ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕಂದಾಯ ಪರಿಷ್ಕರಣೆ, ಗೃಹ ಬಳಕೆಗೆ ಎಷ್ಟು? ಇತರೆ ಸಂಪರ್ಕಕ್ಕೆಷ್ಟು ದರ?

Water Tap image

SHIVAMOGGA LIVE NEWS |  20 DECEMBER 2022 ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ದರವನ್ನು (water tax) ಪರಿಷ್ಕರಿಸಲಾಗಿದೆ. ಈಗಾಗಲೆ ನೀರಿನ ಕಂದಾಯ ಪಾವತಿ ಮಾಡಿರುವವರು ವ್ಯತ್ಯಾಸದ ಮೊತ್ತವನ್ನು ಕಟ್ಟಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಶಿವಮೊಗ್ಗ ನಗರವನ್ನು ನಗರಸಭೆಯಿಂದ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆ ಸರ್ಕಾರ ಮತ್ತು ಪಾಲಿಕೆ ನಿರ್ದೇಶನದಂತೆ ದರ (water tax) ಪರಿಷ್ಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. … Read more

ಶಿವಮೊಗ್ಗ ಡಿವೈಎಸ್ಪಿಗೆ ಕೇಂದ್ರ ಗೃಹ ಮಂತ್ರಿ ಪದಕ

Shimoga-DYSP-Balaraj-for-Home-Minster-Award

SHIVAMOGGA LIVE NEWS | 18 DECEMBER 2022 ಶಿವಮೊಗ್ಗ : ಡಿವೈಎಸ್ಪಿ ಬಿ.ಬಾಲರಾಜ್‌ ಅವರು ಕೇಂದ್ರ ಗೃಹ ಮಂತ್ರಿ ಪದಕಕ್ಕೆ (medal) ಭಾಜನರಾಗಿದ್ದಾರೆ. ಜೀವಮಾನ ಸಾಧನೆ ಗುರುತಿಸಿ, ಕೇಂದ್ರ ಸರ್ಕಾರ ಹಲವು ವಿಭಾಗದಲ್ಲಿ ಗೃಹ ಮಂತ್ರಿ ಪದಕ ನೀಡಲಿದ್ದು ಬಾಲರಾಜು ಅವರು 2018ನೇ ಸಾಲಿನ ಕೇಂದ್ರದ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ ಪದಕ ಪಡೆದಿದ್ದಾರೆ. ತಂತ್ರಜ್ಞಾನ ಮತ್ತು ವೈಜ್ಞಾನಿಕ ಆಧಾರದ ಮೇಲೆ ತನಿಖೆ ನಡೆಸುವುದು ಸೇರಿದಂತೆ ಎಷ್ಟು ಮಂದಿಗೆ ಶಿಕ್ಷೆ ಆಗಿದೆ ಎಂಬುದನ್ನು ಪರಿಗಣಿಸಿ ಪದಕಕ್ಕೆ … Read more

ದೇಗುಲದ ಆವರಣದಲ್ಲಿ ವೃದ್ಧೆ ಹತ್ಯೆ, ಸಣ್ಣ ಸುಳಿವಿಲ್ಲದ ಕೇಸ್ ಭೇದಿಸಿದ ಭದ್ರಾವತಿ ಪೊಲೀಸ್, ಕೊಲೆಗೇನು ಕಾರಣ?

Old-Lady-Murder-case-paper-town-police-arrest-one

SHIVAMOGGA LIVE NEWS | 18 DECEMBER 2022 ಭದ್ರಾವತಿ : ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ವೃದ್ಧೆಯೊಬ್ಬಳ (murder in temple) ಉಸಿರಗಟ್ಟಿಸಿ ಕೊಲೆ ಮಾಡಿ, ಆಕೆಯ ಮೂಗುತಿ, ಓಲೆ ಕದ್ದೊಯ್ದಿದ್ದ ಆರೋಪಿಯನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಸಣ್ಣ ಸಾಕ್ಷಿಯು ಇಲ್ಲದ ಪ್ರಕರಣವನ್ನು ಭೇದಿಸಿ, ಆರೋಪಿಯನ್ನು ಜೈಲಿಗಟ್ಟಲಾಗಿದೆ. ಭದ್ರಾವತಿ ತಾಲೂಕು ಸುಣ್ಣದ ಹಳ್ಳಿಯ ವೃದ್ಧೆ ಶಂಕ್ರಮ್ಮ (70) ಮೃತರು. ಗ್ರಾಮದ ಶ್ರೀ ಅಂತರ ಘಟ್ಟಮ್ಮ ದೇವಸ್ಥಾನದ ಕಾಂಪೌಂಡ್ ಒಳಗೆ ಶಂಕ್ರಮ್ಮ ಅವರನ್ನು ಉಸಿರುಗಟ್ಟಿಸಿ ಕೊಲೆ (murder … Read more

