಾ ಪೊಲೀಸ್‌ ಮಾಂಗಲ್ಯ ಸರ ನಾಪತ್ತೆ

Crime-News-General-Image

SHIMOGA NEWS, 23 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಬಂದೋಬಸ್ತ್‌ ಕಾರ್ಯದಲ್ಲಿ ತೊಡಗಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಯ ಮಾಂಗಲ್ಯ ಸರ ಕಳ್ಳತನವಾಗಿದೆ. ಗೋಪಿ ಸರ್ಕಲ್‌ನಲ್ಲಿ ಕೃತ್ಯ ನಡೆದಿರುವ ಅನುಮಾನವಿದೆ. ಶಿವಮೊಗ್ಗದ ಸಿಇಎನ್‌ ಠಾಣೆ ಮಹಿಳಾ ಸಿಬ್ಬಂದಿ ನಾಗರತ್ನ ಅವರು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ ಮಫ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗೋಪಿ ಸರ್ಕಲ್‌ನಲ್ಲಿ ಹೆಚ್ಚು ಜನ ಸೇರಿದ್ದಾಗ ನಾಗರಾತ್ನ ಅವರ ಕೊರಳಲಿದ್ದ ಶಾಲು ಸರಿದಂತಾಗಿದೆ. ಆಗ ಮಾಂಗಲ್ಯ ಸರ ಕಳುವಾಗಿರುವ ಸಾದ್ಯತೆ ಇದೆ … Read more

ಬಸ್ಸಿನಲ್ಲಿ ಟಿಕೆಟ್‌ ಮಾಡಿಸಲು ಪತ್ನಿ ಬಳಿ 2 ರೂ. ಚಿಲ್ಲರೆ ಕೇಳಿದ ಪತಿ, ಮರು ಕ್ಷಣ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

SHIMOGA, 21 AUGUST 2024 : ಬಸ್‌ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ (Vanity Bag) ನಗದು, ಚಿನ್ನಾಭರಣ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಮದಾರಿಪಾಳ್ಯದ ಮೊಹಮ್ಮದ್‌ ಮುಹೀಬುಲ್ಲಾ ಎಂಬುವವರ ಪತ್ನಿಯ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಟಿಕೆಟ್‌ಗಾಗಿ ಹಣ ತೆಗೆಯಲು ಹೋದಾಗ ಮೊಹಮ್ಮದ್‌ ಮುಹೀಬುಲ್ಲಾ ತನ್ನ ಪತ್ನಿ ಮತ್ತು ಮಕ್ಕಳ ಜೊತೆಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ದಾವಣಗೆರೆಗೆ ಹೊರಟಿದ್ದರು. ಶಿವಮೊಗ್ಗ ನಿಲ್ದಾಣದಿಂದ ಬಸ್‌ ಹತ್ತಿದ್ದು ಸ್ವಲ್ಪ ದೂರ ಹೋದ ಮೇಲೆ ಮುಹೀಬುಲ್ಲಾ ಟಿಕೆಟ್‌ … Read more

ಶಿವಮೊಗ್ಗದಲ್ಲಿ ಶೂ ಹೊಲಿಸಿಕೊಂಡು ಕಾರು ಬಳಿ ಬಂದ ಸರ್ಕಾರಿ ನೌಕರನಿಗೆ ಕಾದಿತ್ತು ಆಘಾತ

Police-Jeep-at-Shimoga-General-Image

SHIMOGA, 16 AUGUST 2024 : ಜನ ಸಂದಣಿ ಹೆಚ್ಚಿರುವ ರಸ್ತೆಯಲ್ಲೇ ಪಾರ್ಕಿಂಗ್‌ ಮಾಡಿದ್ದ ಕಾರಿನ ಗಾಜು ಒಡೆದು ಐ ಪ್ಯಾಡ್‌ (iPAD) ಕಳವು ಮಾಡಲಾಗಿದೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಎಸ್‌ಐ ಮೆಡಿಕಲ್‌ ಆಫೀಸರ್‌ ರಾಕೇಶ್‌ ಎಂಬುವವರಿಗೆ ಸೇರಿದ 60 ಸಾವಿರ ರೂ. ಮೌಲ್ಯದ ಐಪ್ಯಾಡ್‌ ಕಳ್ಳತನವಾಗಿದೆ. ರಾಕೇಶ್‌ ಅವರು ಗಾಂಧಿ ಪಾರ್ಕ್‌ ಪಕ್ಕದಲ್ಲಿರುವ ಶೌಚಾಲಯದ ಸನಿಹ ಕಾರು ನಿಲ್ಲಿಸಿದ್ದರು. ಶೂ ಹೊಲಿಸಿಕೊಳ್ಳಲು ಹೋಗಿದ್ದರು. ಮರಳಿ ಬಂದಾಗ ಕಾರಿನ ಎಡಗಡೆಯ ಹಿಂಬದಿಯ ಗಾಜು … Read more

ಮೊದಲಿಗೆ ಬ್ಯಾಂಕ್‌ನಲ್ಲಿದ್ದ ಹಣ ಹೋಯ್ತು, ಮರುಕ್ಷಣ ಮೊಬೈಲ್‌ನಲ್ಲಿದ್ದ ಎಲ್ಲವು ಖಾಲಿಯಾಯ್ತು, ಕಂಗಾಲದ ರೈತ

