ತೀರ್ಥಹಳ್ಳಿಯಲ್ಲಿ ಪ್ರವಾಹ ಭೀತಿ, ಅಲರ್ಟ್ ಇರುವಂತೆ ಎಂಎಲ್ಎ ಸೂಚನೆ, ಮರ ಬಿದ್ದು ಇಬ್ಬರಿಗೆ ಗಾಯ

060818 Heavy Rain at Thirthahalli Tunga river Bridge 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 6 ಆಗಸ್ಟ್ 2019 ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಇನ್ನು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭಾರಿ ಮಳೆಯಿಂದಾಗಿ ತುಂಗೆ, ಮಾಲತಿ ಮತ್ತು ಕುಶಾವತಿ ನದಿಗಳು ತುಂಬಿ ಹರಿಯುತ್ತಿವೆ. ಮಳೆ ಪ್ರಮಾಣ ಹೆಚ್ಚಾದರೆ ಪ್ರವಾಹ ಪರಿಸ್ಥಿತಿ ಉಂಟಾಗುವ ಭೀತಿ ಎದುರಾಗಿದೆ. ಹಾಗಾಗಿ ನದಿ ಪಾತ್ರದಲ್ಲಿ ವಾಸಿಸುವವರು ಎಚ್ಚರದಿಂದ ಇರುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. … Read more

ತೀರ್ಥಹಳ್ಳಿಯಲ್ಲಿ ಆಷಾಢ ಮಾಸದ ‘ಆಟಿಡು ಒಂಜಿ’ ದಿನ, ಏನಿದರ ವಿಶೇಷ? ಹೇಗಿತ್ತು ಗೊತ್ತಾ ಕಾರ್ಯಕ್ರಮ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 2 ಆಗಸ್ಟ್ 2019 ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ತೀರ್ಥಹಳ್ಳಿಯಲ್ಲಿ ಆಷಾಢ ಮಾಸದ ಆಟಿಡು ಒಂಜಿ ದಿನ ಆಯೋಜಿಸಲಾಯಿತು. ಇದರ ಅಂಗವಾಗಿ, ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಒಟ್ಟಿಗೆ ಸವಿದು ಮಹಿಳೆಯರು ಸಂಭ್ರಮಿಸಿದರು. ಪಟ್ಟಣದ ಬಂಟರ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಶಶಿಕಲಾ ಎಂ ಶೆಟ್ಟಿ, ನಮ್ಮ ಸಂಸ್ಕೃತಿಯಲ್ಲಿ ಆಷಾಢ ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಧಾರ್ಮಿಕ, ಜಾನಪದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಈ ಮಾಸದಲ್ಲಿ … Read more

ಶಿವಮೊಗ್ಗ ಟ್ರಾಫಿಕ್ ಪೊಲೀಸರ ಭರ್ಜರಿ ಕಾರ್ಯಾಚರಣೆ, 41 ಬುಲೆಟ್ ಸೀಜ್, ಗ್ಯಾರೇಜ್ ಮಾಲೀಕರಿಗೆ ವಾರ್ನಿಂಗ್

300719 Bullets Seized By Traffic Police 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಜುಲೈ 2019 ಶಿವಮೊಗ್ಗ ಟ್ರಾಫಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಶಿವಮೊಗ್ಗ ನಗರದಲ್ಲಿ ಸಂಚರಿಸುತ್ತಿದ್ದ ಬುಲೆಟ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ನಗರದ ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿ, 41 ಬುಲೆಟ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಕ್ ಸವಾರರ ವಿರುದ್ಧ ಇಂಡಿಯನ್ ಮೋಟಾರ್ ವೆಹಿಕಲ್ ಕಾಯ್ದೆ ಅನ್ವಯ ಕೇಸು ದಾಖಲಿಸಲಾಗಿದೆ. ಗ್ಯಾರೇಜ್ ಮಾಲೀಕರಿಗೆ ನೊಟೀಸ್ … Read more