ಮನೆ ಬಾಗಿಲು ತೆಗೆದು ಹೊರಗೆ ಬರುತ್ತಿದ್ದಂತೆ ಹಿಂಬದಿಯಿಂದ ಬಂದು ಹೊಡೆದು ಮೊಬೈಲ್ ಕಸಿದ ದುಷ್ಕರ್ಮಿಗಳು

Doddapete-Police-Station.

SHIVAMOGGA LIVE NEWS | 17 DECEMBER 2022 ಶಿವಮೊಗ್ಗ : ಕೆಲಸಕ್ಕೆ ಹೊರಡಲು ಬೆಳಗಿನ ಜಾವ ಮನೆಯಿಂದ ಹೊರ ಬಂದ ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್ ಕಸಿದು (mobile phone) ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾನಗರ ಪಾಲಿಕೆ ನೀರು ಗಂಟಿಯಾಗಿ ಕೆಲಸ ಮಾಡುತ್ತಿರುವ ತೇಜೇಶ್ ಎಂಬುವವರ ಮೇಲೆ ದಾಳಿ ನಡೆಸಲಾಗಿದೆ. (mobile phone) ಬೆಳಗಿನ ಜಾವ ನಡೆದ ಘಟನೆ ತೇಜೇಶ್ ಅವರು ಸೀಗೆಹಟ್ಟಿ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ 20 ಚೆಕ್ ಪೋಸ್ಟ್, ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, 46 ಜನರ ವಿರುದ್ಧ ಕೇಸ್

Police-Check-post-to-check-drunk-and-drive.

SHIVAMOGGA LIVE NEWS | 17 DECEMBER 2022 ಶಿವಮೊಗ್ಗ : ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಡ್ರಂಕ್ ಅಂಡ್ ಡ್ರೈವ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ವಿವಿಧೆಡೆ ಚೆಕ್ ಪೋಸ್ಟ್ ಸ್ಥಾಪಿಸಿ 46 ಪ್ರಕರಣ (drunk and drive) ದಾಖಲು ಮಾಡಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 20 ಚೆಕ್ ಪೋಸ್ಟ್ ಸ್ಥಾಪಿಸಿ ವಾಹನಗಳ (drunk and drive) ತಪಾಸಣೆ ನಡೆಸಲಾಯಿತು. ಈ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 46 ಪ್ರಕರಣಗಳ ಪತ್ತೆಯಾಗಿವೆ. … Read more

ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ದೊಡ್ಡ ಮಟ್ಟದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಚಿಕಿತ್ಸೆ

02112 HS Sundaresh Press Meet in Shimoga

SHIVAMOGGA LIVE NEWS | 16 DECEMBER 2022 ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ (sonia gandhi) ಅವರ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್ ಅವರು, ಡಿ.18ರಂದು ಬೆಳಗ್ಗೆ 8 ಗಂಟೆಯಿಂದ 4 ಗಂಟೆವರೆಗೆ (sonia gandhi) ಸೈನ್ಸ್ ಮೈದಾನದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ವೈದ್ಯಕೀಯ … Read more

ಅಡಕೆ ರೇಟ್ | 16 ಡಿಸೆಂಬರ್ 2022 | ಯಾವ್ಯಾವ ಅಡಕೆಗೆ ಎಲ್ಲೆಲ್ಲಿ ಎಷ್ಟಿದೆ ಅಡಕೆ ಧಾರಣೆ?