Online-Fraud-In-Shimoga

HOLEHONNURU, 5 AUGUST 2024 : ಬ್ಯಾಂಕ್‌ ಒಂದರ ಹೆಸರಿನಲ್ಲಿ ವಾಟ್ಸಪ್‌ನಲ್ಲಿ ಬಂದ ಲಿಂಕ್‌ ಕ್ಲಿಕ್‌ ಮಾಡಿದ ರೈತರೊಬ್ಬರ ಮೊಬೈಲ್‌ ಹ್ಯಾಕ್‌ (Hacked) ಮಾಡಲಾಗಿದೆ. ಹ್ಯಾಕರ್‌ಗಳು ಬ್ಯಾಂಕಿನಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಮೊಬೈಲ್‌ನಲ್ಲಿದ್ದ ಡೇಟಾ ಸಂಪೂರ್ಣ ಡಿಲೀಟ್‌ ಆಗಿದೆ. ಆಗರದಹಳ್ಳಿ ಕ್ಯಾಂಪ್‌ನ ರಾಮಾಂಜನೇಯ ಎಂಬುವವರು ಬ್ಯಾಂಕ್‌ ಒಂದರಲ್ಲಿ ಖಾತೆ ಹೊಂದಿದ್ದಾರೆ. ಅದೇ ಬ್ಯಾಂಕಿನ ಹೆಸರಿನಲ್ಲಿ ಬಂದ ವಾಟ್ಸಪ್‌ ಮೆಸೇಜ್‌ ಬಂದಿದ್ದು, ಅದರಲ್ಲಿದ್ದ ಲಿಂಕ್‌ ಅನ್ನು ರಾಮಾಂಜನೇಯ ಕ್ಲಿಕ್‌ ಮಾಡಿದ್ದರು. ಕೆಲವೇ ಕ್ಷಣದಲ್ಲಿ ವಾಟ್ಸಪ್‌ ಹ್ಯಾಕ್‌ ಆಗಿತ್ತು. ಸ್ವಲ್ಪ ಹೊತ್ತಿಗೆ … Read more

ರಾತ್ರಿ 3 ಗಂಟೆಗೆ ಕೇಳಿತು ಶಬ್ದ, ಹೊರಗಿನಿಂದ ಲಾಕ್‌ ಆಗಿತ್ತು ಮನೆ ಬಾಗಿಲು, ಕಾರು ಹತ್ತಿ ಹೊರಟವರಿಗೆ ಕಾದಿತ್ತು ಆಘಾತ

Police-Van-Jeep-at-Shimoga-Nehru-Road

SHIKARIPURA, 26 JULY 2024  : ಕೊಟ್ಟಿಗೆಯಲ್ಲಿದ್ದ ದನಗಳನ್ನು (COW) ಕಳವು ಮಾಡುತ್ತಿದ್ದವರನ್ನು ಹಿಡಿಯಲು ಹೋದಾಗ ಕಾರು ಅಪಘಾತಕ್ಕೀಡಾಗಿ ನಾಲ್ವರು ಗಾಯಗೊಂಡಿದ್ದಾರೆ. ಶಿಕಾರಿಪುರ ತಾಲೂಕು ನೆಲವಾಗಿಲು ಸಮೀಪದ ಹೊಸನಗರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ಜಾವ ದನಗಳ್ಳತನಕ್ಕೆ ಯತ್ನ ವೀರಭದ್ರಯ್ಯ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಬೆಳಗಿನ ಜಾವ 3 ಗಂಟೆ ಹೊತ್ತಿಗೆ ದನಗಳು ಕೂಗಲು ಆರಂಭಿಸಿದ್ದವು. ವೀರಭದ್ರಯ್ಯ ಅವರು ಮನೆ ಬಾಗಿಲು ತೆರಯಲು ಹೋದಾಗ ಮುಂಬಾಗಿಲು ಹೊರಗಿನಿಂದ ಲಾಕ್‌ ಆಗಿತ್ತು. ಹಿಂಬಾಗಿಲ ಮೂಲಕ ಹೊರ ಹೋದಾಗ … Read more

ಶಿವಮೊಗ್ಗದಲ್ಲಿ ಪತಿಯೊಂದಿಗೆ ಬಸ್‌ ಹತ್ತಿದ್ದ ಮಹಿಳೆಗೆ ಸ್ವಲ್ಪ ಸಮಯದಲ್ಲಿ ಕಾದಿತ್ತು ಆಘಾತ, ಆಗಿದ್ದೇನು?

KSRTC-Bus-General-Image

SHIVAMOGGA LIVE NEWS | 21 JULY 2024 SHIMOGA : ಬಗರ್‌ ಹುಕುಂ ಸಾಗುವಳಿದಾರರ ಸಭೆ ಮುಗಿಸಿ ಪತಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದ ಮಹಿಳೆಯೊಬ್ಬರ ನೆಕ್ಲೇಸ್‌ (NECKLACE) ಕಳ್ಳತನವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಸೊರಬ ತಾಲೂಕು ಮಳವಳ್ಳಿಯ ಹರೂರು ಗ್ರಾಮದ ನೇತ್ರಾವತಿ ಪತಿಯೊಂದಿಗೆ ಶಿವಮೊಗ್ಗದ ಡಾ. ಅಂಬೇಡ್ಕರ್‌ ಭವನದಲ್ಲಿ ನಡೆದ ಸಭೆಗೆ ಬಂದಿದ್ದರು. ಸಭೆ ಮುಗಿಸಿ ಕೆಎಸ್‍ಆರ್‌ಟಿಸಿ ನಿಲ್ದಾಣದಲ್ಲಿ ಸೊರಬಕ್ಕೆ ತೆರಳುವ ಬಸ್‌ ಹತ್ತಿದ್ದರು. ಸೀಟು ಹಿಡಿದು ಕುಳಿತಿದ್ದ ತಮ್ಮ ವ್ಯಾನಿಟಿ ಬ್ಯಾಗ್‌ … Read more