ಕಾಲೇಜು ಲೆಕ್ಚರರ್‌ಗೆ ರಸ್ತೆಯಲ್ಲಿ ಚಾಕು ತೋರಿಸಿ ಬೆದರಿಕೆ, ದರೋಡೆ

crime name image

SHIVAMOGGA LIVE NEWS | 28 FEBRUARY 2023 SHIMOGA : ನಡುರಾತ್ರಿ ಉಪನ್ಯಾಸಕರೊಬ್ಬರಿಗೆ (lecturer) ಚಾಕು ತೋರಿಸಿ ದರೋಡೆ ಮಾಡಲಾಗಿದೆ. ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ. ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಘಟನೆ ಸಂಭವಿಸಿದೆ. JNNCE ಕಾಲೇಜು ಉಪನ್ಯಾಸಕ (lecturer) ರಾಜಪ್ರಕಾಶ್ ಅವರಿಗೆ ಚಾಕು ತೋರಿಸಿ ಬೆದರಿಸಲಾಗಿದೆ. ಹೇಗಾಯ್ತು ಘಟನೆ? ರಾಜಪ್ರಕಾಶ್ ಅವರು ಸ್ನೇಹಿತರೊಂದಿಗೆ ಸಿದ್ಧಾಪುರ ಮತ್ತು ಕಾರವಾರದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವಮೊಗ್ಗಕ್ಕೆ ಮರಳಿದ್ದರು. ರಾತ್ರಿ 12.30ರ ಹೊತ್ತಿಗೆ ಸ್ನೇಹಿತ ನಿರಂಜನ್ ಎಂಬುವವರೊಂದಿಗೆ … Read more

ಭದ್ರಾವತಿಯಲ್ಲಿ ಅಣಕು ಶವಯಾತ್ರೆ, ನಡು ರಸ್ತೆಯಲ್ಲೇ ಪ್ರತಿಕೃತಿ ದಹನ, ಆಕ್ರೋಶ

VISL-wokers-burn-effigy-of-BS-Yedyurappa-and-BY-Raghavendra-in-Bhadravathi

SHIVAMOGGA LIVE NEWS | 28 FEBRUARY 2023 BHADRAVATHI : ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಕಾರ್ಖಾನೆ ಪುನಶ್ಚೇತನಕ್ಕೆ ಮನವಿ ಮಾಡಲು ಅವಕಾಶ ಕಲ್ಪಿಸದ ಸ್ಥಳೀಯ ರಾಜಕಾರಣಿಗಳ ವಿರುದ್ಧ ಗುತ್ತಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಭದ್ರಾವತಿಯಲ್ಲಿ ಅಣಕು ಶವಯಾತ್ರೆ (Effigy) ಕೈಗೊಂಡು ಪ್ರತಿಭಟನೆ ನಡೆಸಿದರು. ಭದ್ರಾವತಿಯ ಪ್ರಮುಖ ರಸ್ತೆಗಳಲ್ಲಿ ಕಳೆದ ರಾತ್ರಿ ಅಣಕು ಶವಯಾತ್ರೆ ನಡೆಸಲಾಯಿತು. ಬಿಜೆಪಿ ಸರ್ಕಾರ ಮತ್ತು ಮುಖಂಡರ ವಿರುದ್ಧ ಘೋಷಣೆ ಕೂಗಿದ ಕಾರ್ಮಿಕರು ಬಳಿಕ ನಡುರಸ್ತೆಯಲ್ಲೆ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ … Read more

ಪ್ರಧಾನಿ ಕಾರ್ಯಕ್ರಮದ ವೇದಿಕೆ ಮುಂದೆ ಬಾಯಿ ಬಡಿದುಕೊಂಡು ಗಮನ ಸೆಳೆಯಲು ಯತ್ನಿಸಿದ ಕಾರ್ಮಿಕರು

VISL-Workers-Protest-in-Airport-Inauguration-Programme

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣದ ಉದ್ಘಾಟನೆ ಸಮಾರಂಭದ ಕಾರ್ಯಕ್ರಮದ ವೇದಿಕೆ ಮುಂಭಾಗ ವಿಐಎಸ್ಎಲ್ ಕಾರ್ಮಿಕರು ಬಾಯಿ ಬಡಿದುಕೊಂಡು, ಘೋಷಣೆ (Slogans) ಕೂಗಿದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಪ್ರಯತ್ನಿಸಿದರು. ಸೋಗಾನೆಯಲ್ಲಿ ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಹಿನ್ನೆಲೆ ಪ್ರಧಾನಿ ಗಮನ ಸೆಳೆಯಲು ವಿಐಎಸ್ಎಲ್ ಕಾರ್ಮಿಕರು ಘೋಷಣೆ ಮೊಳಗಿಸಿದರು. … Read more

