ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ಮಳೆ, ಮೈ ಕೊರೆಯುತ್ತಿದೆ ಚಳಿ, ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ?
ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದೆ. ತಪಾಮಾನವು ಇಳಿಕೆಯಾಗಿದೆ. ಇದರ ಬೆನ್ನಿಗೆ ಥಂಡಿ ಹೆಚ್ಚಾಗಿದೆ. (Weather Report) ಕಳೆದ ಎರಡು ದಿನದಿಂದ ಅಬ್ಬರಿಸಿದ್ದ ವರುಣ ತಣ್ಣಗಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಮಳೆ ಕಡಿಮೆಯಾಗಿದೆ. ಇನ್ನು, ತಾಪಮಾನ ಇಳಿಕೆಯಾಗಿದೆ. ಇದರಿಂದಾಗಿ ಥಂಡಿ ಹೆಚ್ಚಾಗಿದೆ. ರಾತ್ರಿ ವೇಳೆ ಮೈ ಕೊರೆಯುವ ಚಳಿ ಇದೆ. ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 25 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. … Read more