ರಸ್ತೆ ಪಕ್ಕ ನಿಂತುಕೊಂಡು ಮಾತಾಡುತ್ತಿದ್ದ ಸ್ನೇಹಿತರಿಗೆ ಬೈಕ್ ಡಿಕ್ಕಿ, ಒಬ್ಬ ಸಾವು

crime name image

SHIVAMOGGA LIVE NEWS | BHADRAVATHI | 14 ಜೂನ್ 2022 ಬೈಕ್ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಚಾಲಕನ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ACCIDENT ಅಂತರಗಂಗೆ ಕ್ಯಾಂಪ್’ನ ಸಂತೋಷ್ (35) ಮೃತ ದುರ್ದೈವಿ. ಮಂಜುನಾಥ್ ಎಂಬಾತ ಗಾಯಗೊಂಡಿದ್ದಾರೆ. ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಭದ್ರಾವತಿ ಹೊಸಮನೆಯ ಮುರುಗೇಶ್ ಕೂಡ ಗಾಯಗೊಂಡಿದ್ದಾನೆ. ಹೇಗಾಯ್ತು ಆಪಘಾತ? … Read more

ಆನಂದಪುರ ಹೋಬಳಿಯ 300ಕ್ಕೂ ಹೆಚ್ಚು ರೈತರಿಗೆ ನೊಟೀಸ್

Rathnakar-Honagodu-Press-Meet-about-notice-to-farmers

SHIVAMOGGA LIVE NEWS | SAGARA | 8 ಜೂನ್ 2022 ಸಾಗರ ತಾಲೂಕು ಆನಂದಪುರ ಹೋಬಳಿಯ 300ಕ್ಕೂ ಹೆಚ್ಚು ರೈತರಿಗೆ ಅರಣ್ಯ ಇಲಾಖೆ ನೊಟೀಸ್ ನೀಡಿದೆ. ಈ ನೊಟೀಸ್ ಹಿಂಪಡೆಯದೆ ಹೋದರೆ ಬಿಜೆಪಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಎಚ್ಚರಿಸಿದರು. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರತ್ನಾಕರ ಹೊನಗೋಡು ಅವರು, ಹಲವು ವರ್ಷಗಳಿಂದ ರೈತರು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಈಗ ಅರಣ್ಯ ಇಲಾಖೆಯು ಏಕಾಏಕಿ … Read more

ಅಡಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದ ಎಂಟು ಮಂದಿ ಅರೆಸ್ಟ್

Areca-Seized-from-Thieves-in-Sagara

SHIVAMOGGA LIVE NEWS | ARECA | 7 ಜೂನ್ 2022 ಅಡಕೆ (ARECA) ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದ ಎಂಟು ಕಳ್ಳರ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ. ಬಂಧಿತರಿಂದ ಐದು ಲಕ್ಷ ಮೌಲ್ಯದ ಅಡಕೆ ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ಕಳ್ಳರನ್ನು ಬಂಧಿಸಿದ್ದಾರೆ. ಇದರಿಂದ ಏಳು ಕಳ್ಳತನ ಪ್ರಕರಣವನ್ನು ಭೇದಿಸಿದಂತಾಗಿದೆ. ಸಾಗರ ತಾಲೂಕಿನ ವಿವಿಧೆಡೆ ಈ ಕಳ್ಳರು ಅಡಕೆ ಕಳ್ಳತನ ಮಾಡುತ್ತಿದ್ದರು. ಒಂದು ಕೇಸ್ ಬೆನ್ನು ಹತ್ತಿದ್ದರು ಮೇ 31ರ … Read more

ಶಿವಮೊಗ್ಗಕ್ಕೆ ಮುಂಗಾರು ಪ್ರವೇಶ, ರಾತ್ರಿಯಿಂದ ಮಳೆ ಆರಂಭ

Rain-in-Shimoga-City.