ಶಿವಮೊಗ್ಗ ವಿಮಾನ ನಿಲ್ದಾಣ ಹೆಸರಿನ ವಿಚಾರ, ಕುತೂಹಲ ಉಳಿಸಿ ಹೋದ ಪ್ರಧಾನಿ ಮೋದಿ

Prime-Minister-Narendra-Modi-in-Shivamogga-Airport

SHIVAMOGGA LIVE NEWS | 27 FEBRURARY 2023 SHIMOGA : ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದ ಹೆಸರು (Airport Name) ಘೋಷಣೆ ಮಾಡದಿರುವುದು ಕುತೂಹಲ ಮೂಡಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು (Airport Name) ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದ್ದರು. ಅದರಂತೆ ರಾಜ್ಯ ಸಚಿವ ಸಂಪುಟವು ಕುವೆಂಪು ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಘೋಷಣೆ ಮಾಡದ ಪ್ರಧಾನಿ ಪ್ರಧಾನಿ … Read more

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಧಾನಿ, ಫೋಟೊಗಳ ಮೂಲಕ ಮೋದಿ ಭೇಟಿಯ ಕಂಪ್ಲೀಟ್ ನ್ಯೂಸ್

PM-Narendra-Modi-In-Shimoga-Airport-Terminal-building

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ವೇಳೆ ಟರ್ಮಿನಲ್ ವೀಕ್ಷಣೆ, ಅಧಿಕಾರಿಗಳ ಜೊತೆ ವಿಮಾನ ನಿಲ್ದಾಣದ (Airport Inauguration) ಕುರಿತು ಮಾಹಿತಿ ಪಡೆದರು. ವೇದಿಕೆ ಕಾರ್ಯಕ್ರಮದಲ್ಲಿಯು ಪಾಲ್ಗೊಂಡಿದ್ದರು. ಇದರ ಫೋಟೊ ನ್ಯೂಸ್ ಇಲ್ಲಿದೆ. ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport Inauguration) ಬಂದಿಳಿದ ಪ್ರಧಾನಿ ನರೇಂದ್ರ ಮೋದಿ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ … Read more

ಶಿವಮೊಗ್ಗದಲ್ಲಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭ, ರಾಷ್ಟ್ರಕವಿಯ ಸ್ಮರಣೆ

Felicitation-For-PM-Narendra-Modi-in-Shivamogga-Airport

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಭಾಷಣ (Speech) ಆರಂಭಿಸಿದರು. ಅಲ್ಲದೆ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿಕೊಂಡು, ನಾಡ ಗೀತೆಯ ಮೊದಲು ಸಾಲುಗಳನ್ನು ಉಚ್ಚರಿಸಿದರು. ಸೋಗಾನೆಯಲ್ಲಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಈ ವೇಳೆ ಕನ್ನಡದಲ್ಲಿಯೇ ಪ್ರಧಾನಿ ಮೋದಿ ಭಾಷಣ (Speech) ಆರಂಭಿಸಿದ್ದರು, ನೆರೆದಿದ್ದವರ ಮೆಚ್ಚುಗೆ ಗಳಿಸಿತು. ಕನ್ನಡ … Read more

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ, ಟರ್ಮಿನಲ್ ನಲ್ಲಿ ಪ್ರಧಾನಿ ಮೋದಿ ಸಂಚಾರ

PM-Narendra-Modi-In-Shimoga-Airport-Terminal

SHIVAMOGGA LIVE NEWS | 27 FEBRURARY 2023 SHIMOGA : ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು (Shivamogga Airport) ಪ್ರಧಾನಿ ನರೇಂದ್ರ ಮೋದಿ  (Narendra Modi) ಅವರು ಲೋಕಾರ್ಪಣೆ ಮಾಡಿದರು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಉದ್ಘಾಟನೆ ನೆರವೇರಿಸಿದರು. ಟರ್ಮಿನಲ್ ನಲ್ಲಿ ಪ್ರಧಾನಿ ಸಂಚಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಸೋಮಣ್ಣ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು … Read more

