ಕಮಲಾ ನೆಹರು ಕಾಲೇಜು ಬಳಿ ಪಾಲಿಕೆ ಜಾಗಕ್ಕೆ ಉಪ ಲೋಕಾಯುಕ್ತ ದಿಢೀರ್ ಭೇಟಿ, ಅಧಿಕಾರಿಗಳ ವಿರುದ್ಧ ಸಿಡಿಮಿಡಿ

210325-Upa-Lokayukta-Visit-to-kasturba-college-in-shimoga.webp

ಶಿವಮೊಗ್ಗ : ನಗರದ ಕಮಲಾ ನೆಹರು ಮಹಿಳಾ ಕಾಲೇಜು ಪಕ್ಕದಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಜಾಗಕ್ಕೆ ಶುಕ್ರವಾರ ಭೇಟಿ (VISIT) ನೀಡಿದ ಉಪಲೋಕಾಯುಕ್ತ ನ್ಯಾ.ಫಣೀಂದ್ರ ಅಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಕಾಲೇಜಿಗೆ ಹೊಂದಿಕೊಂಡಿರುವ ಈ ಖಾಲಿ ಜಾಗದಲ್ಲಿ ತ್ಯಾಜ್ಯ, ಒಡೆದ ಮದ್ಯದ ಬಾಟಲಿಗಳು ತುಂಬಿದ್ದವು. ಇದರಿಂದ ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದರು.‌ ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಹಲವು ದೂರುಗಳನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಉಪಲೋಕಾಯುಕ್ತರು ಭೇಟಿ ನೀಡಿದರು‌. ತ್ಯಾಜ್ಯ, ಮದ್ಯದ ಬಾಟಲಿ ಕಂಡು ಅಸಮಾಧಾನ … Read more

BIG IMPACT – ಶಿವಮೊಗ್ಗ ಲೈವ್‌ ವರದಿ ಬೆನ್ನಿಗೆ ಗಾಂಧಿ ಪಾರ್ಕ್‌ಗೆ ಉಪ ಲೋಕಾಯುಕ್ತರ ಭೇಟಿ, ಅಧಿಕಾರಿಗಳ ವಿರುದ್ಧ ಕೇಸ್‌

Upa-Lokayukta-Justice-Phanindra-sudden-visit-to-gandhi-park

ಶಿವಮೊಗ್ಗ : ಗಾಂಧಿ ಪಾರ್ಕ್‌ನ (Gandhi Park) ನಿರ್ವಹಣೆ ಕೊರತೆ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಭೇಟಿ ನೀಡಿದ್ದರು. ಗಾಂಧಿ ಪಾರ್ಕ್‌ ದುಸ್ಥಿತಿ ಕಂಡು ಗರಂ ಆದರು. ಕಮಿಷನರ್‌ ವಿರುದ್ಧ ಕೇಸ್‌ ದಾಖಲಿಸುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗಕ್ಕೆ ಭೇಟಿ ನೀಡಿರುವ ನ್ಯಾ. ಕೆ.ಎನ್.ಫಣೀಂದ್ರ ಅವರು ನಗರದ ವಿವಿಧೆಡೆ ಇಂದು ಬೆಳಗ್ಗೆಯಿಂದ ದಿಢೀರ್‌ ಭೇಟಿ ನೀಡುತ್ತಿದ್ದಾರೆ. ಗಾಂಧಿ ಪಾರ್ಕ್‌ಗೆ ಭೇಟಿ ನೀಡಿದ್ದ ಅವರು ಇಲ್ಲಿನ ಅವಸ್ಥೆ ಕಂಡು ಹೌಹಾರಿದರು. ಪಾಲಿಕೆ ಕಮಿಷನರ್‌ ಕವಿತಾ … Read more

ಅಧಿಕಾರಿಗಳು ಕೆಲಸ ಮಾಡಿಕೊಡ್ತಿಲ್ವಾ? ಶಿವಮೊಗ್ಗದಲ್ಲಿ ಇವತ್ತು ಇಡೀ ದಿನ ಉಪ ಲೋಕಾಯುಕ್ತರಿಗೆ ದೂರು ಕೊಡಬಹುದು

Karanataka-Lokayukta.webp

ಶಿವಮೊಗ್ಗ : ಉಪ ಲೋಕಾಯುಕ್ತ ನ್ಯಾ. ಕೆ.ಎನ್‌.ಫಣೀಂದ್ರ ಮಾ.18 ರಿಂದ 21ರವರೆಗೆ ಶಿವಮೊಗ್ಗ ಸಿಟಿ ಪ್ರವಾಸ (Tour) ಕೈಗೊಂಡಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ವಿವಿಧ ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧೆಡೆ ದಿಢೀರ್‌ ಭೇಟಿಯನ್ನೂ ನೀಡಲಿದ್ದಾರೆ. ಮಾ.19ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ ಅಥವಾ ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬವಾಗಿದ್ದಲ್ಲಿ, ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ … Read more