ಕುಸಿಯಿತು ತೀರ್ಥಹಳ್ಳಿಯ ತುಂಬರಮನೆ ಸೇತುವೆ, ಜನರ ಆಕ್ರೋಶ, ಮಾಜಿ ಮಿನಿಸ್ಟರ್ ಸ್ಥಳಕ್ಕೆ ಭೇಟಿ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 23 ಜುಲೈ 2019 ತೀರ್ಥಹಳ್ಳಿಯ ತುಂಬರಮನೆ ಸೇತುವೆ ಕುಸಿದಿದೆ. ಸೇತುವೆಯ ಒಂದು ಭಾಗದ ಸಂಪೂರ್ಣ ಕುಸಿದು, ದೊಡ್ಡ ಕಂದಕ ನಿರ್ಮಾಣವಾಗಿದೆ. ಇನ್ನು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಾಲ್ಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುಂಬರಮನೆ ಸೇತುವೆ, ಕುಸಿಯುವ ಹಂತಕ್ಕೆ ತಲುಪಿತ್ತು. ಈ ಕುರಿತು ಸ್ಥಳೀಯರು ಹಲವು ಬಾರಿ ಆಡಳಿತಕ್ಕೆ ಮನವಿ ಮಾಡಿದ್ದರು. ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿತ್ತು. ಆದರೆ ಆಡಳಿತದ … Read more

ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗೂ ಜೆಡಿಎಸ್, ಕಾಂಗ್ರೆಸ್ ಮೈತ್ರಿ

Congress And JDS Logo 1

ಶಿವಮೊಗ್ಗ ಲೈವ್.ಕಾಂ | 15 ಮೇ 2019 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್, ಕಾಂಗ್ರೆಸ್ ಪಕ್ಷ ನಿರ್ಧರಿಸಿವೆ. ಇದಕ್ಕೆ ವರಿಷ್ಠರಿಂದಲೂ ಒಪ್ಪಿಗೆ ಸಿಕ್ಕಿರುವುದರಿಂದ, ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಒಂದೆರಡು ಕಡೆ ಸಮಸ್ಯೆ ಆಗಬಹುದು. ಅದನ್ನು ಮುಖಂಡರು ಬಗೆಹರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಸ್ಥಳೀಯ ಅಗತ್ಯಕ್ಕನುಗುಣವಾಗಿ ಸೀಟು ಹಂಚಿಕೆ ಮಾಡಿಕೊಂಡು ಈಗಾಗಲೇ ಆಯಾ ಮುಖಂಡರ ಮುಂದಾಳತ್ವದಲ್ಲಿ ಪ್ರಚಾರ … Read more

‘ಕಾಂಗ್ರೆಸ್’ನಲ್ಲಿ ಈಗ ಎರಡು ಬಣಗಳಿವೆ, ಒಂದು ಸಿದ್ದರಾಮಯ್ಯ ಬಣ, ಮತ್ತೊಂದು ಬಟ್ಟೆ ಹಾವಿನ ಬಣ’

Eshwarappa General Image 1

ಶಿವಮೊಗ್ಗ ಲೈವ್.ಕಾಂ | 11 ಮೇ 2019 ತಿರುಕ ರಾತ್ರಿ ಕನಸು ಕಾಣುತ್ತಿದ್ದ. ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಪದೇ ಪದೇ ಮುಖ್ಯಮಂತ್ರಿ ಆಗುತ್ತೇನೆ ಅನ್ನುತ್ತಿರುವ ಸಿದ್ದರಾಮಯ್ಯ ಮತ್ತು ಅವರ ಚೇಲಾಗಳನ್ನು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ತಮ್ಮಿಂದಾಗಿಯೇ ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಹಾಗಿದ್ದೂ ಅವರ ಚೇಲಾಗಳು, ಸಿದ್ದರಾಮಯ್ಯ ಪುನಃ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ … Read more

ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಪಲ್ಟಿ, ಸಾವಿನ ಸಂಖ್ಯೆ ಮೂರಕ್ಕೆ

ಶಿವಮೊಗ್ಗ ಲೈವ್.ಕಾಂ | 18 ಏಪ್ರಿಲ್ 2019 ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್, ಉಳ್ಳೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪಲ್ಟಿಯಾಗಿದ್ದ ಬಸ್ಸಿನಡಿ ಹಲವು ಸಿಲುಕಿರುವ ಆತಂಕವಿತ್ತು. ಸ್ಥಳೀಯರು, ಪೊಲೀಸರ ನೆರವಿನಿಂದ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಯಿತು. ಹೊನ್ನಾವರದ ಕೀರ್ತನಾ (12), … Read more