ಪ್ರಧಾನಿ ಮೋದಿ ಬಂದರೂ ಕಾರ್ಯಕ್ರಮ ಸ್ಥಳಕ್ಕೆ ತಲುಪಲಾಗದೆ ಪರದಾಡಿದ ಜನ

BJP-Workers-March-towards-Shimoga-Airport

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆ (Airport Programme) ಸಮಾರಂಭಕ್ಕೆ ಆಗಮಿಸಿದ್ದ ಜನರು ಕಾರ್ಯಕ್ರಮಕ್ಕೂ ತೆರಳಲಾಗದೆ, ಹಿಂದಕ್ಕೆ ಮರಳಲಾಗದೆ ಪರದಾಡಿದರು. ಬಿರು ಬಿಸಿಲಿನಲ್ಲಿ ಪರದಾಡುತ್ತ, ನೀರು, ತಿಂಡಿಗಾಗಿ ಪರಿತಪಿಸಬೇಕಾಯಿತು. ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಲಕ್ಷಾಂತರ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ಸಂಚಾರ ದಟ್ಟಣೆಯಿಂದಾಗಿ ಕಾರ್ಯಕ್ರಮದ (Airport Programme) ಸ್ಥಳಕ್ಕೆ ತಲುಪಲಾಗದೆ ಸಂಕಷ್ಟಕ್ಕೀಡಾದರು. ಬಸ್ಸು, ಕಾರು, ಟಿಟಿ ವಾಹನಗಳು ಜನರನ್ನು ಕರೆತರಲು ದೊಡ್ಡ ಸಂಖ್ಯೆಯಲ್ಲಿ ವಾಹನದ ವ್ಯವಸ್ಥೆ … Read more

ಶಿವಮೊಗ್ಗದ ಕೆಲವು ಗ್ರಾಮ, ಬಡಾವಣೆಗಳಿಗೆ ದಿಗ್ಭಂದನದ ಅನುಭವ, ಹಿಡಿಶಾಪ ಹಾಕುತ್ತ ನಡೆದ ಜನ

School-Children-Employees-Walk-along-the-road

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ, ವಾಹನಗಳು ಬಂದಿವೆ. ಹಾಗಾಗಿ ನಗರದಲ್ಲಿ ಟ್ರಾಫಿಕ್ (Traffic) ಜಾಮ್ ಉಂಟಾಗಿದೆ. ಇದರಿಂದ ಶಾಲೆ, ಕಾಲೇಜು, ಕಚೇರಿಗೆ ತೆರಳುವವರು ಪರದಾಡಬೇಕಾಯಿತು. ಹಿಡಿಶಾಪ ಹಾಕುತ್ತಲೆ ನಡೆದು ಸಾಗಿದರು. ಕಾಲ್ನಡಿಗೆಯಲ್ಲಿ ಸ್ಕೂಲಿಗೆ ಮಕ್ಕಳು ಬೆಳಗ್ಗೆಯಿಂದಲೆ ವಿಮಾನ ನಿಲ್ದಾಣದ ಕಡೆಗೆ ವಾಹನಗಳು ತೆರಳುತ್ತಿವೆ. ಶಾಲೆ, ಕಾಲೇಜು ಸಮಯಕ್ಕೆ ನಗರದಲ್ಲಿ ಟ್ರಾಫಿಕ್ (Traffic) ಜಾಮ್ ಉಂಟಾಯಿತು. ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲಾಗದೆ, … Read more

ಶಿವಮೊಗ್ಗ ನಗರದಾದ್ಯಂತ ಫುಲ್ ಟ್ರಾಫಿಕ್ ಜಾಮ್, ಎಲ್ಲೆಲ್ಲಿ ಹೇಗಿದೆ? ಇಲ್ಲಿದೆ ಫೋಟೊ ರಿಪೋರ್ಟ್

Traffic-Jam-during-Narendra-Modi-Programme-in-Shimoga

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ನೆರೆಹೊರೆ ತಾಲೂಕು, ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಭಾರಿ ಸಂಖ್ಯೆಯ ವಾಹನಗಳು ಬಂದಿದ್ದರಿಂದ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ? ಎಂ.ಆರ್.ಎಸ್ ಸರ್ಕಲ್ ನಿಂದ ವಿಮಾನ ನಿಲ್ದಾಣದವರೆಗೆ ಒಂದು ಬದಿಯಲ್ಲಿ ವಿಐಪಿ, ಅಧಿಕಾರಿಗಳ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಬದಿಯಲ್ಲಿ ಇತರೆ ವಾಹನಗಳನ್ನು ಬಿಡಲಾಗಿದೆ. ಹಾಗಾಗಿ ಒಡ್ಡಿನಕೊಪ್ಪ, … Read more