ಅಡಕೆ ಧಾರಣೆ | 16 ಮಾರ್ಚ್ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 16 MARCH 2023 SHIMOGA : ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 20019 31899 ಬೆಟ್ಟೆ 41099 51069 ರಾಶಿ 33369 45009 ಸರಕು 47159 82096 ಸಾಗರ ಮಾರುಕಟ್ಟೆ ಕೆಂಪುಗೋಟು 24569 36819 ಕೋಕ 8499 31899 ಚಾಲಿ 33199 36199 ಬಿಳೆ ಗೋಟು 24299 28609 ರಾಶಿ 36699 45109 ಸಿಪ್ಪೆಗೋಟು 4280 … Read more

ಶಿವಮೊಗ್ಗದ ಡಾಕ್ಟರ್ ಗೆ ಗೂಗಲ್ ಸರ್ಚ್ ನಿಂದ ಸಂಕಷ್ಟ, ವಾಟ್ಸಪ್ ಮೆಸೇಜಿನಿಂದ ಹೋಯ್ತು ಲಕ್ಷ ಲಕ್ಷ ಹಣ

Online-Fraud-In-Shimoga

SHIVAMOGGA LIVE NEWS | 16 MARCH 2023 SHIMOGA : ಗೂಗಲ್ ನಲ್ಲಿ HOW TO EARN MONEY ಎಂದು ಸರ್ಚ್ ಮಾಡಿದ ವೈದ್ಯರೊಬ್ಬರು ಕೊನೆಗೆ ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಹಣ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವ ಆಮಿಷವೊಡ್ಡಿದ್ದ ಲಿಂಕ್ ಒಂದನ್ನು ಕ್ಲಿಕ್ ಮಾಡಿ, ವೈದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ವೈದ್ಯ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ತಮ್ಮ ಮೊಬೈಲ್ ಮೂಲಕ ಗೂಗಲ್ ನಲ್ಲಿ HOW TO EARN MONEY ಎಂದು … Read more

ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಪಿಡಿಒ ಹಲ್ಲೆ, ಶಿವಮೊಗ್ಗದಲ್ಲಿ ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಧರಣಿ

Kimmane-Rathnakar-Protest-in-Shimoga

SHIVAMOGGA LIVE NEWS | 16 MARCH 2023 SHIMOGA : ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಮೇಲೆ ಪಿಡಿಒ ಅವರು ಹಲ್ಲೆ ನಡೆಸಿದ್ದಾರೆ. ಪಿಡಿಒ ವಿರುದ್ಧ ತಕ್ಷಣವೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಧರಣಿ (Protest) ನಡೆಸಲಾಗುತ್ತಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಕಚೇರಿ ಮುಂದೆ ಧರಣಿ (Protest) ನಡೆಸಲಾಗುತ್ತಿದೆ. ಕಿಮ್ಮನೆ … Read more

ಶಿವಮೊಗ್ಗದ ಜಿಲ್ಲೆಯಾದ್ಯಂತ ನಾಳೆ ಸರ್ಕಾರಿ ಬಸ್ ಸಿಗೋದು ಕಷ್ಟ, ಕಾರಣವೇನು?

KSRTC-Bus-General-Image-Shimoga-Bangalore

SHIVAMOGGA LIVE NEWS | 16 MARCH 2023 SHIMOGA : ಶಿಕಾರಿಪುರದಲ್ಲಿ ಮಾ.17ರಂದು ವಿವಿಧ ಅಭಿವೃದ್ಧಿ ಕಾಮಗಾರಿ, ನೂತನ ಬಸ್ (Bus) ಘಟಕ ಮತ್ತು ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ತಾಲೂಕಿನ ವಿವಿಧೆಡೆಯಿಂದ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಜಿಲ್ಲೆಯ ವ್ಯಪ್ತಿಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ. ಮಾ.17ರ ಉಡುಗಣಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿಕಾರಿಪುರ … Read more

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ ಸರ್ಕಾರದಿಂದ 10 ತಿಂಗಳ ತರಬೇತಿ, ಅರ್ಜಿ ಸಲ್ಲಿಸಲು ಅವಕಾಶ

SHIVAMOGGA-CITY-TALUK-NEWS-

SHIVAMOGGA LIVE NEWS | 16 MARCH 2023 SHIMOGA : ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ (Training) ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023ರ ಮೇ 2 ರಿಂದ 2024ರ ಫೆಬ್ರವರಿ 29ರವರೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅರ್ಹತೆಗಳೇನು? ಅಭ್ಯರ್ಥಿಯು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು. ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಸ್ವಂತ ಸಾಗುವಳಿ … Read more

ಮಲವಗೊಪ್ಪದಲ್ಲಿ ಅದ್ಧೂರಿ ಬ್ರಹ್ಮ ರಥೋತ್ಸವ, ಹೇಗಿತ್ತು ಜಾತ್ರೆಯ ವೈಭವ?

Malavagoppa-Brahma-Rathotsava

SHIVAMOGGA LIVE NEWS | 16 MARCH 2023 SHIMOGA : ಮಲವಗೊಪ್ಪದ ಶ್ರೀ ಚನ್ನವಸವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು (Brahma Rathotsava) ವಿಜೃಂಭಣೆಯಿಂದ ನಡೆಯಿತು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. ಬುಧವಾರ ಮಲವಗೊಪ್ಪದಲ್ಲಿ ಬ್ರಹ್ಮ ರಥೋತ್ಸವ (Brahma Rathotsava) ನಡೆಯಿತು. ಮಲವಗೊಪ್ಪದ ಸುತ್ತಮುತ್ತಲ ಬಡಾವಣೆ ಮತ್ತು ಗ್ರಾಮಗಳಿಂದ ಜನರು ಆಗಮಿಸಿದ್ದರು. ರಥೋತ್ಸವದ ವೇಳೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರ ಘೋಷಣೆಗಳನ್ನು ಕೂಗಿದರು. ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾಧಿಕಾರಿ ವಾಸ್ತವ್ಯಕ್ಕೆ ಗ್ರಾಮ … Read more

ಶಿವಮೊಗ್ಗ ಜಿಲ್ಲಾಧಿಕಾರಿ ವಾಸ್ತವ್ಯಕ್ಕೆ ಗ್ರಾಮ ನಿಗದಿ, ಮಾ.18ರಂದು ಎಲ್ಲಿ ವಾಸ್ತವ್ಯ ಮಾಡಲಿದ್ದಾರೆ ಡಿಸಿ?