SHIVAMOGGA LIVE | RAIN | 6 JUNE 2022 ಶಿವಮೊಗ್ಗಕ್ಕೆ ಮುಂಗಾರು ಪ್ರವೇಶಿಸಿದೆ. ರಾತ್ರಿಯಿಂದ ಜೋರು ಮಳೆ ಸುರಿಯುತ್ತಿದೆ. ಭಾರಿ ಗಾಳಿ ಸಹಿತ ಮಳೆ ಪ್ರಾರಂಭವಾಗಿದೆ. ಕಳೆದ ಹತ್ತು ದಿನದಿಂದ ಭಾರಿ ಬಿಸಿಲಿಗೆ ಜನ ಕಂಗೆಟ್ಟಿದ್ದರು. ಇವತ್ತು ಮಳೆ ಆರಂಭವಾಗಿರುವುದು ತುಸು ನೆಮ್ಮದಿ ಮೂಡಿಸಿದೆ. ಮುಂಗಾರು ಆರಂಭದಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆಯಲಿದೆ. ಇದನ್ನೂ ಓದಿ – ಇನ್ಮುಂದೆ ಪ್ರತಿ ಜೋರು ಮಳೆಗು ಮುಳುಗುತ್ತೆ ವಿದ್ಯಾನಗರ, ಶಾಂತಮ್ಮ ಲೇಔಟ್, ಕಾರಣವೇನು? ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು … Read more

ಶಿವಮೊಗ್ಗದಲ್ಲಿ ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕಿಗೆ ನಡುರಾತ್ರಿ ಬೆಂಕಿ

shivamogga graphics map

SHIVAMOGGA LIVE NEWS | FIRE | 4 ಜೂನ್ 2022 ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಬೈಕ್ ಸುಟ್ಟು ಕರಕಲಾಗಿದೆ. ಹೊಸಮನೆಯ ಪ್ರಕಾಶ್ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕಿಗೆ ಮಿಳಘಟ್ಟದಲ್ಲಿ ಬೆಂಕಿ ಹಚ್ಚಲಾಗಿದೆ. ಘಟನೆಯ ವಿವರ ಪ್ರಕಾಶ್ ಅವರು ಹೂವಿನ ವ್ಯಾಪಾರ ಮಾಡುತ್ತಾರೆ. ಮಿಳಘಟ್ಟದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಕೆಲಸ ಮುಗಿಸಿ ಬೈಕನ್ನು ಮಿಳಘಟ್ಟದಲ್ಲಿರುವ ಮನೆಗೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದರು. ಹೊಸಮನೆಯಲ್ಲಿರುವ ಮನೆಗೆ ಬಂದು ಮಲಗಿದ್ದರು. ರಾತ್ರಿ ಪ್ರಕಾಶ್ … Read more

ಇನ್ಮುಂದೆ ಮಂಡಕ್ಕಿನೂ ದುಬಾರಿ, ಭದ್ರಾವತಿ ಮೀಟಿಂಗ್’ನಲ್ಲಿ ನಿರ್ಧಾರ, ಈಗೆಷ್ಟಾಯ್ತು ದರ?

Mandakki-Price-to-increase-in-Shimoga

SHIVAMOGGA LIVE NEWS | PUFFED RICE | 27 ಮೇ 2022 ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ. ಈ ಮದ್ಯೆ ಮಂಡಕ್ಕಿ ದರ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಭದ್ರಾವತಿಯ ಸೀಗೆಬಾಗಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಮತ್ತು ಮಾರಾಟ, ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಎಷ್ಟಾಯ್ತು ಮಂಡಕ್ಕಿ ದರ? ಭತ್ತದ ಬೆಲೆ ಹೆಚ್ಚಳವಾಗಿದೆ. ವಿದ್ಯುತ್ ದರವು ದುಬಾರಿಯಾಗಿದೆ. ಕಾರ್ಮಿಕರ ಕೂಲಿ, ಕಚ್ಚಾ ವಸ್ತುಗಳ ಬೆಲೆಯು ಏರಿಕೆಯಾಗಿದೆ. ಇಂತಹ … Read more