ಇವತ್ತು ಸಿಎಂ, ಮಾಜಿ ಸಿಎಂ ಬಿರುಸಿನ ಪ್ರಚಾರ, ಬರ್ತಿದ್ದಾರೆ ಡಿಕೆಶಿ, ನಟಿ ಶೃತಿ, ಯಾರೆಲ್ಲ ಎಲ್ಲೆಲ್ಲಿ ಕ್ಯಾಂಪೇನ್ ಮಾಡ್ತಾರೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ರಾಜ್ಯದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ, ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಿಗೆ, ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರ ಬಿರುಸುಗೊಂಡಿದೆ. ಎರಡನೇ ಹಂತದಲ್ಲಿ ತೀವ್ರ ಜಿದ್ದಾಜಿದ್ದಿಯ ಕ್ಷೇತ್ರಗಳಲ್ಲಿ ಒಂದಾಗಿರುವ ಶಿವಮೊಗ್ಗದಲ್ಲಿ ಇವತ್ತು ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಯಾರು ಎಲ್ಲೆಲ್ಲಿ ಕ್ಯಾಂಪೇನ್ ಮಾಡ್ತಾರೆ? ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಜಿಲ್ಲೆಯ … Read more

MLA ಎಲೆಕ್ಷನ್ ಬಳಿಕ ಕರಗಿತು ಮಧು ಬಂಗಾರಪ್ಪ ಆಸ್ತಿ ಮೌಲ್ಯ, ಹೆಚ್ಚಾಯ್ತು ಬ್ಯಾಂಕ್ ಸಾಲ, ಎಲ್ಲೆಲ್ಲಿದೆ ಗೊತ್ತಾ ಸೈಟು, ಜಮೀನು?

ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019 ಮೈತ್ರಿಕೂಟದ ಅಭ್ಯರ್ಥಿ, ಮಾಜಿ ಶಾಸಕ ಮಧು ಬಂಗಾರಪ್ಪ ಕುಟುಂಬವು 61.58 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಯನು ಹೊಂದಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ 67 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ 6 ಕೋಟಿ ರೂ. ಮೌಲ್ಯದ ಆಸ್ತಿ ಕರಗಿದೆ. ಇದರ ಜತೆಗೆ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಲ್ಲಿನ ಸಾಲದ ಮೊತ್ತ 15ರಿಂದ 17 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು ಕೆಎಸ್ಐಐಡಿಸಿಯಲ್ಲಿ 43.61 ಲಕ್ಷ  ರೂ. ಸಾಲದ … Read more

ಚೆಕ್’ಪೋಸ್ಟ್’ನಲ್ಲಿ ವಾಹನ ತಪಾಸಣೆ ಮಾಡದೆ ನಿದ್ರೆ ಮಾಡಿದ ಮೂವರು ಸಸ್ಪೆಂಡ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಚೆಕ್’ಪೋಸ್ಟ್’ನಲ್ಲಿ ಕರ್ತವ್ಯ ನಿರ್ವಹಿಸುವ ಬದಲು ನಿದ್ರೆ ಮಾಡಿದ ಮೂವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸಸ್ಪೆಂಡ್ ಮಾಡಿದ್ದಾರೆ. ವಾಹನಗಳ ತಪಾಸಣೆ ನಡೆಸದೆ ನಿದ್ರೆ ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು, ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕಾರಿಪುರ ತಾಲೂಕಿನ ಖವಾಸಪುರ ಚೆಕ್’ಪೋಸ್ಟ್’ಗೆ ನಿಯೋಜನೆಗೊಂಡಿದ್ದ, ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಶೋಕ್ ರಾಜ್, ಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜಪ್ಪ, ಬೇಗೂರು ಸಿ.ಆರ್.ಪಿ ಚನ್ನೇಶ್ ಸಸ್ಪೆಂಡ್ ಆದವರು. ಈ … Read more