Areca Price in Shimoga APMC

SHIVAMOGGA LIVE NEWS | 16 DECEMBER 2022 ಶಿವಮೊಗ್ಗ : ಶಿವಮೊಗ್ಗ, ಹೊಸನಗರ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 17000 33199 ರಾಶಿ 41001 45199 ಸರಕು 55069 73996 ಹೊಸನಗರ ಮಾರುಕಟ್ಟೆ ಕೆಂಪುಗೋಟು 28899 34899 ಚಾಲಿ 32909 36699 ಬಿಳೆ ಗೋಟು 26299 32599 ರಾಶಿ 43100 45226 ಭದ್ರಾವತಿ ಮಾರುಕಟ್ಟೆ ರಾಶಿ 36499 45199 ಶಿರಸಿ ಮಾರುಕಟ್ಟೆ ಅರೆಕಾನಟ್ … Read more

ಗಾಂಧಿ ಬಜಾರ್ ನಲ್ಲಿ ವ್ಯಕ್ತಿಗೆ ಚಾಕು ಇರಿತ, ಆಸ್ಪತ್ರೆಗೆ ದಾಖಲು

Shimoga-Chore-Bazaar-Stabbing

SHIVAMOGGA LIVE NEWS | 16 DECEMBER 2022 ಶಿವಮೊಗ್ಗ : ಗಾಂಧಿ ಬಜಾರ್ ನ ಚೋರ್ ಬಜಾರ್ ನಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು (stabbing) ಇರಿಯಲಾಗಿದೆ. ಹಣಕಾಸು ವಿಚಾರವಾಗಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಫಯಾಜ್ ಎಂಬಾತನಿಗೆ ಗುರುವಾರ ಸಂಜೆ ಚಾಕುವಿನಿಂದ (stabbing) ಇರಿಯಲಾಗಿದೆ. ಎದೆಯ ಎಡ ಭಾಗದಲ್ಲಿ ಗಾಯಗಾಗಿದೆ. ಕೂಡಲೆ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫಯಾಜ್ ಗೆ ಚಿಕಿತ್ಸೆ ನೀಡಲಾಗಿದ್ದು, ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ – ಮೈಸೂರಿನಿಂದ ಐರಾವತ … Read more

ಅಡಕೆ ರೇಟ್ | 15 ಡಿಸೆಂಬರ್ 2022 | ರಾಶಿ ಅಡಕೆ ಬೆಲೆ ಹೇಗಿದೆ? ಉಳಿದವುಗಳ ಧಾರಣೆ ಎಷ್ಟು?

Areca Price in Shimoga APMC

SHIVAMOGGA LIVE NEWS | 15 DECEMBER 2022 ಶಿವಮೊಗ್ಗ : ಶಿವಮೊಗ್ಗ, ಸಾಗರ, ಚನ್ನಗಿರಿ ಸೇರಿದಂತೆ ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ರೇಟ್ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 18029 32860 ಬೆಟ್ಟೆ 46319 50569 ರಾಶಿ 39859 43599 ಸರಕು 57100 80730 ಸಾಗರ ಮಾರುಕಟ್ಟೆ ಕೆಂಪುಗೋಟು 26989 33699 ಕೋಕ 23899 30109 ಚಾಲಿ 28119 37009 ಬಿಳೆ ಗೋಟು 16110 29400 ರಾಶಿ 38889 43519 ಸಿಪ್ಪೆಗೋಟು … Read more

14 ರೌಡಿಗಳ ಮನೆಗಳ ಮೇಲೆ ಪೊಲೀಸರಿಂದ ದಿಢೀರ್ ದಾಳಿ

Bhadravathi News Graphics

SHIVAMOGGA LIVE NEWS | 15 DECEMBER 2022 ಭದ್ರಾವತಿ : ರೌಡಿಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ (raid on rowdy houses) ನಡೆಸಿ, ಪರಿಶೀಲನೆ ನಡೆಸಿದರು. ಈ ವೇಳೆ ಓರ್ವ ರೌಡಿಯ ಮನೆಯಲ್ಲಿ ಮಾರಕಾಸ್ತ್ರಗಳು ಸಿಕ್ಕಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ ಅಮಟೆ ಅವರ ನೇತೃತ್ವದಲ್ಲಿ ಭದ್ರಾವತಿಯ 14 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಭದ್ರಾವತಿ ಪೊಲೀಸರು ದಾಳಿ ನಡೆಸಿ ರೌಡಿಗಳಿಗೆ (raid on rowdy houses) ಎಚ್ಚರಿಕೆ … Read more