ಶಿವಮೊಗ್ಗ ನ್ಯಾಯಾಲಯದ ಕೊಠಡಿಯಲ್ಲಿ ತೋಳದ ಹಾವು

Snake-caught-in-Shimoga-district-court

SHIVAMOGGA LIVE NEWS | SNAKE | 26 ಮೇ 2022 ಶಿವಮೊಗ್ಗ ನ್ಯಾಯಾಲಯದ ಕೊಠಡಿಯೊಳಗೆ ಹಾವು (SNAKE) ಕಾಣಿಸಿಕೊಂಡು ಕೆಲ ಹೊತ್ತು ಸಿಬ್ಬಂದಿ ಆತಂಕಕ್ಕೀಡಾಗಿದ್ದರು. ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಸ್ಥಳಕ್ಕಾಗಮಿಸಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಬೆಳಗ್ಗೆ ಸಿಬ್ಬಂದಿ ನ್ಯಾಯಾಲಯಕ್ಕೆ ಬಂದು ಕೊಠಡಿ ಬಾಗಿಲು ತೆಗೆದಾಗ ಹಾವು ಕಾಣಿಸಿಕೊಂಡಿದೆ. ಆತಂಕಗೊಂಡ ಸಿಬ್ಬಂದಿ ಕೂಡಲೆ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಸುಮಾರು ಒಂದೂವರೆ ಅಡಿ ಉದ್ದವಿದ್ದ ತೋಳದ … Read more

ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನಾಳೆ ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗುತ್ತೆ?

power cut mescom ELECTRICITY

SHIVAMOGGA LIVE NEWS | POWER CUT | 24 ಮೇ 2022 ಶಿವಮೊಗ್ಗ ನಗರ ಮತ್ತು ತಾಲೂಕಿನ ಕೆಲವು ಗ್ರಾಮಗಳಲ್ಲಿ ಮೇ 25ರಂದು ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಎಷ್ಟೊತ್ತು ವಿದ್ಯುತ್ ವ್ಯತ್ಯಯವಾಗಲಿದೆ? ಎಂ.ಆರ್.ಎಸ್’ನಲ್ಲಿ ತುರ್ತಾಗಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಮೇ 25ರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ : ಬೆಕ್ಕಿನ ಕಲ್ಮಠ, … Read more

ಭದ್ರಾವತಿಯಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ವೈಭವದ ಬ್ರಹ್ಮರಥೋತ್ಸವ

Bhadravathi-Lakshmi-Narasimha-Swamy-Ratotsava

SHIVAMOGGA LIVE NEWS | TEMPLE | 17 ಮೇ 2022 ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು, ರಥೋತ್ಸವವನ್ನು ಕಣ್ತುಂಬಿಕೊಂಡರು. ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸೋಮವಾರ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಎದುರು ಹೂವಿನಿಂದ ಅಲಂಕರಿಸಿದ ರಥದಲ್ಲಿ ಭೂದೇವಿ ಶ್ರೀದೇವಿ ಸಹಿತನಾದ ಶ್ರೀನಿವಾಸಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಇದನ್ನೂ ಓದಿ – ಶಿವಮೊಗ್ಗ … Read more

ಶಿವಮೊಗ್ಗ ಹೊಳೆ ಬಸ್ ಸ್ಟಾಪ್’ನಲ್ಲಿ ಅನುಮಾನಾಸ್ಪದ ವರ್ತನೆ, ಆಟೋ ಚಾಲಕ ಅರೆಸ್ಟ್, ಕಾರಣವೇನು?

Arrest News Graphics

SHIVAMOGGA LIVE NEWS | GANJA | 17 ಮೇ 2022 ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿ ಅಮಲಿನಲ್ಲಿರುವ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಆತನನ್ನು ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ – ಬಸ್ ಹತ್ತುವಾಗ ಹೀಗೂ ನಡೆಯುತ್ತೆ ಕಳ್ಳತನ, ಶಿವಮೊಗ್ಗದಲ್ಲಿ ಮಹಿಳೆಯಿಂದ ದೂರು ದಾಖಲು ಆಟೋ ಚಾಲಕ ಪ್ರಕಾಶ್ ಕುಮಾರ್ ಬಂಧಿತ ಆರೋಪಿ. ಭಾನುವಾರ ಮಧ್ಯಾಹ್ನ ಪ್ರಕಾಶ್ ಕುಮಾರ್ ಶಿವಮೊಗ್ಗದ ಹೊಳೆ … Read more