Shimoga-DC-Car-With-Board.c

SHIVAMOGGA LIVE NEWS | 16 MARCH 2023 SHIMOGA : ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಮಾರ್ಚ್ 18ರಂದು ಗ್ರಾಮ ವಾಸ್ತವ್ಯ (Grama Vastavya) ಮಾಡಲಿದ್ದಾರೆ. ಸಾಗರ ತಾಲೂಕು ತಾಳಗುಪ್ಪ ಹೋಬಳಿಯ ಸೈದೂರು ಗ್ರಾಮಕ್ಕೆ ಜಿಲ್ಲಾಧಿಕಾರಿ ಅವರು ಭೇಟಿ ನೀಡಲಿದ್ದು, ವಾಸ್ತವ್ಯ ಮಾಡಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗ್ರಾಮ ವಾಸ್ತವ್ಯ (Grama Vastavya) ಕಾರ್ಯಕ್ರಮ ನಡೆಯಲಿದೆ. ಕಂದಾಯ ಇಲಾಖೆ ಮತ್ತು ಇತರೆ ಎಲ್ಲಾ … Read more

ಮೈಸೂರಿನಲ್ಲೂ VISL ಪರ ಧರಣಿ, ರಾಜ ಮನೆತನದ ಗಮನ ಸೆಳೆಯಲು ಯತ್ನ, ಕಾರಣವೇನು?

VISL-protest-in-Mysore-near-Palace

SHIVAMOGGA LIVE NEWS | 16 MARCH 2023 MYSORE : ವಿಐಎಸ್ಎಲ್ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ರಾಜ ಮನೆತನದ ಗಮನ ಸೆಳೆಯಲು ಭದ್ರಾವತಿಯ ವ್ಯಾಪಾರಿಯೊಬ್ಬರು ಮೈಸೂರಿನಲ್ಲಿ (Mysore) ಧರಣಿ ನಡೆಸಿದರು. ಗಾಂಧಿ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣೆ ಮಾಡಿದರು. ಭದ್ರಾವತಿಯ ವ್ಯಾಪಾರಿ ದಯಾನಂದ್ ಅವರು ಮೈಸೂರಿನಲ್ಲಿ (Mysore) ರಾಜಮನೆತನದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಅವರ ಹೋರಾಟ ವಿಐಎಸ್ಎಲ್ ಕಾರ್ಮಿಕರು ಮತ್ತು ಭದ್ರವತಿಯಲ್ಲಿ ಜನ ಮೆಚ್ಚುಗೆ ಪಡೆದಿದೆ. ಗಮನ ಸೆಳೆಯಲು ಕಾರಣವೇನು? ವಿಐಎಸ್ಎಲ್ ಕಾರ್ಖಾನೆಯನ್ನ … Read more

ಶಿಕಾರಿಪುರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ, ಯಾವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ?

Basavaraja-Bommai-CM-Chief-Minister

SHIVAMOGGA LIVE NEWS | 16 MARCH 2023 SHIMOGA : ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ ಅವರು ಮಾ.17ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ. ಹುಚ್ಚರಾಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆ, ಶಿಕಾರಿಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಸಿಎಂ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ … Read more

ತೀರ್ಥಹಳ್ಳಿಯಲ್ಲಿ ವ್ಯಕ್ತಿಗೆ ಕೆ.ಎಫ್.ಡಿ ಸೋಂಕು ಪಾಸಿಟಿವ್

Thirthahalli-JC-Hospital.

SHIVAMOGGA LIVE NEWS | 15 MARCH 2023 THIRTHAHALLI : ಬೇಸಿಗೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ತೀರ್ಥಹಳ್ಳಿ ತಾಲೂಕಿನ ವ್ಯಾಕ್ತಿಯೊಬ್ಬರಿಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆ.ಎಫ್.ಡಿ) ಪಾಸಿಟಿವ್ (Positive) ಬಂದಿದೆ. ತಾಲೂಕಿನ ಗುತ್ತಿಯಡೆಹಳ್ಳಿ ಸಮೀಪದ ಹಳ್ಳಿಬೈಲು ಗ್ರಾಮದ ವ್ಯಕ್ತಿಯೊಬ್ಬರಿಗೆ ಕೆ.ಎಫ್.ಡಿ ದೃಢಪಟ್ಟಿದೆ. ನಾಲ್ಕೈದು ದಿನದಿಂದ ಅವರು ಜ್ವರದಿಂದ ಬಳಲುತ್ತಿದ್ದರು. ಪರೀಕ್ಷೆ ಮಾಡಿದಾಗ ಕೆ.ಎಫ್.ಡಿ ಪಾಸಿಟಿವ್ (Positive) ಬಂದಿದೆ. ಇದನ್ನೂ ಓದಿ – ಅಟ್ಟಾಡಿಸಿ ಹತ್ಯೆ ಮಾಡಿದ್ದ ಕೇಸಿಗೆ ಪ್ರತೀಕಾರದ ಶಂಕೆ, ಚೀಲೂರು ಬಳಿ ಇಬ್ಬರ … Read more