ಶಿವಮೊಗ್ಗ ದಸರಾ, ಯಾವೆಲ್ಲ ಕಾರ್ಯಕ್ರಮ ಯಾವಾಗ ಉದ್ಘಾಟನೆ ಆಗಲಿದೆ? ಇಲ್ಲಿದೆ ಲಿಸ್ಟ್‌

021024 shimoga dasara news general image

ಶಿವಮೊಗ್ಗ ದಸರಾ: ನಾಡಹಬ್ಬ ದಸರಾದಲ್ಲಿ (DASARA) ಈ ಬಾರಿ ವಿವಿಧ ವೈದ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮ ಉದ್ಘಾಟನೆ ಆಗಲಿದೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌. » 22 ಸೆಪ್ಟೆಂಬರ್‌ 2025 ಬೆಳಗ್ಗೆ 9ಕ್ಕೆ – ಕುವೆಂಪು ರಂಗಮಂದಿರ ಮಕ್ಕಳ ದಸರಾ, ಕ್ರೀಡಾಕೂಟ ರಾಷ್ಟ್ರೀಯ ಸ್ಕೇಟಿಂಗ್‌ ವಿಜೇತರಾದ ಆದ್ವಿಕಾ ನಾಯರ್‌, ಹಿತ ಪ್ರವೀಣ್‌ ಅವರಿಂದ ಚಾಲನೆ ಸಂಜೆ 6ಕ್ಕೆ – ಕುವೆಂಪು ರಂಗಮಂದಿರ ಯುವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಸಚಿವ ಮಧು ಬಂಗಾರಪ್ಪ ಅವರಿಂದ … Read more

ಶಿವಮೊಗ್ಗ ದಸರಾ ಉದ್ಘಾಟನೆಗೆ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್‌ ಜನರಲ್, ಯಾವಾಗ ಉದ್ಘಾಟನೆ?

190925 Shimoga Dasara to be inaugurated by retd lieutenant general bs baggavalli somashekar raju

ಶಿವಮೊಗ್ಗ ದಸರಾ: ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ್‌ ರಾಜು ಈ ಬಾರಿ ಶಿವಮೊಗ್ಗ ದಸರಾ (Shimoga Dasara) ಉದ್ಘಾಟಿಸಲಿದ್ದಾರೆ. ಸೆ.22ರಂದು ಬೆಳಗ್ಗೆ 11 ಗಂಟೆಗೆ ಕೋಟೆ ‍ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ  ನಾಡಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ  ತಿಳಿಸಿದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಮಧು ಬಂಗಾರಪ್ಪ, ಬಿ.ಎಸ್.ಸುರೇಶ್‌, ರಹೀಂ ಖಾನ್‌, ಶಿವರಾಜ ಎಸ್‌.ತಂಗಡಗಿ ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ. ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. … Read more

ಶಿಕಾರಿಪುರದ ದೊಡ್ಡಕೇರಿಯಲ್ಲಿ ರೋಮಾಂಚಕ ಹೋರಿ ಹಬ್ಬ, ಹೇಗಿತ್ತು ವೈಭವ? ಇಲ್ಲಿದೆ ಫೋಟೊ ಆಲ್ಬಂ

081121 Shikaripura Doddakere Hori Habba

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 8 ನವೆಂಬರ್ 2021 ದೀಪಾವಳಿ ಬಳಿಕ ಜಿಲ್ಲೆಯ ವಿವಿಧೆಡೆ ಹೋರಿ ಬೆದರಿಸುವ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಶಿಕಾರಿಪುರದ ದೊಡ್ಡಕೇರಿಯಲ್ಲಿ ವಿಜೃಂಭಣೆಯಿಂದ ಹಬ್ಬ ನಡೆಯಿತು. ಅಕ್ಕಪಕ್ಕದ ಊರುಗಳಿಂದ ಸಾವಿರಾರು ಜನರು ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹೋರಿಗಳ ಅಲಂಕಾರ, ಅವುಗಳ ಓಟ ಕಂಡು ಸಂತೋಷಪಟ್ಟರು. ದೊಡ್ಡಕೇರಿಯ ಗಿಡ್ಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೋರಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ರೈತಾಪಿ ವರ್ಗದ ಪ್ರಮುಖ ಹಬ್ಬ ಇದಾಗಿದೆ. ಹೋರಿಗಳಿಗೆ ಬಗೆಬಗೆ ಅಲಂಕಾರ ರೋಮಾಂಚಕ ಸ್ಪರ್ಧೆಯಲ್ಲಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ಮೇರಾ ಆಚರಣೆ, ಹೇಗಿತ್ತು ವೈಭವ?

061121 Mera Deepavali in Banjara Community

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ನವೆಂಬರ್ 2021 ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ತಾಂಡಾಗಳಲ್ಲಿ ಮೇರಾ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು. ಕರೋನ ಹಿನ್ನೆಲೆ ಕಳೆದ ವರ್ಷ ಆಚರಣೆಗೆ ಅಡ್ಡಿಯುಂಟಾಗಿತ್ತು. ಈ ಭಾರಿ ಸಾಂಪ್ರದಾಯಿಕವಾಗಿ ಮೇರಾ ಆಚರಿಣೆ ಮಾಡಲಾಯಿತು. ಆಯನೂರಿನಲ್ಲಿ ಲಂಬಾಣಿ ಸಮುದಾಯದವರ ಮೇರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸಂಪ್ರದಾಯ, ಆಚರಣೆಗಳೆಂದರೆ ಮೂಗು ಮುರಿಯುವವರ ಮಧ್ಯೆ, ಲಂಬಾಣಿ ಸಮುದಾಯದವರು ಮೇರಾ ಅಚರಣೆಯನ್ನು ಮುಂದುವರೆಸುತ್ತಿದ್ದಾರೆ. ಇದು ಸಮುದಾಯವನ್ನು ಸಾಂಪ್ರದಾಯಿಕವಾಗಿ ಗಟ್ಟಿಗೊಳಿಸುತ್ತಿದೆ. ಮೇರಾ ಹಬ್ಬ ಅಂದರೇನು? … Read more

ಶಿವಮೊಗ್ಗದ ಪುರಾಣ ಪ್ರಸಿದ್ಧ ಹರೋಹರ ಜಾತ್ರೆ ಈ ಭಾರಿಯೂ ರದ್ದು, ಯಾವತ್ತು ನಡೆಯಬೇಕಿತ್ತು ಜಾತ್ರೆ?

Guddekallu-Temple

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜುಲೈ 2021 ಕೊರೊನಾದಿಂದಾಗಿ ಗುಡ್ಡೆಕಲ್ ಬಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಆಡಿಕೃತ್ತಿಕೆ ಹರೋಹರ ಜಾತ್ರೆ ರದ್ದು ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಪಿ.ರಘುಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಂಡಳಿ, ಜಾತ್ರೆಗೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಹರಕೆ ತೀರಿಸಲು ಕಾವಡಿ ಹೊತ್ತು ಬರುತ್ತಾರೆ. ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಜಾತ್ರೆ ಸೇರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ಜಾತ್ರೆ ರದ್ದುಗೊಳಿಸಲಾಗಿದೆ. … Read more